ಸತ್ಯದ ಸ್ವರೂಪದಿಂದ ಕಲಿಯಿರಿ
ಸತ್ಯದ ಸ್ವರೂಪದಿಂದ ಕಲಿಯಿರಿ
‘ಧರ್ಮಶಾಸ್ತ್ರದ ಜ್ಞಾನಸತ್ಯಗಳ ಸ್ವರೂಪವೇ ನಿಮಗಿದೆ.’—ರೋಮ. 2:19, BSI.
ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ
ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಯಜ್ಞಗಳು ಯಾವುದರ ಮುನ್‌ಛಾಯೆಯಾಗಿದ್ದವು?
ಇಸ್ರಾಯೇಲ್ಯರು ಅರ್ಪಿಸುತ್ತಿದ್ದ ಯಜ್ಞಗಳಿಗೂ ಇಂದು ಕ್ರೈಸ್ತರು ಅರ್ಪಿಸುವ ಯಜ್ಞಗಳಿಗೂ ಯಾವ ಹೋಲಿಕೆಯಿದೆ?
ಯಾವ ರೀತಿಯ ಯಜ್ಞಗಳನ್ನು ದೇವರು ಸ್ವೀಕರಿಸುತ್ತಾನೆ? ಯಾವುದನ್ನು ಸ್ವೀಕರಿಸುವುದಿಲ್ಲ?
1. ಧರ್ಮಶಾಸ್ತ್ರದ ಸೂಚಿತಾರ್ಥವನ್ನು ನಾವೇಕೆ ತಿಳಿದುಕೊಳ್ಳಬೇಕು?
ಪೌಲನ ದೇವಪ್ರೇರಿತ ಪತ್ರಗಳು ಇಲ್ಲದಿರುತ್ತಿದ್ದಲ್ಲಿ ಧರ್ಮಶಾಸ್ತ್ರದಲ್ಲಿರುವ ಅನೇಕ ವಿಷಯಗಳ ಸೂಚಿತಾರ್ಥ ನಮಗಿಂದು ತಿಳಿಯಲು ಕಷ್ಟವಾಗುತ್ತಿತ್ತು. ಉದಾಹರಣೆಗೆ, ಇಬ್ರಿಯರಿಗೆ ಬರೆದ ಪತ್ರದಲ್ಲಿ, “ನಂಬಿಗಸ್ತನಾದ ಮಹಾ ಯಾಜಕ” ಯೇಸು ಹೇಗೆ ಎಲ್ಲ ಕಾಲಕ್ಕಾಗಿ ಒಂದೇ ಸಾರಿ “ಪಾಪನಿವಾರಣಾರ್ಥಕ ಯಜ್ಞ” ಅರ್ಪಿಸಿ ಅದರಲ್ಲಿ ನಂಬಿಕೆಯಿಡುವವರಿಗೆ “ನಿತ್ಯಬಿಡುಗಡೆ” ಒದಗಿಸಿದನೆಂದು ವಿವರಿಸಿದ್ದಾನೆ. (ಇಬ್ರಿ. 2:17; 9:11, 12) ಮಾತ್ರವಲ್ಲ ದೇವದರ್ಶನ ಗುಡಾರವು ‘ಸ್ವರ್ಗದಲ್ಲಿರುವ ವಿಷಯಗಳ ಛಾಯೆಯಾಗಿದೆ’ ಎಂದೂ ಮೋಶೆ ಮಧ್ಯಸ್ಥಿಕೆ ವಹಿಸಿದ್ದ ಒಡಂಬಡಿಕೆಗಿಂತ “ಉತ್ತಮವಾದ ಒಡಂಬಡಿಕೆಗೆ” ಯೇಸು ಮಧ್ಯಸ್ಥನಾದನು ಎಂದೂ ತಿಳಿಸಿದ್ದಾನೆ. (ಇಬ್ರಿ. 7:22; 8:1-5) ಧರ್ಮಶಾಸ್ತ್ರದ ಕುರಿತ ಇಂಥ ವಿವರಣೆಗಳು ಪೌಲನ ಸಮಯದಲ್ಲಿದ್ದ ಕ್ರೈಸ್ತರಿಗೆ ಅತ್ಯಮೂಲ್ಯವಾಗಿದ್ದವು. ನಮಗೂ ಅಷ್ಟೇ. ದೇವರು ನಮಗಾಗಿ ಮಾಡಿರುವ ಏರ್ಪಾಡುಗಳ ಮೌಲ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವು ಸಹಾಯಮಾಡುತ್ತವೆ.
2. ಯೆಹೋವ ದೇವರನ್ನು ಹಾಗೂ ಆತನ ನೀತಿಯುತ ಮೂಲತತ್ವಗಳನ್ನು ಯೆಹೂದಿ ಕ್ರೈಸ್ತರು ಇತರರಿಗಿಂತಲೂ ಚೆನ್ನಾಗಿ ತಿಳಿದುಕೊಂಡಿದ್ದರು ಏಕೆ?
