ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಸೊಲೊಮೋನನಿಂದ ನಾವು ಯಾವ ಎಚ್ಚರಿಕೆಯ ಪಾಠ ಕಲಿಯುತ್ತೇವೆ?

ರಾಜ ಸೊಲೊಮೋನನನ್ನು ಯೆಹೋವ ದೇವರು ಆಶೀರ್ವದಿಸಿ ತನ್ನ ಕೆಲಸಕ್ಕಾಗಿ ಉಪಯೋಗಿಸಿದನು. ಆದರೆ ತನ್ನ ಆಳ್ವಿಕೆಯ ಸಮಯದಲ್ಲಿ ಸೊಲೊಮೋನನು ದೇವರ ಸಲಹೆಗಳನ್ನು ತಳ್ಳಿಹಾಕಿ ವಿಧರ್ಮಿ ದೇವರುಗಳನ್ನು ಆರಾಧಿಸುತ್ತಿದ್ದ ಫರೋಹನ ಮಗಳನ್ನು ಮದುವೆಯಾದನು. ಮಾತ್ರವಲ್ಲ ಅನೇಕಾನೇಕ ಹೆಂಡತಿಯರನ್ನು ಮಾಡಿಕೊಂಡನು. ಕ್ರಮೇಣ ಆ ವಿಧರ್ಮಿ ಪತ್ನಿಯರು ತನ್ನನ್ನು ಸುಳ್ಳು ಆರಾಧನೆಗೆ ನಡೆಸುವಂತೆ ಬಿಟ್ಟುಕೊಟ್ಟನು. ನಮಗಿರುವ ಪಾಠ? ಕೆಟ್ಟ ಯೋಚನೆ ಅಥವಾ ಪ್ರವೃತ್ತಿ ನಮ್ಮಲ್ಲಿ ಕ್ರಮೇಣ ಬೆಳೆಯಸಾಧ್ಯವಿದೆ. ಹಾಗಾಗದಂತೆ ನಾವು ಎಚ್ಚರವಹಿಸಬೇಕು. (ಧರ್ಮೋ. 7:1-4; 17:17; 1 ಅರ. 11:4-8)—12/15, ಪುಟ 10-12.

ಒಂದನೇ ಶತಮಾನದಿಂದ ಭೂಮಿ ಮೇಲೆ ಅಭಿಷಿಕ್ತ ಕ್ರೈಸ್ತರು ಯಾವಾಗಲೂ ಇದ್ದರೆಂದು ಯಾವುದು ಸೂಚಿಸುತ್ತದೆ?

“ಗೋದಿ” ಮತ್ತು ‘ಕಳೆಗಳ’ ಕುರಿತು ಯೇಸು ಹೇಳಿದ ಸಾಮ್ಯದಲ್ಲಿ “ಒಳ್ಳೆಯ ಬೀಜ” ಎಂದರೆ “ರಾಜ್ಯದ ಪುತ್ರರು.” (ಮತ್ತಾ. 13:24-30, 38) ಕೊಯ್ಲಿನ ವರೆಗೆ ಗೋದಿಯೂ ಕಳೆಗಳೂ ಒಟ್ಟಿಗೆ ಬೆಳೆಯುವುದೆಂದು ಆ ಸಾಮ್ಯದಲ್ಲಿ ಹೇಳಲಾಗಿದೆ. ಇಂಥವರೇ ಗೋದಿ ವರ್ಗದವರು ಎಂದು ನಮಗೆ ಹೇಳಲು ಸಾಧ್ಯವಿಲ್ಲವಾದರೂ ಆ ಸಮಯದಿಂದ ಇಂದಿನ ವರೆಗೂ ಭೂಮಿಯ ಮೇಲೆ ಯಾವಾಗಲೂ ಆ ವರ್ಗಕ್ಕೆ ಸೇರಿದ ಜನರು ಇದ್ದರೆಂದು ಯೇಸುವಿನ ಈ ಸಾಮ್ಯದಿಂದ ನಾವು ತಿಳಿಯಸಾಧ್ಯವಿದೆ.—1/15, ಪುಟ 7.

ಅಸೂಯೆಪಡುವ ಪ್ರವೃತ್ತಿಯನ್ನು ಹೇಗೆ ದೂರಮಾಡಸಾಧ್ಯವಿದೆ?

ಈ ಮುಂದಿನ ಹೆಜ್ಜೆಗಳು ಸಹಾಯಕರ: ಪ್ರೀತಿ ಹಾಗೂ ಮಮತೆಯನ್ನು ಬೆಳೆಸಿಕೊಳ್ಳಲು ಶ್ರಮಿಸಿರಿ. ದೇವಜನರೊಂದಿಗೆ ಸಹವಾಸಿಸಿರಿ. ಬೇರೆಯವರಿಗೆ ಒಳ್ಳೇದನ್ನು ಮಾಡಲು ಸಂದರ್ಭ ಹುಡುಕಿರಿ. “ಸಂತೋಷಪಡುವವರ ಸಂಗಡ ಸಂತೋಷಪಡಿರಿ.” (ರೋಮ. 12:15)—2/15, ಪುಟ 16-17.

ಸಲಹೆ ಕೊಡುವಾಗ ಯಾವ ಮೂಲತತ್ವಗಳನ್ನು ಮನಸ್ಸಿನಲ್ಲಿಡಬೇಕು?

ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ದುಡುಕಿ ಉತ್ತರಿಸಬೇಡಿ. ದೀನತೆಯಿಂದ ದೇವರ ವಾಕ್ಯವನ್ನು ಅನ್ವಯಿಸಿ. ಸಾಧ್ಯವಿರುವಲ್ಲಿ ಸಂಘಟನೆ ಒದಗಿಸಿರುವ ಲೈಬ್ರರಿಯನ್ನು ಉಪಯೋಗಿಸಿ. ಇತರರಿಗಾಗಿ ನೀವು ನಿರ್ಣಯ ಮಾಡಬೇಡಿ.—3/15, ಪುಟ 7-9.