ದೇವರ ಹೆಸರನ್ನು ತಿಳಿದುಕೊಳ್ಳಲು ಎದುರಾಗುವ ತಡೆಗಳು
ದೇವರ ಹೆಸರನ್ನು ತಿಳಿದುಕೊಳ್ಳಲು ಎದುರಾಗುವ ತಡೆಗಳು
ನಿಮಗೆ ಯೆಹೋವನ ಹೆಸರು ತಿಳಿಯಬಾರದೆಂದೂ ಆತನೊಂದಿಗೆ ಆಪ್ತ ಸಂಬಂಧ ಇರಬಾರದೆಂದೂ ಬಯಸುವ ಒಬ್ಬನಿದ್ದಾನೆ. ಈ ದುಷ್ಟ ವೈರಿ ಯಾರು? ಬೈಬಲ್ ವಿವರಿಸುವುದು: “ಈ ವಿಷಯಗಳ ವ್ಯವಸ್ಥೆಯ ದೇವನು ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ.” ಇಂದಿನ ಭಕ್ತಿಹೀನ ಜಗತ್ತಿನ ದೇವರು ಪಿಶಾಚನಾದ ಸೈತಾನನು. ನೀವು ಯೆಹೋವನ ಹೆಸರನ್ನು ತಿಳಿಯಬಾರದೆಂಬುದೇ ಅವನ ಅಪೇಕ್ಷೆ. ‘ದೇವರ ಮಹಿಮಾಭರಿತ ಜ್ಞಾನದಿಂದ’ ನಿಮ್ಮ ಹೃದಯ ಬೆಳಗಬಾರದೆಂದು ನಿಮ್ಮನ್ನು ಕತ್ತಲಲ್ಲಿರಿಸಲು ಇಚ್ಛಿಸುತ್ತಾನೆ. ಆದರೆ ಅವನು ಜನರ ಮನಸ್ಸನ್ನು ಕುರುಡುಗೊಳಿಸುವುದಾದರೂ ಹೇಗೆ?—2 ಕೊರಿಂಥ 4:4-6.
ಜನರು ಯೆಹೋವನ ಹೆಸರನ್ನು ತಿಳಿಯದಂತೆ ಮಾಡಲು ಸೈತಾನನು ಸುಳ್ಳು ಧರ್ಮವನ್ನು ಬಳಸಿದ್ದಾನೆ. ಉದಾಹರಣೆಗೆ, ಪುರಾತನ ಕಾಲದ ಕೆಲವು ಯೆಹೂದ್ಯರು ದೇವರು ಬರೆಸಿದ್ದ ಶಾಸ್ತ್ರಗ್ರಂಥದಲ್ಲಿದ್ದ ಮಾತನ್ನು ಅಲಕ್ಷಿಸಿ, ದೇವರ ಹೆಸರನ್ನು ಬಳಸಬಾರದೆಂಬ ಸಂಪ್ರದಾಯಕ್ಕೆ ಮಹತ್ವಕೊಟ್ಟರು. ಕ್ರಿಸ್ತ ಶಕದ ಆರಂಭದ ಶತಮಾನಗಳಷ್ಟಕ್ಕೆ ಯೆಹೂದ್ಯರಲ್ಲಿ, ಪವಿತ್ರ ಶಾಸ್ತ್ರಗ್ರಂಥವನ್ನು ಸಾರ್ವಜನಿಕವಾಗಿ ಓದುತ್ತಿದ್ದವರು ದೇವರ ಹೆಸರು ಬಂದಾಗಲೆಲ್ಲ “ಕರ್ತನು” ಎಂಬರ್ಥವುಳ್ಳ ಅಧೋನೈ ಎಂಬ ಪದವನ್ನು ಓದುವಂತೆ ಸೂಚನೆ ಕೊಡಲಾಯಿತೆಂದು ತೋರುತ್ತದೆ. ನಿಸ್ಸಂದೇಹವಾಗಿಯೂ ಈ ಪದ್ಧತಿಯಿಂದಾಗಿ ಜನರು ದೇವರಿಂದ ದೂರ ಸರಿದರು. ಅನೇಕರು ದೇವರೊಂದಿಗೆ ಆಪ್ತ ವೈಯಕ್ತಿಕ ಸಂಬಂಧವನ್ನು ಬೆಸೆಯಲು ಸಾಧ್ಯವಾಗಲಿಲ್ಲ. ಆದರೆ ಯೇಸುವಿನ ಬಗ್ಗೆ ಏನು? ಯೆಹೋವನ ಹೆಸರಿನ ಬಗ್ಗೆ ಆತನ ಮನೋಭಾವ ಏನಾಗಿತ್ತು?
