ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಶವದಹನ ಕ್ರೈಸ್ತರಿಗೆ ಯೋಗ್ಯವಾದ ಅಂತ್ಯಕ್ರಿಯೆಯೇ?

ಶವದಹನ ಮಾಡಬೇಕಾ ಬೇಡವಾ ಎನ್ನುವುದು ವೈಯಕ್ತಿಕ ನಿರ್ಧಾರ ಆಗಿದೆ. ಈ ಪದ್ಧತಿ ಬಗ್ಗೆ ಬೈಬಲ್ ನೇರವಾಗಿ ಏನೂ ಹೇಳುವುದಿಲ್ಲ. ಆದರೆ ಗಮನಿಸತಕ್ಕ ವಿಷಯ ಏನೆಂದರೆ ರಾಜ ಸೌಲ ಮತ್ತು ಅವನ ಪುತ್ರ ಯೋನಾತಾನನ ಮೃತದೇಹಗಳನ್ನು ಸುಟ್ಟು ಹೂಣಿಡಲಾಯಿತು ಎಂಬ ವಿಷಯ ಬೈಬಲಿನಲ್ಲಿದೆ. (1 ಸಮು. 31:2, 8-13)—6/15, ಪುಟ 7.

ಧೂಮಪಾನ ಎಷ್ಟು ವಿನಾಶಕಾರಿಯಾಗಿದೆ?

ಕಳೆದ ಒಂದೇ ಶತಮಾನದಲ್ಲಿ ಧೂಮಪಾನ ಸರಿಸುಮಾರು 10,00,00,000 ಜನರನ್ನು ಬಲಿತೆಗೆದುಕೊಂಡಿತು. ಪ್ರತಿ ವರ್ಷ ಸುಮಾರು 60,00,000 ಜನರು ಧೂಮಪಾನದಿಂದಾಗಿ ಸಾಯುತ್ತಿದ್ದಾರೆ.—7/1, ಪುಟ 3.

ಅಶ್ಲೀಲ ಚಿತ್ರಗಳ ಪ್ರಲೋಭನೆ ನಿಗ್ರಹಿಸಲು ಏನು ಮಾಡಬೇಕು?

ಮೂರು ಕ್ರಮಗಳನ್ನು ತೆಗೆದುಕೊಳ್ಳಬೇಕು. (1) ಕಾಮೋದ್ರೇಕಗೊಳಿಸುವ ಚಿತ್ರಗಳು ಕಣ್ಣೆದುರಿಗೆ ಬಂದ ಕೂಡಲೇ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಬೇಕು. (2) ಸಕಾರಾತ್ಮಕ ವಿಷಯಗಳ ಕುರಿತು ಯೋಚಿಸುವ ಮೂಲಕ ಹಾಗೂ ಪ್ರಾರ್ಥನೆ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿಡಬೇಕು. (3) ಅಶ್ಲೀಲ ಚಿತ್ರ ಇರುವ ವೆಬ್ ಸೈಟ್‌ಗಳನ್ನು ಹಾಗೂ ಚಲನಚಿತ್ರಗಳನ್ನು ನೋಡದಿರುವ ಮೂಲಕ ಹೆಜ್ಜೆಗಳನ್ನು ಹತೋಟಿಯಲ್ಲಿಡಬೇಕು.—7/1, ಪುಟಗಳು 9-11.

ಹೆಚ್ಚಿನ ಸಹಾಯ ಅಗತ್ಯವಿರುವ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡುವಾಗ ಯಾವ ಸವಾಲುಗಳು ಎದುರಾಗುತ್ತವೆ?

ಮೂರು ಸವಾಲುಗಳು ಬರಬಹುದು. (1) ಅಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುವುದು, (2) ಮನೆನೆನಪು, (3) ಸ್ಥಳೀಯ ಸಹೋದರ ಸಹೋದರಿಯರೊಟ್ಟಿಗೆ ಸ್ನೇಹ ಸಂಬಂಧ ಬೆಸೆಯುವುದು. ಈ ಸವಾಲುಗಳನ್ನು ಜಯಿಸಿದವರಿಗೆ ಅನೇಕ ಆಶೀರ್ವಾದಗಳು ಸಿಕ್ಕಿವೆ.—7/15, ಪುಟಗಳು 4-5.

ಹೊಸ ಕರಪತ್ರಗಳು ತುಂಬ ಪರಿಣಾಮಕಾರಿ ಹಾಗೂ ಬಳಸಲು ಸುಲಭ ಆಗಿವೆ ಏಕೆ?

