ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಯತ್ನ ಪ್ರತಿಫಲದಾಯಕ!

ಪ್ರಯತ್ನ ಪ್ರತಿಫಲದಾಯಕ!

ಪ್ರಯತ್ನ ಪ್ರತಿಫಲದಾಯಕ!

ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಸಾಕಿಸಲಹಬೇಕಾದರೆ ಕುಟುಂಬ ಆರಾಧನೆ ಮತ್ತು ಬೈಬಲ್‌ ಅಧ್ಯಯನ ಅತ್ಯಾವಶ್ಯಕ. (ಎಫೆ. 6:4) ಅಧ್ಯಯನ ಮಾಡುವಾಗ ಎಳೆಯ ಮಕ್ಕಳಿಗೆ ಬೇಗನೆ ಬೇಸರಹಿಡಿಯುತ್ತದೆ ಎಂಬುದು ಹೆತ್ತವರಾದ ನಿಮಗೆ ತಿಳಿದದೆ. ಅವರ ಗಮನವನ್ನು ನೀವು ಹೇಗೆ ಹಿಡಿದಿಡಬಹುದು? ಕೆಲವು ಹೆತ್ತವರು ಅದನ್ನು ಹೇಗೆ ಮಾಡಿದ್ದಾರೆಂದು ಪರಿಗಣಿಸಿರಿ.

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜಾರ್ಜ್‌ ಎಂಬವರು ಹೇಳಿದ್ದು: “ಮಕ್ಕಳು ಚಿಕ್ಕವರಾಗಿದ್ದಾಗ ನಾನೂ ನನ್ನ ಪತ್ನಿಯೂ ಬೈಬಲಧ್ಯಯನವನ್ನು ಅತಿ ಸ್ವಾರಸ್ಯವಾಗಿರುವಂತೆ ಮಾಡುತ್ತಿದ್ದೆವು. ಬೈಬಲ್‌ ಕಥೆಗಳ ನನ್ನ ಪುಸ್ತಕದಿಂದ ಕಥೆಯೊಂದನ್ನು ಓದುವಾಗ ಕೆಲವೊಮ್ಮೆ ನಾವೆಲ್ಲರು ಬೈಬಲ್‌ ಪಾತ್ರಧಾರಿಗಳಂತೆ ವೇಷಭೂಷಣ ಧರಿಸಿ ಅಭಿನಯಿಸುತ್ತಿದ್ದೆವು. ರಂಗಸಜ್ಜನ್ನು ಅಂದರೆ ಖಡ್ಗಗಳು, ಮುದ್ರೆಗೋಲು, ಬುಟ್ಟಿಗಳೇ ಮುಂತಾದವುಗಳನ್ನು ಸಹ ನಾವು ಮಾಡಿದೆವು. ‘ನಾನ್ಯಾರು ಹೇಳು’ ಬೈಬಲ್‌ ಆಟಗಳನ್ನು ಸಹ ಆಡಿದೆವು. ಸುಲಭದ ಮತ್ತು ಕಷ್ಟದ ಪ್ರಶ್ನೆಗಳಿರುವ ಬೈಬಲ್‌ ಗೇಮ್‌ ಅನ್ನು ಸಹ ತಯಾರಿಸಿದೆವು. ಅನಂತರ ನೋಹನ ನಾವೆಯ ನಮೂನೆಯನ್ನು ಕಟ್ಟುವ ಅಥವಾ ಬೈಬಲ್‌ ಘಟನೆಗಳ ಕಾಲಗಣನಾ ರೇಖೆಯನ್ನು ತಯಾರಿಸುವ ಪ್ರಾಜೆಕ್ಟ್‌ಗಳನ್ನೂ ಮಾಡಿದೆವು. ಕೆಲವು ಸಲ ಬೈಬಲ್‌ ವ್ಯಕ್ತಿಗಳ ಅಥವಾ ಕಥೆಗಳ ಚಿತ್ರಣಗಳನ್ನು ಬಿಡಿಸುತಿದ್ದೆವು. ಈಗ ನಾವು ಎಫೆಸ 6:11-17 ರಲ್ಲಿ ವರ್ಣಿಸಲಾದ ಆಧ್ಯಾತ್ಮಿಕ ರಕ್ಷಾಕವಚದ ಚಿತ್ರ ಬಿಡಿಸುವುದನ್ನು ಯೋಜಿಸುತ್ತಿದ್ದೇವೆ. ರಕ್ಷಾಕವಚದ ಪ್ರತಿಯೊಂದು ಭಾಗವು ಯಾವುದಕ್ಕೆ ಸೂಚಿಸುತ್ತದೆಂದು ನಮ್ಮಲ್ಲಿ ಪ್ರತಿಯೊಬ್ಬರಿಗೆ ವಿವರಿಸಲಿಕ್ಕಿದೆ. ಇಂಥ ವಿಧಾನಗಳು ನಮ್ಮ ಕುಟುಂಬ ಅಧ್ಯಯನವನ್ನು ಆನಂದಿಸುವಂತೆ ಸಹಾಯಮಾಡಿವೆ.”

