ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಯೇಸು ‘ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ’ ಸಾರಿದ್ದು ಯಾವಾಗ? (1 ಪೇತ್ರ 3:19, 20)

ದುಷ್ಟ ಆತ್ಮಜೀವಿಗಳಿಗೆ ನ್ಯಾಯವಾಗಿ ಬರಲಿರುವ ಶಿಕ್ಷೆಯ ಬಗ್ಗೆ ಯೇಸು ತನ್ನ ಪುನರುತ್ಥಾನವಾದ ಸ್ವಲ್ಪ ಸಮಯಾನಂತರ ಘೋಷಿಸಿದನೆಂದು ತೋರುತ್ತದೆ.​—6/15, ಪುಟ 23.

ಆಡುಗಳು, ಕುರಿಗಳು ಯಾರೆಂದು ಯೇಸು ತೀರ್ಪು ಮಾಡುವುದು ಯಾವಾಗ? (ಮತ್ತಾ. 25:32)

ಮಹಾ ಸಂಕಟದ ಸಮಯದಲ್ಲಿ ಸುಳ್ಳು ಧರ್ಮದ ನಾಶನದ ಬಳಿಕ ಯೇಸು ನ್ಯಾಯಾಧಿಪತಿಯಾಗಿ ಬರುವಾಗ ಹಾಗೆ ಮಾಡುವನು.​—7/15, ಪುಟ 6.

ಗೋದಿ ಮತ್ತು ಕಳೆಗಳ ಸಾಮ್ಯದಲ್ಲಿ ತಿಳಿಸಲಾದ ಅಧರ್ಮಿಗಳು ಗೋಳಾಡುವುದೂ ಹಲ್ಲುಕಡಿಯುವುದೂ ಯಾವಾಗ? (ಮತ್ತಾ. 13:36, 41, 42)

ಮಹಾ ಸಂಕಟದ ಸಮಯದಲ್ಲಿ ತಾವು ನಾಶನದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ಅವರಿಗೆ ತಿಳಿದುಬರುವಾಗ.​—7/15, ಪುಟ 13.

ನಂಬಿಗಸ್ತನೂ ವಿವೇಚನೆಯೂ ಉಳ್ಳ ಆಳಿನ ಕುರಿತ ಯೇಸುವಿನ ಮಾತುಗಳು ಯಾವಾಗ ನೆರವೇರುವವು? (ಮತ್ತಾ. 24:45-47)

ಅವು ನೆರವೇರಲಾರಂಭಿಸಿದ್ದು ಕ್ರಿ.ಶ. 33ರ ಪಂಚಾಶತ್ತಮದಲ್ಲಿ ಅಲ್ಲ ಬದಲಾಗಿ 1914ರ ಬಳಿಕ. 1919ರಲ್ಲಿ ಆಳನ್ನು ಮನೆವಾರ್ತೆಯ ಮೇಲೆ ನೇಮಿಸಲಾಯಿತು. ಈ ಮನೆವಾರ್ತೆಯಲ್ಲಿ ಆಧ್ಯಾತ್ಮಿಕವಾಗಿ ಉಣಿಸಲ್ಪಡುವ ಎಲ್ಲ ಕ್ರೈಸ್ತರು ಸೇರಿದ್ದಾರೆ.​—7/15, ಪುಟ 21-23.

ನಂಬಿಗಸ್ತ ಆಳನ್ನು ಯೇಸು ತನ್ನೆಲ್ಲ ಆಸ್ತಿಯ ಮೇಲೆ ನೇಮಿಸುವುದು ಯಾವಾಗ?

ಭವಿಷ್ಯದಲ್ಲಿ. ಮಹಾ ಸಂಕಟದ ಸಮಯದಲ್ಲಿ ನಂಬಿಗಸ್ತ ಆಳು ಸ್ವರ್ಗದ ಬಹುಮಾನ ಪಡೆದಾಗ ಈ ನೇಮಕ ಪಡೆಯುತ್ತಾರೆ.​—7/15, ಪುಟ 25.

ಜಾಕ್ಸನ್‌ಹೌಜನ್‌ ಸೆರೆಶಿಬಿರದಿಂದ ಮಾಡಿದ ದೀರ್ಘ ನಡಿಗೆಯಲ್ಲಿ ಜೀವದಿಂದುಳಿಯಲು ದೇವರು ಕೊಟ್ಟ ಶಕ್ತಿಯಲ್ಲದೆ ಆ 230 ಸಾಕ್ಷಿಗಳಿಗೆ ಇನ್ನೇನು ಸಹಾಯಮಾಡಿತು?

ಅವರು ಹೊಟ್ಟೆಗಿಲ್ಲದೆ, ಕಾಯಿಲೆಯಿಂದ ದುರ್ಬಲರಾಗಿದ್ದರೂ ಮುಂದೆ ಸಾಗುತ್ತಾ ಇರುವಂತೆ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸುತ್ತಾ ಇದ್ದರು.​—8/15, ಪುಟ 18.

ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ಯೋರ್ದನ್‌ ನದಿಯನ್ನು ಇಸ್ರಾಯೇಲ್ಯರು ದಾಟಿದ್ದರ ಕುರಿತ ವೃತ್ತಾಂತವು ನಮಗೇಕೆ ಪ್ರೋತ್ಸಾಹದಾಯಕ?

ನದಿಯ ನೀರು ನೆರೆಯ ಮಟ್ಟಕ್ಕೆ ಏರಿದ್ದರೂ, ತನ್ನ ಜನರು ನದಿ ದಾಟಶಕ್ತರಾಗುವಂತೆ ಯೆಹೋವನು ಅದರ ಹರಿವನ್ನು ನಿಲ್ಲಿಸಿದನು. ಇದು ಆತನಲ್ಲಿ ಅವರಿಗಿದ್ದ ನಂಬಿಕೆ ಹಾಗೂ ಭರವಸೆಯನ್ನು ಬಲಪಡಿಸಿರಬೇಕು. ಇದು ನಮ್ಮಲ್ಲೂ ಧೈರ್ಯತುಂಬಿಸುತ್ತದೆ.​—9/15, ಪುಟ 16.

ಕುರಿಪಾಲಕರು ಮತ್ತು ಪುರುಷಶ್ರೇಷ್ಠರ ಕುರಿತ ಮೀಕನ ಪ್ರವಾದನೆ ಇಂದು ಹೇಗೆ ನೆರವೇರುತ್ತಿದೆ?

ಮೀಕ 5:5ರಲ್ಲಿ ತಿಳಿಸಲಾಗಿರುವ ‘ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರು’ ಸಭೆಯಲ್ಲಿನ ನೇಮಿತ ಹಿರಿಯರಿಗೆ ಸೂಚಿಸುತ್ತದೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಭವಿಷ್ಯದಲ್ಲಿ ದೇವಜನರ ಮೇಲೆ ನಡೆಯಲಿದೆಯೆಂದು ಮುಂತಿಳಿಸಲಾಗಿರುವ ಆಕ್ರಮಣಕ್ಕಾಗಿ ಅವರನ್ನು ಸಭಾ ಹಿರಿಯರು ಬಲಪಡಿಸುತ್ತಿದ್ದಾರೆ.​—11/15, ಪುಟ 20.