ಯೇಸು ಮತ್ತವನ ಹಿಂಬಾಲಕರು ದೇವರ ಹೆಸರನ್ನು ತಿಳಿಯಪಡಿಸಿದರು
ಯೇಸು ತನ್ನ ತಂದೆಗೆ ಪ್ರಾರ್ಥನೆಯಲ್ಲಿ ಹೀಗಂದನು: “ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು.” (ಯೋಹಾನ 17:26) ಯೇಸು ಹೀಬ್ರು ಶಾಸ್ತ್ರಗ್ರಂಥದಿಂದ ಆ ಮಹತ್ವಪೂರ್ಣ ಹೆಸರುಳ್ಳ ಭಾಗಗಳನ್ನು ಓದಿ, ಉಲ್ಲೇಖಿಸಿ, ವಿವರಿಸಿದಾಗಲೆಲ್ಲ ದೇವರ ಹೆಸರನ್ನು ಖಂಡಿತ ಉಚ್ಚರಿಸಿರಲೇಬೇಕು. ಹೀಗೆ ಯೇಸು, ತನಗಿಂತಲೂ ಮುಂಚೆ ಇದ್ದ ಎಲ್ಲ ಪ್ರವಾದಿಗಳಂತೆ ದೇವರ ಹೆಸರನ್ನು ಯಥೇಚ್ಛವಾಗಿ ಬಳಸಿದನು. ಆತನ ಶುಶ್ರೂಷೆಯ ಸಮಯದಷ್ಟಕ್ಕೆ ಯೆಹೂದ್ಯರು ಆಗಲೇ ದೇವರ ಹೆಸರನ್ನು ಬಳಸದಿರುವ ಪದ್ಧತಿಯನ್ನು ಅನುಸರಿಸುತ್ತಿದ್ದಲ್ಲಿ, ಖಂಡಿತವಾಗಿ ಆತನು ಆ ಪದ್ಧತಿಯನ್ನು ಅನುಸರಿಸಲಿಲ್ಲ. “ನಿಮ್ಮ ಸಂಪ್ರದಾಯದ ನಿಮಿತ್ತ ನೀವು ದೇವರ ವಾಕ್ಯವನ್ನು ನಿರರ್ಥಕಮಾಡಿದ್ದೀರಿ” ಎಂದು ಹೇಳುವ ಮೂಲಕ ಆತನು ಆ ಧಾರ್ಮಿಕ ಮುಖಂಡರನ್ನು ಖಾರವಾಗಿ ಟೀಕಿಸಿದನು.—ಮತ್ತಾಯ 15:6.
ಯೇಸುವಿನ ಮರಣ ಹಾಗೂ ಪುನರುತ್ಥಾನದ ಬಳಿಕವೂ ಆತನ ನಂಬಿಗಸ್ತ ಹಿಂಬಾಲಕರು ದೇವರ ಹೆಸರನ್ನು ತಿಳಿಯಪಡಿಸುವುದನ್ನು ಮುಂದುವರಿಸಿದರು. (“ಆದಿ ಕ್ರೈಸ್ತರು ದೇವರ ಹೆಸರನ್ನು ಬಳಸಿದರೋ?” ಚೌಕ ನೋಡಿ.) ಕ್ರಿ.ಶ. 33ರ ಪಂಚಾಶತ್ತಮದಂದು ಅಂದರೆ ಕ್ರೈಸ್ತ ಸಭೆಯ ರಚನೆಯಾದ ದಿನದಂದೇ ಅಪೊಸ್ತಲ ಪೇತ್ರನು, ಯೋವೇಲನ ಪ್ರವಾದನೆಯಿಂದ ಉಲ್ಲೇಖಿಸುತ್ತಾ, ಯೆಹೂದ್ಯರಿಗೂ ಯೆಹೂದಿಮತಕ್ಕೆ ಪರಿವರ್ತನೆಗೊಂಡವರಿಗೂ ಹೀಗಂದನು: “ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು.” (ಅ. ಕಾರ್ಯಗಳು 2:21; ಯೋವೇಲ 2:32) ಆದಿ ಕ್ರೈಸ್ತರು ಅನೇಕ ರಾಷ್ಟ್ರಗಳ ಜನರಿಗೆ ಯೆಹೋವನ ಹೆಸರಿನ ಕುರಿತು ತಿಳಿಯುವಂತೆ ಸಹಾಯಮಾಡಿದರು. ಈ ಕಾರಣದಿಂದಲೇ, ಯೆರೂಸಲೇಮಿನಲ್ಲಿ ಅಪೊಸ್ತಲರ ಹಾಗೂ ಹಿರೀಪುರುಷರ ಒಂದು ಕೂಟದಲ್ಲಿ ಶಿಷ್ಯ ಯಾಕೋಬನು ಹೀಗಂದನು: “ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು . . . ಅವರ ಕಡೆಗೆ ಗಮನಹರಿಸಿದನು.”—ಅ. ಕಾರ್ಯಗಳು 15:14.
