ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದಯೆಯಿಂದ ಕೊಡುವ ಸುಯೋಗ”ದಲ್ಲಿ ನೀವು ಆನಂದಿಸುತ್ತಿದ್ದೀರಾ?

“ದಯೆಯಿಂದ ಕೊಡುವ ಸುಯೋಗ”ದಲ್ಲಿ ನೀವು ಆನಂದಿಸುತ್ತಿದ್ದೀರಾ?

“ದಯೆಯಿಂದ ಕೊಡುವ ಸುಯೋಗ”ದಲ್ಲಿ ನೀವು ಆನಂದಿಸುತ್ತಿದ್ದೀರಾ?

ಹೊಸದಾಗಿ ಸ್ಥಾಪಿಸಲ್ಪಟ್ಟಿದ್ದ ಫಿಲಿಪ್ಪಿ ಸಭೆಯ ಕ್ರೈಸ್ತರು ಸತ್ಯಾರಾಧನೆಯನ್ನು ಉದಾರವಾಗಿ ಬೆಂಬಲಿಸುವುದರಲ್ಲಿ ಖ್ಯಾತರಾಗಿದ್ದರು. ಅವರು ನೀಡಿದ ಸಹಕಾರದ ಬಗ್ಗೆ ಅಪೊಸ್ತಲ ಪೌಲ ದೇವಪ್ರೇರಣೆಯಿಂದ ಹೀಗೆ ಬರೆದನು: “ಪ್ರತಿಬಾರಿ ನಾನು ನಿಮ್ಮನ್ನು ನೆನಸಿಕೊಳ್ಳುವಾಗೆಲ್ಲ ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗೋಸ್ಕರ ಮಾಡುವ ನನ್ನ ಪ್ರತಿಯೊಂದು ಯಾಚನೆಯಲ್ಲಿ ಆನಂದದಿಂದಲೇ ನನ್ನ ಯಾಚನೆಯನ್ನು ಸಲ್ಲಿಸುವವನಾಗಿದ್ದೇನೆ. ಏಕೆಂದರೆ ನೀವು ಮೊದಲ ದಿನದಿಂದ ಈ ಗಳಿಗೆಯ ವರೆಗೆ ಸುವಾರ್ತೆಗೆ ಸಹಕಾರ ನೀಡಿದ್ದೀರಿ.” (ಫಿಲಿ. 1:3-5) ಪೌಲ ಲುದ್ಯಳ ಅತಿಥಿಸತ್ಕಾರದ ಬಗ್ಗೆಯೂ ನೆನಸಿಕೊಂಡಿರಬೇಕು. ಅವಳು ಮತ್ತು ಮನೆಮಂದಿಯೆಲ್ಲರೂ ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ಆಕೆ ಪೌಲನನ್ನೂ ಅವನ ಜೊತೆಯಲ್ಲಿದ್ದವರನ್ನೂ ತನ್ನ ಮನೆಯಲ್ಲಿ ಉಳುಕೊಳ್ಳುವಂತೆ ಒತ್ತಾಯಿಸಿದ್ದಳು.—ಅ. ಕಾ. 16:14, 15.

ಈ ಘಟನೆಯ ಸ್ವಲ್ಪ ಸಮಯದ ನಂತರ ಪೌಲ 160 ಕಿ.ಮೀ. ದೂರದಲ್ಲಿದ್ದ ಥೆಸಲೊನೀಕದಲ್ಲಿ ಹಲವು ವಾರ ತಂಗಿದ್ದನು. ಆಗಲೂ ಫಿಲಿಪ್ಪಿ ಸಭೆಯವರು ಎರಡು ಬಾರಿ ಅವನಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟರು. (ಫಿಲಿ. 4:15, 16) ಕೆಲವು ವರ್ಷಗಳ ಬಳಿಕ ಫಿಲಿಪ್ಪಿ ಮತ್ತು ಮಕೆದೋನ್ಯದ ಸಹೋದರರು ಬಾಧೆಯ ಮಹಾ ಪರೀಕ್ಷೆಗೆ ತುತ್ತಾಗಿ ‘ಕಡುಬಡತನದಲ್ಲಿ’ ಬಿದ್ದರು. ಅಂಥ ಪರಿಸ್ಥಿತಿಯಲ್ಲೂ ಯೆರೂಸಲೇಮಿನ ತಮ್ಮ ಸಹೋದರರು ಹಿಂಸೆಗೆ ಒಳಗಾಗಿದ್ದಾರೆಂಬ ಸುದ್ದಿ ಕೇಳಿ ಅವರು ತಕ್ಷಣ ಸಹಾಯಕ್ಕೆ ಮುಂದಾದರು. ಈ ಸಹಾಯ “ಅವರ ಸಾಮರ್ಥ್ಯಕ್ಕೂ ಮೀರಿ”ದ್ದಾಗಿತ್ತೆಂದು ಪೌಲ ಹೇಳಿದನು. ಅವರು “ದಯೆಯಿಂದ ಕೊಡುವ ಸುಯೋಗಕ್ಕಾಗಿ . . . ಸ್ವಂತ ಇಚ್ಛೆಯಿಂದ ನಮ್ಮನ್ನು ಬಹಳವಾಗಿ ಬೇಡಿಕೊಳ್ಳುತ್ತಾ ಇದ್ದರು” ಎಂದು ಸಹ ಅವನು ತಿಳಿಸಿದನು.—2 ಕೊರಿಂ. 8:1-4; ರೋಮ. 15:26.

