ಸತ್ಯ - ಮಿಥ್ಯ ಯೇಸುವಿನ ಕುರಿತ ನಿಜಾಂಶಗಳು
ಸತ್ಯ - ಮಿಥ್ಯ ಯೇಸುವಿನ ಕುರಿತ ನಿಜಾಂಶಗಳು
ಕೆಳಗಿನ ಹೇಳಿಕೆಗಳು ಸತ್ಯವೋ ಮಿಥ್ಯವೋ? ನೀವೇನು ನೆನಸುತ್ತೀರಿ?
ಯೇಸು ಡಿಸೆಂಬರ್ 25ರಂದು ಹುಟ್ಟಿದನು.
ಯೇಸು ಹುಟ್ಟಿದ ಕೂಡಲೆ ಮೂರು ಮಂದಿ ರಾಜರು ಅವನನ್ನು ನೋಡಲು ಬಂದರು.
ಯೇಸು ಮರಿಯಳಿಗೆ ಒಬ್ಬನೇ ಮಗ.
ಯೇಸು ದೇವರ ಅವತಾರ.
ಯೇಸು ಕೇವಲ ಒಬ್ಬ ಒಳ್ಳೇ ವ್ಯಕ್ತಿಯಷ್ಟೇ ಆಗಿರಲಿಲ್ಲ.
ಮೇಲಿನ ಆ ಎಲ್ಲ ಹೇಳಿಕೆಗಳನ್ನು ಸತ್ಯವೆನ್ನುವವರು ಹೆಚ್ಚು. ಇನ್ನು ಕೆಲವರು ಅವು ಸತ್ಯವೋ ಸುಳ್ಳೋ ಎಂದು ಖಚಿತವಾಗಿ ಹೇಳುವುದು ಕಷ್ಟ ಅಥವಾ ಅಸಾಧ್ಯವೆಂದು ಉತ್ತರಿಸಬಹುದು. ಯೇಸುವನ್ನು ನಂಬಿದರೆ ಸಾಕು, ಇದೆಲ್ಲದರ ಬಗ್ಗೆ ಸುಮ್ಮನೆ ತಲೆಕೆಡಿಸಿಕೊಳ್ಳುವುದೇಕೆ ಎಂಬುದು ಅವರ ಅಭಿಪ್ರಾಯ.
ಆದರೆ ಬೈಬಲ್ ಈ ರೀತಿಯ ಮನೋಭಾವವನ್ನು ಒಪ್ಪುವುದಿಲ್ಲ. ‘ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಷ್ಕೃಷ್ಟ ಜ್ಞಾನವನ್ನು’ ಪಡೆದುಕೊಳ್ಳುವಂತೆ ನಮ್ಮನ್ನು ಅದು ಉತ್ತೇಜಿಸುತ್ತದೆ. (2 ಪೇತ್ರ 1:8) ಆ ಜ್ಞಾನವನ್ನು ಸುವಾರ್ತಾ ಪುಸ್ತಕಗಳನ್ನು ಪರಿಶೀಲಿಸುವ ಮೂಲಕ ಗಳಿಸಬಹುದು. ಅವುಗಳಲ್ಲಿ ಯೇಸುವಿನ ಬಗ್ಗೆ ಸತ್ಯಮಾಹಿತಿಯಿದೆ. ಇದರಿಂದ ಯಾವುದು ಮಿಥ್ಯ ಯಾವುದು ಸತ್ಯ ಎಂಬುದನ್ನು ನಾವು ಗ್ರಹಿಸಲು ಸಾಧ್ಯವಾಗುತ್ತದೆ. ಆದುದರಿಂದ ನಾವೀಗ ಜನರು ನಂಬುವಂಥ ಆ ಆರಂಭದ ಹೇಳಿಕೆಗಳ ಬಗ್ಗೆ ಸುವಾರ್ತಾ ಪುಸ್ತಕಗಳು ಏನು ಹೇಳುತ್ತವೆಂದು ನೋಡೋಣ.
ನಂಬಿಕೆ: ಯೇಸು ಡಿಸೆಂಬರ್ 25ರಂದು ಹುಟ್ಟಿದನು.