2 ಪೌಲ ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪತ್ರ ಬರೆದಾಗ ಕೆಲವು ವಿಷಯಗಳನ್ನು ಧರ್ಮಶಾಸ್ತ್ರದ ಜ್ಞಾನವಿದ್ದ ಯೆಹೂದಿ ಕ್ರೈಸ್ತರಿಗೆ ಸಂಬೋಧಿಸಿ ಬರೆದನು. ಧರ್ಮಶಾಸ್ತ್ರದ ಒಳ್ಳೇ ಪರಿಚಯವಿದ್ದ ಅವರಿಗೆ ಯೆಹೋವ ದೇವರ ಮತ್ತು ಆತನ ನೀತಿಯುತ ಮೂಲತತ್ವಗಳ ಕುರಿತ “ಜ್ಞಾನಸತ್ಯಗಳ ಸ್ವರೂಪ” ತಿಳಿದಿತ್ತು. ಹಾಗಾಗಿ ಪೌಲನ ವಿವರಣೆಯಿಂದ ಅವರು ಸತ್ಯದ ಸ್ವರೂಪದ ಮೌಲ್ಯವನ್ನು ಇನ್ನೂ ಹೆಚ್ಚು ಗ್ರಹಿಸಿದರು ಮತ್ತು ಅದರೆಡೆಗೆ ಅವರ ಗೌರವ ಹೆಚ್ಚಾಯಿತು. ಪ್ರಾಚೀನ ದೇವಭಕ್ತ ಯೆಹೂದ್ಯರಂತೆ ಇತರರಿಗೆ ಕಲಿಸಲು ಅಂದರೆ ಧರ್ಮಶಾಸ್ತ್ರದ ತಿಳಿವಳಿಕೆ ಇಲ್ಲದವರಿಗೆ ಬೋಧಿಸಿ ಮಾರ್ಗದರ್ಶನೆ ನೀಡಲು ಶಕ್ತರಾದರು.—ರೋಮನ್ನರಿಗೆ 2:17-20 ಓದಿ.
ಯೇಸುವಿನ ಯಜ್ಞದ ಮುನ್‌ಛಾಯೆ
3. ಪ್ರಾಚೀನ ಯೆಹೂದ್ಯರು ಸಮರ್ಪಿಸುತ್ತಿದ್ದ ಯಜ್ಞಗಳ ಕುರಿತು ಕಲಿಯುವುದರಿಂದ ನಮಗೆ ಯಾವ ಪ್ರಯೋಜನವಿದೆ?
3 ಯೆಹೋವನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಪೌಲ ಮಲಾ. 3:6.
ಹೇಳಿದ “ಜ್ಞಾನಸತ್ಯಗಳ ಸ್ವರೂಪ” ನಮಗೂ ತಿಳಿದಿರಬೇಕು. ಇಂದಿಗೂ ಧರ್ಮಶಾಸ್ತ್ರದ ನಿಯಮಗಳ ಹಿಂದಿರುವ ಮೂಲತತ್ವಗಳು ಪ್ರಾಮುಖ್ಯವಾಗಿವೆ. ಹಾಗಾಗಿ ನಾವೀಗ ಧರ್ಮಶಾಸ್ತ್ರದಲ್ಲಿ ತಿಳಿಸಲಾದ ವಿವಿಧ ಯಜ್ಞಗಳ ಹಾಗೂ ಕಾಣಿಕೆಗಳ ಕುರಿತು ಪರಿಗಣಿಸೋಣ. ಅವು ದೇವಭಕ್ತ ಯೆಹೂದ್ಯರನ್ನು ಯಾವ ರೀತಿಯಲ್ಲಿ ಕ್ರಿಸ್ತನ ಕಡೆಗೆ ಮಾರ್ಗದರ್ಶಿಸಿದವು, ಯಾವ ರೀತಿಯಲ್ಲಿ ದೇವರು ಅಪೇಕ್ಷಿಸುವುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದವು ಎಂದು ನೋಡೋಣ. ಯೆಹೋವನು ತನ್ನ ಸೇವಕರಿಂದ ಅಪೇಕ್ಷಿಸುವ ಮೂಲಭೂತ ವಿಷಯಗಳು ಎಂದಿಗೂ ಬದಲಾಗುವುದಿಲ್ಲ. ಆದಕಾರಣ ಧರ್ಮಶಾಸ್ತ್ರದಲ್ಲಿನ ಯಜ್ಞಗಳು ಹಾಗೂ ಕಾಣಿಕೆಗಳು ನಮ್ಮ ಸೇವೆಯ ಗುಣಮಟ್ಟವನ್ನು ಪರೀಕ್ಷಿಸಿ ನೋಡಲು ಹೇಗೆ ಸಹಾಯ ಮಾಡುತ್ತವೆ ಎಂದು ನೋಡೋಣ.—4, 5. (ಎ) ಧರ್ಮಶಾಸ್ತ್ರದ ನಿಯಮಗಳು ದೇವಜನರಿಗೆ ಏನನ್ನು ನೆನಪಿಸಿದವು? (ಬಿ) ಯಜ್ಞಗಳು ಯಾವುದರ ಛಾಯೆಯಾಗಿದ್ದವು?
4 ಧರ್ಮಶಾಸ್ತ್ರದ ಅನೇಕ ನಿಯಮಗಳು ಯೆಹೂದ್ಯರಿಗೆ ತಾವು ಪಾಪಿಗಳೆಂಬುದನ್ನು ನೆನಪಿಸುತ್ತಿದ್ದವು. ಉದಾಹರಣೆಗೆ, ಮನುಷ್ಯನ ಶವವನ್ನು ಮುಟ್ಟಿದವರು ಅಶುದ್ಧರಾಗುತ್ತಿದ್ದರು. ಆಗ ಅವರು ದೋಷಪರಿಹಾರ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿ ಕೆಂಪು ಬಣ್ಣದ ಪೂರ್ಣಾಂಗವಾದ ಆಕಳನ್ನು ವಧಿಸಿ ಸುಡಬೇಕಿತ್ತು. ಅದರ ಬೂದಿಯನ್ನು “ಹೊಲೆಗಳೆವ ನೀರನ್ನು ಸಿದ್ಧಪಡಿಸುವದಕ್ಕಾಗಿ” ತೆಗೆದಿಡಬೇಕಿತ್ತು. ದೋಷಪರಿಹಾರ ಮಾಡಿಕೊಳ್ಳುವವರ ಮೇಲೆ ಆ ನೀರನ್ನು ಮೂರನೇ ಹಾಗೂ ಏಳನೇ ದಿನದಂದು ಚಿಮಿಕಿಸಬೇಕಿತ್ತು. (ಅರ. 19:1-13) ಮಗುವಿಗೆ ಜನ್ಮ ನೀಡಿದ ನಂತರ ಒಬ್ಬಾಕೆ ಸ್ತ್ರೀ ನಿರ್ದಿಷ್ಟ ದಿನಗಳ ವರೆಗೆ ಅಶುದ್ಧಳಾಗಿರುತ್ತಿದ್ದಳು. ಆಕೆ ಯಜ್ಞವನ್ನು ಅರ್ಪಿಸಿ ದೋಷಪರಿಹಾರ ಮಾಡಿಕೊಳ್ಳಬೇಕಿತ್ತು. ಇದು ಅಪರಿಪೂರ್ಣತೆ ಮತ್ತು ಪಾಪವನ್ನು ಮನುಷ್ಯರು ಆನುವಂಶೀಯವಾಗಿ ಪಡೆದುಕೊಳ್ಳುತ್ತಾರೆ ಎನ್ನುವುದನ್ನು ನೆನಪಿಸುತ್ತಿತ್ತು.—ಯಾಜ. 12:1-8.