ಹಾಗಿದ್ದರೂ ದೇವರ ಹೆಸರನ್ನು ವಿರೋಧಿಸುವ ವೈರಿ ಸೈತಾನನು ತನ್ನ ಪಟ್ಟು ಸಡಿಲಿಸಲಿಲ್ಲ. ಎಲ್ಲ ಅಪೊಸ್ತಲರ ಮರಣಾನಂತರ ಧರ್ಮಭ್ರಷ್ಟತೆಯ ಬೀಜಗಳನ್ನು ಬಿತ್ತಲು ಅವನು ತಡಮಾಡಲಿಲ್ಲ. (ಮತ್ತಾಯ 13:38, 39; 2 ಪೇತ್ರ ) ಉದಾಹರಣೆಗೆ ನಾಮಮಾತ್ರದ ಕ್ರೈಸ್ತನಾಗಿದ್ದ ಜಸ್ಟಿನ್ ಮಾರ್ಟರ್ ಎಂಬ ಲೇಖಕ, ಅಪೊಸ್ತಲರಲ್ಲಿ ಕೊನೆಗೆ ಉಳಿದಿದ್ದ ಯೋಹಾನನು ಮರಣವನ್ನಪ್ಪಿದ ಸಮಯದಷ್ಟಕ್ಕೆ ಹುಟ್ಟಿದನು. ಹಾಗಿದ್ದರೂ ಅವನು, ಎಲ್ಲವನ್ನು ಒದಗಿಸುವ “ದೇವರಿಗೆ ಯಾವುದೇ ನಿರ್ದಿಷ್ಟ ಹೆಸರಿಲ್ಲ” ಎಂಬ ಮಾತನ್ನು ತನ್ನ ಬರಹಗಳಲ್ಲಿ ಪದೇ ಪದೇ ಬರೆದನು. 2:1
ಧರ್ಮಭ್ರಷ್ಟ ಕ್ರೈಸ್ತರು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಪ್ರತಿಗಳನ್ನು ಮಾಡಿದಾಗ ಅದರಿಂದ ಯೆಹೋವನ ಹೆಸರನ್ನು ತೆಗೆದು ಅದರ ಸ್ಥಾನದಲ್ಲಿ “ಕರ್ತನು” ಎಂಬರ್ಥವಿರುವ ಕಿರೀಯಾಸ್ ಎಂಬ ಗ್ರೀಕ್ ಪದವನ್ನು ಹಾಕಿದರು. ಹೀಬ್ರು ಶಾಸ್ತ್ರಗ್ರಂಥದಲ್ಲೂ ಇದನ್ನೇ ಮಾಡಲಾಯಿತು. ತಮ್ಮ ವಾಚನದಲ್ಲಿ ದೇವರ ಹೆಸರನ್ನು ಉಚ್ಚರಿಸದಿದ್ದ ಧರ್ಮಭ್ರಷ್ಟ ಯೆಹೂದಿ ಶಾಸ್ತ್ರಿಗಳು, 130ಕ್ಕಿಂತಲೂ ಹೆಚ್ಚು ಸಲ ತಮ್ಮ ಶಾಸ್ತ್ರಗ್ರಂಥದಲ್ಲಿ ದೇವರ ಹೆಸರಿನ ಸ್ಥಾನದಲ್ಲಿ ಅಧೊನೈ ಎಂಬ ಪದವನ್ನು ಹಾಕಿಟ್ಟರು. ಕ್ರಿ.ಶ. 405ರಲ್ಲಿ ಜೆರೋಮ್ ಎಂಬವನು ಭಾಷಾಂತರಿಸಿದ ಮತ್ತು ತರುವಾಯ ವಲ್ಗೇಟ್ ಎಂದು ಕರೆಯಲಾದ ಲ್ಯಾಟಿನ್ ಭಾಷೆಯ ಬೈಬಲಿನಿಂದ ದೇವರ ವೈಯಕ್ತಿಕ ಹೆಸರನ್ನು ತೆಗೆದುಹಾಕಲಾಯಿತು.