ಇದು ಮಿಥ್ಯ.
ಯೇಸು ಹುಟ್ಟಿದ ತಿಂಗಳನ್ನಾಗಲಿ ತಾರೀಕನ್ನಾಗಲಿ ಬೈಬಲ್ ನೇರವಾಗಿ ತಿಳಿಸುವುದಿಲ್ಲ. ಹಾಗಾದರೆ ಡಿಸೆಂಬರ್ 25 ಎಂಬ ತಾರೀಕು ಎಲ್ಲಿಂದ ಬಂತು ಎಂದು ನೀವು ಕೇಳಬಹುದು. ದಿ ಎನ್‌ಸೈಕ್ಲಪೀಡಿಯ ಬ್ರಿಟಾನಿಕಕ್ಕನುಸಾರ “ಹಗಲು ದೊಡ್ಡದಾಗುತ್ತಾ, ಆಕಾಶದಲ್ಲಿ ಸೂರ್ಯ ಇನ್ನಷ್ಟು ಮೇಲೇರುತ್ತಾ ಹೋಗುವ ಮಕರ ಸಂಕ್ರಾಂತಿಯ ಅವಧಿಯಲ್ಲಿ . . . ರೋಮನ್ನರು ಆಚರಿಸುತ್ತಿದ್ದ ಹಬ್ಬದ ದಿನದಂದೇ” ಅಂದರೆ ಡಿಸೆಂಬರ್ 25ರಂದೇ ಕ್ರಿಸ್ತನ ಜನ್ಮದಿನವನ್ನೂ ಆಚರಿಸಲು ಕ್ರೈಸ್ತರೆಂದು ಹೇಳಿಕೊಳ್ಳುವ ಕೆಲವರು ಇಚ್ಛಿಸಿದರು. “ಚಳಿಗಾಲದ ಮಧ್ಯಭಾಗದಲ್ಲಿ ಆಚರಿಸಲಾಗುವ ಬೇಸಾಯದ ಮತ್ತು ಸೂರ್ಯನ ವಿಧರ್ಮಿ ಆಚರಣೆಗಳಿಂದ” ಅನೇಕ ಕ್ರಿಸ್ಮಸ್ ಪದ್ಧತಿಗಳು ಬಂದಿವೆ ಎಂದೂ ಆ ಪರಾಮರ್ಶೆ ಕೃತಿ ಹೇಳುತ್ತದೆ.
* (ಲೂಕ 22:19) ಇದರಿಂದ ಗೊತ್ತಾಗುವ ಸಂಗತಿಯೇನೆಂದರೆ, ಯೇಸು ತನ್ನ ಜನ್ಮಕ್ಕಿಂತ ತನ್ನ ಯಜ್ಞಾರ್ಪಿತ ಮರಣಕ್ಕೆ ಜನರು ಪ್ರಾಶಸ್ತ್ಯ ಕೊಡಬೇಕೆಂದು ಬಯಸಿದನು.—ಮತ್ತಾಯ 20:28.
ಡಿಸೆಂಬರ್ 25ರಂದು ಜನರು ತನ್ನ ಹುಟ್ಟುಹಬ್ಬ ಆಚರಿಸುವುದನ್ನು ಯೇಸು ಮೆಚ್ಚುವನೋ? ಇದನ್ನು ಪರಿಗಣಿಸಿ: ಯೇಸುವಿನ ಜನ್ಮದಿನಾಂಕ ಯಾರಿಗೂ ಗೊತ್ತಿಲ್ಲ. ಆತನ ಹುಟ್ಟುಹಬ್ಬವನ್ನು ಆಚರಿಸುವಂತೆಯೂ ಬೈಬಲ್ ಹೇಳುವುದಿಲ್ಲ, ಆರಂಭದ ಕ್ರೈಸ್ತರು ಆಚರಿಸಿದರ ಪುರಾವೆಯೂ ಇಲ್ಲ. ಆದರೆ ಯೇಸು ಮರಣಪಟ್ಟ ದಿನವನ್ನು ಮಾತ್ರ ಬೈಬಲ್ ನಿಖರವಾಗಿ ತಿಳಿಸುತ್ತದೆ. ಆ ದಿನವನ್ನು ನೆನಪಿಸಿಕೊಳ್ಳುವಂತೆ ಯೇಸು ತನ್ನ ಶಿಷ್ಯರಿಗೆ ಆಜ್ಞೆ ಕೊಟ್ಟನು.ನಂಬಿಕೆ: ಯೇಸು ಹುಟ್ಟಿದ ಕೂಡಲೆ ಮೂರು ಮಂದಿ ರಾಜರು (ಅಥವಾ ಕೆಲವರಿಗನುಸಾರ ಜ್ಞಾನಿಗಳು) ಅವನನ್ನು ನೋಡಲು ಬಂದರು.
