‘ಯೆಹೋವನಿಗೋಸ್ಕರ ಕಾಣಿಕೆಯನ್ನು ಅರ್ಪಿಸೋಣ’
‘ಯೆಹೋವನಿಗೋಸ್ಕರ ಕಾಣಿಕೆಯನ್ನು ಅರ್ಪಿಸೋಣ’
ಯಾರಾದರೂ ನಿಮಗೆ ಉಪಕಾರ ಮಾಡುವಾಗ ನೀವು ಹೇಗೆ ಗಣ್ಯತೆ ತೋರಿಸುತ್ತೀರಿ? ಇಸ್ರಾಯೇಲ್‌ನ ಸೇನಾಧಿಪತಿಗಳು ಯೆಹೋವನು ಮಾಡಿದ ಉಪಕಾರಕ್ಕೆ ಕೃತಜ್ಞತೆ ತೋರಿಸಿದ ವಿಧವನ್ನು ಗಮನಿಸಿ. ಮಿದ್ಯಾನ್ಯರು ಇಸ್ರಾಯೇಲ್ಯರನ್ನು ಪೆಗೋರದ ಬಾಳನ ಆರಾಧನೆಗೆ ನಡಿಸಿ ಪಾಪಕ್ಕೆ ಪ್ರೇರಿಸಿದ್ದರು. ಈ ಮಿದ್ಯಾನ್ಯರ ವಿರುದ್ಧ ಇಸ್ರಾಯೇಲ್ಯರು ಸಶಸ್ತ್ರ ಸಮರವನ್ನು ನಡೆಸಿದಾಗ ದೇವರು ತನ್ನ ಜನರಿಗೆ ಜಯವನ್ನು ಕೊಟ್ಟನು. ಯುದ್ಧದಲ್ಲಿ ಸಿಕ್ಕಿದ ಕೊಳ್ಳೆಯನ್ನು 12,000 ಸೈನಿಕರು ಮತ್ತು ಉಳಿದ ಇಸ್ರಾಯೇಲ್ಯರ ನಡುವೆ ಹಂಚಲಾಯಿತು. ಯೆಹೋವನ ನಿರ್ದೇಶನಕ್ಕನುಸಾರ ಸೈನಿಕರು ತಮ್ಮ ಪಾಲಿನ ಕೊಳ್ಳೆಯ ಸ್ವಲ್ಪಾಂಶವನ್ನು ಯಾಜಕರಿಗೆ ಕೊಟ್ಟರು. ಉಳಿದ ಇಸ್ರಾಯೇಲ್ಯರೂ ಸ್ವಲ್ಪಾಂಶವನ್ನು ಲೇವಿಯರಿಗೆ ಕೊಟ್ಟರು.—ಅರ. 31:1-5, 25-30.
ಆದರೆ ಸೇನಾಧಿಪತಿಗಳು ಇನ್ನೂ ಹೆಚ್ಚನ್ನು ಕಾಣಿಕೆಯಾಗಿ ನೀಡಲು ಬಯಸಿದರು. ಕಾರಣ ಕೊಡುತ್ತಾ ಅವರು ಮೋಶೆಗೆ, “ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಭಟರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ಗೊತ್ತಾಯಿತು” ಎಂದು ಹೇಳಿದರು. ಅದಕ್ಕಾಗಿ ಅವರು ಕೃತಜ್ಞತೆ ತೋರಿಸುತ್ತಾ ಚಿನ್ನವನ್ನೂ ಬೇರೆ ಬೇರೆ ಆಭರಣಗಳನ್ನೂ ಅರ. 31:49-54.
