ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2014

ಈ ಸಂಚಿಕೆಯಲ್ಲಿ 2014ರ ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 26ರ ವರೆಗಿನ ಅಧ್ಯಯನ ಲೇಖನಗಳಿವೆ.

‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?

ಆಧ್ಯಾತ್ಮಿಕವಾಗಿ ಬಲವಾಗಿರಲು ನಂಬಿಗಸ್ತ ಆಳಿನಿಂದ ಬರುವ ಎಲ್ಲಾ ಮಾಹಿತಿ ಇರಲೇಬೇಕಾ?

ಯೆಹೋವನ ಉದ್ದೇಶದಲ್ಲಿ ಸ್ತ್ರೀಯರ ಪಾತ್ರವೇನು?

ದೇವರ ವಿರುದ್ಧ ದಂಗೆ ಸ್ತ್ರೀ ಪುರುಷರ ಮೇಲೆ ಯಾವ ಪರಿಣಾಮ ಬೀರಿದೆಯೆಂದು ತಿಳಿದುಕೊಳ್ಳಿ. ಗತಕಾಲದಲ್ಲಿದ್ದ ಕೆಲವು ನಂಬಿಗಸ್ತ ಸ್ತ್ರೀಯರ ಅನುಭವಗಳನ್ನು ಪರಿಗಣಿಸಿ. ಅಲ್ಲದೆ, ಕ್ರೈಸ್ತ ಸ್ತ್ರೀಯರು ಇಂದು ದೇವರ ಕೆಲಸದಲ್ಲಿ ಹೇಗೆ ಸಹಾಯಮಾಡುತ್ತಾರೆಂದು ತಿಳಿದುಕೊಳ್ಳಿ.

ದೇವರ ವಾಕ್ಯವನ್ನು ಬಳಸಿರಿ—ಅದು ಸಜೀವವಾದದ್ದು!

ಯೆಹೋವನ ಸಾಕ್ಷಿಗಳಲ್ಲಿ ಎಲ್ಲರೂ ಸೇವೆಯಲ್ಲಿ ಪರಿಣಾಮಕಾರಿಯಾಗಿರಲು ಬಯಸುತ್ತಾರೆ. ನಮ್ಮ ಕರಪತ್ರಗಳ ಜೊತೆಗೆ ದೇವರ ಶಕ್ತಿಯುತ ವಾಕ್ಯವನ್ನು ಪರಿಣಾಮಕಾರಿಯಾಗಿ ಬಳಸಲು ಕೆಲವೊಂದು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸಿ.

ಯೆಹೋವನು ಹೇಗೆ ನಮ್ಮ ಸಮೀಪಕ್ಕೆ ಬರುತ್ತಾನೆ?

ನಮಗೆ ಯೆಹೋವನೊಟ್ಟಿಗೆ ಒಂದು ಆಪ್ತ ಸಂಬಂಧವಿರಬೇಕು. ಯೆಹೋವನು ನಮ್ಮನ್ನು ತನ್ನ ಹತ್ತಿರಕ್ಕೆ ಸೆಳೆಯುತ್ತಾನೆ ಎಂಬುದನ್ನು ವಿಮೋಚನಾ ಮೌಲ್ಯ ಮತ್ತು ಬೈಬಲು ಹೇಗೆ ತೋರಿಸುತ್ತದೆಂದು ಕಲಿಯಿರಿ.

ನೀವೆಲ್ಲೇ ಇದ್ದರೂ ಯೆಹೋವನ ಸ್ವರಕ್ಕೆ ಕಿವಿಗೊಡಿ

ಯೆಹೋವನ ಸ್ವರಕ್ಕೆ ಕಿವಿಗೊಡುವುದು ಮತ್ತು ಆತನೊಂದಿಗೆ ಸಂವಾದ ಮಾಡುವುದು ಎಷ್ಟು ಪ್ರಾಮುಖ್ಯವೆಂದು ತಿಳಿದುಕೊಳ್ಳಿ. ಯೆಹೋವನ ಸ್ವರಕ್ಕೆ ಕಿವಿಗೊಡಲು ಸೈತಾನನು ಮತ್ತು ನಮ್ಮ ಪಾಪಪೂರ್ಣ ಪ್ರವೃತ್ತಿಗಳು ತಡೆಯಾಗದಂತೆ ಹೇಗೆ ಮಾಡಬಹುದೆಂದು ಪರಿಗಣಿಸಲು ಈ ಲೇಖನ ಸಹಾಯ ಮಾಡುತ್ತದೆ.

‘ತಿರುಗಿ ಬಂದು ನಿನ್ನ ಸಹೋದರರನ್ನು ಬಲಪಡಿಸು’

ಒಂದು ಸಮಯದಲ್ಲಿ ಹಿರಿಯನಾಗಿರುವ ಸುಯೋಗ ಹೊಂದಿದ್ದ ಸಹೋದರನೊಬ್ಬನು ಪುನಃ ‘ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸಬಹುದಾ’?

ವಾಚಕರಿಂದ ಪ್ರಶ್ನೆಗಳು

ಪುನರುತ್ಥಾನವಾದವರು “ಮದುವೆಮಾಡಿಕೊಳ್ಳುವುದೂ ಇಲ್ಲ ಮದುವೆಮಾಡಿಕೊಡುವುದೂ ಇಲ್ಲ” ಎಂದು ಸದ್ದುಕಾಯರಿಗೆ ಯೇಸು ಹೇಳಿದಾಗ ಅವನು ಭೂಮಿಯಲ್ಲಾಗುವ ಪುನರುತ್ಥಾನದ ಬಗ್ಗೆ ಮಾತಾಡುತ್ತಿದ್ದನೇ?

ನಮ್ಮ ಸಂಗ್ರಹಾಲಯ

ಬೈಬಲ್‌ ಸತ್ಯ ಕಂಡುಕೊಳ್ಳಲು ಅನೇಕರಿಗೆ ಸಹಾಯಮಾಡಿದ “ಯುರೇಕಾ ಡ್ರಾಮ”

“ಫೋಟೋ-ಡ್ರಾಮ”ದ ಈ ಸಂಕ್ಷಿಪ್ತ ಆವೃತ್ತಿಯನ್ನು ದೂರ ದೂರದ ಪ್ರದೇಶಗಳಲ್ಲಿ ತೋರಿಸಸಾಧ್ಯವಿತ್ತು. ಅದಕ್ಕೆ ವಿದ್ಯುಚ್ಛಕ್ತಿಯ ಅಗತ್ಯವೂ ಇರಲಿಲ್ಲ.