ಕಾವಲಿನಬುರುಜು - ಅಧ್ಯಯನ ಆವೃತ್ತಿ ಸೆಪ್ಟೆಂಬರ್ 2014

ಈ ಸಂಚಿಕೆಯಲ್ಲಿ 2014ರ ಅಕ್ಟೋಬರ್‌ 27ರಿಂದ ನವೆಂಬರ್‌ 30 ವರೆಗಿನ ಅಧ್ಯಯನ ಲೇಖನಗಳಿವೆ.

ನೀವು “ಎಟುಕಿಸಿಕೊಳ್ಳಲು” ಪ್ರಯತ್ನಿಸುತ್ತಿದ್ದೀರೊ?

ನೀವದನ್ನು ಸರಿಯಾದ ವಿಧದಲ್ಲಿ ಹೇಗೆ ಮಾಡಬಲ್ಲಿರಿ?

‘ಇದೇ ಸತ್ಯ’ ಎಂದು ನಿಮಗೆ ಮನವರಿಕೆ ಆಗಿದೆಯಾ? ಏಕೆ?

ಯೆಹೋವನ ಸಾಕ್ಷಿಗಳ ಬಳಿ ಸತ್ಯ ಇದೆ ಎಂದು ಅನೇಕರು ಒಪ್ಪಲು ಕಾರಣಗಳೇನೆಂದು ಈ ಲೇಖನ ಚರ್ಚಿಸುತ್ತದೆ. ತಮಗೆ ಸತ್ಯ ಸಿಕ್ಕಿದೆ ಎಂದು ಸ್ವತಃ ಸಾಕ್ಷಿಗಳಿಗೇ ಏಕೆ ಮನದಟ್ಟಾಗಿದೆ ಎಂಬ ಕಾರಣಗಳನ್ನು ನೋಡೋಣ.

“ಅನೇಕ ಸಂಕಟಗಳ” ಮಧ್ಯೆಯೂ ನಿಷ್ಠೆಯಿಂದ ದೇವರ ಸೇವೆಮಾಡಿ

ಸೈತಾನನ ಲೋಕದಲ್ಲಿ ಜೀವಿಸುತ್ತಿರುವ ಕಾರಣ ಎಲ್ಲರಿಗೂ ಸಂಕಟಗಳು ಬಂದೇ ಬರುತ್ತವೆ. ಅವನು ನಮ್ಮ ಮೇಲೆ ಆಕ್ರಮಣಮಾಡುವ ಕೆಲವು ವಿಧಗಳು ಯಾವುವು? ಅದಕ್ಕಾಗಿ ನಾವು ಹೇಗೆ ತಯಾರಾಗಿರಬಲ್ಲೆವು?

ಹೆತ್ತವರೇ—ನಿಮ್ಮ ಮಕ್ಕಳ ಪರಿಪಾಲನೆ ಮಾಡಿ

ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವ ಜವಾಬ್ದಾರಿ ಹೆತ್ತವರಿಗಿದೆ. (ಎಫೆಸ 6:4) ಮಕ್ಕಳನ್ನು ಪರಿಪಾಲಿಸಲು ಮತ್ತು ಅವರು ಯೆಹೋವನನ್ನು ಪ್ರೀತಿಸುವಂತೆ ಸಹಾಯಮಾಡಲು ಹೆತ್ತವರು ಬಳಸಬಹುದಾದ ಮೂರು ವಿಧಗಳನ್ನು ಈ ಲೇಖನ ಚರ್ಚಿಸುತ್ತದೆ.

ವಾಚಕರಿಂದ ಪ್ರಶ್ನೆಗಳು

ಕೀರ್ತನೆ 37:25 ಮತ್ತು ಮತ್ತಾಯ 6:33ರ ಅರ್ಥ ಕ್ರೈಸ್ತನೊಬ್ಬನಿಗೆ ಹೊಟ್ಟೆಗಿಲ್ಲದಿರುವ ಪರಿಸ್ಥಿತಿ ಬರುವಂತೆ ಯೆಹೋವನು ಬಿಡುವುದೇ ಇಲ್ಲ ಎಂದಾ?

ಕೊನೆಯ ಶತ್ರುವಾದ ಮರಣ—ಆಗಲಿದೆ ನಿರ್ಮೂಲನ!

ಮರಣ ಮತ್ತು ಮರಣಕ್ಕೆ ನಡೆಸುವ ಎಲ್ಲವೂ ಮನುಷ್ಯರಿಗೆ ತುಂಬ ನೋವು ತರುತ್ತದೆ. ಮನುಷ್ಯರು ಯಾಕೆ ಸಾಯುತ್ತಾರೆ? ‘ಕೊನೆಯ ಶತ್ರು ಮರಣ’ ಯಾವಾಗ ನಿರ್ಮೂಲವಾಗುವುದು? (1 ಕೊರಿಂಥ 15:26) ಉತ್ತರಗಳು ಯೆಹೋವನ ನ್ಯಾಯ, ವಿವೇಕ ಮತ್ತು ಮುಖ್ಯವಾಗಿ ಪ್ರೀತಿಯ ಕಡೆಗೆ ಹೇಗೆ ಗಮನ ಸೆಳೆಯುತ್ತವೆಂದು ನೋಡಿ.

ಪೂರ್ಣಸಮಯದ ಸೇವಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ

ಯೆಹೋವನ ಆರಾಧಕರಲ್ಲಿ ಅನೇಕರು ಪೂರ್ಣಸಮಯದ ಸೇವೆಯಲ್ಲಿ ಶ್ರಮಿಸುತ್ತಿದ್ದಾರೆ. ಅವರ “ನಂಬಿಗಸ್ತ ಕ್ರಿಯೆಯನ್ನು” ಮತ್ತು “ಪ್ರೀತಿಪೂರ್ವಕ ಪ್ರಯಾಸವನ್ನು” ಮನಸ್ಸಿನಲ್ಲಿಟ್ಟುಕೊಳ್ಳಲು ನಾವೇನು ಮಾಡಬಹುದು?—1 ಥೆಸಲೊನೀಕ 1:3.