ಎಲ್ಲ ಹೊಸ ಕರಪತ್ರಗಳ ವಿನ್ಯಾಸ ಒಂದೇ ರೀತಿಯದ್ದಾಗಿದೆ. ಪ್ರತಿಯೊಂದು ಕರಪತ್ರ ನಾವು ಮನೆಯವರಿಗೆ ವಚನವೊಂದನ್ನು ಓದಿಹೇಳುವಂತೆ ಮತ್ತು ಅವರಿಗೊಂದು ಪ್ರಶ್ನೆ ಕೇಳುವಂತೆ ಮಾಡುತ್ತದೆ. ಅವನು ಯಾವುದೇ ಉತ್ತರ ಕೊಟ್ಟರೂ ನಾವು ಒಳಪುಟಕ್ಕೆ ತಿರುಗಿಸಿ ಬೈಬಲ್‌ ಏನನ್ನುತ್ತದೆಂದು ತೋರಿಸಬಹುದು. ಪುನರ್ಭೇಟಿ ಮಾಡಲಿಕ್ಕಾಗಿರುವ ಪ್ರಶ್ನೆಯನ್ನೂ ಅದರಿಂದಲೇ ತೋರಿಸಬಹುದು.—8/15, ಪುಟಗಳು 13-14.

ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಪರಿಪಾಲನೆ ಮಾಡಲು ಏನು ಮಾಡಬೇಕು?

ಮಕ್ಕಳನ್ನು ತಿಳಿದುಕೊಳ್ಳಲಿಕ್ಕಾಗಿ ಅವರಿಗೆ ಕಿವಿಗೊಡಬೇಕು. ಅವರಿಗೆ ಆಧ್ಯಾತ್ಮಿಕವಾಗಿ ಉಣಿಸಲು ಶ್ರಮಿಸಬೇಕು. ಪ್ರೀತಿಯಿಂದ ಮಾರ್ಗದರ್ಶಿಸಬೇಕು. ಉದಾಹರಣೆಗೆ, ಅವರಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಂಶಯಗಳು ಬರುವಾಗ ಇಂಥ ಮಾರ್ಗದರ್ಶನ ಕೊಡಬೇಕು.—9/15, ಪುಟಗಳು 18-21.

ದೇವರು ಕೆಟ್ಟದ್ದನ್ನು ಮಾಡುವುದಿಲ್ಲ ಎಂದು ನಾವು ಖಚಿತವಾಗಿ ಹೇಗೆ ಹೇಳಬಹುದು?

ಯೆಹೋವನ ಮಾರ್ಗಗಳೆಲ್ಲ ನೀತಿಯುಳ್ಳವುಗಳು. ಆತನು ನ್ಯಾಯವಂತನು, ನಂಬಿಗಸ್ತನು ಹಾಗೂ ಯಥಾರ್ಥನು. ಅಷ್ಟುಮಾತ್ರವಲ್ಲ ಆತನು ಕೋಮಲ ಮಮತೆಯುಳ್ಳವನು ಮತ್ತು ಕರುಣಾಳು ಆಗಿದ್ದಾನೆ. (ಧರ್ಮೋ. 32:4; ಕೀರ್ತ. 145:17; ಯಾಕೋ. 5:11)—10/1, ಪುಟ 4.

ಬೈಬಲಿನಲ್ಲಿರುವ ಯಾವ ಒಡಂಬಡಿಕೆ ಇತರರು ಕ್ರಿಸ್ತನೊಂದಿಗೆ ಆಳಲು ಅವಕಾಶ ಕೊಡುತ್ತದೆ?

ಯೇಸು ಸಂಧ್ಯಾ ಭೋಜನವನ್ನು ಮುಗಿಸಿದ ಬಳಿಕ ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡನು. ಅದನ್ನು ರಾಜ್ಯದ ಒಡಂಬಡಿಕೆ ಎಂದು ಕರೆಯಲಾಗುತ್ತದೆ. (ಲೂಕ 22:28-30) ಇದು ಶಿಷ್ಯರಿಗೆ ತಾವು ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳುವೆವು ಎನ್ನುವುದಕ್ಕೆ ಖಾತ್ರಿ ಕೊಟ್ಟಿತು.—10/15, ಪುಟಗಳು 16-17.

ಅಪೊಸ್ತಲರ ಕಾರ್ಯಗಳು 15:14ರಲ್ಲಿ ದಾಖಲಾಗಿರುವಂತೆ ಯಾಕೋಬನು ತಿಳಿಸಿರುವ ‘ತನ್ನ ಹೆಸರಿಗಾಗಿರುವ ಪ್ರಜೆ [ಜನರು]’ ಯಾರು?

ಇವರು ಯೆಹೂದಿ ಹಾಗೂ ಯೆಹೂದ್ಯರಲ್ಲದ ವಿಶ್ವಾಸಿಗಳಾಗಿದ್ದರು. “ಕರೆದಾತನ ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ” ದೇವರು ಇವರನ್ನು ಆರಿಸಿಕೊಂಡನು. (1 ಪೇತ್ರ 2:9, 10)—11/15, ಪುಟಗಳು 24-25.