ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉದಾರ ಮನಸ್ಸಿನ ಚಿಕ್ಕ ಹುಡುಗಿ

ಉದಾರ ಮನಸ್ಸಿನ ಚಿಕ್ಕ ಹುಡುಗಿ

ಉದಾರ ಮನಸ್ಸಿನ ಚಿಕ್ಕ ಹುಡುಗಿ

ಇತ್ತೀಚೆಗೆ ಬ್ರಸಿಲ್‌ ದೇಶದ ಒಂಬತ್ತು ವರ್ಷದ ಹುಡುಗಿಯು ತಾನು ಕೂಡಿಸಿಟ್ಟ ಹಣವನ್ನು ಸ್ವಇಚ್ಛೆಯಿಂದ 18 ಡಾಲರುಗಳು ಹಾಗೂ 25 ಡಾಲರುಗಳಾಗಿ ಬೇರ್ಪಡಿಸಿದಳು. ಅದರಲ್ಲಿ ಚಿಕ್ಕ ಮೊತ್ತವನ್ನು ಅವಳು ಸಭೆಯ ವೆಚ್ಚಗಳನ್ನು ತುಂಬಲು ಸಹಾಯಮಾಡಲಿಕ್ಕಾಗಿ ಸ್ಥಳಿಕ ರಾಜ್ಯ ಸಭಾಗೃಹದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದಳು. ದೊಡ್ಡ ಮೊತ್ತವನ್ನು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಒಂದು ಸಣ್ಣ ಪತ್ರದೊಂದಿಗೆ ಕಳುಹಿಸಿದಳು. ಆ ಪತ್ರದಲ್ಲಿ, “ನಾನು ಲೋಕವ್ಯಾಪಕ ಕೆಲಸಕ್ಕಾಗಿ ಈ ಕಾಣಿಕೆಯನ್ನು ಕೊಡಲು ಬಯಸುತ್ತೇನೆ. ಲೋಕದಾದ್ಯಂತವಿರುವ ಅನೇಕ ಸಹೋದರ ಸಹೋದರಿಯರು ಸುವಾರ್ತೆಯನ್ನು ಸಾರುವಂತೆ ಅವರಿಗೆ ಸಹಾಯಮಾಡುವುದೇ ನನ್ನ ಬಯಕೆ. ನಾನು ಇದನ್ನು ಯೆಹೋವನ ಮೇಲಿನ ಗಾಢವಾದ ಪ್ರೀತಿ ಮತ್ತು ವಾತ್ಸಲ್ಯದೊಂದಿಗೆ ಕೊಡುತ್ತಿದ್ದೇನೆ” ಎಂದು ಅವಳು ಬರೆದಿದ್ದಳು.

ಈ ಚಿಕ್ಕ ಹುಡುಗಿಯ ಹೆತ್ತವರು ರಾಜ್ಯ ಸಾರುವಿಕೆಯ ಕೆಲಸದಲ್ಲಿ ವೈಯಕ್ತಿಕವಾಗಿ ಪಾಲು ತೆಗೆದುಕೊಳ್ಳುವುದರ ಮಹತ್ವವನ್ನು ಅವಳಿಗೆ ಕಲಿಸಿದ್ದಾರೆ. ‘ತನ್ನ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸುವ’ ಅಗತ್ಯವನ್ನೂ ಅವರು ಅವಳ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ. (ಜ್ಞಾನೋ. 3:9, NW) ಈ ಚಿಕ್ಕ ಹುಡುಗಿಯಂತೆ ನಾವೆಲ್ಲರು ಸ್ಥಳಿಕವಾಗಿಯೂ ಲೋಕವ್ಯಾಪಕವಾಗಿಯೂ ರಾಜ್ಯಾಭಿರುಚಿಗಳನ್ನು ಬೆಂಬಲಿಸುವುದರಲ್ಲಿ ಹುರುಪಿನಿಂದ ಪಾಲ್ಗೊಳ್ಳೋಣ.