ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಜನರ ಹೃದಯವನ್ನು ತಲಪಲು ನೆರವಾದ ಪುಸ್ತಿಕೆ”

“ಜನರ ಹೃದಯವನ್ನು ತಲಪಲು ನೆರವಾದ ಪುಸ್ತಿಕೆ”

“ಜನರ ಹೃದಯವನ್ನು ತಲಪಲು ನೆರವಾದ ಪುಸ್ತಿಕೆ”

ಕೆಲವು ಸಮಯದ ಹಿಂದೆ ದಕ್ಷಿಣ ಬ್ರಸಿಲ್‌ನ ಪೊರ್ಟೋ ಅಲಿಗ್ರೆ ಎಂಬ ಶಹರದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಲಿಕ್ಕಾಗಿ ಒಂದು ಅಂತಾರಾಷ್ಟ್ರೀಯ ಪರಿಷತ್ತನ್ನು ಏರ್ಪಡಿಸಲಾಯಿತು. 135 ವಿವಿಧ ದೇಶಗಳಿಂದ ಹತ್ತಾರು ಸಾವಿರ ಜನರು ಆ ಪರಿಷತ್ತನ್ನು ಹಾಜರಾದರು. ವಿರಾಮಗಳ ಮಧ್ಯೆ ಅನೇಕ ಅಭ್ಯರ್ಥಿಗಳೊಂದಿಗೆ ದೇವರ ರಾಜ್ಯದ ಸಂದೇಶವನ್ನು ಹಂಚಲಿಕ್ಕಾಗಿ ಪೋರ್ಟೋ ಅಲಿಗ್ರೆಯ ಸಭೆಯ ಸಾಕ್ಷಿಗಳ ಗುಂಪೊಂದು ಅಲ್ಲಿಗೆ ಭೇಟಿಯಿತ್ತಿತು. ಅವರು ಆ ಅಭ್ಯರ್ಥಿಗಳೊಂದಿಗೆ ಸಂಭಾಷಣೆ ಮಾಡಿದ್ದು ಹೇಗೆ?

“ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯನ್ನು ನಾವು ಉಪಯೋಗಿಸಿದೆವು” ಎನ್ನುತ್ತಾಳೆ ಎಲೀಸಬೆಟ್‌ ಎಂಬ ಪಯನೀಯರಳು. ಆಕೆ ಮತ್ತೂ ಹೇಳಿದ್ದು: “ಹೆಚ್ಚಿನ ಅಭ್ಯರ್ಥಿಗಳು ರಾಜ್ಯದ ಸುವಾರ್ತೆಯನ್ನು ಹಿಂದೆಂದೂ ಕೇಳಿರಲಿಲ್ಲ. ಆದರೂ ನಮ್ಮ ಸಂದೇಶಕ್ಕೆ ಅವರು ಮನಸಾರೆ ಪ್ರತಿಕ್ರಿಯಿಸಿದರು. ಬೊಲಿವಿಯ, ಚೈನಾ, ಫ್ರಾನ್ಸ್‌, ಇಂಡಿಯ, ಇಸ್ರೇಲ್‌ ಮತ್ತು ನೈಜಿರೀಯದ ದೇಶವಾಸಿಗಳೊಂದಿಗೆ ನಾವು ಮಾತಾಡಿದೆವು. ಕೆಲವು ಅಭ್ಯರ್ಥಿಗಳಿಗಾದರೋ ಅವರ ಸ್ವಂತ ಭಾಷೆಯಲ್ಲಿ ಬೈಬಲ್‌ ಪ್ರಕಾಶನಗಳನ್ನು ನೀಡಿದೆವು. ಅವರದನ್ನು ಸಂತೋಷದಿಂದ ಸ್ವೀಕರಿಸಿದರು.”