5 ಬೇರೆ ಅನೇಕ ಸಂದರ್ಭಗಳಲ್ಲೂ ದೋಷಪರಿಹಾರ ಮಾಡಿಕೊಳ್ಳಲು ಪ್ರಾಣಿಯಜ್ಞಗಳನ್ನು ಯೆಹೂದ್ಯರು ಅರ್ಪಿಸಬೇಕಾಗಿತ್ತು. ಅವರಿಗೆ ತಿಳಿದಿರಲಿ ಇಲ್ಲದಿರಲಿ ದೇವದರ್ಶನ ಗುಡಾರದಲ್ಲಿ ಮತ್ತು ನಂತರ ಯೆಹೋವನ ಆಲಯದಲ್ಲಿ ಅರ್ಪಿಸಲಾಗುತ್ತಿದ್ದ ಯಜ್ಞಗಳು ಯೇಸುವಿನ ಪರಿಪೂರ್ಣ ಯಜ್ಞದ “ಛಾಯೆ” ಆಗಿದ್ದವು.—ಇಬ್ರಿ. 10:1-10.
ಯಜ್ಞಗಳ ಹಿಂದಿದ್ದ ಉದ್ದೇಶ
6, 7. (ಎ) ಯಜ್ಞದ ವಿಷಯದಲ್ಲಿ ಇಸ್ರಾಯೇಲ್ಯರು ಏನನ್ನು ನೆನಪಿನಲ್ಲಿಡಬೇಕಿತ್ತು? ಯಜ್ಞದ ಗುಣಮಟ್ಟದ ಕುರಿತು ಯೆಹೋವನು ಕೊಟ್ಟ ನಿಯಮಗಳು ಏನನ್ನು ಸೂಚಿಸಿದವು? (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
6 ಇಸ್ರಾಯೇಲ್ಯರು ಯೆಹೋವನಿಗೆ ಯಜ್ಞವಾಗಿ ಅರ್ಪಿಸುವ ಯಾವುದೇ ಪ್ರಾಣಿ “ಪೂರ್ಣಾಂಗವಾಗಿ” ಇರಬೇಕಿತ್ತು. ಕುರುಡು, ಊನ, ಕಾಯಿಲೆಬಿದ್ದಿರುವ, ಗಾಯಗೊಂಡಿರುವ ಪ್ರಾಣಿಯಾಗಿರಬಾರದಿತ್ತು. (ಯಾಜ. 22:20-22) ಇಸ್ರಾಯೇಲ್ಯರು ಅರ್ಪಿಸುವ ಧಾನ್ಯಫಲಗಳು ಬೆಳೆಯ “ಉತ್ತಮಭಾಗ” ಅಂದರೆ “ಪ್ರಥಮಫಲ” ಆಗಿರಬೇಕಿತ್ತು. (ಅರ. 18:12, 29) ಕೀಳು ಗುಣಮಟ್ಟದ ಅರ್ಪಣೆಗಳನ್ನು ಯೆಹೋವನು ಸ್ವೀಕರಿಸುತ್ತಿರಲಿಲ್ಲ. ಯಜ್ಞಗಳ ವಿಷಯದಲ್ಲಿ ಯೆಹೋವನು ಇಟ್ಟ ನಿಯಮಗಳು ಯೇಸುವಿನ ಯಜ್ಞವು ದೋಷರಹಿತವೂ ನಿಷ್ಕಳಂಕವೂ ಆಗಿರುವುದೆಂದು ಸೂಚಿಸಿದವು. ಮಾತ್ರವಲ್ಲ ಯೆಹೋವನು ಮಾನವಕುಲವನ್ನು ವಿಮೋಚಿಸಲು ತನ್ನಲ್ಲಿದ್ದ ಅತಿ ಉತ್ತಮವಾದದ್ದನ್ನು, ತನಗೆ ಅತಿ ಪ್ರಿಯವಾದದ್ದನ್ನು ಯಜ್ಞವಾಗಿ ಕೊಡಲಿದ್ದನು ಎಂದು ಸಹ ಸೂಚಿಸಿದವು.—1 ಪೇತ್ರ 1:18, 19.
