ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಆನಂದಿಸಿದ್ದೀರೋ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ದೇವರು ಇಸ್ರಾಯೇಲ್ಯರನ್ನು ಈಜಿಪ್ಟ್‌ನಿಂದ ಹೊರತರುವಾಗ ಅವರ ಮುಂದುಗಡೆ ಯಾವ ದೇವದೂತನನ್ನು ಕಳುಹಿಸಿದನು? (ವಿಮೋ. 23:20, 21)

‘ತನ್ನಲ್ಲಿ ಯೆಹೋವನ ನಾಮಮಹಿಮೆ’ ಇದ್ದ ಆ ದೇವದೂತನು ದೇವರ ಜೇಷ್ಠಪುತ್ರನೇ ಎಂದು ನಂಬುವುದು ತರ್ಕಸಮ್ಮತ. ಅವನೇ ತದನಂತರ ಯೇಸು ಎಂದು ಕರೆಯಲ್ಪಟ್ಟನು.—9/15, ಪುಟ 21.

• ಸತ್ಯಾರಾಧನೆಗೆ ಸಂಬಂಧದಲ್ಲಿ ನಾವು ಕೊಡುವ ಯಾವ ಕೆಲವು ನೆವನಗಳನ್ನು ದೇವರು ಮೆಚ್ಚುವುದಿಲ್ಲ?

‘ಇದು ತುಂಬ ಕಷ್ಟ, ನನಗೆ ಮನಸ್ಸೇ ಇಲ್ಲ, ನನಗೆ ಸ್ವಲ್ಪವೂ ಸಮಯವಿಲ್ಲ, ನಾನು ಇದಕ್ಕೆ ತಕ್ಕವನಲ್ಲ, ಒಬ್ಬರಿಂದ ನನಗೆ ತುಂಬ ನೋವಾಗಿದೆ’ ಎಂಬಂಥ ನೆವನಗಳನ್ನು ದೇವರು ಮೆಚ್ಚುವುದಿಲ್ಲ. ಏಕೆಂದರೆ ದೇವರ ಆಜ್ಞೆಗಳನ್ನು ಪಾಲಿಸದಿರುವುದಕ್ಕೆ ಕೊಡುವ ಆ ನೆವನಗಳು ಯೋಗ್ಯಕಾರಣಗಳಲ್ಲ.—10/15, ಪುಟ 12-15.

• ಕ್ರೈಸ್ತ ಕೂಟಗಳನ್ನು ನಿಮಗೂ ಇತರರಿಗೂ ಭಕ್ತಿವರ್ಧಕವನ್ನಾಗಿ ನೀವು ಮಾಡಬಲ್ಲ ಕೆಲವು ವಿಧಗಳಾವುವು?

ಮುಂಚಿತವಾಗಿ ತಯಾರಿಸಿ. ಕ್ರಮವಾಗಿ ಹಾಜರಾಗಿ. ಸಮಯಕ್ಕೆ ಸರಿಯಾಗಿ ಬನ್ನಿ. ಬೇಕಾದ ಸಕಲ ಸಾಹಿತ್ಯವನ್ನು ತನ್ನಿ. ಅಪಕರ್ಷಣೆ ವರ್ಜಿಸಿರಿ. ಭಾಗವಹಿಸಿ. ನಿಮ್ಮ ಉತ್ತರ ಚುಟುಕಾಗಿರಲಿ. ನೇಮಕಗಳನ್ನು ಪೂರೈಸಿರಿ. ಭಾಗವಹಿಸಿದವರನ್ನು ಶ್ಲಾಘಿಸಿರಿ. ಕೂಟಗಳ ಮುಂಚೆ ಮತ್ತು ನಂತರ ಸಹವಾಸದಲ್ಲಿ ಆನಂದಿಸಿ.—10/15, ಪುಟ 22.

• ಆರೋನನು ಸಮಾನಸ್ಥರ ಒತ್ತಡಕ್ಕೆ ಮಣಿದ ವಿಷಯದಿಂದ ನಾವೇನನ್ನು ಕಲಿಯುತ್ತೇವೆ?

ಮೋಶೆಯು ಇರದಿದ್ದ ಸಂದರ್ಭದಲ್ಲಿ ಇಸ್ರಾಯೇಲ್ಯರು ತಮಗೆ ಒಂದು ದೇವರನ್ನು ಮಾಡಿಕೊಡಬೇಕೆಂದು ಆರೋನನನ್ನು ಒತ್ತಾಯಿಸಿದರು. ಆರೋನನು ಒತ್ತಡಕ್ಕೆ ಮಣಿದು ಹಾಗೆಯೇ ಮಾಡಿದನು. ಇದು ತೋರಿಸುತ್ತದೇನೆಂದರೆ ಸಮಾನಸ್ಥರ ಒತ್ತಡವು ಕೇವಲ ಎಳೆಯರಿಗೆ ಮಾತ್ರ ಸೀಮಿತವಲ್ಲ. ಸರಿಯಾದದ್ದನ್ನು ಮಾಡಲು ಬಯಸುವ ದೊಡ್ಡವರ ಮೇಲೆ ಸಹ ಇದು ಪ್ರಭಾವಬೀರಬಲ್ಲದು. ಆದುದರಿಂದ ಸಮಾನಸ್ಥರ ಅಹಿತಕರ ಒತ್ತಡವನ್ನು ನಾವು ಪ್ರತಿರೋಧಿಸಬೇಕು.—11/15, ಪುಟ 8.