ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಯೇಸು ಬಡಗಿಯಾಗಿ ಯಾವ ರೀತಿಯ ಕೆಲಸವನ್ನು ಮಾಡಿದ್ದಿರಬೇಕು?

ಯೇಸುವಿನ ಸಾಕುತಂದೆ ಬಡಗಿಯಾಗಿದ್ದನು. ಯೇಸು ಕೂಡ ಕಲಿತದ್ದು ಅದೇ ಕಸುಬನ್ನು. ಅವನು “ಸುಮಾರು ಮೂವತ್ತು ವರ್ಷ” ಪ್ರಾಯದಲ್ಲಿ ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ ಜನರು ಅವನನ್ನು “ಬಡಗಿಯ ಮಗ” ಎಂದು ಮಾತ್ರವಲ್ಲ ಅವನನ್ನು ಬಡಗಿಯೆಂದೇ ಕರೆದರು.—ಲೂಕ 3:23; ಮತ್ತಾಯ 13:55; ಮಾರ್ಕ 6:3.

ಯೇಸುವಿನ ಸ್ವಂತ ಊರಲ್ಲಿ ಮುಖ್ಯವಾಗಿ ಮರದಿಂದ ಮಾಡಲ್ಪಡುತ್ತಿದ್ದ ವ್ಯವಸಾಯದ ಉಪಕರಣಗಳಾದ ನೇಗಿಲು ಮತ್ತು ನೊಗಗಳಿಗೆ ಹೆಚ್ಚಿನ ಬೇಡಿಕೆ ಇದ್ದಿರಬಹುದು. ಮಾತ್ರವಲ್ಲ ಬಡಗಿಯ ಇತರ ಸಾಮಾನ್ಯ ಉತ್ಪಾದನೆಗಳಲ್ಲಿ ಪೀಠೋಪಕರಣಗಳಾದ ಮೇಜು, ಕುರ್ಚಿ, ಕಪಾಟುಗಳು ಸೇರಿದ್ದಿರಬಹುದು. ಹಾಗೂ ಬಾಗಿಲು, ಕಿಟಕಿ, ಮರದ ಬೀಗ, ತೊಲೆಗಳೇ ಮುಂತಾದ ಮರದ ಸಾಮಾನುಗಳೂ ಇದ್ದಾವು. ವಾಸ್ತವದಲ್ಲಿ ಕಟ್ಟಡ ನಿರ್ಮಾಣ ಕೆಲಸವೂ ಆಂಶಿಕವಾಗಿ ಬಡಗಿಯ ಕೆಲಸದಲ್ಲಿ ಸೇರಿತ್ತು.

ಸ್ನಾನಿಕನಾದ ಯೋಹಾನನು ಒಂದು ದೃಷ್ಟಾಂತದಲ್ಲಿ ಕೊಡಲಿಯ ಕುರಿತು ಉಲ್ಲೇಖಿಸಿದನು. ಪ್ರಾಯಶಃ ಯೇಸು ಮತ್ತು ಇತರ ಬಡಗಿಗಳು ಮರಗಳನ್ನು ಕಡಿಯಲು ಉಪಯೋಗಿಸಿದ್ದ ಸಾಧನ ಇದಾಗಿತ್ತು. ಬಳಿಕ ಅಲ್ಲೇ ಆ ಮರವನ್ನು ತೊಲೆಗಳಾಗಿ ಕಡಿಯುತ್ತಿದ್ದರು ಅಥವಾ ಅವುಗಳನ್ನು ತಮ್ಮ ಅಂಗಡಿಗಳಿಗೆ ರವಾನಿಸುತ್ತಿದ್ದರು. ಈ ರೀತಿಯ ಕೆಲಸಕ್ಕೆ ತುಂಬಾ ದೇಹಬಲ ಬೇಕಾಗಿತ್ತು. (ಮತ್ತಾಯ 3:10) ಯೆಶಾಯನು ತನ್ನ ದಿನಗಳಲ್ಲಿ ಬಡಗಿಗಳು ಉಪಯೋಗಿಸಿದ್ದ ಇತರ ಉಪಕರಣಗಳನ್ನು ಪಟ್ಟಿಮಾಡುತ್ತಾ ಹೇಳುವುದು: ‘ಬಡಗಿಯು [ಮರಕ್ಕೆ] ನೂಲುಹಾಕಿ ಮೊಳೆಯಿಂದ ಗೆರೆಯೆಳೆದು ಉಳಿಬಾಚಿಗಳಿಂದ ಕೆತ್ತಿ ಕೈವಾರದಿಂದ ಗುರುತಿಸುತ್ತಾನೆ.’ (ಯೆಶಾಯ 44:13) ಅಗೆತ ಶಾಸ್ತ್ರಜ್ಞರ ಕಂಡುಹಿಡಿತಗಳು ಬೈಬಲ್‌ ಸಮಯಗಳಲ್ಲಿ ಲೋಹದ ಗರಗಸ, ಕಲ್ಲಿನ ಸುತ್ತಿಗೆ ಮತ್ತು ಕಂಚಿನ ಮೊಳೆಗಳನ್ನು ಉಪಯೋಗಿಸಲಾಗುತ್ತಿತ್ತೆಂದು ದೃಢೀಕರಿಸುತ್ತವೆ. (ವಿಮೋಚನಕಾಂಡ 21:6; ಯೆಶಾಯ 10:15; ಯೆರೆಮೀಯ 10:4) ಹೀಗೆ ಯೇಸುವು ಅಂಥ ಉಪಕರಣಗಳನ್ನು ಉಪಯೋಗಿಸಿದ್ದನೆಂದು ಹೇಳುವುದು ತರ್ಕಬದ್ಧವಾಗಿದೆ. (w08 12/1)