7 ಯಜ್ಞ ಅರ್ಪಿಸುವ ಒಬ್ಬ ವ್ಯಕ್ತಿ ಯೆಹೋವನು ಮಾಡಿರುವ ಎಲ್ಲ ಉಪಕಾರಗಳಿಗಾಗಿ ನಿಜಕ್ಕೂ ಹೃದಯಾಳದ ಕೃತಜ್ಞತೆ ಹೊಂದಿರುವಲ್ಲಿ ತನ್ನಲ್ಲಿರುವುದರಲ್ಲೇ ಶ್ರೇಷ್ಠವಾದುದನ್ನು ಆತನಿಗೆ ಅರ್ಪಿಸಲು ಸಂತೋಷಿಸುತ್ತಿದ್ದನಲ್ಲವೆ? ಉತ್ತಮ ಗುಣಮಟ್ಟದ ಯಜ್ಞವನ್ನು ಅರ್ಪಿಸುವನೋ ಇಲ್ಲವೋ ಎನ್ನುವುದು ವ್ಯಕ್ತಿಯ ಹೃದಯ ಸ್ಥಿತಿಯ ಮೇಲೆ ಹೊಂದಿಕೊಂಡಿತ್ತು. ದೇವರಿಗೆ ಮಲಾಕಿಯ 1:6-8, 13 ಓದಿ.) ಇದರಿಂದೇನು ಪಾಠ? ಇದು ನಾವು ದೇವರಿಗೆ ಸಲ್ಲಿಸುವ ಸೇವೆಯ ಕುರಿತು ಯೋಚಿಸುವಂತೆ ಮಾಡುತ್ತದೆ. ‘ನಾನು ಯೆಹೋವನ ಸೇವೆಯನ್ನು ಯಾವ ಮನೋಭಾವದಿಂದ ಮಾಡುತ್ತಿದ್ದೇನೆ? ನನ್ನ ಸೇವೆಯ ಗುಣಮಟ್ಟ ಹೇಗಿದೆ? ಯಾವ ಹೇತುವಿನಿಂದ ಮಾಡುತ್ತಿದ್ದೇನೆ?’
ಸ್ವೀಕರಾರ್ಹವಲ್ಲ ಎಂದು ಗೊತ್ತಿದ್ದೂ ಕಳಪೆ ದರ್ಜೆಯ ಯಜ್ಞವನ್ನು ಅರ್ಪಿಸಿದ್ದಲ್ಲಿ ಅವನು ಕೇವಲ ಕಾಟಾಚಾರಕ್ಕಾಗಿ ಅಥವಾ ಹೊರೆಯೆಂದು ಭಾವಿಸಿ ಕೊಡುತ್ತಿದ್ದನೆಂದು ಸ್ಪಷ್ಟವಾಗುತ್ತಿತ್ತು. (8, 9. ಯಜ್ಞಗಳನ್ನು ಕೊಡುವಾಗ ಇಸ್ರಾಯೇಲ್ಯರಲ್ಲಿ ಇರಬೇಕಾಗಿದ್ದ ಮನೋಭಾವವನ್ನು ನಾವು ಏಕೆ ಪರಿಗಣಿಸಬೇಕು?
8 ಒಬ್ಬ ಇಸ್ರಾಯೇಲ್ಯನು ಯೆಹೋವನಿಗೆ ಕೃತಜ್ಞತೆ ತೋರಿಸಲಿಕ್ಕಾಗಿ ಸ್ವಇಚ್ಛೆಯಿಂದ ಯಜ್ಞವನ್ನು ಅರ್ಪಿಸುತ್ತಿದ್ದಲ್ಲಿ ಅಥವಾ ಯೆಹೋವನ ಅನುಗ್ರಹ ಪಡೆಯಲಿಕ್ಕಾಗಿ ಸ್ವಇಚ್ಛೆಯಿಂದ ಸರ್ವಾಂಗಹೋಮವನ್ನು ನೀಡುತ್ತಿದ್ದಲ್ಲಿ ಒಂದು ಪೂರ್ಣಾಂಗವಾದ ಪ್ರಾಣಿಯನ್ನು ಕೊಡುವುದೇನೂ ಕಷ್ಟವಾಗುತ್ತಿರಲಿಲ್ಲ. ಅದನ್ನು ಸಂತೋಷದಿಂದಲೇ ಕೊಡುತ್ತಿದ್ದನು. ಇಂದು ಕ್ರೈಸ್ತರು ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವಂಥ ಯಜ್ಞಗಳನ್ನು ಅರ್ಪಿಸುವುದಿಲ್ಲವಾದರೂ ಬೇರೆ ರೀತಿಯ ಯಜ್ಞವನ್ನು ಅರ್ಪಿಸುತ್ತಾರೆ. ತಮ್ಮ ಸಮಯ, ಶಕ್ತಿ, ಸಂಪತ್ತನ್ನು ಯೆಹೋವನ ಸೇವೆಗಾಗಿ ಬಳಸುತ್ತಾರೆ. ಹಾಗಾಗಿ ನಮ್ಮ ನಿರೀಕ್ಷೆಯ ಕುರಿತು “ಬಹಿರಂಗ ಪ್ರಕಟನೆ” ಮಾಡುವುದು, ‘ಒಳ್ಳೇದನ್ನು ಮಾಡುವುದು, ಇತರರೊಂದಿಗೆ ಹಂಚಿಕೊಳ್ಳುವುದು’ ಇವು ನಾವು ಅರ್ಪಿಸುವ ಯಜ್ಞಗಳಾಗಿವೆ ಮತ್ತು ಅವುಗಳಿಂದ ದೇವರು ಸಂತೃಪ್ತನಾಗುತ್ತಾನೆ ಎಂದು ಅಪೊಸ್ತಲ ಪೌಲ ಹೇಳಿದನು. (ಇಬ್ರಿ. 13:15, 16) ಯೆಹೋವನು ನಮಗಾಗಿ ಮಾಡಿರುವ ಎಲ್ಲ ಉಪಕಾರಗಳಿಗಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆಂಬುದು ಆತನ ಸೇವೆಯಲ್ಲಿ ನಮಗಿರುವ ಹುರುಪಿನಿಂದ ತಿಳಿದುಬರುತ್ತದೆ. ಇಂದು ದೇವರ ಸೇವೆಮಾಡುವವರ ಹಾಗೂ ಪ್ರಾಚೀನ ಕಾಲದಲ್ಲಿ ಯಜ್ಞವನ್ನು ಕೊಡುತ್ತಿದ್ದವರ ಮನೋಭಾವ ಹಾಗೂ ಹೇತುಗಳಲ್ಲಿ ಹೋಲಿಕೆಯಿದೆ.