ಯೆಹೋವನಿಗೆ ಕಾಣಿಕೆಯಾಗಿ ನೀಡಿದರು. ಅವರು ಕೊಟ್ಟ ಚಿನ್ನಾಭರಣಗಳ ಒಟ್ಟು ತೂಕವು 190 ಕೆ.ಜಿ.ಗಿಂತಲೂ ಹೆಚ್ಚಿತ್ತು.—ಇಂದು ಕೂಡ ಅನೇಕ ಜನರು ತಮಗೆ ಯೆಹೋವನು ಮಾಡಿದ ಉಪಕಾರಗಳಿಗಾಗಿ ಗಣ್ಯತೆ ತೋರಿಸಲು ಪ್ರೇರಿಸಲ್ಪಡುತ್ತಾರೆ. ಆದರೆ ದೇವರ ಸಮರ್ಪಿತ ಸೇವಕರು ಮಾತ್ರವೇ ಅಂಥ ಗಣ್ಯತೆಯ ಭಾವನೆಯನ್ನು ತೋರಿಸುವುದಲ್ಲ, ಬೇರೆಯವರೂ ತೋರಿಸುತ್ತಾರೆ. ಒಂದು ಉದಾಹರಣೆ ಗಮನಿಸಿ. ಬಸ್ ಚಾಲಕನೊಬ್ಬನು 2009ರಲ್ಲಿ ಇಟಲಿಯ ಬೊಲೊಗ್ನದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆದ ಕ್ರೀಡಾಂಗಣಕ್ಕೆ ಅಭ್ಯರ್ಥಿಗಳ ಗುಂಪನ್ನು ಕರೆದೊಯ್ದು, ಕರತರುತ್ತಿದ್ದನು. ಅವನು ಶಾಂತಭಾವದ ಅತಿ ಜಾಗರೂಕ ಚಾಲಕನಾಗಿದ್ದರಿಂದ ಅವನ ಬಸ್‌ನಲ್ಲಿ ಹೋದವರು ಅವನಿಗೆ ಥ್ಯಾಂಕ್ಯು ಕಾರ್ಡ್‌ನೊಂದಿಗೆ ಭಕ್ಷೀಸನ್ನೂ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನೂ ನೀಡಿದರು. ಅದಕ್ಕೆ ಆ ಚಾಲಕನು ಹೇಳಿದ್ದು: “ನಾನು ನಿಮ್ಮ ಕಾರ್ಡನ್ನೂ ಪುಸ್ತಕವನ್ನೂ ಸಂತೋಷದಿಂದ ಸ್ವೀಕರಿಸುವೆ. ಆದರೆ ಹಣ ಮಾತ್ರ ಬೇಡ. ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸುವಂತೆ ಅದನ್ನು ದಾನವಾಗಿ ನೀಡಲು ನಾನು ಬಯಸುತ್ತೇನೆ. ನಾನು ಯೆಹೋವನ ಸಾಕ್ಷಿಯಲ್ಲ ನಿಜ. ಆದರೂ ಇದನ್ನು ಕೊಡಲು ಇಷ್ಟಪಡುತ್ತೇನೆ. ಏಕೆಂದರೆ ನೀವು ನಿಮ್ಮೆಲ್ಲ ಕೆಲಸವನ್ನು ಪ್ರೀತಿಯಿಂದಲೇ ಮಾಡುತ್ತಿದ್ದೀರಿ.”
ಯೆಹೋವನು ನಿಮಗೆ ಮಾಡಿದ ಎಲ್ಲಾ ಉಪಕಾರಗಳಿಗಾಗಿ ಕೃತಜ್ಞತೆ ತೋರಿಸುವ ಒಂದು ವಿಧ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳನ್ನು ನೀಡುವುದೇ. (ಮತ್ತಾ. 24:14) ಕೆಲವರು ದಾನ ನೀಡುವ ವಿಧಗಳನ್ನು ಈ ಕೆಳಗಿನ ಚೌಕದಲ್ಲಿ ಕೊಡಲಾಗಿದೆ.
[ಪುಟ 20, 21ರಲ್ಲಿರುವ ಚೌಕ]
ಕೆಲವರು ದಾನಕೊಡುವ ವಿಧಗಳು
ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು
ಅನೇಕರು ಹಣವನ್ನು ಬದಿಗಿರಿಸಿ ಅಥವಾ ಉಳಿತಾಯ ಮಾಡಿ ಅದನ್ನು “ಲೋಕವ್ಯಾಪಕ ಕೆಲಸ” ಎಂಬ ಗುರುತಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕುತ್ತಾರೆ.
