ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಮೆಸ್ಸೀಯನು ಏಕೆ ಸಾಯಬೇಕಿತ್ತು?

ಅತಿ ಕಠಿನಕರ ಪರೀಕ್ಷೆಗಳ ಮಧ್ಯೆಯೂ ಒಬ್ಬ ಪರಿಪೂರ್ಣ ಮನುಷ್ಯನು ದೇವಭಕ್ತಿಯನ್ನು ಕಾಪಾಡಿಕೊಳ್ಳಬಲ್ಲನು ಎಂಬುದನ್ನು ಯೇಸುವಿನ ಮರಣ ರುಜುಪಡಿಸಿತು. ಮಾತ್ರವಲ್ಲ, ಆದಾಮನ ಸಂತತಿಯವರು ಬಾಧ್ಯತೆಯಾಗಿ ಪಡೆದಿರುವ ಪಾಪಕ್ಕೆ ಅವನು ಬೆಲೆಯನ್ನು ತೆತ್ತನು. ಇದು ನಿತ್ಯಜೀವ ಪಡೆಯುವುದಕ್ಕೆ ದಾರಿತೆರೆಯಿತು.—12/15, ಪುಟ 22.

• ಮಕ್ಕಳೊಂದಿಗೆ ಮಾಡುವ ಅರ್ಥವತ್ತಾದ ಸಂವಾದದಲ್ಲಿ ಏನು ಒಳಗೂಡಿದೆ?

ಮಕ್ಕಳೊಂದಿಗೆ ಕೇವಲ ಮಾತಾಡುವುದಕ್ಕಿಂತ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ. ಇದರಲ್ಲಿ ಪ್ರಶ್ನೆಗಳನ್ನು ಕೇಳುವುದು ಮತ್ತು ಮಕ್ಕಳು ಉತ್ತರಿಸುವಾಗ ತಾಳ್ಮೆಯಿಂದ ಆಲಿಸುವುದು ಸೇರಿದೆ. ಊಟದ ಸಮಯ ಸಂವಾದಕ್ಕೆ ಒಳ್ಳೇ ಅವಕಾಶವನ್ನು ಕೊಡುತ್ತದೆ ಎಂದು ಅನೇಕರು ಕಂಡುಕೊಂಡಿದ್ದಾರೆ.—1/15, ಪುಟಗಳು 18-19.

• ಯಾವ ಸನ್ನಿವೇಶಗಳಲ್ಲಿ ಪುನರ್ದೀಕ್ಷಾಸ್ನಾನವನ್ನು ಪರಿಗಣಿಸಬಹುದು?

ಒಬ್ಬ ವ್ಯಕ್ತಿ ದೀಕ್ಷಾಸ್ನಾನವಾಗಲಿರುವ ಸಮಯದಲ್ಲಿ ಯಾರಿಗೂ ಅರಿವಿಲ್ಲದ ಒಂದು ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಿರಬಹುದು ಅಥವಾ ಒಂದು ತಪ್ಪಾದ ವಿಷಯವನ್ನು ರೂಢಿಯಾಗಿ ಮಾಡುತ್ತಿದ್ದಿರಬಹುದು. ಒಂದುವೇಳೆ ಅವನಿಗೆ ಈ ಮೊದಲೇ ಅಂಗೀಕಾರಾರ್ಹ ದೀಕ್ಷಾಸ್ನಾನವಾಗಿದ್ದಲ್ಲಿ ಅವನಿಗೆ ಇಂಥ ನಡವಳಿಕೆಗಾಗಿ ಬಹಿಷ್ಕಾರವಾಗಬಹುದಿತ್ತು. ಇಂಥ ಸಂದರ್ಭದಲ್ಲಿ ಪುನರ್ದೀಕ್ಷಾಸ್ನಾನವನ್ನು ಪರಿಗಣಿಸಬಹುದು.—2/15, ಪುಟ 22.

• ಗೋದಿ ಮತ್ತು ಕಳೆಗಳ ಯೇಸುವಿನ ದೃಷ್ಟಾಂತದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವುದು ಯಾವುದನ್ನು ಪ್ರತಿನಿಧಿಸುತ್ತದೆ?