ಕ್ರೈಸ್ತತ್ವವನ್ನು ಸ್ವೀಕರಿಸಿ ಹತ್ತು ವರ್ಷಗಳ ಬಳಿಕವೂ ಫಿಲಿಪ್ಪಿಯವರ ಉದಾರಭಾವ ಕಳೆಗುಂದಿರಲಿಲ್ಲ. ರೋಮ್‌ನಲ್ಲಿ ಪೌಲನು ಸೆರೆಯಲ್ಲಿದ್ದಾನೆಂದು ತಿಳಿದಾಗ ಅವನಿಗೆ ಬೇಕಾದದ್ದನ್ನು ಎಪಫ್ರೊದೀತನ ಮೂಲಕ ಕಳುಹಿಸಿಕೊಟ್ಟರು. 1,287 ಕಿ.ಮೀ.ಗಳಷ್ಟು ದೂರದಲ್ಲಿದ್ದ ರೋಮ್‌ಗೆ ಜಲ ಮತ್ತು ನೆಲಮಾರ್ಗವಾಗಿ ಪ್ರಯಾಣಿಸಬೇಕಿತ್ತಾದರೂ ಪೌಲನಿಗೆ ಸಹಾಯ ಮಾಡಲು ಅವರು ಹಾತೊರೆದರು. ಪೌಲ ಸಹೋದರರನ್ನು ಮತ್ತಷ್ಟು ಬಲಪಡಿಸಬೇಕು, ಸೆರೆಮನೆಯಲ್ಲಿದ್ದರೂ ಸಾರುವುದನ್ನು ಮುಂದುವರಿಸಬೇಕು ಎನ್ನುವುದು ಅವರ ಆಶೆಯಾಗಿತ್ತು.—ಫಿಲಿ. 1:12-14; 2:25-30; 4:18.

ಇಂದು ನಿಜ ಕ್ರೈಸ್ತರು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಬೆಂಬಲ ನೀಡುವುದನ್ನು ಸುಯೋಗವೆಂದು ಎಣಿಸುತ್ತಾರೆ. (ಮತ್ತಾ. 28:19, 20) ಸಮಯ, ಸಾಮರ್ಥ್ಯ, ಹಣಕಾಸನ್ನು ರಾಜ್ಯ ಚಟುವಟಿಕೆಗಾಗಿ ಕೊಡುವ ಮೂಲಕ ಅದನ್ನು ಬೆಂಬಲಿಸುತ್ತಾರೆ. ಸಾರುವ ಕೆಲಸಕ್ಕೆ ಯಾವ ಕೆಲವು ವಿಧಗಳಲ್ಲಿ ನೀವು ಬೆಂಬಲ ನೀಡಬಹುದೆಂದು ಕೆಳಗಿರುವ ಚೌಕದಲ್ಲಿ ತಿಳಿಸಲಾಗಿದೆ.

[ಪುಟ 22ರಲ್ಲಿರುವ ಚಿತ್ರ]

ದಾನಕೊಡುವ ಕೆಲವು ವಿಧಗಳು

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು

ಅನೇಕರು ಹಣವನ್ನು ತೆಗೆದಿಟ್ಟೋ ಉಳಿತಾಯ ಮಾಡಿಯೋ “ಲೋಕವ್ಯಾಪಕ ಕೆಲಸ” ಎಂಬ ಗುರುತಿರುವ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುತ್ತಾರೆ.

