ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ಅಪ್ರಾಮಾಣಿಕತೆಯ ಕಡೆ ನಮ್ಮ ಮನಸ್ಸು ವಾಲದಂತಿರಲು ಸಹಾಯಮಾಡುವ ಮೂರು ಅಂಶಗಳಾವುವು?

ಅವುಗಳು: (1) ದೇವರ ಮೇಲಿನ ಹಿತಕರ ಭಯ. (1 ಪೇತ್ರ 3:12) (2) ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ. (3) ಸಂತೃಪ್ತಭಾವ ಬೆಳೆಸಿಕೊಳ್ಳುವುದು.​—4/15, ಪುಟ 6-7.

• ದೇವರ ಸೇವೆಯನ್ನು ಗಂಭೀರ ಭಾವದಿಂದ ಮಾಡಬೇಕು ಎನ್ನುವುದರ ಅರ್ಥ ನಾವು ಸದಾ ಗಂಟುಮುಖ ಇಟ್ಟುಕೊಂಡಿರಬೇಕು ಅಥವಾ ವಿನೋದವಿಹಾರದಲ್ಲಿ ಪಾಲಿಗರಾಗಬಾರದು ಎಂದೋ?

ಯೇಸುವಿನ ಮಾದರಿಯನ್ನು ನಾವು ಪರಿಗಣಿಸಬೇಕು. ಅವನು ಇತರರೊಂದಿಗೆ ಔತಣ ಉಂಡು ಹಾಯಾಗಿ ಸಮಯ ಕಳೆದ ಸಮಯ ಕೂಡ ಇತ್ತು. ಅವನೆಂದೂ ಗಂಟುಮೋರೆ ಹಾಕಿ ಗಂಭೀರವದನಾಗಿ ಇರಲಿಲ್ಲ. ಜನರು, ಅಷ್ಟೇಕೆ ಪುಟಾಣಿ ಮಕ್ಕಳು ಸಹ ಅವನ ಬಳಿ ಬರಲು ಹಿಂಜರಿಯುತ್ತಿರಲಿಲ್ಲ.​—4/15, ಪುಟ 10.

• ಪರಿಪೂರ್ಣ ಮನುಷ್ಯನಾಗಿದ್ದ ಯೇಸುವಿನಿಂದ ಒಂದು ಸಂತತಿ ಹುಟ್ಟಿದ್ದರೆ ಅವರು ವಿಮೋಚನಾ ಮೌಲ್ಯದ ಒದಗಿಸುವಿಕೆಯಲ್ಲಿ ಭಾಗಿಗಳಾಗುವ ಸಾಧ್ಯತೆಯಿತ್ತೋ?

ಇಲ್ಲ. ಯೇಸುವಿನಿಂದ ಕೋಟಿಗಟ್ಟಲೆ ಪರಿಪೂರ್ಣ ಮನುಷ್ಯರು ಹುಟ್ಟಸಾಧ್ಯವಿತ್ತಾದರೂ ಅಂಥ ಸಂತತಿಯವರು ವಿಮೋಚನಾ ಮೌಲ್ಯದ ಒದಗಿಸುವಿಕೆಯಲ್ಲಿ ಭಾಗಿಗಳಾಗುವ ಸಾಧ್ಯತೆಯಿರಲಿಲ್ಲ. ಯೇಸುವಿನ ಪರಿಪೂರ್ಣ ಜೀವ ಮಾತ್ರ ಆದಾಮನ ಪರಿಪೂರ್ಣ ಜೀವಕ್ಕೆ ಅನುರೂಪವಾಗಿತ್ತು. (1 ತಿಮೊ. 2:6)—6/15, ಪುಟ 13.

• ಸುಳ್ಳು ಬೋಧಕರ ಕುರಿತು ಅಪೊಸ್ತಲರ ಕಾರ್ಯಗಳು 20:29, 30ರಲ್ಲಿ ಕೊಡಲಾಗಿರುವ ಎಚ್ಚರಿಕೆಗೆ ಕಿವಿಗೊಡುತ್ತಾರೆಂದು ಕ್ರೈಸ್ತರು ಹೇಗೆ ತೋರಿಸಿಕೊಡಬಲ್ಲರು?

ಕ್ರೈಸ್ತರು ಸುಳ್ಳು ಬೋಧಕರನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ, ಅವರಿಗೆ ವಂದನೆಯನ್ನೂ ಹೇಳುವುದಿಲ್ಲ. (ರೋಮ. 16:17; 2 ಯೋಹಾ. 9-11) ಧರ್ಮಭ್ರಷ್ಟರ ಸಾಹಿತ್ಯವನ್ನು ಓದುವುದಿಲ್ಲ, ಅವರ ವಿಚಾರಧಾರೆಗಳಿರುವ ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸುವುದಿಲ್ಲ. ಅವರ ಬೋಧನೆಗಳಿರುವ ವೆಬ್‌ ಸೈಟ್‌ಗಳನ್ನು ನೋಡುವುದಿಲ್ಲ.—7/15, ಪುಟ 15-16.