ಇದು ಮಿಥ್ಯ.
ಯೇಸುವಿನ ಜನನದೃಶ್ಯವನ್ನು ವರ್ಣಿಸುವ ಚಿತ್ರಗಳನ್ನೋ ಗೊಂಬೆಗಳನ್ನೋ ನೀವು ನೋಡಿರಬಹುದು. ಅದರಲ್ಲಿ ಶಿಶು ಯೇಸು ಗೋದಲಿಯಲ್ಲಿ ಮಲಗಿರುವುದನ್ನು, ಅವನ ಸುತ್ತ ಮೂರು ಮಂದಿ ರಾಜರು ಉಡುಗೊರೆ ಹಿಡಿದು ನಿಂತಿರುವುದನ್ನು ನೀವು ಕಂಡಿರಬಹುದು. ನಿಜ ಹೇಳಬೇಕೆಂದರೆ ಇದೆಲ್ಲ ಬರೇ ಕಲ್ಪನೆಯಷ್ಟೇ.
ಪೂರ್ವದೇಶದಿಂದ ಯೇಸುವನ್ನು ನೋಡಲು ಕೆಲವರು ಬಂದಿದ್ದರೇನೋ ನಿಜ. ಆದರೆ ಅವರು ಜ್ಯೋತಿಷಿಗಳಾಗಿದ್ದರು. (ಮತ್ತಾಯ 2:1) ಅವರು ಯೇಸುವನ್ನು ನೋಡಲು ಹೋದಾಗ ಅವನಿನ್ನೂ ನವಜಾತ ಶಿಶುವಾಗಿದ್ದು ಗೋದಲಿಯಲ್ಲಿದ್ದನೋ? ಇಲ್ಲ, ಅವರು ಅವನನ್ನು ಭೇಟಿಯಾದದ್ದು ಒಂದು ಮನೆಯಲ್ಲಿ. ಯೇಸು ಜನಿಸಿ ಹಲವಾರು ತಿಂಗಳುಗಳ ನಂತರವೇ ಅವರು ಅವನನ್ನು ನೋಡಿದರೆಂಬುದು ಇಲ್ಲಿ ಸ್ಪಷ್ಟ.—ಮತ್ತಾಯ 2:9-11.
ಇನ್ನು ಆ ಸಂದರ್ಶಕರು ಇಬ್ಬರಿದ್ದರೋ ಮೂವರಿದ್ದರೋ ಮೂವತ್ತಿದ್ದರೋ ಎಂದು ಬೈಬಲ್ ತಿಳಿಸುವುದಿಲ್ಲ. ಅವರು ತಂದ ಕಾಣಿಕೆಗಳು ಮೂರು ವಿಧಗಳಾದ್ದರಿಂದ ಅವರು ಮೂವರಿದ್ದರೆಂಬ ಕಥೆ ಹುಟ್ಟಿಕೊಂಡಿರಬಹುದು. * (ಮತ್ತಾಯ 2:11) ಅವರು ಬೇರೆ ಬೇರೆ ಜನಾಂಗದವರೆಂದು ಹೇಳುವವರೂ ಕೆಲವರಿದ್ದಾರೆ. ಆದರೆ ಬೈಬಲಿನಲ್ಲಿ ಎಲ್ಲೂ ಈ ವಿಚಾರವಿಲ್ಲ. ಸುವಾರ್ತಾ ಪುಸ್ತಕದ ಒಂದು ವ್ಯಾಖ್ಯಾನಕೃತಿಗನುಸಾರ ಈ ಮಿಥ್ಯ “8ನೇ ಶತಮಾನದ ಒಬ್ಬ ಇತಿಹಾಸಕಾರನ ಕಲ್ಪನೆಯಾಗಿದೆ.”
