ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಬೈಬಲ್‌ ಓದುವಾಗ ಒಂದು ವಿಷಯದ ಕುರಿತು ನನಗೆ ಪ್ರಶ್ನೆಯೇಳುವಲ್ಲಿ ಅಥವಾ ಒಂದು ಸಮಸ್ಯೆಯ ಕುರಿತು ನನಗೆ ಸಲಹೆ ಬೇಕಾಗಿರುವಲ್ಲಿ ಏನು ಮಾಡಲಿ?

ನಾವು ಬುದ್ಧಿ ಹಾಗೂ ವಿವೇಕವನ್ನು “ನಿಕ್ಷೇಪ” ಹುಡುಕುವ ರೀತಿಯಲ್ಲಿ ‘ಹುಡುಕಬೇಕೆಂದು’ ಜ್ಞಾನೋಕ್ತಿ 2:1-5 ಹೇಳುತ್ತದೆ. ಹಾಗಾಗಿ ಬೈಬಲ್‌ನಲ್ಲಿ ಹೇಳಲಾಗಿರುವ ವಿಷಯದ ಬಗ್ಗೆ ಪ್ರಶ್ನೆಯೇಳುವಲ್ಲಿ ಅಥವಾ ನಮ್ಮದ್ದೇ ಆದ ಸಮಸ್ಯೆಗಳಿಗೆ ಸೂಕ್ತ ಸಲಹೆ ಬೇಕಾಗಿರುವಲ್ಲಿ ನಾವು ಆಳವಾಗಿ ಸಂಶೋಧನೆ ಮಾಡಬೇಕು. ಸಂಶೋಧನೆ ಮಾಡುವುದು ಹೇಗೆ?

ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ಪುಟ 33ರಿಂದ 38ರಲ್ಲಿ “ಸಂಶೋಧನೆ ಮಾಡುವ ವಿಧ” ಹೇಗೆಂದು ತಿಳಿಸಲಾಗಿದೆ. “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಒದಗಿಸಿರುವ ವಿವಿಧ ಸಂಶೋಧನಾ ಸಾಮಗ್ರಿಗಳ ಬಳಕೆಯ ಕುರಿತು ಅಲ್ಲಿ ಮಾಹಿತಿಯಿದೆ. (ಮತ್ತಾ. 24:45) ಉದಾಹರಣೆಗೆ, ಪುಟ 36ರಲ್ಲಿ ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ (ವಾಚ್‌ ಟವರ್‌ ಪ್ರಕಾಶನಗಳ ವಿಷಯಸೂಚಿ) ಉಪಯೋಗಿಸುವುದು ಹೇಗೆಂದು ತಿಳಿಸಲಾಗಿದೆ. ಈ ಇಂಡೆಕ್ಸ್‌ ಅನ್ನು ವಿಷಯಸೂಚಿ (ಸಬ್ಜೆಕ್ಟ್‌ ಇಂಡೆಕ್ಸ್‌) ಮತ್ತು ವಚನಸೂಚಿ (ಸ್ಕ್ರಿಪ್ಚರ್‌ ಇಂಡೆಕ್ಸ್‌) ಎಂದು ವರ್ಗೀಕರಿಸಲಾಗಿದೆ. ವಿಷಯಸೂಚಿ ವಿಷಯಾನುಕ್ರಮದಲ್ಲಿದೆ. ನಮಗೆ ಬೇಕಾದ ಒಂದು ವಿಷಯದ ಮುಖ್ಯಪದದ ಜಾಡುಹಿಡಿದು ಮಾಹಿತಿ ಎಲ್ಲಿದೆ ಎಂದು ಅಲ್ಲಿ ಹುಡುಕಬಹುದು. ಅದೇ ರೀತಿ ಒಂದು ವಚನಕ್ಕೆ ಸಂಬಂಧಪಟ್ಟ ಮಾಹಿತಿ ಎಲ್ಲಿದೆಯೆಂದು ವಚನಸೂಚಿಯಲ್ಲಿ ಹುಡುಕಬಹುದು. ಪ್ರತಿವರ್ಷ ಡಿಸೆಂಬರ್‌ ತಿಂಗಳ ಅಧ್ಯಯನ ಆವೃತ್ತಿಯಲ್ಲಿ ಬರುವ ‘ಕಾವಲಿನಬುರುಜು ವಿಷಯಸೂಚಿ’ ಅನ್ನು ಸಹ ನಾವು ಸಂಶೋಧನೆಗಾಗಿ ಉಪಯೋಗಿಸಬಹುದು. ಉತ್ತರಕ್ಕಾಗಿ ಅಥವಾ ಸಲಹೆಗಾಗಿ ಹುಡುಕುವಾಗ ತಾಳ್ಮೆಯಿರಲಿ. ನೀವು ಹುಡುಕುತ್ತಿರುವುದು ‘ನಿಕ್ಷೇಪಕ್ಕಾಗಿ’ ಎನ್ನುವುದನ್ನು ಮರೆಯಬೇಡಿ. ತುಂಬ ಸಮಯ, ಶ್ರಮ ಬೇಕೇಬೇಕು.