ಆ ಹಣವನ್ನು ಸಭೆಗಳು ಪ್ರತಿ ತಿಂಗಳು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ನೀವು ಬಯಸುವಲ್ಲಿ ಕಾಣಿಕೆಯಾಗಿ ಕೊಡಲಿಚ್ಛಿಸುವ ಹಣವನ್ನು ನೇರವಾಗಿ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಸಹ ಕಳುಹಿಸಬಹುದು. (ಕೆಳಗೆ ಸೂಚಿಸಲಾಗಿರುವ ಯಾವುದೇ ದಾನಗಳನ್ನು ಸಹ ನೀವು ನಿಮ್ಮ ದೇಶದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸಬಹುದು.) ಬ್ರಾಂಚ್‌ ಆಫೀಸಿನ ವಿಳಾಸಕ್ಕೆ ಕಳುಹಿಸುವ ಚೆಕ್‌ಗಳಲ್ಲಿ “ವಾಚ್‌ಟವರ್‌”ಗೆ * ಸಂದಾಯವಾಗಬೇಕೆಂದು ನಮೂದಿಸಬೇಕು. ಆಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ರೀತಿಯ ದಾನಗಳನ್ನು ಕೊಡುವಾಗ ಅವು ಕಾಣಿಕೆಯಾಗಿವೆ ಎಂದು ಸೂಚಿಸುವ ಒಂದು ಸಂಕ್ಷಿಪ್ತ ಪತ್ರವನ್ನು ಜೊತೆಗೂಡಿಸಬೇಕು.

ಷರತ್ತುಬದ್ಧ ದಾನ *

ಈ ಏರ್ಪಾಡಿನಡಿಯಲ್ಲಿ ಲೋಕವ್ಯಾಪಕ ಕೆಲಸಕ್ಕಾಗಿ ವಾಚ್‌ ಟವರ್‌ಗೆ ಹಣವನ್ನು ಕೊಡಬಹುದು. ವಿನಂತಿಸಿದಾಗ ಆ ಹಣವನ್ನು ವಾಪಸ್ಸು ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ದೇಶದ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

ಚ್ಯಾರಿಟಬಲ್‌ ಯೋಜನೆ *

ಹಣದ ರೂಪದ ದಾನವಲ್ಲದೆ ಲೋಕವ್ಯಾಪಕ ಸಾರುವ ಕೆಲಸಕ್ಕೆ ಸಹಾಯಮಾಡಲು ಬೇರೆ ವಿಧಗಳಲ್ಲೂ ದಾನ ಕೊಡಬಹುದು. ಅವು ಯಾವುವೆಂದರೆ:

ವಿಮೆ: ವಾಚ್‌ ಟವರ್‌ ಅನ್ನು ಜೀವ ವಿಮಾ ಪಾಲಿಸಿಯ ಅಥವಾ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ದಾನಿಯು ಬ್ಯಾಂಕ್‌ ಖಾತೆ, ಡಿಪಾಸಿಟ್‌ ಸರ್ಟಿಫಿಕೇಟ್‌ ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳೀಯ ಬ್ಯಾಂಕ್‌ ನಿಯಮಗಳಿಗೆ ಹೊಂದಿಕೆಯಲ್ಲಿ ವಾಚ್‌ ಟವರ್‌ಗೆ ವರ್ಗಾಯಿಸಬಹುದು ಅಥವಾ ತನ್ನ ಮರಣಾನಂತರ ಅವು ವಾಚ್‌ ಟವರ್‌ಗೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ ಮತ್ತು ಬಾಂಡ್‌ಗಳನ್ನು ನೇರವಾಗಿ ವಾಚ್‌ ಟವರ್‌ಗೆ ದಾನಮಾಡಬಹುದು. ಅಥವಾ ಕಾನೂನುಬದ್ಧ ಉಯಿಲಿನಲ್ಲಿ ವಾಚ್‌ ಟವರ್‌ ಅನ್ನು ಫಲಾನುಭವಿಯಾಗಿ ಹೆಸರಿಸಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಕೊಡುಗೆಯಾಗಿ ದಾನಮಾಡಬಹುದು. ವಾಸದ ಮನೆಯಾಗಿರುವಲ್ಲಿ ದಾನಿ ಜೀವದಿಂದಿರುವ ವರೆಗೆ ಅದರಲ್ಲಿ ವಾಸಿಸುವ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ದಾನಕೊಡುವ ಕರಾರುಪತ್ರವನ್ನು ಸಿದ್ಧಪಡಿಸುವ ಮೊದಲು ನಿಮ್ಮ ದೇಶದ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

ವರ್ಷಾಶನ ದಾನ: ವರ್ಷಾಶನ ದಾನ ಎಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲಾಗುವ ಒಂದು ನೇಮಿತ ಸಂಸ್ಥೆಗೆ ವರ್ಗಾಯಿಸುವ ಏರ್ಪಾಡಾಗಿದೆ. ಇದಕ್ಕೆ ಪ್ರತಿಯಾಗಿ, ದಾನಿ ಅಥವಾ ಅವನು ಸೂಚಿಸುವ ವ್ಯಕ್ತಿ ತನ್ನ ಜೀವಮಾನವಿಡೀ ಪ್ರತಿ ವರ್ಷ ನಿರ್ದಿಷ್ಟ ಮೊತ್ತದ ಹಣವನ್ನು ಪಡೆಯುತ್ತಾನೆ. ವರ್ಷಾಶನ ದಾನ ಏರ್ಪಡಿಸಿದ ವರ್ಷದಲ್ಲಿ ದಾನಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ವಾಚ್‌ ಟವರ್‌ಗೆ ಕಾನೂನುಬದ್ಧವಾಗಿ ಉಯಿಲು ಬರೆಯಬಹುದು. ಅಥವಾ ಒಂದು ಟ್ರಸ್ಟ್‌ ಅಗ್ರೀಮಂಟ್‌ನ ಫಲಾನುಭವಿಯಾಗಿ ವಾಚ್‌ಟವರ್‌ * ಅನ್ನು ಹೆಸರಿಸಬಹುದು. ಧಾರ್ಮಿಕ ಸಂಸ್ಥೆಗೆ ದಾನಕೊಡುವ ಟ್ರಸ್ಟ್‌ಗೆ ಕೆಲವೊಮ್ಮೆ ತೆರಿಗೆ ವಿನಾಯಿತಿ ಸಿಗುತ್ತದೆ.