ನಂಬಿಕೆ: ಯೇಸು ಮರಿಯಳಿಗೆ ಒಬ್ಬನೇ ಮಗ.
ಇದು ಮಿಥ್ಯ.
ಯೇಸುವಿಗೆ ಒಡಹುಟ್ಟಿದವರಿದ್ದರೆಂದು ಸುವಾರ್ತಾ ಪುಸ್ತಕಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಯೇಸು ಮರಿಯಳ “ಚೊಚ್ಚಲು ಮಗ” ಎಂದು ಲೂಕನ ಸುವಾರ್ತೆ ಹೇಳುವಾಗ ಮರಿಯಳಿಗೆ ತದನಂತರ ಬೇರೆ ಮಕ್ಕಳು ಹುಟ್ಟಿದರು ಎಂದಾಯಿತು. * (ಲೂಕ 2:7) ಮಾರ್ಕನ ಸುವಾರ್ತೆಗನುಸಾರ ನಜರೇತ್ ಎಂಬ ಊರಿನ ಕೆಲವರು ಯೇಸು ಒಬ್ಬ ವಿಶೇಷ ವ್ಯಕ್ತಿಯೇನಲ್ಲ, ತನ್ನ ಒಡಹುಟ್ಟಿದವರಂತೆ ಸಾಮಾನ್ಯ ವ್ಯಕ್ತಿ ಎಂದು ತಾತ್ಸಾರಮಾಡಿದ್ದರು. ಅವರು ಹೀಗೆ ಕೇಳಿದ್ದರು: “ಇವನು ಯಾಕೋಬ, ಯೋಸೇಫ, ಯೂದ ಮತ್ತು ಸೀಮೋನರ ಅಣ್ಣನಲ್ಲವೆ? ಇವನ ತಂಗಿಯರು ನಮ್ಮಲ್ಲಿದ್ದಾರಲ್ಲವೆ?”—ಮಾರ್ಕ 6:3; ಮತ್ತಾಯ 12:46; ಯೋಹಾನ 7:5.
ಸುವಾರ್ತಾ ಪುಸ್ತಕಗಳು ಹೀಗೆ ಹೇಳುವುದಾದರೂ ಅನೇಕ ದೇವತಾಶಾಸ್ತ್ರಜ್ಞರು ಮರಿಯಳಿಗೆ ಯೇಸು ಒಬ್ಬನೇ ಮಗ ಎಂದು ವಾದಿಸುತ್ತಾರೆ. ಆತನ ತಮ್ಮ-ತಂಗಿಯರೆಲ್ಲ ಸೋದರಸಂಬಂಧಿಗಳು ಎಂದೂ ಹೇಳುತ್ತಾರೆ. * ಇನ್ನು ಕೆಲವರಂತೂ ಆ ಮಕ್ಕಳು ಮರಿಯಳ ಮಲಮಕ್ಕಳು ಎಂದು ಊಹಿಸುತ್ತಾರೆ. ಒಂದು ಕ್ಷಣ ಯೋಚಿಸಿ: ಯೇಸು ಮರಿಯಳಿಗೆ ಹುಟ್ಟಿದ ಒಬ್ಬನೇ ಮಗನಾಗಿದ್ದರೆ ನಜರೇತಿನ ಜನರು ಹಾಗೆ ಹೇಳುತ್ತಿದ್ದರೇ? ಮರಿಯಳು ಬಸುರಾಗಿ ಮಕ್ಕಳನ್ನು ಹೆತ್ತದ್ದನ್ನು ಅವರಲ್ಲಿ ಕೆಲವರು ಕಣ್ಣಾರೆ ಕಂಡಿರಬೇಕು. ಮರಿಯಳ ಆ ಅನೇಕ ಮಕ್ಕಳಲ್ಲಿ ಯೇಸು ಒಬ್ಬನೆಂದು ಅವರಿಗೆ ಸಂಶಯವೇ ಇದ್ದಿರಲಿಲ್ಲ.