ಸಭೆಗಳು ಈ ಹಣವನ್ನು ತಮ್ಮ ತಮ್ಮ ದೇಶದ ಕೆಲಸದ ಮೇಲ್ವಿಚಾರ ನಡಿಸುವ ಯೆಹೋವನ ಸಾಕ್ಷಿಗಳ ಆಫೀಸಿಗೆ ಪ್ರತಿ ತಿಂಗಳು ಕಳುಹಿಸುತ್ತವೆ. ಸ್ವಯಂಪ್ರೇರಿತ ಹಣ ದಾನಗಳನ್ನು ನೇರವಾಗಿ ಸಹ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸುಗಳಿಗೆ ಕಳುಹಿಸಬಹುದು. (ಕೆಳಗೆ ನಮೂದಿಸಲಾದ ಸ್ವಯಂಪ್ರೇರಿತ ದಾನಗಳನ್ನು ಸಹ ನಿಮ್ಮ ದೇಶದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಕಳುಹಿಸಬಹುದು.) ಮೇಲಿನ ವಿಳಾಸಕ್ಕೆ ಕಳುಹಿಸುವ ಚೆಕ್‌ಗಳನ್ನು “ವಾಚ್ ಟವರ್”ಗೆ * ಸಂದಾಯವಾಗಬೇಕೆಂದು ನಮೂದಿಸಬೇಕು. ಆಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ಎಲ್ಲ ವಸ್ತುಗಳನ್ನು ಬರೇ ದಾನವಾಗಿ ನೀಡುತ್ತಿದ್ದೇವೆಂದು ತಿಳಿಸುವ ಒಂದು ಸಂಕ್ಷಿಪ್ತ ಪತ್ರವನ್ನು ಇಂತಹ ಕಾಣಿಕೆಗಳೊಂದಿಗೆ ಜೊತೆಗೂಡಿಸಬೇಕು.
ಷರತ್ತುಬದ್ಧ-ದಾನ ನ್ಯಾಸದ ಏರ್ಪಾಡು *
ವಾಚ್ ಟವರ್ ಬಳಿ ಲೋಕವ್ಯಾಪಕ ಬಳಕೆಗಾಗಿ ಹಣವನ್ನು ನ್ಯಾಸದಲ್ಲಿ (ಟ್ರಸ್ಟ್‌ನಲ್ಲಿ) ಇಡಬಹುದು. ಆದರೆ ವಿನಂತಿಸಿದಾಗ ಆ ಹಣವನ್ನು ಹಿಂದಿರುಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ದೇಶದ ಬ್ರಾಂಚ್ ಆಫೀಸನ್ನು ಸಂಪರ್ಕಿಸಿರಿ.
ಚ್ಯಾರಿಟಬಲ್ ಯೋಜನೆ *
ನೇರವಾದ ಹಣದಾನಗಳಲ್ಲದೆ, ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಕಾಣಿಕೆಕೊಡುವ ಬೇರೆ ವಿಧಾನಗಳೂ ಇವೆ. ಯಾವವೆಂದರೆ:
ವಿಮೆ: ವಾಚ್ ಟವರ್ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳೀಯ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್ ಟವರ್‌ನೊಂದಿಗೆ ನ್ಯಾಸದಲ್ಲಿ ಇಡಬಹುದು ಅಥವಾ ದಾನಿಯು ಮರಣಹೊಂದುವಲ್ಲಿಯೂ ಅವು ಅದಕ್ಕೆ ಸಲ್ಲುವಂತೆ ಏರ್ಪಡಿಸಬಹುದು.
ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್ ಹಾಗೂ ಬಾಂಡ್‌ಗಳನ್ನು ನೇರವಾದ ದಾನವಾಗಿ ವಾಚ್ ಟವರ್‌ಗೆ ದಾನಮಾಡಬಹುದು. ಅಥವಾ ಕಾನೂನುಬದ್ಧ ಉಯಿಲಿನಲ್ಲಿ ವಾಚ್ ಟವರ್ ಅನ್ನು ಫಲಾನುಭವಿಯಾಗಿ ಹೆಸರಿಸಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಜೀವದಿಂದಿರುವ ವರೆಗೂ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದ ಬ್ರಾಂಚ್ ಆಫೀಸನ್ನು ಸಂಪರ್ಕಿಸಿರಿ.
ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುವ ಒಂದು ನೇಮಿತ ಸಂಸ್ಥೆಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ದಾನಿಯಿಂದ ಹೆಸರಿಸಲ್ಪಟ್ಟವನು ತನ್ನ ಜೀವಮಾನವಿಡೀ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರ್ಷದಲ್ಲಿ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.