ಆಧುನಿಕ ಕಾಲದಲ್ಲಿ ದೇವರ ಹೆಸರನ್ನು ಅಳಿಸಿಹಾಕುವ ಯತ್ನಗಳು
ಯೆಹೋವ ಎಂಬ ಹೆಸರು ಬೈಬಲಿನಲ್ಲಿ 7,000ಕ್ಕಿಂತಲೂ ಹೆಚ್ಚು ಸಲ ಇದೆಯೆಂದು ಇಂದಿನ ವಿದ್ವಾಂಸರಿಗೆ ತಿಳಿದಿದೆ. ಈ ಕಾರಣದಿಂದಲೇ ಕ್ಯಾಥೊಲಿಕ್ ಜೆರೂಸಲೇಮ್ ಬೈಬಲ್, ಸ್ಪ್ಯಾನಿಷ್ ಭಾಷೆಯ ಲಾ ಬಿಬ್ಲಿಯ ಲ್ಯಾಟಿನೊಅಮೇರಿಕಾ ಮತ್ತು ಇನ್ನೊಂದು ಸ್ಪ್ಯಾನಿಷ್ ಭಾಷಾಂತರವಾದ ಜನಪ್ರಿಯ ‘ರೇನಾ-ವಾಲೇರಾ ಆವೃತ್ತಿ’ಯಂಥ ವ್ಯಾಪಕ ಬಳಕೆಯ ಕೆಲವೊಂದು ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರನ್ನು ಮುಕ್ತವಾಗಿ ಬಳಸಲಾಗಿದೆ. ಕೆಲವು ಭಾಷಾಂತರಗಳಲ್ಲಿ ದೇವರ ಹೆಸರನ್ನು “ಯಾಹ್ವೆ” ಎಂದು ಕೊಡಲಾಗಿದೆ.
ದುಃಖದ ಸಂಗತಿಯೇನೆಂದರೆ ಬೈಬಲ್ ಭಾಷಾಂತರಗಳನ್ನು ಪ್ರಾಯೋಜಿಸುವ ಅನೇಕ ಚರ್ಚುಗಳು, ಬೈಬಲ್ ಭಾಷಾಂತರಗಳಿಂದ ದೇವರ ಹೆಸರನ್ನು ತೆಗೆದುಬಿಡಲು ವಿದ್ವಾಂಸರ ಮೇಲೆ ಒತ್ತಡಹೇರುತ್ತಿವೆ. ಉದಾಹರಣೆಗೆ ಕ್ಯಾಥೊಲಿಕ್ ಬಿಷಪರ ಸಮಾವೇಶಗಳ ಅಧ್ಯಕ್ಷರುಗಳಿಗೆ ಬರೆಯಲಾದ ಜೂನ್ 29, 2008ರ ಪತ್ರದಲ್ಲಿ ವ್ಯಾಟಿಕನ್ ಹೀಗಂದಿತು: “ಇತ್ತೀಚಿನ ವರ್ಷಗಳಲ್ಲಿ ಇಸ್ರಾಯೇಲಿನ ದೇವರ ವೈಯಕ್ತಿಕ ಹೆಸರನ್ನು ಉಚ್ಚರಿಸುವ ರೂಢಿ ಮೆಲ್ಲನೆ ಒಳ ನುಸುಳುತ್ತಿದೆ.” ಆ ಪತ್ರ ಈ ನೇರ ನಿರ್ದೇಶನವನ್ನು ಕೊಟ್ಟಿತು: “ದೇವರ ಹೆಸರನ್ನು . . . ಬಳಸಲೂಬಾರದು, ಉಚ್ಚರಿಸಲೂಬಾರದು.” ಅಷ್ಟುಮಾತ್ರವಲ್ಲ, “ಬೈಬಲನ್ನು ಆಧುನಿಕ ಭಾಷೆಗಳಲ್ಲಿ ಭಾಷಾಂತರಿಸುವಾಗ . . . ದೈವಿಕ ಚತುರಕ್ಷರಿಯನ್ನು ಅಧೊನೈ/ಕಿರೀಯಾಸ್ ಅಂದರೆ ‘ಕರ್ತನು’ ಎಂದು ಭಾಷಾಂತರಿಸಬೇಕು.” ಇದರಿಂದ ಒಂದಂತೂ ಸ್ಪಷ್ಟ: ವ್ಯಾಟಿಕನ್‌ನಿಂದ ಬಂದಿರುವ ಈ ನಿರ್ದೇಶನದ ಗುರಿ ದೇವರ ಹೆಸರನ್ನು ಅಳಿಸಿಹಾಕುವುದೇ.