“ಚ್ಯಾರಿಟಬಲ್‌ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನವನ್ನು ಕೊಡುವಾಗ ಸ್ವಲ್ಪ ಯೋಜನೆ ಮಾಡಬೇಕಾಗುತ್ತದೆ. ಚ್ಯಾರಿಟಬಲ್‌ ಯೋಜನೆಯ ಮೂಲಕ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ದಾನ ಕೊಡಲಿಚ್ಛಿಸುವ ವ್ಯಕ್ತಿಗಳಿಗೆ ನೆರವಾಗುವಂತೆ, “ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್‌ ಯೋಜನೆ” * ಎಂಬ ಬ್ರೋಷರನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ರಚಿಸಲಾಗಿದೆ. ಈ ಬ್ರೋಷರಿನಲ್ಲಿ, ಯಾವೆಲ್ಲ ರೀತಿಯಲ್ಲಿ ಈಗ ಅಥವಾ ಅಂತಿಮ ಉಯಿಲಿನ ಮೂಲಕ ದಾನಗಳನ್ನು ನೀಡಬಹುದು ಎಂಬ ಮಾಹಿತಿ ಇದೆ. ಅನೇಕರು ಈ ಬ್ರೋಷರನ್ನು ಓದಿ, ತಮ್ಮ ಕಾನೂನು ಅಥವಾ ತೆರಿಗೆ ಸಲಹೆಗಾರರೊಂದಿಗೆ ಚರ್ಚಿಸಿ, ನಮ್ಮ ಲೋಕವ್ಯಾಪಕ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಸಹಾಯ ನೀಡಿದ್ದಾರೆ. ಮಾತ್ರವಲ್ಲ ತೆರಿಗೆ ವಿನಾಯಿತಿ ಪಡೆದುಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಅಥವಾ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಪತ್ರ ಬರೆಯಿರಿ ಅಥವಾ ಫೋನ್‌ ಮೂಲಕ ಸಂಪರ್ಕಿಸಿ.

[ಪಾದಟಿಪ್ಪಣಿಗಳು]

^ ಪ್ಯಾರ. 10 ಭಾರತದಲ್ಲಾದರೆ, “The Watch Tower Bible and Tract Society of India”ಗೆ ಸಂದಾಯವಾಗಬೇಕೆಂದು ಚೆಕ್‌ಮೇಲೆ ನಮೂದಿಸಿ.

^ ಪ್ಯಾರ. 11 ಭಾರತಕ್ಕೆ ಅನ್ವಯಿಸುವುದಿಲ್ಲ.

^ ಪ್ಯಾರ. 13 ಸೂಚನೆ: ತೆರಿಗೆಯ ನಿಯಮಗಳು ವಿವಿಧ ದೇಶಗಳಲ್ಲಿ ವಿಭಿನ್ನವಾಗಿರಬಹುದು. ನಿಮ್ಮ ಅಕೌಂಟೆಂಟ್‌ ಅಥವಾ ವಕೀಲರಿಂದ ತೆರಿಗೆ ನಿಯಮ ಮತ್ತು ಚ್ಯಾರಿಟಬಲ್‌ ಯೋಜನೆಯ ಬಗ್ಗೆ ಮಾಹಿತಿ ಪಡೆಯಿರಿ. ಅಂತಿಮ ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

^ ಪ್ಯಾರ. 20 ಭಾರತದಲ್ಲಾದರೆ, “The Watch Tower Bible and Tract Society of India” ಎಂದು ಬರೆಯಿರಿ.

^ ಪ್ಯಾರ. 21 ಭಾರತದಲ್ಲಿ ಲಭ್ಯವಿಲ್ಲ.

[ಪುಟ 23ರಲ್ಲಿರುವ ಚಿತ್ರ]

Jehovah’s Witnesses of India,

Post Box 6440,

Yelahanka,

Bangalore 560 064,

Karnataka.

Telephone: (080) 28468072