ಉಯಿಲುಗಳು ಮತ್ತು ನ್ಯಾಸಗಳು: ಆಸ್ತಿ ಅಥವಾ ಹಣವನ್ನು ವಾಚ್ ಟವರ್‌ಗೆ ಕಾನೂನುಬದ್ಧವಾಗಿ ಉಯಿಲು ಬರೆಯಬಹುದು. ಅಥವಾ ವಾಚ್ ಟವರ್ * ಅನ್ನು ಒಂದು ನ್ಯಾಸ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಒಂದು ನ್ಯಾಸವು ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ಒದಗಿಸಬಹುದು.
“ಚ್ಯಾರಿಟಬಲ್ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಸ್ವಲ್ಪ ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯಾವುದೇ ರೀತಿಯ ಚ್ಯಾರಿಟಬಲ್ ಯೋಜನೆಯಿಂದ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಸಹಾಯಮಾಡಲು ಬಯಸುವ ವ್ಯಕ್ತಿಗಳಿಗೆ ನೆರವು ನೀಡಲು, “ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್ ಯೋಜನೆ” * ಎಂಬ ಬ್ರೋಷರ್ ಅನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ತಯಾರಿಸಲಾಗಿದೆ. ಸದ್ಯ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಲಿಕ್ಕಾಗಿ ಈ ಬ್ರೋಷರನ್ನು ತಯಾರಿಸಲಾಗಿತ್ತು. ಆ ಬ್ರೋಷರನ್ನು ಓದಿದ ಬಳಿಕ ಮತ್ತು ತಮ್ಮ ಸ್ವಂತ ಕಾನೂನು ಇಲ್ಲವೆ ತೆರಿಗೆ ಸಲಹೆಗಾರರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಲೋಕವ್ಯಾಪಕವಾಗಿ ನಡೆಯುವ ನಮ್ಮ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳ ಬೆಂಬಲಕ್ಕಾಗಿ ಸಹಾಯನೀಡಲು ಶಕ್ತರಾಗಿದ್ದು, ಅದೇ ಸಮಯದಲ್ಲಿ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, ಪತ್ರ ಅಥವಾ ಫೋನಿನ ಮೂಲಕ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳನ್ನು ಅಥವಾ ನಿಮ್ಮ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸನ್ನು ನೀವು ಸಂಪರ್ಕಿಸಬಹುದು.
Jehovah’s Witnesses of India,
Post Box 6440,
Yelahanka,
Bangalore 560 064,
Karnataka.
Telephone: (080) 28468072
[ಪಾದಟಿಪ್ಪಣಿಗಳು]
^ ಪ್ಯಾರ. 10 ಭಾರತದಲ್ಲಿ, ಚೆಕ್ ಅನ್ನು “ದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ”ಗೆ ಸಂದಾಯವಾಗಬೇಕೆಂದು ನಮೂದಿಸತಕ್ಕದ್ದು.
^ ಪ್ಯಾರ. 11 ಭಾರತಕ್ಕೆ ಅನ್ವಯಿಸುವುದಿಲ್ಲ.
^ ಪ್ಯಾರ. 13 ಗಮನಿಸಿ: ತೆರಿಗೆಯ ವಿಧಿನಿಯಮಗಳು ವಿವಿಧ ದೇಶಗಳಲ್ಲಿ ವಿಭಿನ್ನವಾಗಿರಬಹುದು. ನಿಮ್ಮ ಅಕೌಂಟೆಂಟ್ ಅಥವಾ ವಕೀಲರಿಂದ ತೆರಿಗೆ ನಿಯಮ ಮತ್ತು ಯೋಜನೆಯ ಬಗ್ಗೆ ಮಾಹಿತಿ ಪಡೆಯಿರಿ. ಅಂತಿಮ ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್ ಆಫೀಸನ್ನು ಸಹ ಸಂಪರ್ಕಿಸಿರಿ.
^ ಪ್ಯಾರ. 20 ಭಾರತದಲ್ಲಿ, “ದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ” ಎಂದು ಬರೆಯಿರಿ.
^ ಪ್ಯಾರ. 21 ಭಾರತದಲ್ಲಿ ಲಭ್ಯವಿಲ್ಲ.