ಯೆಹೋವನ ಹೆಸರನ್ನು ಅಗೌರವಿಸುವುದರಲ್ಲಿ ಪ್ರಾಟೆಸ್ಟೆಂಟರೇನೂ ಹಿಂದೆ ಉಳಿದಿಲ್ಲ. 1978ರಲ್ಲಿ ಪ್ರಕಾಶಿತವಾದ ಪ್ರಾಟೆಸ್ಟೆಂಟ್-ಪ್ರಾಯೋಜಿತ ನ್ಯೂ ಇಂಟರ್‌ನ್ಯಾಷನಲ್ ವರ್ಷನ್ ಎಂಬ ಇಂಗ್ಲಿಷ್ ಬೈಬಲಿನ ವಕ್ತಾರರೊಬ್ಬರು ಬರೆದದ್ದು: “ಯೆಹೋವ ಎಂಬುದು ದೇವರ ವಿಶಿಷ್ಟ ಹೆಸರು. ನಾವದನ್ನು ನಮ್ಮ ಭಾಷಾಂತರದಲ್ಲಿ ಬಳಸಬೇಕಿತ್ತೇನೊ ನಿಜ. ಆದರೆ ನಾವು ಕೀರ್ತನೆ 23ರಲ್ಲಿ ‘ಯಾಹ್ವೆ ನನ್ನ ಕುರುಬ’ ಎಂದು ಹಾಕುತ್ತಿದ್ದರೆ, ಈ ಭಾಷಾಂತರಕ್ಕಾಗಿ ನಾವು ಖರ್ಚುಮಾಡಿದ 21/4 ಮಿಲಿಯ ಡಾಲರುಗಳನ್ನು ಖಂಡಿತ ನೀರಿಗೆ ಹಾಕಿದಂತಾಗುತ್ತಿತ್ತು.”
ದೇವರ ಹೆಸರನ್ನು ತಿಳಿಯುವದರಿಂದ ಚರ್ಚುಗಳು ಲ್ಯಾಟಿನ್ ಅಮೆರಿಕನ್ನರನ್ನೂ ತಡೆದಿವೆ. ‘ಯುನೈಟೆಡ್ ಬೈಬಲ್ ಸೊಸೈಟೀಸ್’ (ಯು.ಬಿ.ಎಸ್.) ಎಂಬ ಸಂಸ್ಥೆಯ ಭಾಷಾಂತರ ಸಲಹೆಗಾರ ಸ್ಟೀವನ್ ವಾತ್ ಹೀಗೆ ಬರೆದರು: “ಲ್ಯಾಟಿನ್ ಅಮೆರಿಕದ ಪ್ರಾಟೆಸ್ಟೆಂಟರೊಳಗೆ ಸದ್ಯಕ್ಕೆ ನಡೆಯುತ್ತಿರುವ ವಿವಾದಗಳ ವಿಷಯವಸ್ತು, ಜೆಹೋವಾ ಎಂಬ ಹೆಸರಿನ ಬಳಕೆ. . . . ಆಸಕ್ತಿಕರ ಸಂಗತಿಯೇನೆಂದರೆ ತುಂಬ ದೊಡ್ಡದಾದ ಮತ್ತು ಇನ್ನಷ್ಟು ಬೆಳೆಯುತ್ತಿರುವ ನವ-ಪೆಂಟೆಕೋಸ್ಟಲ್ ಚರ್ಚಿನವರು . . . ತಮಗೆ 1960ರ ‘ರೇನಾ-ವಲೇರಾ ಆವೃತ್ತಿ’ ಬೇಕು ಆದರೆ ಅದರಲ್ಲಿ ಜೆಹೋವಾ ಹೆಸರು ಇರಬಾರದೆಂದು ಹೇಳಿದರು. ಆ ಹೆಸರಿನ ಸ್ಥಾನದಲ್ಲಿ ಅವರಿಗೆ ಸೆನರ್ [ಕರ್ತನು] ಎಂಬ ಪದ ಬೇಕಿತ್ತು.” ವಾತ್ ಅವರಿಗನುಸಾರ, ಯು.ಬಿ.ಎಸ್. ಸಂಸ್ಥೆ ಈ ವಿನಂತಿಯನ್ನು ಮೊದಲು ತಳ್ಳಿಹಾಕಿದರೂ ನಂತರ ಮಣಿದು, “ಜೆಹೋವಾ ಎಂಬ ಪದವಿಲ್ಲದ” ‘ರೇನಾ-ವಲೇರಾ’ ಬೈಬಲ್ ಆವೃತ್ತಿಯನ್ನು ಪ್ರಕಾಶಿಸಿ ಕೊಟ್ಟಿತು.