ಅಮೆರಿಕದ ಮಿಶಿಗನ್‌ನಲ್ಲಿರುವ ಡೆಬಿ ಎಂಬಾಕೆ ಅನ್ನುವುದು: “ನನಗೂ ನನ್ನ ಪತಿಗೂ ನಮ್ಮ ಮೂರು ವರ್ಷದ ಮಗಳ ಗಮನವನ್ನು ಹಿಡಿದಿಡುವುದು ಬಹಳ ಕಷ್ಟವಾಗುತ್ತಿತ್ತು. ಆದ್ದರಿಂದ ಬೈಬಲ್‌ ಕಥೆಗಳ ನನ್ನ ಪುಸ್ತಕದಿಂದ ಒಂದು ದಿನ ಇಸಾಕ ಮತ್ತು ರೆಬೆಕ್ಕಳ ಕಥೆಯನ್ನು ಗಟ್ಟಿಯಾಗಿ ಓದಿ ಹೇಳುತ್ತಿದ್ದಾಗ ಅದನ್ನು ಅಭಿನಯವಾಗಿ ಮಾಡಲು ಯೋಜಿಸಿದೆವು. ಎರಡು ಗೊಂಬೆಗಳನ್ನು ಇಸಾಕ, ರೆಬೆಕ್ಕ ಎಂದು ಕರೆದು ಅವರಿಬ್ಬರೂ ಯಾವ ಸಂಭಾಷಣೆ ನಡೆಸಿದ್ದಿರಬಹುದೆಂದು ತೋರಿಸಿಕೊಟ್ಟೆವು. ಆಗ ನಮ್ಮ ಮಗಳು ಪ್ರತಿಯೊಂದು ಪದವನ್ನೂ ಗಮನಕೊಟ್ಟು ಕೇಳಿದಳು! ತಿಂಗಳುಗಳು ದಾಟಿದಂತೆ ಆ ಎರಡು ಗೊಂಬೆಗಳನ್ನು ಬೈಬಲಿನ ಬೇರೆ ಬೇರೆ ವ್ಯಕ್ತಿಗಳಾಗಿ ಉಪಯೋಗಿಸಿದೆವು. ನಾವೊಂದು ಕಥೆಯನ್ನು ಓದುವಾಗ ನಮ್ಮ ಮಗಳು ಮನೆಯಲ್ಲಿ ಆಟಿಕೆಗಳಿಗಾಗಿ ಅಥವಾ ಬೇರೆ ವಸ್ತುಗಳಿಗಾಗಿ ಹುಡುಕುತ್ತಾ ಕಥೆಯನ್ನು ಅಭಿನಯಿಸುತ್ತಿದ್ದಳು. ಅದೊಂದು ನಿಧಿ ಅನ್ವೇಷಣೆಯ ಆಟದಂತಿತ್ತು! ಶೂಬಾಕ್ಸ್‌ ಮತ್ತು ಕೆಂಪು ರಿಬ್ಬನನ್ನು ರಾಹಾಬಳ ಮನೆ ಮತ್ತು ಕೆಂಪು ಹಗ್ಗವಾಗಿ ಮಾಡಿದೆವು. ಪೊರಕೆಗೆ ಒಂದೂವರೆ ಮೀಟರ್‌ ಉದ್ದದ ರಬ್ಬರ್‌ ಹಾವನ್ನು ಸುತ್ತಿ ಅದನ್ನು ಅರಣ್ಯಕಾಂಡ 21:4-9 ರ ತಾಮ್ರದ ಸರ್ಪವಾಗಿ ಮಾಡಿದೆವು. ಈ ಆಟದ ಸಜ್ಜುಗಳನ್ನೆಲ್ಲಾ ದೊಡ್ಡ ಚೀಲದಲ್ಲಿ ತುಂಬಿಸಿಡುತ್ತಿದ್ದೆವು. ನಮ್ಮ ಹುಡುಗಿ ಕೆಲವೊಮ್ಮೆ ರೂಮ್‌ನಲ್ಲಿ ಕೂತು ಈ ‘ಬೈಬಲ್‌ ಸ್ಟೋರಿ ಬ್ಯಾಗ್‌ನಿಂದ’ ವಸ್ತುಗಳನ್ನು ಹುಡುಕಿ ತೆಗೆದು ತನ್ನ ಸ್ವಂತ ಚಿಕ್ಕಪುಟ್ಟ ವಿಧದಲ್ಲಿ ಕಥೆಗಳನ್ನು ಅಭಿನಯಿಸುತ್ತಿದ್ದದನ್ನು ಕಾಣುವುದು ತುಂಬ ಆನಂದಕರವಾಗಿತ್ತು!”

ಮಕ್ಕಳನ್ನು ಬೆಳೆಸುವುದು ಸುಲಭವೇನಲ್ಲ. ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ಅವರಲ್ಲಿ ಹೆತ್ತವರು ಬೇರೂರಿಸಬೇಕು. ಅವರಿದನ್ನು ಪ್ರತಿದಿನ ಬೇರೆ ಬೇರೆ ರೀತಿಗಳಲ್ಲಿ ಮಾಡಬೇಕಾಗಿದೆ. ಆದರೆ ಇದನ್ನು ಪೂರೈಸುವುದರಲ್ಲಿ ಹೆತ್ತವರಿಗೆ ಮುಖ್ಯವಾಗಿ ಸಹಾಯಕರವಾಗಿರುವುದು ಅವರು ಪ್ರತಿವಾರ ನಡೆಸುವ ಕುಟುಂಬ ಆರಾಧನೆ ಮತ್ತು ಬೈಬಲ್‌ ಅಧ್ಯಯನ. ನಿಶ್ಚಯವಾಗಿಯೂ ಅವರ ಆ ಪ್ರಯತ್ನ ಪ್ರತಿಫಲದಾಯಕ!