ನಂಬಿಕೆ: ಯೇಸು ದೇವರ ಅವತಾರ.
ಇದು ಮಿಥ್ಯ.
ದೇವರು ನರಾವತಾರವೆತ್ತಿ ಭೂಮಿಗೆ ಬಂದು ಯೇಸುವಾಗಿ ಜೀವಿಸಿದನು ಎಂಬುದು ತ್ರಯೈಕ್ಯ ಬೋಧನೆಯ ತಿರುಳು. ಈ ಬೋಧನೆ ಬಹಳ ಹಿಂದಿನದ್ದಾದರೂ ಯೇಸುವಿನ ಸಮಯದಲ್ಲಿ ಹುಟ್ಟಿಕೊಳ್ಳಲಿಲ್ಲ. “ತ್ರಯೈಕ್ಯ ಎಂಬ ಪದವಾಗಲಿ ಈ ಬೋಧನೆಯಾಗಲಿ ಹೊಸ ಒಡಂಬಡಿಕೆಯಲ್ಲಿ ಎಲ್ಲೂ ಕಂಡುಬರುವುದಿಲ್ಲ
. . . ಈ ಬೋಧನೆಯು ಅನೇಕ ಶತಮಾನಗಳಾದ್ಯಂತ ನಿಧಾನವಾಗಿ ಮತ್ತು ಅನೇಕ ವಾಗ್ವಾದಗಳ ಮಧ್ಯೆ ವಿಕಸನಗೊಂಡಿತು” ಎಂದು ದಿ ಎನ್‌ಸೈಕ್ಲಪೀಡಿಯ ಬ್ರಿಟಾನಿಕ ಹೇಳುತ್ತದೆ.ದೇವರು ಮಾನವನಾಗಿ ಹುಟ್ಟಿದನು ಎಂದು ಕಲಿಸುವ ಧರ್ಮಗಳು ವಾಸ್ತವದಲ್ಲಿ ಯೇಸುವನ್ನು ಅವಮಾನಪಡಿಸುತ್ತವೆ. * ಹೇಗೆ? ಇದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಪರಿಗಣಿಸಿ. ಕೆಲವು ಕೆಲಸಗಾರರು ತಮ್ಮ ಅಧಿಕಾರಿಯ ಮುಂದೆ ಒಂದು ಕೋರಿಕೆಯನ್ನಿಡುತ್ತಾರೆ. ಅದನ್ನು ಈಡೇರಿಸುವ ಅಧಿಕಾರ ತನಗಿಲ್ಲವೆಂದು ಆ ಅಧಿಕಾರಿ ಹೇಳುತ್ತಾನೆಂದು ಇಟ್ಟುಕೊಳ್ಳಿ. ಅವನ ಮಾತು ಸತ್ಯವೇ ಆಗಿದ್ದಲ್ಲಿ ಅವನು ತನ್ನ ಇತಿಮಿತಿಗಳ ಅರಿವಿರುವ ಒಬ್ಬ ವಿವೇಕಿ ಎನ್ನಬಹುದು. ಆದರೆ ಸುಳ್ಳಾಗಿದ್ದಲ್ಲಿ ಅಂದರೆ ಅವನಿಗೆ ಸಾಮರ್ಥ್ಯವಿದ್ದರೂ ಕೋರಿಕೆಯನ್ನು ಈಡೇರಿಸದಿದ್ದರೆ ಅವನು ಮೋಸಗಾರ ಎಂದಾಗುತ್ತದೆ ಅಲ್ಲವೇ?
