ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಧಾರಾಳತನಕ್ಕೆ ಕೃತಜ್ಞತೆ ತೋರಿಸಿ

ಯೆಹೋವನ ಧಾರಾಳತನಕ್ಕೆ ಕೃತಜ್ಞತೆ ತೋರಿಸಿ

ಯೆಹೋವನು ಧಾರಾಳ ಮನಸ್ಸಿನ ದೇವರು. (ಯಾಕೋ. 1:17) ನಕ್ಷತ್ರಗಳಿಂದ ಕೂಡಿದ ಕಡುಕಪ್ಪಾದ ವಿಶಾಲ ಆಕಾಶದಿಂದ ಹಿಡಿದು ಭೂಮಿಯನ್ನು ಹೊದ್ದುಕೊಂಡಿರುವ ಹಚ್ಚಹಸಿರಾದ ಕಂಬಳಿಯ ವರೆಗೆ ಯೆಹೋವನ ಎಲ್ಲ ಸೃಷ್ಟಿ ಆತನ ಧಾರಾಳತನವನ್ನು ಸಾರುತ್ತವೆ.—ಕೀರ್ತ. 65:12, 13; 147:7, 8; 148:3, 4.

ಕೀರ್ತನೆಗಾರನಿಗೆ ತನ್ನ ಸೃಷ್ಟಿಕರ್ತನಾದ ಯೆಹೋವನ ಬಗ್ಗೆ ಎಷ್ಟು ಆಳವಾದ ಕೃತಜ್ಞತೆ ಇತ್ತೆಂದರೆ ಆತನ ಕೆಲಸಗಳನ್ನು ಸ್ತುತಿಸುವ ಒಂದು ಗೀತೆಯನ್ನೇ ರಚಿಸಿದನು. 104ನೇ ಕೀರ್ತನೆಯನ್ನು ಒಮ್ಮೆ ಓದಿ. ಆ ಕೀರ್ತನೆಗಾರನಿಗೆ ಅನಿಸಿದಂತೆ ನಿಮಗೂ ಅನಿಸುತ್ತದಾ ಇಲ್ಲವಾ ಎಂದು ನೋಡಿ. ಅವನು ಹೀಗಂದನು: “ನಾನು ಬದುಕಿರುವ ವರೆಗೂ ಯೆಹೋವನನ್ನು ಕೀರ್ತಿಸುತ್ತಿರುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಭಜಿಸುತ್ತಿರುವೆನು.” (ಕೀರ್ತ. 104:33) ನಿಮಗೂ ಹೀಗನಿಸುತ್ತದಾ?

ಧಾರಾಳತನದ ಅತಿ ಉತ್ಕೃಷ್ಟ ಮಾದರಿ

ನಾವೂ ಆತನಂತೆಯೇ ಧಾರಾಳ ಮನಸ್ಸಿನವರು ಆಗಿರಬೇಕೆನ್ನುವುದು ಯೆಹೋವನ ಬಯಕೆ. ಇದಕ್ಕೆ ಆತನು ಬಲವಾದ ಕಾರಣಗಳನ್ನು ಸಹ ಕೊಡುತ್ತಾನೆ. ಅಪೊಸ್ತಲ ಪೌಲನು ಈ ಮಾತುಗಳನ್ನು ಬರೆಯುವಂತೆ ಯೆಹೋವನು ಪ್ರೇರಿಸಿದನು: ‘ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಐಶ್ವರ್ಯವಂತರಾಗಿರುವವರು ಅಹಂಕಾರಿಗಳಾಗಿರದೆ ತಮ್ಮ ನಿರೀಕ್ಷೆಯನ್ನು ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ, ನಮ್ಮ ಆನಂದಕ್ಕಾಗಿ ನಮಗೆ ಎಲ್ಲವನ್ನೂ ಹೇರಳವಾಗಿ ಒದಗಿಸುವ ದೇವರ ಮೇಲೆ ಇಡುವಂತೆ ಆಜ್ಞಾಪಿಸು. ಒಳ್ಳೇದನ್ನು ಮಾಡಲು, ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಲು, ಉದಾರಿಗಳಾಗಿರಲು, ಹಂಚಿಕೊಳ್ಳುವುದರಲ್ಲಿ ಸಿದ್ಧರಾಗಿರಲು, ವಾಸ್ತವ ಜೀವನವನ್ನು ಭದ್ರವಾಗಿ ಹಿಡಿಯುವಂತಾಗಲು ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು ತಮಗಾಗಿ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳಲು ಅವರಿಗೆ ಹೇಳು.’—1 ತಿಮೊ. 6:17-19.