ಆದರೆ ಒಂದು ವಿಷಯವನ್ನು ಮನಸ್ಸಿನಲ್ಲಿಡಿ. ನಮ್ಮ ಪ್ರಕಾಶನಗಳು ಕೆಲವೊಂದು ವಿಷಯಗಳ ಬಗ್ಗೆ ಅಥವಾ ವಚನಗಳ ಬಗ್ಗೆ ನೇರ ಮಾಹಿತಿ ಒದಗಿಸುವುದಿಲ್ಲ. ಉದಾಹರಣೆಗೆ, ಒಂದು ನಿರ್ದಿಷ್ಟ ವಚನದ ಬಗ್ಗೆ ನಮ್ಮ ಸಾಹಿತ್ಯದಲ್ಲಿ ವಿವರ ಸಿಕ್ಕುವುದಾದರೂ ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗೆ ಅದು ಉತ್ತರ ಕೊಡದಿರಬಹುದು. ಕೆಲವೊಮ್ಮೆ ಒಂದು ಬೈಬಲ್‌ ವೃತ್ತಾಂತದ ಕುರಿತೇ ನಿಮಗೆ ಪ್ರಶ್ನೆ ಮೂಡಬಹುದು. ಏಕೆಂದರೆ ಆ ವೃತ್ತಾಂತದ ಕುರಿತ ಎಲ್ಲ ವಿವರಗಳನ್ನು ಬೈಬಲ್‌ನಲ್ಲಿ ಕೊಟ್ಟಿರಲಿಕ್ಕಿಲ್ಲ. ಹಾಗಾಗಿ ಎಲ್ಲ ಪ್ರಶ್ನೆಗಳಿಗೆ ತಕ್ಷಣ ಉತ್ತರ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭದಲ್ಲಿ ನಾವೇನು ಮಾಡಬೇಕು? ಎಲ್ಲೂ ಉತ್ತರ ಇಲ್ಲವೆಂದಾದ ಮೇಲೆ ನಾವೇ ಸುಮ್ಮನೆ ವಿಷಯಗಳನ್ನು ಊಹಿಸಬಾರದು. ಹಾಗೆ ಊಹಿಸುವುದು “ಸಂಶೋಧನೆಗಾಗಿ ಪ್ರಶ್ನೆಗಳನ್ನು ಎಬ್ಬಿಸುತ್ತವೆಯೇ ಹೊರತು ನಂಬಿಕೆಯ ಸಂಬಂಧದಲ್ಲಿ ದೇವರಿಂದ ಏನನ್ನೂ ಒದಗಿಸುವುದಿಲ್ಲ.” (1 ತಿಮೊ. 1:4; 2 ತಿಮೊ. 2:23; ತೀತ 3:9) ನಮ್ಮ ಸಾಹಿತ್ಯದಲ್ಲಿ ಚರ್ಚಿಸದಿರುವ ಯಾವುದೇ ಪ್ರಶ್ನೆಗೆ ಬ್ರಾಂಚ್‌ ಆಫೀಸಾಗಲಿ ಮುಖ್ಯ ಕಾರ್ಯಾಲಯವಾಗಲಿ ಉತ್ತರ ಕೊಡಲು ಸಾಧ್ಯವಿಲ್ಲ. ಆದರೆ ಸಂತೋಷದ ಒಂದು ವಿಷಯ ಏನೆಂದರೆ ನಮ್ಮ ಮಾರ್ಗದರ್ಶನೆಗೆ ಬೇಕಾಗುವಷ್ಟು ಮಾಹಿತಿ ಬೈಬಲ್‌ನಲ್ಲಿ ದಾಖಲಾಗಿದೆ. ಮಾತ್ರವಲ್ಲ ಕೆಲವು ವಿಷಯಗಳ ಬಗ್ಗೆ ಪೂರ್ಣ ವಿವರವನ್ನು ಬೈಬಲ್‌ ಕೊಡದಿರುವಲ್ಲಿ ಅದು ಬೈಬಲಿನ ಗ್ರಂಥಕರ್ತನಲ್ಲಿ ನಾವು ನಂಬಿಕೆಯನ್ನು ಪ್ರದರ್ಶಿಸುವ ಅವಕಾಶವಾಗಿದೆ.—ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಪುಟ 185ರಿಂದ 187 ನೋಡಿ.

ಅವಶ್ಯವಿರುವ ಒಂದು ಸಲಹೆಗಾಗಿ ನೀವು ತುಂಬ ಹುಡುಕಿಯೂ ಉತ್ತರ ಸಿಗಲೇ ಇಲ್ಲ ಎಂದಾದಲ್ಲಿ ಏನು ಮಾಡುವಿರಿ? ಪ್ರೌಢ ಕ್ರೈಸ್ತರ ಹತ್ತಿರ ಸಲಹೆ ಕೇಳಿ. ಉದಾಹರಣೆಗೆ, ಸಭಾ ಹಿರಿಯರ ನೆರವನ್ನು ಕೋರಬಹುದು. ಅವರಿಗೆ ಸಾಕಷ್ಟು ಬೈಬಲ್‌ ಜ್ಞಾನವಿರುತ್ತದೆ. ಕ್ರೈಸ್ತ ಜೀವನದ ಅನುಭವವೂ ಇರುತ್ತದೆ. ನಿಮ್ಮ ಬಗ್ಗೆ, ನಿಮ್ಮ ಪರಿಸ್ಥಿತಿ ಬಗ್ಗೆ ತಿಳಿದಿರುವ ಅವರು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಸಹಾಯ ಕೊಡಬಲ್ಲರು. ನೀವು ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಚಿಂತೆಗಳ ಬಗ್ಗೆ ಯೆಹೋವನಲ್ಲಿ ಪ್ರಾರ್ಥಿಸಲು ಮರೆಯಬಾರದು. ನಿಮ್ಮ ಆಲೋಚನೆಗಳನ್ನು ಪವಿತ್ರಾತ್ಮದ ಮೂಲಕ ಮಾರ್ಗದರ್ಶಿಸುವಂತೆ ಕೇಳಿಕೊಳ್ಳಿ. ಏಕೆಂದರೆ ಜ್ಞಾನ, ವಿವೇಕವನ್ನು ಕೊಡುವಾತನು ಯೆಹೋವನೇ.—ಜ್ಞಾನೋ. 2:6; ಲೂಕ 11:13.