ಈಗ, ಯೇಸುವಿನ ಇಬ್ಬರು ಅಪೊಸ್ತಲರು ಉನ್ನತ ಸ್ಥಾನ ಬೇಕೆಂಬ ಕೋರಿಕೆಯನ್ನು ಆತನ ಮುಂದಿಟ್ಟಾಗ ಏನು ಹೇಳಿದನೆಂದು ಗಮನಿಸಿ. “ನನ್ನ ಬಲಗಡೆಯಲ್ಲಿ ಅಥವಾ ಎಡಗಡೆಯಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ; ಅದು ನನ್ನ ತಂದೆಯಿಂದ ಯಾರಿಗಾಗಿ ಸಿದ್ಧಪಡಿಸಲ್ಪಟ್ಟಿದೆಯೋ ಅವರಿಗೇ ಸೇರಿದ್ದಾಗಿದೆ” ಎಂದನು ಯೇಸು. (ಮತ್ತಾಯ 20:23) ಯೇಸು ನಿಜವಾಗಿಯೂ ದೇವರೇ ಆಗಿದ್ದರೆ ಆತನು ಆಗ ಸುಳ್ಳು ಹೇಳಿದಂತೆ ಆಗುತ್ತಿತ್ತಲ್ಲಾ? ಆದರೆ ತನಗಿಂತಲೂ ಹೆಚ್ಚು ಅಧಿಕಾರವಿರುವ ಸರ್ವೋನ್ನತನಿಗೆ ಗೌರವ ತೋರಿಸುತ್ತಾ ಯೇಸು ದೀನತೆಯ ಮಾದರಿಯನ್ನಿಟ್ಟನು. ತಾನು ದೇವರಿಗೆ ಸಮಾನನಲ್ಲ ಎಂದೂ ಆತನು ತೋರಿಸಿಕೊಟ್ಟನು.
ನಂಬಿಕೆ: ಯೇಸು ಕೇವಲ ಒಬ್ಬ ಒಳ್ಳೇ ವ್ಯಕ್ತಿಯಷ್ಟೇ ಆಗಿರಲಿಲ್ಲ.
ಇದು ಸತ್ಯ.
ಯೇಸು ತಾನು ಬರೇ ಒಬ್ಬ ಒಳ್ಳೇ ವ್ಯಕ್ತಿಯಷ್ಟೇ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದನು. “ನಾನು ದೇವರ ಮಗ” ಎಂದನವನು. (ಯೋಹಾನ 10:36) ‘ನಾನು ದೇವರ ಮಗ’ ಎಂದು ಯಾರು ಬೇಕಾದರೂ ಹೇಳಬಹುದು ನಿಜ. ಆದರೆ ಒಂದುವೇಳೆ ಯೇಸು ಸುಮ್ಮನೆ ಹಾಗೆ ಹೇಳಿ ನಿಜವಾಗಿ ದೇವರ ಮಗನಲ್ಲದಿದ್ದರೆ ಆತನೆಂಥ ವ್ಯಕ್ತಿ ಎಂದಾಗುತ್ತಿತ್ತು? ಒಬ್ಬ ಒಳ್ಳೇ ವ್ಯಕ್ತಿಯಲ್ಲ, ದೊಡ್ಡ ನಯವಂಚಕನೇ.
ಆದರೆ ಯೇಸು ದೇವರ ಮಗ ಎನ್ನುವುದಕ್ಕೆ ಅತ್ಯಂತ ನಂಬಲರ್ಹವಾದ ಸಾಕ್ಷಿಯನ್ನು ದೇವರೇ ಕೊಟ್ಟಿದ್ದಾನೆ. ‘ಇವನು ನನ್ನ ಮಗನು’ ಎಂದು ದೇವರು ಎರಡು ಬಾರಿ ಯೇಸುವಿನ ಬಗ್ಗೆ ಹೇಳಿದನು. (ಮತ್ತಾಯ 3:17; 17:5) ದೇವರು ಸ್ವತಃ ಮನುಷ್ಯರೊಂದಿಗೆ ಮಾತಾಡಿದ್ದರ ಕೇವಲ ಕೆಲವೇ ಸಂದರ್ಭಗಳನ್ನು ಬೈಬಲ್ ದಾಖಲಿಸುತ್ತದೆ. ಅವುಗಳಲ್ಲಿ ಯೇಸು ತನ್ನ ಮಗನೆಂದು ದೃಢೀಕರಿಸಿದ್ದು ಎರಡು ಬಾರಿ! ತಾನು ಯಾರೆಂದು ಯೇಸು ಹೇಳಿದನೋ ಆ ಮಾತಿಗೆ ಇದು ಅತ್ಯುತ್ತಮ ಪುರಾವೆಯಾಗಿತ್ತು.