9 ಒಬ್ಬ ಇಸ್ರಾಯೇಲ್ಯನು ಪಾಪ ಮಾಡಿದಾಗ ದೋಷಪರಿಹಾರಕಯಜ್ಞ ಅಥವಾ ಪ್ರಾಯಶ್ಚಿತ್ತಯಜ್ಞ ನೀಡುವುದನ್ನು ಧರ್ಮಶಾಸ್ತ್ರವು ಅಗತ್ಯಪಡಿಸಿತು. ಕಡ್ಡಾಯವಾಗಿದ್ದ ಈ ಯಜ್ಞವನ್ನು ಅವನು ಮನಃಪೂರ್ವಕವಾಗಿ ಕೊಡುತ್ತಿದ್ದನಾ? ಅಥವಾ ಒಲ್ಲದ ಮನಸ್ಸಿನಿಂದಲಾ? (ಯಾಜ. 4:27, 28) ಯೆಹೋವ ದೇವರೊಂದಿಗೆ ಸುಸಂಬಂಧವನ್ನು ಕಾಪಾಡಿಕೊಳ್ಳಲು ನಿಜವಾಗಿ ಬಯಸುವಲ್ಲಿ ಯಜ್ಞವನ್ನು ಸಿದ್ಧಮನಸ್ಸಿನಿಂದಲೇ ಕೊಡುತ್ತಿದ್ದನು.
10. ನಾವು ಒಬ್ಬ ಸಹೋದರನ ವಿರುದ್ಧ ತಪ್ಪುಮಾಡಿರುವಲ್ಲಿ ಅದನ್ನು ಸರಿಪಡಿಸಲು ಏನು ಮಾಡಬೇಕು?
10 ನಾವು ಯೋಚಿಸದೇ, ಅರಿವಿಲ್ಲದೆ ಅಥವಾ ಅಜಾಗ್ರತೆಯಿಂದ ಜೊತೆವಿಶ್ವಾಸಿಯನ್ನು ನೋಯಿಸಿದ್ದಲ್ಲಿ ಏನು ಮಾಡಬೇಕು? ದೇವರನ್ನು ಮೆಚ್ಚಿಸಲು ಬಯಸುವುದಾದರೆ ಆದ ತಪ್ಪನ್ನು ಸರಿಪಡಿಸಲು ನಮ್ಮಿಂದಾಗುವುದೆಲ್ಲವನ್ನು ಮಾಡುವೆವು. ಕೂಡಲೆ ಅವರ ಹತ್ತಿರ ಕ್ಷಮೆ ಕೇಳುತ್ತೇವೆ. ಗಂಭೀರ ತಪ್ಪು ಮಾಡಿರುವಲ್ಲಿ ಹಿರಿಯರ ನೆರವನ್ನು ಪಡೆಯುತ್ತೇವೆ. (ಮತ್ತಾ. 5:23, 24; ಯಾಕೋ. 5:14, 15) ಜೊತೆವಿಶ್ವಾಸಿಯ ವಿರುದ್ಧವೋ ದೇವರ ವಿರುದ್ಧವೋ ಮಾಡಿರುವ ತಪ್ಪನ್ನು ಸರಿಪಡಿಸಲು ನಾವು ಕ್ರಿಯೆಗೈಯಲೇಬೇಕು. ಈ ಕ್ರಿಯೆಯು ಯಜ್ಞವನ್ನು ಕೊಡುವುದಕ್ಕೆ ಸಮಾನವಾಗಿದೆ. ಕಷ್ಟವಾದರೂ ಹೀಗೆ ಮಾಡುವಾಗ ಯೆಹೋವನೊಂದಿಗೂ ಸಹೋದರರೊಂದಿಗೂ ನಮಗೆ ಸುಸಂಬಂಧವಿರುವುದು, ಶುದ್ಧ ಮನಸ್ಸಾಕ್ಷಿ ಇರುವುದು. ಅಷ್ಟೇ ಅಲ್ಲ ದೇವರು ಹೇಳುವಂಥ ರೀತಿಯಲ್ಲಿ ನಡೆಯುವುದೇ ಅತ್ಯುತ್ತಮ ಎನ್ನುವುದು ನಮ್ಮ ಅನುಭವಕ್ಕೆ ಬರುವುದು.
11, 12. (ಎ) ಸಮಾಧಾನಯಜ್ಞದ ಉದ್ದೇಶವೇನಾಗಿತ್ತು? (ಬಿ) ಸಮಾಧಾನಯಜ್ಞದಿಂದ ನಾವೇನು ಕಲಿಯುತ್ತೇವೆ?
ಯಾಜ. 3:1; 7:31-33) ಈ ಯಜ್ಞಾರ್ಪಣೆಯ ಉದ್ದೇಶ ಯೆಹೋವ ದೇವರೊಂದಿಗೆ ಸುಸಂಬಂಧವನ್ನು ಹೊಂದಿರುವುದೇ ಆಗಿತ್ತು. ಒಂದರ್ಥದಲ್ಲಿ ಇದು ಯಜ್ಞ ಕೊಟ್ಟ ವ್ಯಕ್ತಿ, ಅವನ ಕುಟುಂಬ, ಯಾಜಕರು ಹಾಗೂ ಯೆಹೋವನು ಸಂತೋಷದಿಂದಲೂ ಸಮಾಧಾನದಿಂದಲೂ ಒಟ್ಟಿಗೆ ಊಟಮಾಡುವಂತಿತ್ತು.