ಅ. ಕೃತ್ಯಗಳು 2:35, NIBV) ಹೀಗೆ ಒಬ್ಬ ವಾಚಕನಿಗೆ “ಕರ್ತನು” ಎಂಬ ಪದ ಯೆಹೋವನಿಗೆ ಸೂಚಿಸುತ್ತದೊ ಆತನ ಪುತ್ರನಾದ ಯೇಸುವಿಗೆ ಸೂಚಿಸುತ್ತದೊ ಎಂದು ಗೊತ್ತಾಗದು. ಈ ಗಲಿಬಿಲಿ ಮಾತ್ರವಲ್ಲದೆ, “ಕ್ರೈಸ್ತರ ಮನಸ್ಸಿನಿಂದ ಯಾಹ್ವೆ ಎಂಬ ಹೆಸರನ್ನು ತೆಗೆದುಹಾಕಿರುವುದರಿಂದ ಕ್ರಿಸ್ತನ ಮೇಲೆ ಮಾತ್ರ ಗಮನನೆಡುವ ಪ್ರವೃತ್ತಿ ಫಲಿಸಿದೆ” ಎನ್ನುತ್ತಾರೆ ಡೇವಿಡ್ ಕ್ಲೈನ್ಸ್ “ಯಾಹ್ವೆ ಮತ್ತು ಕ್ರೈಸ್ತ ದೇವತಾಶಾಸ್ತ್ರದ ದೇವರು” ಎಂಬ ತನ್ನ ಪ್ರಬಂಧದಲ್ಲಿ. ಹೀಗಿರುವುದರಿಂದ ಯೇಸು ಯಾರಿಗೆ ಪ್ರಾರ್ಥನೆಮಾಡುತ್ತಿದ್ದನೊ ಆ ವ್ಯಕ್ತಿಗೆ ಒಂದು ಹೆಸರಿದೆಯೆಂದೂ ಆ ಹೆಸರು ಯೆಹೋವ ಎಂದೂ ಚರ್ಚಿಗೆ ಹೋಗುವ ಅನೇಕರಿಗೆ ತಿಳಿದೇ ಇಲ್ಲ.
ದೇವರ ಹೆಸರನ್ನು ಆತನ ಲಿಖಿತ ವಾಕ್ಯದಿಂದ ಅಳಿಸಿ ಅದರ ಸ್ಥಾನದಲ್ಲಿ “ಕರ್ತನು” ಎಂಬ ಪದವನ್ನು ಹಾಕುವುದರಿಂದ ಓದುಗರಿಗೆ ನಿಜವಾಗಿ ದೇವರು ಯಾರೆಂದು ತಿಳಿಯಲಾಗುವುದಿಲ್ಲ. ಇದು ಗಲಿಬಿಲಿಯನ್ನು ಹುಟ್ಟಿಸುತ್ತದೆ. ಉದಾಹರಣೆಗೆ, ‘ಯೆಹೋವನು ನನ್ನ ಕರ್ತನಿಗೆ [ಪುನರುತ್ಥಿತ ಯೇಸುವಿಗೆ] “ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು’ ಎಂಬ ದಾವೀದನ ಮಾತುಗಳನ್ನು ಅಪೊಸ್ತಲ ಪೇತ್ರನು ಉಲ್ಲೇಖಿಸಿದ್ದಾನೆ. ಆದರೆ ಇದನ್ನು ಅನೇಕ ಬೈಬಲ್ ಭಾಷಾಂತರಗಳಲ್ಲಿ ಹೀಗೆ ಕೊಡಲಾಗಿದೆ: “ಕರ್ತನು ನನ್ನ ಕರ್ತನಿಗೆ ಹೇಳಿದನು.” (ದೇವರ ಕುರಿತು ಜನರ ಮನಸ್ಸುಗಳನ್ನು ಕುರುಡುಗೊಳಿಸಲು ಸೈತಾನನು ವಿಶ್ವಪ್ರಯತ್ನ ಮಾಡಿದ್ದಾನೆ. ಹಾಗಿದ್ದರೂ ನೀವು ಖಂಡಿತ ಯೆಹೋವನ ಆಪ್ತ ಪರಿಚಯ ಮಾಡಿಕೊಳ್ಳಬಲ್ಲಿರಿ.