ಯೇಸುವಿನ ಬಗ್ಗೆ ನಿಮಗೆ ಈ ಹಿಂದೆ ಗೊತ್ತಿಲ್ಲದಿದ್ದ ಯಾವುದಾದರೂ ವಾಸ್ತವಾಂಶವನ್ನು ಈ ಲೇಖನದಿಂದ ತಿಳಿದುಕೊಂಡಿದ್ದೀರೋ? ಹೌದಾದರೆ, ದೇವಪ್ರೇರಿತವಾದ ಸುವಾರ್ತಾ ಪುಸ್ತಕಗಳನ್ನು ಇನ್ನಷ್ಟು ಪರೀಕ್ಷಿಸಿ ನೋಡಬಾರದೇಕೆ? ಇಂಥ ಅಧ್ಯಯನವು ಆನಂದಕರವೂ ಪ್ರಯೋಜನಕರವೂ ಆಗಿದೆ. ತನ್ನ ಮತ್ತು ತನ್ನ ತಂದೆಯ ಕುರಿತು ಸತ್ಯವನ್ನು ತಿಳಿದುಕೊಳ್ಳುವಲ್ಲಿ “ನಿತ್ಯಜೀವ” ಸಿಗುವುದೆಂದು ಯೇಸುವೇ ಹೇಳಿದ್ದಾನೆ.—ಯೋಹಾನ 17:3. (w10-E 04/01)
[ಪಾದಟಿಪ್ಪಣಿಗಳು]
^ ಪ್ಯಾರ. 13 ಯೇಸು ಮರಣಪಟ್ಟದ್ದು ಪಸ್ಕ ಹಬ್ಬದ ದಿನದಂದು ಅಂದರೆ ಯೆಹೂದಿ ಕ್ಯಾಲೆಂಡರ್‌ಗನುಸಾರ ನೈಸಾನ್ 14ರಂದು.—ಮತ್ತಾಯ 26:2.
^ ಪ್ಯಾರ. 18 ಆ ವಿದೇಶೀಯರು “ತಮ್ಮ ಬೊಕ್ಕಸಗಳನ್ನು ತೆರೆದು” ಚಿನ್ನ, ಧೂಪ, ರಕ್ತಬೋಳಗಳನ್ನು ಯೇಸುವಿಗೆ ಕಾಣಿಕೆಯಾಗಿ ಕೊಟ್ಟರು ಎಂದು ಬೈಬಲ್ ಲೇಖಕನಾದ ಮತ್ತಾಯನು ಹೇಳುತ್ತಾನೆ. ಆಸಕ್ತಿಕರ ಸಂಗತಿಯೇನೆಂದರೆ ಆ ಬೆಲೆಬಾಳುವ ಉಡುಗೊರೆಗಳು ಯೇಸುವಿನ ಕುಟುಂಬಕ್ಕೆ ಸರಿಯಾದ ಸಮಯಕ್ಕೆ ಸಿಕ್ಕಿದ್ದವು. ಯಾಕೆಂದರೆ ಅಷ್ಟೇನೂ ಸ್ಥಿತಿವಂತರಲ್ಲದ ಯೇಸುವಿನ ಕುಟುಂಬವು ಸ್ವಲ್ಪದರಲ್ಲೇ ತಮ್ಮ ಊರು ಬಿಟ್ಟು ಬೇರೊಂದು ಊರಲ್ಲಿ ನಿರಾಶ್ರಿತರಾಗಿ ನೆಲೆಸಬೇಕಾಯಿತು.—ಮತ್ತಾಯ 2:11-15.
