ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಆವೃತ್ತಿ ಇದೀಗ ವಿನೂತನ ವಿನ್ಯಾಸದಲ್ಲಿ...

ಅಧ್ಯಯನ ಆವೃತ್ತಿ ಇದೀಗ ವಿನೂತನ ವಿನ್ಯಾಸದಲ್ಲಿ...

ಅಧ್ಯಯನ ಆವೃತ್ತಿ ಇದೀಗ ವಿನೂತನ ವಿನ್ಯಾಸದಲ್ಲಿ...

ನಿಮ್ಮ ಕೈಯಲ್ಲಿರುವ ಈ ಪತ್ರಿಕೆ ವಿನೂತನ ವಿನ್ಯಾಸದಲ್ಲಿ ಹೊರಬಂದಿರುವ ಅಧ್ಯಯನ ಆವೃತ್ತಿಯಾಗಿದೆ. ಪತ್ರಿಕೆ ಹೆಚ್ಚು ಆಕರ್ಷಕವಾಗಿ ಕಾಣಬೇಕು, ಯೆಹೋವ ದೇವರ ಅಮೂಲ್ಯವಾದ ಸತ್ಯವಾಕ್ಯದ ಅಧ್ಯಯನದಲ್ಲಿ ನಿಮಗೆ ಹೆಚ್ಚು ನೆರವಾಗಬೇಕು ಎನ್ನುವುದೇ ಈ ಬದಲಾವಣೆಯ ಉದ್ದೇಶ.—ಕೀರ್ತ. 1:2; 119:97.

ಕಾವಲಿನಬುರುಜು ಪತ್ರಿಕೆಯನ್ನು ಎರಡು ಆವೃತ್ತಿಗಳಾಗಿ ಪ್ರಕಟಿಸಿ ಇದೀಗ ನಾಲ್ಕು ವರ್ಷಗಳು ಸಂದಿವೆ. ಒಂದು ಆವೃತ್ತಿ ಸಾರ್ವಜನಿಕರಿಗಾದರೆ ಮತ್ತೊಂದು ನಮ್ಮೆಲ್ಲರಿಗಾಗಿ ಅಂದರೆ ಯೆಹೋವನ ಸಾಕ್ಷಿಗಳು ಮತ್ತು ಪ್ರಗತಿಪರ ಬೈಬಲ್‌ ವಿದ್ಯಾರ್ಥಿಗಳಿಗಾಗಿ ಪ್ರಕಟಗೊಂಡಿತು.

ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡಿರುವ ಸಹೋದರರೊಬ್ಬರು ಅಧ್ಯಯನ ಆವೃತ್ತಿಯ ಬಗ್ಗೆ ಹೀಗೆ ಬರೆದರು: “ಕಾವಲಿನಬುರುಜು ಪತ್ರಿಕೆಯ ಮೊದಲ ಅಧ್ಯಯನ ಆವೃತ್ತಿಯನ್ನು ಓದಿದಾಗ ನಾನು ನಿಜಕ್ಕೂ ಪುಳಕಿತನಾದೆ. ಅದು ನನ್ನ ಹೃದಯವನ್ನು ಸ್ಪರ್ಶಿಸಿತು. ಅದರಲ್ಲಿ ಬೈಬಲಿನ ಆಳವಾದ ಸತ್ಯಗಳನ್ನು ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಅತ್ಯುತ್ತಮ ಹೊಸ ಉಡುಗೊರೆಗಾಗಿ ತುಂಬು ಹೃದಯದ ಕೃತಜ್ಞತೆ.” ಇನ್ನೊಬ್ಬ ಸಹೋದರರ ಅಭಿಪ್ರಾಯ ಹೀಗಿತ್ತು: “ಬೈಬಲೊಂದಿಗೆ ಈ ಆವೃತ್ತಿಯನ್ನು ಹೆಚ್ಚು ಸಮಯ ಅಧ್ಯಯನ ಮಾಡಲು ಎದುರು ನೋಡುತ್ತೇನೆ.” ನಿಮಗೂ ಈ ರೀತಿಯ ಅನಿಸಿಕೆ ಆಗಿರಬೇಕಲ್ಲವೇ!

ನಿಮಗೆ ತಿಳಿದಿರುವಂತೆ ಇಸವಿ 1879ರಲ್ಲಿ ಆರಂಭಗೊಂಡ ಕಾವಲಿನಬುರುಜು ಪತ್ರಿಕೆ ಇಂದಿನ ವರೆಗೂ ಪ್ರಕಟಗೊಳ್ಳುತ್ತಲೇ ಇದೆ. ಇಂಥ ಮಹತ್ತರ ಸಾಧನೆ ಯೆಹೋವನ ಆಶೀರ್ವಾದ ಮತ್ತು ಪವಿತ್ರಾತ್ಮದ ಸಹಾಯದಿಂದ ಮಾತ್ರ ಸಾಧ್ಯ. (ಜೆಕ. 4:6) ಈ 133 ವರ್ಷಗಳಲ್ಲಿ ಪತ್ರಿಕೆಯ ಮುಖಪುಟ ವಿನ್ಯಾಸ ಅನೇಕ ಸಲ ಬದಲಾವಣೆ ಕಂಡಿದೆ. 2012ರಿಂದ ಅಧ್ಯಯನ ಆವೃತ್ತಿಯ ಮುಖಪುಟದಲ್ಲಿ ಸಾಕ್ಷಿಕಾರ್ಯದ ಚಿತ್ರವಿರುವುದು. ಕಲೆಗಾರನ ಕುಂಚದಲ್ಲಿ ಅರಳಿದ ವರ್ಣರಂಜಿತ ಕಲಾಕೃತಿ ಅದಾಗಿರುವುದು. ಸಾಕ್ಷಿಕಾರ್ಯದ ಈ ಚಿತ್ರವು ಯೆಹೋವನ ರಾಜ್ಯದ ಕುರಿತು ಕೂಲಂಕಷವಾಗಿ ಸಾಕ್ಷಿನೀಡುವ ನೇಮಕವನ್ನು ಪೂರೈಸಬೇಕೆಂದು ನಮಗೆ ನೆನಪಿಸುವುದು. (ಅ. ಕಾ. 28:23) ಈ ಕಲಾಕೃತಿಯ ಅಸಲಿ ಫೋಟೋವನ್ನು ಪುಟ 2ರಲ್ಲಿ ನೋಡುವಿರಿ. ಅದರ ಕೆಳಗೆ ಎಲ್ಲಿ, ಏನು ನಡೆಯುತ್ತಿದೆ ಎಂಬ ಚುಟುಕಾದ ವಿವರ ಇರುವುದು. ಯೆಹೋವನ ಜನರು “ಭೂಮಿಯಾದ್ಯಂತ” ಸುವಾರ್ತೆ ಸಾರುತ್ತಿದ್ದಾರೆಂಬ ವಿಷಯವನ್ನು ಈ ಚಿತ್ರಗಳು ನಮ್ಮ ಮನಸ್ಸಿಗೆ ತರುತ್ತವೆ.—ಮತ್ತಾ. 24:14.

