ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಚಯಿಸುತ್ತಿದ್ದೇವೆ . . . ಸರಳೀಕೃತ ಇಂಗ್ಲಿಷ್‌ ಆವೃತ್ತಿಯನ್ನು

ಪರಿಚಯಿಸುತ್ತಿದ್ದೇವೆ . . . ಸರಳೀಕೃತ ಇಂಗ್ಲಿಷ್‌ ಆವೃತ್ತಿಯನ್ನು

ಪರಿಚಯಿಸುತ್ತಿದ್ದೇವೆ . . . ಸರಳೀಕೃತ ಇಂಗ್ಲಿಷ್‌ ಆವೃತ್ತಿಯನ್ನು

ಈ ತಿಂಗಳಿನಿಂದ ಆರಂಭಿಸಿ ಕಾವಲಿನಬುರುಜುವಿನ ಅಧ್ಯಯನ ಆವೃತ್ತಿಯನ್ನು ಪ್ರತಿ ತಿಂಗಳು ಸರಳೀಕೃತ ಇಂಗ್ಲಿಷ್‌ ಆವೃತ್ತಿಯ ರೂಪದಲ್ಲೂ ಏಕಕಾಲದಲ್ಲಿ ಪ್ರಕಟಿಸಲಿದ್ದೇವೆ ಎಂಬದನ್ನು ತಿಳಿಸಲು ನಾವು ಹರ್ಷಿಸುತ್ತೇವೆ. ಇದನ್ನು ಒಂದು ವರ್ಷ ಪ್ರಯೋಗಿಸಿ ನೋಡಲಾಗುವುದು. ಉಪಯುಕ್ತವೆಂದು ಕಂಡುಬಂದಲ್ಲಿ ಮುದ್ರಣವನ್ನು ಮುಂದುವರಿಸಲಾಗುವುದು. ಇದರಲ್ಲಿ ಮುಖ್ಯವಾಗಿ ಅಧ್ಯಯನ ಲೇಖನಗಳಿರುವವು. ಸ್ಥಳಾವಕಾಶವಿರುವಲ್ಲಿ ಆಯ್ಕೆ ಮಾಡಲ್ಪಟ್ಟ ಇತರ ಲೇಖನಗಳನ್ನೂ ಒಳಗೂಡಿಸಲಾಗುವುದು. ಈ ಏರ್ಪಾಡು ಯೆಹೋವನ ಸಾಕ್ಷಿಗಳಲ್ಲಿ ಅನೇಕರ ಅತಿಮುಖ್ಯ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸುವುದೆಂಬ ನಂಬಿಕೆ ನಮಗಿದೆ. ಸರಳೀಕೃತ ಕಾವಲಿನಬುರುಜು ಪತ್ರಿಕೆಯ ಅಗತ್ಯವೇನು?

ಕೀನ್ಯಾ, ಘಾನ, ಪ್ಯಾಪುವ ನ್ಯೂ ಗಿನೀ, ಫಿಜಿ, ನೈಜೀರಿಯ, ಲೈಬೀರಿಯ, ಸಾಲೊಮನ್‌ ಐಲೆಂಡ್ಸ್‌ ಹಾಗೂ ಇನ್ನಿತರ ದೇಶಗಳಲ್ಲಿರುವ ನಮ್ಮ ಸಹೋದರರು ಸಾಮಾನ್ಯವಾಗಿ ಇಂಗ್ಲಿಷ್‌ ಭಾಷೆಯನ್ನೇ ಮಾತಾಡುತ್ತಾರೆ. ಈ ಸಹೋದರರು ಸ್ಥಳೀಯ ಅಥವಾ ದೇಶೀಯ ಭಾಷೆಯನ್ನು ಮಾತಾಡುತ್ತಾರಾದರೂ ಸಭಾ ಕೂಟಗಳಲ್ಲಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಹೆಚ್ಚಾಗಿ ಇಂಗ್ಲಿಷ್‌ ಭಾಷೆಯನ್ನೇ ಬಳಸುತ್ತಾರೆ. ಆದರೆ ಅವರು ಮಾತಾಡುವ ಇಂಗ್ಲಿಷ್‌ ನಮ್ಮ ಪ್ರಕಾಶನಗಳಲ್ಲಿ ಬಳಸುವ ಇಂಗ್ಲಿಷ್‌ಗಿಂತ ತುಂಬ ಸರಳವಾಗಿರುತ್ತದೆ. ಅಷ್ಟೆ ಅಲ್ಲ ಬೇರೆ ದೇಶಗಳಿಗೆ ವಲಸೆ ಹೋಗಿರುವ ಯೆಹೋವನ ಸಾಕ್ಷಿಗಳಲ್ಲಿ ಕೆಲವರಿಗೆ ಇಂಗ್ಲಿಷ್‌ ಅಷ್ಟಾಗಿ ಬರದಿದ್ದರೂ ಆ ಭಾಷೆಯಲ್ಲೇ ಮಾತಾಡುವುದು ಅನಿವಾರ್ಯವಾಗಿರುತ್ತದೆ. ಜೊತೆಗೆ ಮಾತೃಭಾಷೆಯಲ್ಲಿ ಸಭೆ ಇಲ್ಲದಿರುವುದರಿಂದ ಅವರು ಇಂಗ್ಲಿಷ್‌ ಸಭೆಗೆ ಹೋಗಬೇಕಾಗುತ್ತದೆ.