11 ಸಮಾಧಾನಯಜ್ಞದ ಕುರಿತು ಸಹ ಧರ್ಮಶಾಸ್ತ್ರ ತಿಳಿಸುತ್ತದೆ. ಯೆಹೋವನೊಂದಿಗೆ ಸಮಾಧಾನ ಸಂಬಂಧ ಹೊಂದಿರಲಿಕ್ಕಾಗಿ ಆ ಯಜ್ಞ ಅರ್ಪಿಸಲಾಗುತ್ತಿತ್ತು. ಅರ್ಪಿಸಲಾದ ಯಜ್ಞಪಶುವಿನ ಮಾಂಸವನ್ನು ಯಜ್ಞ ಕೊಟ್ಟ ವ್ಯಕ್ತಿ ಮತ್ತವನ ಕುಟುಂಬ ದೇವಾಲಯದ ಊಟದ ಕೋಣೆಯಲ್ಲಿ ಭೋಜನ ಮಾಡುತ್ತಿದ್ದರು. ಯಜ್ಞ ಅರ್ಪಿಸಿದ ಯಾಜಕನಿಗೂ ದೇವಾಲಯದಲ್ಲಿ ಸೇವೆಮಾಡುವ ಇತರ ಯಾಜಕರಿಗೂ ಈ ಮಾಂಸದಲ್ಲಿ ಭಾಗವನ್ನು ಕೊಡಲಾಗುತ್ತಿತ್ತು. (12 ಯೆಹೋವ ದೇವರನ್ನು ಊಟಕ್ಕೆ ಆಮಂತ್ರಿಸಿ ಆತನೊಂದಿಗೆ ಜೊತೆಗೂಡಿ ಊಟಮಾಡುವುದಕ್ಕಿಂತ ದೊಡ್ಡ ಸುಯೋಗ ಬೇರೊಂದಿದೆಯಾ? ಇಂಥ ಸಂದರ್ಭದಲ್ಲಿ ಆತಿಥೇಯನು ತನ್ನಲ್ಲಿ ಇರುವುದರಲ್ಲೇ ಶ್ರೇಷ್ಠವಾದದ್ದನ್ನು ಕೊಡದಿರುವನೇ? ‘ಧರ್ಮಶಾಸ್ತ್ರದ ಜ್ಞಾನಸತ್ಯಗಳ ಸ್ವರೂಪದ’ ಭಾಗವಾಗಿರುವ ಈ ಸಮಾಧಾನಯಜ್ಞವು ಯೇಸುವಿನ ಮಹಾ ಯಜ್ಞದಿಂದ ಮಾನವರು ಯೆಹೋವನೊಂದಿಗೆ ಆಪ್ತರಾಗಿ ಸಮಾಧಾನ ಸಂಬಂಧವನ್ನು ಹೊಂದಲು ಸಾಧ್ಯವಾಗುವುದು ಎಂಬುದನ್ನು ಸೂಚಿಸುತ್ತಿತ್ತು. ನಾವಿಂದು ಸ್ವಇಚ್ಛೆಯಿಂದ ನಮ್ಮ ಶಕ್ತಿ, ಸಂಪತ್ತನ್ನು ಯೆಹೋವನ ಸೇವೆಗಾಗಿ ವಿನಿಯೋಗಿಸಿದರೆ ಆತನೊಂದಿಗೆ ಆಪ್ತ ಮಿತೃತ್ವವನ್ನು ಹೊಂದುವೆವು.
ಎಚ್ಚರಿಕೆಯ ಪಾಠ!
13, 14. ರಾಜ ಸೌಲನು ಅರ್ಪಿಸಲು ಬಯಸಿದ್ದ ಯಜ್ಞ ಯೆಹೋವನಿಗೆ ಏಕೆ ಇಷ್ಟವಾಗಲಿಲ್ಲ?
13 ಒಳ್ಳೇ ಮನಸ್ಸಿನಿಂದ ಕೊಟ್ಟ ಯಜ್ಞಗಳನ್ನು ಯೆಹೋವನು ಸ್ವೀಕರಿಸುತ್ತಿದ್ದನು. ಆದರೆ ಕೆಲವರು ನೀಡಿದ ಯಜ್ಞಗಳನ್ನು ಆತನು ಸ್ವೀಕರಿಸಲಿಲ್ಲ ಎಂದು ಬೈಬಲ್ ಹೇಳುತ್ತದೆ. ಕಾರಣವೇನು? ಎಚ್ಚರಿಕೆಯ ಪಾಠ ಕಲಿಸುವ ಎರಡು ಘಟನೆಗಳಿಂದ ಉತ್ತರ ತಿಳಿಯೋಣ.
14 ಯೆಹೋವನು ಅಮಾಲೇಕ್ಯರಿಗೆ ನ್ಯಾಯತೀರಿಸಲಿದ್ದಾನೆ ಎಂದು ಪ್ರವಾದಿ ಸಮುವೇಲನು ರಾಜ ಸೌಲನಿಗೆ ಹೇಳಿದನು. ಅಮಾಲೇಕ್ಯರನ್ನೂ ಅವರ ಪಶುಗಳನ್ನೂ ಸಂಪೂರ್ಣವಾಗಿ ನಾಶಮಾಡಬೇಕೆಂದು ದೇವರು ಸೌಲನಿಗೆ ಆಜ್ಞಾಪಿಸಿದನು. ಅದನ್ನು ಸೌಲನು ಪಾಲಿಸಿದನಾ? ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತ ಉಳಿಸಿದನು ಮತ್ತು ಯೆಹೋವನಿಗೆ ಯಜ್ಞ ಅರ್ಪಿಸಲಿಕ್ಕೆಂದು ಅತ್ಯುತ್ತಮ ಪಶುಗಳನ್ನೂ ಉಳಿಸಿ ತಂದನು. (1 ಸಮು. 15:2, 3, 21) ಯೆಹೋವನಿಗೆ ಇದು ಇಷ್ಟವಾಯಿತಾ? ಇಲ್ಲ. ಸೌಲನು ಅವಿಧೇಯತೆ ತೋರಿಸಿದ್ದಕ್ಕಾಗಿ ಅವನನ್ನು ರಾಜನ ಸ್ಥಾನದಿಂದ ತಳ್ಳಿಬಿಟ್ಟನು. (1 ಸಮುವೇಲ 15:22, 23 ಓದಿ.) ಇದರಿಂದ ನಮಗೇನು ಪಾಠ? ನಮ್ಮ ಯಜ್ಞಗಳನ್ನು ದೇವರು ಸ್ವೀಕರಿಸಬೇಕಾದರೆ ನಾವು ಆತನ ಆಜ್ಞೆಗಳಿಗೆ ವಿಧೇಯರಾಗಲೇಬೇಕು.