^ ಪ್ಯಾರ. 21 ಯೇಸುವಿನ ಹುಟ್ಟು ದೈವಿಕ ಅದ್ಭುತವಾಗಿದ್ದರೂ ಮರಿಯಳ ಉಳಿದ ಮಕ್ಕಳು ಆಕೆಯ ಗಂಡನಾದ ಯೋಸೇಫನಿಂದ ಸ್ವಾಭಾವಿಕವಾಗಿ ಹುಟ್ಟಿದವರಾಗಿದ್ದರು.—ಮತ್ತಾಯ 1:25.
^ ಪ್ಯಾರ. 22 ಸುಮಾರು ಕ್ರಿ.ಶ. 383ರಲ್ಲಿ ಜೆರೋಮ್ ಎಂಬವನು ಪ್ರತಿಪಾದಿಸಿದ ಈ ಅಭಿಪ್ರಾಯವು ಮರಿಯಳು ಜೀವನಪೂರ್ತಿ ಕನ್ನಿಕೆಯಾಗಿದ್ದಳು ಎಂದು ನಂಬುವವರಲ್ಲಿ ಸಾಮಾನ್ಯ. ಸಮಯಾನಂತರ ಸ್ವತಃ ಜೆರೋಮ್ ತನ್ನ ಆ ವಾದ ಅಷ್ಟು ಸರಿಯಲ್ಲವೆಂದು ಹೇಳಿದನು. ಹಾಗಿದ್ದರೂ ಕ್ಯಾಥೊಲಿಕ್ ಚರ್ಚಿನಲ್ಲಿ ಮತ್ತು ಅನೇಕರ ಮನಸ್ಸಿನಲ್ಲಿ ಆ ಅಭಿಪ್ರಾಯ ಈಗಲೂ ತಳವೂರಿದೆ.
^ ಪ್ಯಾರ. 26 ತ್ರಯೈಕ್ಯದ ಬೋಧನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 202-204ರಲ್ಲಿರುವ ಪರಿಶಿಷ್ಟ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 14ರಲ್ಲಿರುವ ಚೌಕ/ಚಿತ್ರ]
ನಿಮಗೆ ಅಚ್ಚರಿಮೂಡಿಸುವ ಇನ್ನು ಕೆಲವು ಸತ್ಯ ಸಂಗತಿಗಳು
ಯೇಸು ಯಾವ ರೀತಿಯ ವ್ಯಕ್ತಿಯಾಗಿದ್ದನು? ಜನಸಾಮಾನ್ಯರನ್ನು ಅರ್ಥಮಾಡಿಕೊಳ್ಳದವನೂ ವಿರಕ್ತನೂ ಭಾವಶೂನ್ಯನೂ ಎಲ್ಲರಿಂದ ದೂರವಿರುವ ವ್ಯಕ್ತಿಯೂ ಆಗಿದ್ದನೋ? ‘ಹೌದು’ ಎನ್ನಬಹುದು ಕೆಲವರು. ಈ ಕಾರಣದಿಂದಲೇ ಅವರಿಗೆ ಯೇಸುವಿನ ಬಗ್ಗೆ ಈ ಕೆಳಗಿನ ವಿಷಯಗಳನ್ನು ತಿಳಿದು ಅಚ್ಚರಿಯಾಗಬಹುದು:
• ಆತನು ಸಂತೋಷದ ಔತಣಕೂಟಗಳಿಗೆ ಹೋದನು.—ಯೋಹಾನ 2:1-11.
• ಇತರರನ್ನು ಪ್ರಶಂಸಿಸಿದನು.—ಮಾರ್ಕ 14:6-9.
• ಚಿಕ್ಕ ಮಕ್ಕಳೊಂದಿಗಿರಲು ಆತನಿಗೆ ಖುಷಿಯಾಗುತ್ತಿತ್ತು.—ಮಾರ್ಕ 10:13, 14.
• ಎಲ್ಲರ ಮುಂದೆ ಅತ್ತನು.—ಯೋಹಾನ 11:35.
• ಕಷ್ಟದಲ್ಲಿದ್ದವರನ್ನು ನೋಡಿ ಕನಿಕರಪಟ್ಟನು.—ಮಾರ್ಕ 1:40, 41.