ನಮಗೆ ತಕ್ಕ ಸಮಯಕ್ಕೆ ಆಧ್ಯಾತ್ಮಿಕ ಆಹಾರ ಸಿಗುವುದು ಮುಖ್ಯವಾಗಿ ಪ್ರತಿವಾರ ಕಾವಲಿನಬುರುಜು ಅಧ್ಯಯನದಲ್ಲಿ ಚರ್ಚಿಸಲಾಗುವ ಲೇಖನಗಳ ಮೂಲಕ. ಚರ್ಚಿಸಲ್ಪಡುವ ಲೇಖನದಿಂದ ಹಾಜರಿರುವವರೆಲ್ಲರೂ ಪೂರ್ಣ ಪ್ರಯೋಜನ ಪಡೆಯಬೇಕೆಂಬ ಉದ್ದೇಶಕ್ಕಾಗಿ ಸರಳೀಕೃತ ಇಂಗ್ಲಿಷ್‌ ಆವೃತ್ತಿಯನ್ನು ಪ್ರಕಟಿಸಲಾಗುತ್ತಿದೆ. ಈ ಆವೃತ್ತಿಯಲ್ಲಿ ಉಪಯೋಗಿಸಲಾಗುವ ಪದಗಳು, ವ್ಯಾಕರಣ, ವಾಕ್ಯರಚನೆಯು ತೀರ ಸರಳ. ಈ ಹೊಸ ಆವೃತ್ತಿಯ ಮುಖಪುಟ ಭಿನ್ನವಾಗಿರುವುದು. ಆದರೆ ಇದರಲ್ಲಿರುವ ಉಪಶೀರ್ಷಿಕೆಗಳು, ಪ್ಯಾರಗ್ರಾಫ್‌ಗಳು, ಪುನರವಲೋಕನ ಪ್ರಶ್ನೆಗಳು ಹಾಗೂ ಚಿತ್ರಗಳು ಈಗಾಗಲೇ ಉಪಯೋಗಿಸಲಾಗುತ್ತಿರುವ ಆವೃತ್ತಿಗೆ ಸರಿಹೋಲುವವು. ಹಾಗಾಗಿ ಸಭಿಕರು ಕಾವಲಿನಬುರುಜುವಿನ ಯಾವುದೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದರೂ ಅಧ್ಯಯನವನ್ನು ಅನುಸರಿಸಲು ಹಾಗೂ ಅದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಈ ಎರಡು ಇಂಗ್ಲಿಷ್‌ ಆವೃತ್ತಿಗಳಲ್ಲಿ ಪದಪ್ರಯೋಗಗಳು ಹೇಗೆ ಭಿನ್ನವಾಗಿರುತ್ತವೆ ಎಂಬದನ್ನು ತೋರಿಸುವ ಒಂದು ಉದಾಹರಣೆ ಈ ಕೆಳಗಿನ ಚೌಕದಲ್ಲಿದೆ. ಅದರಲ್ಲಿ ಈ ಸಂಚಿಕೆಯಲ್ಲಿರುವ ಮೊದಲನೆಯ ಅಧ್ಯಯನ ಲೇಖನದ 2ನೇ ಪ್ಯಾರಗ್ರಾಫನ್ನು ಕೊಡಲಾಗಿದೆ.

ಈ ಹೊಸ ಏರ್ಪಾಡು, “ನಿನ್ನ ಆಜ್ಞೆಗಳನ್ನು ಕಲಿಯುವದಕ್ಕೆ ನನಗೆ ಬುದ್ಧಿಯನ್ನು ಕೊಡು” ಎಂದು ಅನೇಕರು ಯೆಹೋವನಿಗೆ ಮಾಡಿದ ಪ್ರಾರ್ಥನೆಗಳಿಗೆ ಉತ್ತರ ಕೊಡುವುದೆಂದು ನಂಬುತ್ತೇವೆ. (ಕೀರ್ತ. 119:73) ಇಂಗ್ಲಿಷ್‌ ಭಾಷೆ ಸ್ವಲ್ಪವೇ ಗೊತ್ತಿರುವವರಿಗೆ ಹಾಗೂ ಇಂಗ್ಲಿಷ್‌ ಬಲ್ಲ ಚಿಕ್ಕ ಮಕ್ಕಳಿಗೆ ಸಹ ಪ್ರತಿವಾರ ಕಾವಲಿನಬುರುಜು ಅಧ್ಯಯನಕ್ಕಾಗಿ ಚೆನ್ನಾಗಿ ತಯಾರಿಮಾಡಲು ಸಾಧ್ಯವಾಗುವುದೆಂಬ ಭರವಸೆ ನಮಗಿದೆ. ಯೆಹೋವನು ‘ಸಹೋದರರ ಇಡೀ ಬಳಗದ ಮೇಲಿರುವ ಪ್ರೀತಿಯ’ ನಿಮಿತ್ತ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮೂಲಕ ಹೇರಳ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಿರುವುದಕ್ಕಾಗಿ ನಾವು ಆತನಿಗೆ ತುಂಬ ಕೃತಜ್ಞರು.—1 ಪೇತ್ರ 2:17; ಮತ್ತಾ. 24:45.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