ಯೆಹೋವನ ಹೆಸರಿನ ಬಗ್ಗೆ ತಿಳಿದುಕೊಳ್ಳಬಲ್ಲಿರಿ
ನಿಶ್ಚಯವಾಗಿಯೂ ಸೈತಾನನು ದೇವರ ಹೆಸರಿನ ವಿರುದ್ಧ ದೊಡ್ಡ ಸಮರವನ್ನೇ ನಡೆಸಿದ್ದಾನೆ. ಇದಕ್ಕಾಗಿ ಸುಳ್ಳು ಧರ್ಮವನ್ನು ಕುತಂತ್ರದಿಂದ ಬಳಸಿದ್ದಾನೆ. ಹಾಗಿದ್ದರೂ ಯೆಹೋವನ ಬಗ್ಗೆ ಮತ್ತು ನಂಬಿಗಸ್ತ ಮಾನವರಿಗಾಗಿ ಆತನ ಮಹಿಮಾಯುತ ಉದ್ದೇಶದ ಬಗ್ಗೆ ಸತ್ಯ ತಿಳಿಯಲಿಚ್ಛಿಸುವವರಿದ್ದಾರೆ. ಇಂಥವರಿಗೆ ತನ್ನ ಹೆಸರನ್ನು ತಿಳಿಯಪಡಿಸುವುದರಿಂದ ಸ್ವರ್ಗದಲ್ಲಾಗಲಿ ಭೂಮಿಯಲ್ಲಾಗಲಿ ಇರುವ ಯಾವುದೇ ಶಕ್ತಿಯು ಕರ್ತನಾದ ಯೆಹೋವನನ್ನು ತಡೆಯಲಾರದು. ಇದು ವಾಸ್ತವಾಂಶ.
ದೇವರಿಗೆ ಆಪ್ತರಾಗುವುದು ಹೇಗೆಂಬುದನ್ನು ಬೈಬಲ್ ಅಧ್ಯಯನದ ಮೂಲಕ ಕಲಿಯುವಂತೆ ನಿಮಗೆ ನೆರವಾಗಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು. “ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ” ಎಂದು ದೇವರ ಬಳಿ ಹೇಳಿದ ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ಅವರೂ ದೇವರ ಹೆಸರನ್ನು ತಿಳಿಯಪಡಿಸುತ್ತಾರೆ. (ಯೋಹಾನ 17:26) ಮಾನವಕುಲಕ್ಕೆ ಆಶೀರ್ವಾದ ತರಲು ಯೆಹೋವನು ನಿರ್ವಹಿಸಿರುವ ವಿಭಿನ್ನ ಪಾತ್ರಗಳನ್ನು ಬೈಬಲಿನಿಂದ ಪರಿಗಣಿಸುವಾಗ ನಿಮಗೆ ಆತನ ಮೇರು-ವ್ಯಕ್ತಿತ್ವದ ಸೊಗಸಾದ ಅಂಶಗಳು ತಿಳಿದುಬರುವವು.