ಮನುಷ್ಯಕುಮಾರನಾದ ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಹೊಲವನ್ನು ಸಿದ್ಧಗೊಳಿಸಿದನು. ಕ್ರಿ.ಶ. 33ರ ಪಂಚಾಶತ್ತಮದಿಂದ ಹಿಡಿದು ಕ್ರೈಸ್ತರು ದೇವರ ಪುತ್ರರಾಗಿ, ರಾಜ್ಯದ ಪುತ್ರರಾಗಿ ಅಭಿಷೇಕಿಸಲ್ಪಟ್ಟಾಗ ಒಳ್ಳೆಯ ಬೀಜವು ಬಿತ್ತಲ್ಪಟ್ಟಿತು.—3/15, ಪುಟ 20.

• ಯೇಸುವಿನ ಸಾಮ್ಯದ ಸಾಂಕೇತಿಕ ಗೋದಿಯು ಯೆಹೋವನ ಕಣಜಕ್ಕೆ ತುಂಬಿಸಲ್ಪಡುತ್ತಿರುವುದು ಹೇಗೆ? (ಮತ್ತಾ. 13:30)

ಈ ನೆರವೇರಿಕೆಯು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಸ್ವಲ್ಪ ಕಾಲಾವಧಿಯ ವರೆಗೆ ವಿಸ್ತರಿಸಿದೆ. ಸಾಂಕೇತಿಕ ಗೋದಿಯಾಗಿರುವ ರಾಜ್ಯದ ಅಭಿಷಿಕ್ತ ಪುತ್ರರು ಪುನಃಸ್ಥಾಪಿಸಲ್ಪಟ್ಟ ಕ್ರೈಸ್ತ ಸಭೆಯೊಳಗೆ ತರಲ್ಪಟ್ಟಾಗ ಅಥವಾ ಸ್ವರ್ಗೀಯ ಬಹುಮಾನವನ್ನು ಪಡೆದುಕೊಂಡಾಗ ಯೆಹೋವನ ಕಣಜಕ್ಕೆ ತುಂಬಿಸಲ್ಪಡುತ್ತಿದ್ದಾರೆ.—3/15, ಪುಟ 22.

• ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಅಡಕವಾಗಿರುವ ಪುಸ್ತಕಗಳ ಅಧಿಕೃತತೆಯನ್ನು ನಿರ್ಧರಿಸಿದವರು ಯಾರು?

ಇದನ್ನು ಯಾವುದೇ ಚರ್ಚ್‌ ಮಂಡಲಿ ಅಥವಾ ಧಾರ್ಮಿಕ ಮುಖಂಡ ಮಾಡಿದ್ದಲ್ಲ. ಬದಲಿಗೆ ಪವಿತ್ರಾತ್ಮದ ಮಾರ್ಗದರ್ಶನದ ಕೆಳಗೆ ಯಾವ ಬರಹಗಳು ನಿಜವಾಗಿ ದೇವರಿಂದ ಪ್ರೇರಿತವಾಗಿವೆ ಎಂಬುದನ್ನು ನಿಜ ಕ್ರೈಸ್ತರು ತಿಳಿದುಕೊಂಡರು. ಇದು, ಕ್ರೈಸ್ತ ಸಭೆಯ ಆರಂಭದ ದಶಕಗಳಲ್ಲಿ ಅದ್ಭುತಕರವಾಗಿ ಕೊಡಲಾದ ಆತ್ಮದ ವರಗಳಲ್ಲಿ ಒಂದಾಗಿದ್ದ “ಪ್ರೇರಿತ ಮಾತುಗಳನ್ನು ಅರ್ಥಮಾಡಿಕೊಳ್ಳುವ” ವರವಾಗಿತ್ತು ಎಂಬುದರ ನಿಜತ್ವದೊಂದಿಗೆ ಹೊಂದಿಕೆಯಲ್ಲಿದೆ. (1 ಕೊರಿಂ. 12:4, 10)—4/1, ಪುಟ 28.