ಪೌಲನು ಕೊರಿಂಥ ಸಭೆಗೆ ಬರೆದ ಎರಡನೇ ಪ್ರೇರಿತ ಪತ್ರದಲ್ಲಿ, ಕೊಡುವುದರ ಬಗ್ಗೆ ನಮಗಿರಬೇಕಾದ ಸರಿಯಾದ ಮನೋಭಾವಕ್ಕೆ ಒತ್ತು ಕೊಟ್ಟನು. “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” ಎಂದನು ಪೌಲನು. (2 ಕೊರಿಂ. 9:7) ಧಾರಾಳವಾಗಿ ಕೊಡುವಾಗ ಯಾರಿಗೆಲ್ಲ ಪ್ರಯೋಜನವಾಗುತ್ತದೆ ಎಂದೂ ಮುಂದಕ್ಕೆ ಹೇಳಿದನು: ಕೊಟ್ಟದ್ದನ್ನು ಸ್ವೀಕರಿಸುವವರಿಗೆ, ಏಕೆಂದರೆ ಅವರ ಅಗತ್ಯಗಳನ್ನು ಪೂರೈಸಲಾಗುತ್ತದೆ ಮತ್ತು ಯಾರು ಕೊಡುತ್ತಾರೊ ಅವರಿಗೆ, ಏಕೆಂದರೆ ಅವರಿಗೆ ಹೇರಳವಾದ ಆಧ್ಯಾತ್ಮಿಕ ಆಶೀರ್ವಾದಗಳು ಸಿಗುತ್ತವೆ.—2 ಕೊರಿಂ. 9:11-14.

ದೇವರ ಧಾರಾಳತನದ ಬಲವಾದ ಪುರಾವೆಗೆ ಸೂಚಿಸುತ್ತಾ ಪೌಲನು ತನ್ನ ಪತ್ರದ ಈ ಭಾಗವನ್ನು ಮುಗಿಸುತ್ತಾ ಹೀಗೆ ಬರೆದನು: “ವರ್ಣಿಸಲಸಾಧ್ಯವಾದ ದೇವರ ಉಚಿತ ವರಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಲಿ.” (2 ಕೊರಿಂ. 9:15) ಯೆಹೋವನು ಕೊಟ್ಟಿರುವ ವರ ಅಥವಾ ಉಡುಗೊರೆಯಲ್ಲಿ, ಯೇಸು ಕ್ರಿಸ್ತನ ಮೂಲಕ ಆತನು ನಮಗೆ ತೋರಿಸುವ ಒಳ್ಳೇತನದ ಒಟ್ಟು ಮೊತ್ತ ಸೇರಿದೆ. ಈ ಉಡುಗೊರೆ ಎಷ್ಟು ಉನ್ನತವಾದದ್ದು ಎಂದರೆ ಅದನ್ನು ಮಾತುಗಳಲ್ಲಿ ವರ್ಣಿಸಲು ಆಗುವುದಿಲ್ಲ.

ಯೆಹೋವ ಮತ್ತು ಆತನ ಮಗನು ಮಾಡಿರುವ ಹಾಗೂ ಇನ್ನು ಮುಂದಕ್ಕೂ ಮಾಡಲಿರುವ ಎಲ್ಲ ವಿಷಯಗಳಿಗೆ ನಾವು ಹೇಗೆ ಕೃತಜ್ಞತೆ ಸಲ್ಲಿಸಬಹುದು? ಚಿಕ್ಕ ಮೊತ್ತದ್ದಾಗಿರಲಿ, ದೊಡ್ಡ ಮೊತ್ತದ್ದಾಗಿರಲಿ ನಮ್ಮ ಸಮಯ, ಶಕ್ತಿ, ಸಂಪತ್ತನ್ನು ಯೆಹೋವನ ಶುದ್ಧ ಆರಾಧನೆಗಾಗಿ ಕೊಡುವ ಮೂಲಕವೇ.—1 ಪೂರ್ವ. 22:14; 29:3-5; ಲೂಕ 21:1-4.

^ ಪ್ಯಾರ. 11 ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.

^ ಪ್ಯಾರ. 13 ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು jwindiagift.org. ವೆಬ್ಸೈಟ್‌ ಬಳಸಬಹುದು.

^ ಪ್ಯಾರ. 18 ಅಂತಿಮ ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

^ ಪ್ಯಾರ. 26 ‘ನಿಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’ ಎಂಬ ಡಾಕ್ಯುಮೆಂಟ್‌ ಭಾರತದಲ್ಲಿ ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಲಭ್ಯ.