15. ಯಜ್ಞಗಳನ್ನು ಅರ್ಪಿಸುತ್ತಾ ಜೊತೆಗೆ ಕೆಟ್ಟದ್ದನ್ನು ನಡೆಸಿದ ಇಸ್ರಾಯೇಲ್ಯರಿಂದ ನಾವೇನು ಕಲಿಯುತ್ತೇವೆ?
15 ಇನ್ನೊಂದು ಉದಾಹರಣೆ ಯೆಶಾಯ ಪುಸ್ತಕದಲ್ಲಿದೆ. ಯೆಶಾ. 1:11-16.
ಯೆಶಾಯನ ಸಮಯದಲ್ಲಿದ್ದ ಇಸ್ರಾಯೇಲ್ಯರು ಯೆಹೋವ ದೇವರಿಗೆ ಯಜ್ಞಗಳನ್ನು ಅರ್ಪಿಸುತ್ತಿದ್ದರು. ಜೊತೆಗೆ ಆತನು ಮೆಚ್ಚದ ಕೆಲಸಗಳನ್ನೂ ಮಾಡುತ್ತಿದ್ದರು. ಹಾಗಾಗಿ ಅವರ ಯಜ್ಞಗಳು ಸ್ವೀಕಾರಾರ್ಹವಾಗಿರಲಿಲ್ಲ. ಯೆಹೋವನು ಅವರಿಗೆ ಹೀಗಂದನು: “ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ಟಗರುಗಳ ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿಕುರಿಹೋತಗಳ ರಕ್ತಕ್ಕೆ ನಾನು ಒಲಿಯೆನು. . . . ವ್ಯರ್ಥನೈವೇದ್ಯವನ್ನು ಇನ್ನು ತಾರದಿರಿ, ಧೂಪವು ನನಗೆ ಅಸಹ್ಯ.” ಹೀಗೆ ಹೇಳಲು ಕಾರಣ? ಯೆಹೋವನು ತಿಳಿಸುವುದು: “ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ. ನಿಮ್ಮನ್ನು ತೊಳೆದುಕೊಳ್ಳಿರಿ, ಶುದ್ಧಿಮಾಡಿಕೊಳ್ಳಿರಿ, ನನ್ನ ಕಣ್ಣೆದುರಿನ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿರಿ.”—16. ಯೆಹೋವನು ನಮ್ಮ ಯಜ್ಞಗಳನ್ನು ಯಾವಾಗ ಮಾತ್ರ ಸ್ವೀಕರಿಸುತ್ತಾನೆ?
16 ಪಶ್ಚಾತ್ತಾಪಪಡದ ಪಾಪಿಗಳ ಯಜ್ಞಗಳನ್ನು ಯೆಹೋವನು ಸ್ವೀಕರಿಸಲಿಲ್ಲ. ಆದರೆ ಯಾರು ಆತನ ಆಜ್ಞೆಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಿದ್ದರೋ ಅವರ ಪ್ರಾರ್ಥನೆಗಳನ್ನೂ ಅರ್ಪಣೆಗಳನ್ನೂ ಸ್ವೀಕರಿಸಿದನು. ಅಂಥ ಜನರು ತಾವು ಪಾಪಿಗಳು, ತಮಗೆ ದೇವರಿಂದ ಕ್ಷಮಾಪಣೆಯ ಅಗತ್ಯವಿದೆ ಎನ್ನುವುದನ್ನು ಧರ್ಮಶಾಸ್ತ್ರದ ಮೂಲಕ ಮನಗಂಡರು. (ಗಲಾ. 3:19) ಇದು ಅವರಲ್ಲಿ ಪಶ್ಚಾತ್ತಾಪದ ಹೃದಯವನ್ನು ಉಂಟುಮಾಡಿತು. ನಮ್ಮಲ್ಲೂ ಅದೇ ರೀತಿಯ ಮನೋಭಾವ ಇರಬೇಕು. ಕ್ರಿಸ್ತನ ಯಜ್ಞದಿಂದ ಮಾತ್ರ ನಮ್ಮ ಪಾಪಗಳು ಪರಿಹಾರವಾಗುತ್ತವೆ ಎಂದು ಮನಗಾಣಬೇಕು. ಇದನ್ನು ಅರ್ಥಮಾಡಿಕೊಂಡು ಗಣ್ಯಮಾಡುವಾಗ ನಾವು ಮಾಡುವ ಸೇವೆಯನ್ನು ಯೆಹೋವನು ‘ಸಂತೋಷದಿಂದ’ ಸ್ವೀಕರಿಸುವನು.—ಕೀರ್ತನೆ 51:17, 19 ಓದಿ.
ಯೇಸುವಿನ ಯಜ್ಞದಲ್ಲಿ ನಂಬಿಕೆಯಿಡಿ
17-19. (ಎ) ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಏರ್ಪಾಡಿಗಾಗಿ ನಾವು ಯೆಹೋವನಿಗೆ ಹೇಗೆ ಕೃತಜ್ಞತೆ ಸಲ್ಲಿಸಬಲ್ಲೆವು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?
