ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

• ‘ನಾನೇ ನಿನಗೆ ಪಾಲು’ ಎಂದು ದೇವರು ಲೇವಿಯರಿಗೆ ಹೇಳಿದ ಮಾತಿನ ಅರ್ಥವೇನು?

ವಾಗ್ದತ್ತ ಪ್ರದೇಶದಲ್ಲಿ ಲೇವಿಯ ಕುಲವನ್ನು ಬಿಟ್ಟು ಉಳಿದೆಲ್ಲ ಕುಲದವರು ಸ್ವಾಸ್ಥ್ಯವನ್ನು ಪಡೆದುಕೊಂಡರು. ಲೇವಿಯರಿಗೆ ಯೆಹೋವನೇ ಪಾಲು ಆಗಿದ್ದನು. (ಅರ. 18:20) ಭೂಸ್ವಾಸ್ಥ್ಯ ಅವರಿಗೆ ಸಿಗದಿದ್ದರೂ ಯೆಹೋವನ ಸೇವೆ ಮಾಡುವ ಮಹಾ ಸುಯೋಗ ಸಿಕ್ಕಿತು. ಯೆಹೋವನು ಅವರ ಮೂಲಭೂತ ಅಗತ್ಯಗಳನ್ನು ಒದಗಿಸಿದನು. ಇಂದು ದೇವರ ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸುವವರಿಗೂ ತಮ್ಮ ಜೀವನದ ಅಗತ್ಯಗಳನ್ನು ದೇವರು ಖಂಡಿತ ಒದಗಿಸುವನೆಂಬ ಭರವಸೆ ಇರಬಲ್ಲರು.—9/15, ಪುಟ 7-8, 13.

• ಒಂದು ನಿರ್ದಿಷ್ಟ ವಿಧದ ಮನರಂಜನೆ ಪ್ರಯೋಜನಕರವೋ ಇಲ್ಲವೋ ಎನ್ನುವುದನ್ನು ನಿರ್ಣಯಿಸಲು ಕ್ರೈಸ್ತನೊಬ್ಬನಿಗೆ ಯಾವುದು ಸಹಾಯಕರ?

ಯಾವುದೇ ಮನರಂಜನೆ ಪ್ರಯೋಜನಕರವಾಗಿ ಇಲ್ಲವೆ ದೇವರಿಗೆ ಮೆಚ್ಚಿಕೆಯಾಗಿ ಇರುವುದೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹೀಗೆ ಕೇಳಿಕೊಳ್ಳಿ: ‘ನಾನು ಆರಿಸಿಕೊಳ್ಳುವ ಮನರಂಜನೆಯಲ್ಲಿ ಯಾವ ವಿಷಯಗಳಿವೆ? ಯಾವಾಗ ಮನರಂಜನೆಯಲ್ಲಿ ಸಮಯ ಕಳೆಯುತ್ತೇನೆ? ಯಾರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ?’​—10/15, ಪುಟ 9-12.

ಜ್ಞಾನೋಕ್ತಿ 7:6-23ರ ವೃತ್ತಾಂತವು ಅಶ್ಲೀಲ ಚಿತ್ರಗಳನ್ನು ನೋಡದಿರಲು ಹೇಗೆ ಸಹಾಯ ಮಾಡುತ್ತದೆ?

ಆ ವೃತ್ತಾಂತವು ಜಾರಸ್ತ್ರೀ ಇರುವ ಬೀದಿಯತ್ತ ಹೆಜ್ಜೆ ಹಾಕಿದ ಯೌವನಸ್ಥನ ಕುರಿತು ತಿಳಿಸುತ್ತದೆ. ಅವಳು ಅವನನ್ನು ತನ್ನ ವಂಚನೆಯ ಬಲೆಯಲ್ಲಿ ಹಾಕಿಕೊಂಡಳು. ಇಂದು ಇಂಟರ್‌ನೆಟ್‌ನಲ್ಲಿ ಅಂಥದ್ದೇ ಪಾಶವಿರುವ ಕಾಮಪ್ರಚೋದಕ ಚಿತ್ರಗಳ ಸೈಟ್‌ಗಳಿವೆ. ಅವುಗಳನ್ನು ನಾವು ನೋಡಲೂ ಹೋಗಬಾರದು. ಅಂಥ ಹೆಜ್ಜೆಯಿಡುವ ಮೊದಲೇ ನಾವು ಸಹಾಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಬೇಕು.—11/15, ಪುಟ 9-10.