ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯ ಹೊಸ ಸದಸ್ಯ

ಆಡಳಿತ ಮಂಡಲಿಯ ಹೊಸ ಸದಸ್ಯ

ಆಡಳಿತ ಮಂಡಲಿಯ ಹೊಸ ಸದಸ್ಯ

ಸೆಪ್ಟೆಂಬರ್‌ 5, 2012 ಬುಧವಾರ ಬೆಳಗ್ಗೆ ಅಮೆರಿಕ ಮತ್ತು ಕೆನಡದ ಬೆತೆಲ್‌ ಕುಟುಂಬಗಳಿಗೆ ಒಂದು ಪ್ರಕಟನೆ ಮಾಡಲಾಯಿತು. ಅದು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಗೆ ಒಬ್ಬ ಹೊಸ ಸದಸ್ಯರ ನೇಮಕದ ಕುರಿತಾಗಿತ್ತು. ಸಹೋದರ ಮಾರ್ಕ್‌ ಸ್ಯಾಂಡರ್‌ಸನ್‌ ಸೆಪ್ಟೆಂಬರ್‌ 1, 2012ರಿಂದ ಆಡಳಿತ ಮಂಡಲಿಯ ಸದಸ್ಯರಾಗಿ ಕಾರ್ಯನಿರ್ವಹಿಸಲು ತೊಡಗಿದರು.

ಸಹೋದರ ಸ್ಯಾಂಡರ್‌ಸನ್‌, ಅಮೆರಿಕದ ಕ್ಯಾಲಿಫೋರ್ನಿಯದ ಸ್ಯಾನ್‌ ಡಿಯೇಗೊ ನಗರದಲ್ಲಿ ಬೆಳೆದವರು. ಅವರ ಹೆತ್ತವರು ಸಾಕ್ಷಿಗಳಾಗಿದ್ದರು. ಸಹೋದರರು 1975, ಫೆಬ್ರವರಿ 9ರಂದು ದೀಕ್ಷಾಸ್ನಾನ ಪಡೆದರು. ನಂತರ 1983, ಸೆಪ್ಟೆಂಬರ್‌ 1ರಿಂದ ಕೆನಡದ ಸಸ್ಕ್ಯಾಚುವಾನ್‌ ಎಂಬಲ್ಲಿ ಪಯನೀಯರರಾಗಿ ಸೇವೆ ಸಲ್ಲಿಸಿದರು. 1990ರ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಶುಶ್ರೂಷಾ ತರಬೇತಿ ಶಾಲೆಯ (ಈಗ ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆ) ಏಳನೇ ತರಗತಿಗೆ ಹಾಜರಾಗಿ ಪದವೀಧರರಾದರು. 1991 ಏಪ್ರಿಲ್‌ನಲ್ಲಿ ಅವರನ್ನು ಕೆನಡದ ನ್ಯೂಫಂಡ್ಲಂಡ್‌ ದ್ವೀಪದಲ್ಲಿ ವಿಶೇಷ ಪಯನೀಯರರಾಗಿ ಸೇವೆಮಾಡಲು ನೇಮಿಸಲಾಯಿತು. ನಂತರ ಬದಲಿ ಸರ್ಕಿಟ್‌ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು. 1997, ಫೆಬ್ರವರಿಯಲ್ಲಿ ಅವರನ್ನು ಕೆನಡ ಬೆತೆಲ್‌ ಕುಟುಂಬದ ಸದಸ್ಯರಾಗುವಂತೆ ಆಮಂತ್ರಿಸಲಾಯಿತು. ಇಸವಿ 2000 ನವೆಂಬರ್‌ನಲ್ಲಿ ಅಮೆರಿಕದ ಬ್ರಾಂಚ್‌ ಆಫೀಸ್‌ಗೆ ವರ್ಗಾವಣೆ ಮಾಡಲಾಯ್ತು. ಅಲ್ಲಿ ಅವರು ಹಾಸ್ಪಿಟಲ್‌ ಇನ್ಫರ್ಮೇಷನ್‌ ಸರ್ವಿಸಸ್‌ನಲ್ಲಿ ಸೇವೆ ಮಾಡಿದರು. ನಂತರ ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ.

ಸಹೋದರ ಸ್ಯಾಂಡರ್‌ಸನ್‌ 2008 ಸೆಪ್ಟೆಂಬರ್‌ನಲ್ಲಿ, ಬ್ರಾಂಚ್‌ ಕಮಿಟಿ ಸದಸ್ಯರಿಗಾಗಿ ಇದ್ದ ಶಾಲೆಯನ್ನು ಹಾಜರಾದರು. ಆಮೇಲೆ ಅವರನ್ನು ಫಿಲಿಪೀನ್ಸ್‌ ಬ್ರಾಂಚ್‌ ಕಮಿಟಿಯ ಸದಸ್ಯರಾಗಿ ನೇಮಿಸಲಾಯಿತು. 2010, ಸೆಪ್ಟೆಂಬರ್‌ನಲ್ಲಿ ಅವರನ್ನು ಅಮೆರಿಕ ಬ್ರಾಂಚ್‌ಗೆ ಮರಳಿ ಬರುವಂತೆ ಕೇಳಿಕೊಳ್ಳಲಾಯಿತು. ಅಲ್ಲಿ ಆಡಳಿತ ಮಂಡಲಿಯ ಸರ್ವಿಸ್‌ ಕಮಿಟಿಗೆ ಸಹಾಯಕರಾಗಿ ಸೇವೆ ಸಲ್ಲಿಸಿದರು.

[ಪುಟ 26ರಲ್ಲಿರುವ ಚಿತ್ರ]

[ಪುಟ 26ರಲ್ಲಿರುವ ಚೌಕ]

ಸದ್ಯದ ಆಡಳಿತ ಮಂಡಲಿಯ ಸದಸ್ಯರು

ಹಿಂದಿನ ಸಾಲು, ಎಡದಿಂದ ಬಲಕ್ಕೆ: ಡಿ. ಎಚ್‌. ಸ್ಪ್ಲೇನ್‌, ಎ. ಮಾರಿಸ್‌ III, ಡಿ. ಎಮ್‌. ಸ್ಯಾಂಡರ್‌ಸನ್‌, ಜಿ. ಡಬ್ಲ್ಯೂ. ಜಾಕ್ಸನ್‌, ಎಮ್‌. ಎಸ್‌. ಲೆಟ್‌. ಮುಂದಿನ ಸಾಲು, ಎಡದಿಂದ ಬಲಕ್ಕೆ: ಎಸ್‌. ಎಫ್‌. ಹರ್ಡ್‌, ಜಿ. ಲಾಶ್‌, ಜಿ. ಹೆಚ್‌. ಪಿಯರ್ಸ್‌. ಆಡಳಿತ ಮಂಡಲಿಯ ಸದಸ್ಯರೆಲ್ಲರೂ ಅಭಿಷಿಕ್ತ ಕ್ರೈಸ್ತರು.

[ಚಿತ್ರ]