17 ಇಸ್ರಾಯೇಲ್ಯರು ದೇವರ ಉದ್ದೇಶಗಳ ‘ಛಾಯೆಯನ್ನಷ್ಟೇ’ ನೋಡಿದರು. ಆದರೆ ನಾವು ಅದರ ನಿಜರೂಪವನ್ನು ನೋಡುತ್ತೇವೆ. (ಇಬ್ರಿ. 10:1) ಯಜ್ಞಾರ್ಪಣೆಗಳ ಬಗ್ಗೆ ಧರ್ಮಶಾಸ್ತ್ರದಲ್ಲಿದ್ದ ನಿಯಮಗಳು ಯೆಹೋವ ದೇವರೊಂದಿಗೆ ಆಪ್ತ ಸಂಬಂಧದಲ್ಲಿ ಉಳಿಯಬೇಕಾದರೆ ಇಸ್ರಾಯೇಲ್ಯರಲ್ಲಿ ಯಾವ ಮನೋಭಾವ ಇರಬೇಕೆಂದು ತೋರಿಸಿಕೊಟ್ಟವು. ಅವರು ಯೆಹೋವನ ಕಡೆಗೆ ಗಣ್ಯತೆಯನ್ನು ಬೆಳೆಸಿಕೊಂಡು ಶ್ರೇಷ್ಠವಾದದ್ದನ್ನು ಆತನಿಗೆ ಅರ್ಪಿಸಿ ತಮಗೆ ಪಾಪಪರಿಹಾರದ ಅಗತ್ಯವಿದೆ ಎನ್ನುವುದನ್ನು ಮನಗಾಣಬೇಕಿತ್ತು. ಇಂದು ನಮ್ಮ ಬಳಿ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥ ಇರುವುದಕ್ಕಾಗಿ ನಾವು ಬಹಳ ಸಂತೋಷಿತರು! ವಿಮೋಚನಾ ಮೌಲ್ಯದ ಮೂಲಕ ದೇವರು ಪಾಪ ಮತ್ತು ಮರಣವನ್ನು ನಿತ್ಯನಿರಂತರಕ್ಕೂ ತೆಗೆದುಹಾಕಲಿದ್ದಾನೆ ಮತ್ತು ಈಗಲೂ ನಾವು ಆತನ ಮುಂದೆ ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರಸಾಧ್ಯವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ಸಹಾಯ ಮಾಡಿದೆ. ಯೇಸುವಿನ ವಿಮೋಚನಾ ಮೌಲ್ಯದ ಯಜ್ಞವು ನಿಜಕ್ಕೂ ಅದ್ಭುತಕರ ಏರ್ಪಾಡು!—ಗಲಾ. 3:13; ಇಬ್ರಿ. 9:9, 14.
18 ವಿಮೋಚನಾ ಮೌಲ್ಯ ಯಜ್ಞದಿಂದ ಪ್ರಯೋಜನ ಪಡೆಯಬೇಕಾದರೆ ಅದರ ಕುರಿತು ಬರೀ ತಿಳಿವಳಿಕೆ ಇದ್ದರೆ ಸಾಲದು. “ನಾವು ನಂಬಿಕೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡಲಿಕ್ಕಾಗಿ ಧರ್ಮಶಾಸ್ತ್ರವು ನಮ್ಮನ್ನು ಕ್ರಿಸ್ತನ ಬಳಿಗೆ ನಡಿಸುವ ಪಾಲಕನಾಗಿ ಪರಿಣಮಿಸಿದೆ” ಎಂದನು ಪೌಲ. (ಗಲಾ. 3:24) ಆದರೆ ಕ್ರಿಯೆಗಳಿಲ್ಲದೆ ನಂಬಿಕೆ ಮಾತ್ರ ಇದ್ದರೆ ಸಾಕಾಗುವುದಿಲ್ಲ. (ಯಾಕೋ. 2:26) ಒಂದನೇ ಶತಮಾನದ ಕ್ರೈಸ್ತರು ಧರ್ಮಶಾಸ್ತ್ರದ ಜ್ಞಾನಸತ್ಯಗಳ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದರು. ಆ ಜ್ಞಾನವನ್ನು ಅವರು ಕ್ರಿಯೆಯಲ್ಲಿ ತೋರಿಸುವಂತೆ ಪೌಲ ಉತ್ತೇಜಿಸಿದನು. ಹೀಗೆ ಮಾಡುವಾಗ ಅವರ ಜೀವನ ದೇವರ ನೀತಿಯುತ ಮೂಲತತ್ವಗಳಿಗೆ ಹೊಂದಿಕೆಯಲ್ಲಿರುತ್ತಿತ್ತು.—ರೋಮನ್ನರಿಗೆ 2:21-23 ಓದಿ.
19 ಕ್ರೈಸ್ತರಾದ ನಾವು ಇಂದು ಧರ್ಮಶಾಸ್ತ್ರಕ್ಕೆ ಅಧೀನರಾಗಿಲ್ಲದಿದ್ದರೂ ನಾವು ಅರ್ಪಿಸುವ ಯಜ್ಞಗಳು ಯೆಹೋವನಿಗೆ ಸ್ವೀಕಾರಾರ್ಹ ಆಗಿರಬೇಕು. ಅದಕ್ಕಾಗಿ ನಾವೇನು ಮಾಡಬೇಕು? ಮುಂದಿನ ಲೇಖನದಲ್ಲಿ ನೋಡೋಣ.
[ಅಧ್ಯಯನ ಪ್ರಶ್ನೆಗಳು]
[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೆಹೋವನು ತನ್ನ ಸೇವಕರಿಂದ ಅಪೇಕ್ಷಿಸುವ ಮೂಲಭೂತ ವಿಷಯಗಳು ಎಂದಿಗೂ ಬದಲಾಗುವುದಿಲ್ಲ
[ಪುಟ 18ರಲ್ಲಿರುವ ಚಿತ್ರ]
ನೀವು ಯಾವ ಕುರಿಯನ್ನು ಯೆಹೋವನಿಗೆ ಅರ್ಪಿಸುತ್ತಿದ್ದಿರಿ?
[ಪುಟ 19ರಲ್ಲಿರುವ ಚಿತ್ರ]
ಯೆಹೋವನಿಗೆ ಸ್ವೀಕಾರಾರ್ಹ ಯಜ್ಞಗಳನ್ನು ಅರ್ಪಿಸುವವರು ಆತನ ಅನುಗ್ರಹ ಪಡೆಯುವರು