ಮೆಕ್ಸಿಕೊದಲ್ಲಿ ರಾವುಲ್‌ ಎಂಬ ಪಯನೀಯರನು ಸಹ ಈ ಪುಸ್ತಿಕೆಯನ್ನು ಉಪಯೋಗಿಸಿ ಒಳ್ಳೇ ಫಲಿತಾಂಶಗಳನ್ನು ಪಡೆಯುತ್ತಿದ್ದಾನೆ. ಕೆಲವು ಸಮಯದ ಹಿಂದೆ ರಾವುಲ್‌ ಒಬ್ಬ ಅರಬೀಯನನ್ನು ಭೇಟಿಯಾದನು. 80 ವಯಸ್ಸಿನ ಆ ಪುರುಷನ ಹೆಂಡತಿಯು ಇತ್ತೀಚೆಗೆ ತೀರಿಹೋಗಿದ್ದಳು. ಅವನು ಅರೇಬಿಕ್‌ ಭಾಷೆಯಲ್ಲಿ ರಾಜ್ಯ ಸಂದೇಶವಿರುವ ಆ ಪುಸ್ತಿಕೆಯ ಪುಟವನ್ನು ಓದಿದಾಗ ಆನಂದದಿಂದ ಅವನ ಕಣ್ಗಳು ತೇವಗೊಂಡವು. ಏಕೆ? ಇನ್ನು ಮರಣವಿರುವುದಿಲ್ಲವೆಂಬ ಪ್ರಕಟನೆ 21:3, 4ರಲ್ಲಿರುವ ದೇವರ ವಾಗ್ದಾನವನ್ನು ಅವನು ತನ್ನ ಸ್ವಂತ ಭಾಷೆಯಲ್ಲಿ ಓದಿದನು. ಅದು ಅವನ ಹೃದಯವನ್ನು ಆಳವಾಗಿ ಸ್ಪರ್ಶಿಸಿತು. ಇನ್ನೊಂದು ಸಂದರ್ಭದಲ್ಲಿ ರಾವುಲ್‌ ಅನೌಪಚಾರಿಕ ಸಾಕ್ಷಿನೀಡುತ್ತಿದ್ದಾಗ ಪೋರ್ಚುಗೀಸ್‌ ಭಾಷೆಯನ್ನಾಡುವ ಒಬ್ಬನನ್ನು ಭೇಟಿಯಾದನು. ಅವನ ಪ್ರಿಯ ಮಗನು ಸಹ ಇತ್ತೀಚೆಗೆ ತೀರಿಕೊಂಡಿದ್ದನು. ಆ ಪುಸ್ತಿಕೆಯಲ್ಲಿ ಪೋರ್ಚುಗೀಸ್‌ ಭಾಷೆಯ ಸಂದೇಶವಿರುವ ಪುಟವನ್ನು ಓದುವಂತೆ ರಾವುಲ್‌ ಅವನನ್ನು ಕೇಳಿಕೊಂಡನು. ಓದಿದ ನಂತರ ಆ ವ್ಯಕ್ತಿ ಬೈಬಲಿನ ಕುರಿತು ಹೆಚ್ಚನ್ನು ಕಲಿಯುವ ಆಸಕ್ತಿ ತೋರಿಸಿದನು. ಒಂದು ಬೈಬಲ್‌ ಅಧ್ಯಯನವನ್ನೂ ಸ್ವೀಕರಿಸಿದನು.

ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಈ ಪುಸ್ತಿಕೆಯನ್ನು ಆರ್ಮೀನಿಯನ್‌, ಚೈನೀಸ್‌, ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ಹಿಂದಿ, ಕೊರಿಯನ್‌, ಮೀಕೀ, ಪರ್ಷಿಯನ್‌, ರಷ್ಯನ್‌, ಸಾಫಟೆಕ್‌ ಭಾಷೆಗಳನ್ನಾಡುವ ಜನರಿಗೆ ಸಾಕ್ಷಿನೀಡಲು ರಾವುಲ್‌ ಉಪಯೋಗಿಸಿದ್ದಾನೆ. “ಶುಶ್ರೂಷೆಯಲ್ಲಿ ಈ ಪುಸ್ತಿಕೆಯನ್ನು ಉಪಯೋಗಿಸುವುದು ಎಷ್ಟು ಪ್ರಾಮುಖ್ಯವೆಂಬುದನ್ನು ನಾನು ಮನಗಂಡೆ. ನನಗೆ ಬೇರೆ ಬೇರೆ ಭಾಷೆಗಳು ತಿಳಿದಿಲ್ಲವಾದರೂ ಜನರ ಹೃದಯವನ್ನು ತಲಪಲು ನೆರವಾದ ಪುಸ್ತಿಕೆ ಇದೇ.”

ಇಂದು ಜನರು ಹೆಚ್ಚೆಚ್ಚಾಗಿ ಪ್ರಯಾಣ ಮಾಡುತ್ತಿರುತ್ತಾರೆ, ಪರದೇಶಗಳಿಗೆ ವಲಸೆ ಹೋಗುತ್ತಾರೆ. ಆದ್ದರಿಂದ ಪರಭಾಷೆಯನ್ನಾಡುವ ಜನರನ್ನು ನಾವು ಸಂಪರ್ಕಿಸುವ ಅವಕಾಶಗಳು ಹೆಚ್ಚು. ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಈ ಪುಸ್ತಿಕೆಯ ಮೂಲಕ ರಾಜ್ಯ ಸಂದೇಶವನ್ನು ಅವರಿಗೆ ತಿಳಿಸಲು ನಮಗೆ ಸಾಧ್ಯ. ನೀವದನ್ನು ನಿಮ್ಮ ಸಂಗಡ ಒಯ್ಯುತ್ತೀರೋ?

[ಪುಟ 32ರಲ್ಲಿರುವ ಚಿತ್ರಗಳು]

ಜನರ ಹೃದಯವನ್ನು ತಲಪಲು ನೆರವಾದ ಪುಸ್ತಿಕೆಯೊಂದಿಗೆ ರಾವುಲ್‌