ಇನ್ನಿತರ ಬದಲಾವಣೆಗಳೆಂದರೆ ಅಧ್ಯಯನ ಲೇಖನದ ಆರಂಭದ ಪುಟದಲ್ಲೇ ಪುನರವಲೋಕನ ಚೌಕವಿರುವುದು. ಲೇಖನವನ್ನು ಓದಿ ಅಧ್ಯಯನ ಮಾಡುವಾಗ ಯಾವ ಮುಖ್ಯ ಅಂಶಗಳಿಗೆ ನೀವು ಗಮನ ಕೊಡಬೇಕೆಂದು ತಿಳಿಯಲು ಇದರಿಂದ ಸುಲಭವಾಗುವುದು. ಕಾವಲಿನಬುರುಜು ಅಧ್ಯಯನ ನಿರ್ವಾಹಕರು ಈ ಪ್ರಶ್ನೆಗಳನ್ನು ಮುಂಚಿನಂತೆಯೇ ಅಧ್ಯಯನದ ಕೊನೆಯಲ್ಲಿ ಪರಿಗಣಿಸಬೇಕು. ಅಧ್ಯಯನ ಲೇಖನಗಳಿರುವ ಪುಟಗಳಲ್ಲಿ ಅಗಲವಾದ ಮಾರ್ಜಿನುಗಳನ್ನು ಕೊಡಲಾಗಿದೆ. ಪುಟ ಹಾಗೂ ಪ್ಯಾರ ಸಂಖ್ಯೆಗಳು ದೊಡ್ಡದಾಗಿವೆ.

ಈ ಸಂಚಿಕೆಯಿಂದ ಆರಂಭಿಸಿ “ನಮ್ಮ ಸಂಗ್ರಹಾಲಯ” ಎಂಬ ಹೊಸ ಲೇಖನ ಸೇರ್ಪಡೆಯಾಗಿದೆ. ಈ ಲೇಖನಗಳಲ್ಲಿ ಯೆಹೋವನ ಸಾಕ್ಷಿಗಳ ಇತಿಹಾಸದಲ್ಲಾಗಿರುವ ಮಹತ್ವಪೂರ್ಣ ಬೆಳವಣಿಗೆಯನ್ನು ವರ್ಣಿಸಲಾಗುವುದು. “ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು” ಎಂಬ ಶೀರ್ಷಿಕೆಯಿರುವ ಲೇಖನವು ಆಗಿಂದಾಗ್ಗೆ ಪ್ರಕಟಗೊಳ್ಳುತ್ತದೆ. ಇದರಲ್ಲಿ ನಮ್ಮ ಸಹೋದರ ಸಹೋದರಿಯರ ಅನುಭವಗಳು ಇರುತ್ತವೆ. ರಾಜ್ಯ ಪ್ರಚಾರಕರ ಹೆಚ್ಚು ಅಗತ್ಯವಿರುವ ಸ್ಥಳಗಳಲ್ಲಿ ಸೇವೆ ಸಲ್ಲಿಸಿರುವವರು ಪಡಕೊಂಡ ಹರ್ಷಾನಂದ, ಸಂತೃಪ್ತಿಯನ್ನು ಇವು ಬಣ್ಣಿಸುತ್ತವೆ.

ಈ ಪತ್ರಿಕೆಯ ನೆರವಿನಿಂದ ದೇವರ ವಾಕ್ಯದ ಅಧ್ಯಯನವನ್ನು ನೀವು ಪೂರ್ಣವಾಗಿ ಆನಂದಿಸಬೇಕು ಎನ್ನುವುದು ನಮ್ಮ ಆಶಯ.

ಪ್ರಕಾಶಕರು

[ಪುಟ 3ರಲ್ಲಿರುವ ಚಿತ್ರ]

1879

[ಪುಟ 3ರಲ್ಲಿರುವ ಚಿತ್ರ]

1895

[ಪುಟ 3ರಲ್ಲಿರುವ ಚಿತ್ರ]

1931

[ಪುಟ 3ರಲ್ಲಿರುವ ಚಿತ್ರ]

1950

[ಪುಟ 3ರಲ್ಲಿರುವ ಚಿತ್ರ]

1974

[ಪುಟ 3ರಲ್ಲಿರುವ ಚಿತ್ರ]

2008