ನಂಬಿಗಸ್ತ ಪುರುಷನಾದ ಯೋಬನಂತೆಯೇ ನೀವೂ ‘ದೇವರ ಸ್ನೇಹವನ್ನು’ ಆನಂದಿಸಬಲ್ಲಿರಿ. (ಯೋಬ 29:4) ದೇವರ ವಾಕ್ಯದ ಜ್ಞಾನವನ್ನು ಪಡಕೊಂಡರೆ ನೀವು ಯೆಹೋವನ ಹೆಸರನ್ನೂ ವ್ಯಕ್ತಿತ್ವವನ್ನೂ ತಿಳಿದುಕೊಳ್ಳಬಲ್ಲಿರಿ. ಈ ಜ್ಞಾನವು, “ಎಂಥವನಾಗಿರುವೆನೋ ಅಂಥವನಾಗಿರುವೆನು” ಎಂಬ ತನ್ನ ಹೆಸರಿನ ಅರ್ಥಕ್ಕೆ ಹೊಂದಿಕೆಯಲ್ಲಿ ಯೆಹೋವನು ನಡೆಯುವನೆಂಬ ಭರವಸೆಯನ್ನು ನಿಮ್ಮಲ್ಲಿ ತುಂಬಿಸುವುದು. (ವಿಮೋಚನಕಾಂಡ 3:14, ಪಾದಟಿಪ್ಪಣಿ) ಆತನು ಮಾನವರಿಗೆ ಮಾಡಿರುವ ಎಲ್ಲ ವಾಗ್ದಾನಗಳನ್ನು ಖಂಡಿತ ಪೂರೈಸುವನು. (w10-E 07/01)
[ಪುಟ 18ರಲ್ಲಿರುವ ಚೌಕ/ಚಿತ್ರಗಳು]
ಆದಿ ಕ್ರೈಸ್ತರು ದೇವರ ಹೆಸರನ್ನು ಬಳಸಿದರೋ?
ಯೇಸುವಿನ ಅಪೊಸ್ತಲರ ದಿನಗಳಲ್ಲಿ ಅಂದರೆ ಕ್ರಿ.ಶ. 1ನೇ ಶತಮಾನದಲ್ಲಿ ಅನೇಕ ದೇಶಗಳಲ್ಲಿ ಕ್ರೈಸ್ತ ಸಭೆಗಳ ಸ್ಥಾಪನೆಯಾಯಿತು. ಈ ಸಭೆಗಳ ಸದಸ್ಯರು ನಿಯತವಾಗಿ ಒಟ್ಟುಸೇರಿ ಶಾಸ್ತ್ರಗ್ರಂಥದ ಅಧ್ಯಯನ ಮಾಡುತ್ತಿದ್ದರು. ಅವರ ಬಳಿಯಿದ್ದ ಶಾಸ್ತ್ರಗ್ರಂಥದ ಪ್ರತಿಗಳಲ್ಲಿ ಯೆಹೋವನ ಹೆಸರಿತ್ತೊ?
ಆ ಕಾಲದ ಅಂತಾರಾಷ್ಟ್ರೀಯ ಭಾಷೆ ಗ್ರೀಕ್ ಆಗಿದ್ದರಿಂದ ಅನೇಕ ಸಭೆಗಳು ಗ್ರೀಕ್ ಸೆಪ್ಟ್ಯುಅಜಿಂಟ್ ಅನ್ನು ಬಳಸುತ್ತಿದ್ದವು. ಇದು, ಹೀಬ್ರು ಶಾಸ್ತ್ರಗ್ರಂಥದ ಗ್ರೀಕ್ ಭಾಷಾಂತರವಾಗಿದ್ದು ಕ್ರಿ.ಪೂ. 2ನೇ ಶತಮಾನದಲ್ಲಿ ಪೂರ್ಣಗೊಂಡಿತ್ತು. ದೇವರ ಹೆಸರಿನ ಬದಲಿಗೆ ಕರ್ತನು ಎಂಬರ್ಥವಿರುವ ಕಿರೀಯಾಸ್ ಎಂಬ ಗ್ರೀಕ್ ಪದವನ್ನು ಈ ಭಾಷಾಂತರದ ಮೊದಲ ಪ್ರತಿಯಿಂದಲೇ ಬಳಸಲಾಗಿತ್ತೆಂಬುದು ಕೆಲವು ವಿದ್ವಾಂಸರ ಅಂಬೋಣ. ವಾಸ್ತವಾಂಶಗಳಾದರೋ ತದ್ವಿರುದ್ಧವಾಗಿವೆ.
ಇಲ್ಲಿ ತೋರಿಸಲಾಗಿರುವ ಸುರುಳಿಗಳ ಅವಶೇಷಗಳು ಕ್ರಿ.ಪೂ. 1ನೇ ಶತಮಾನದ ಗ್ರೀಕ್ ಸೆಪ್ಟ್ಯುಅಜಿಂಟ್‌ನ ಭಾಗಗಳಾಗಿವೆ. ಈ ಗ್ರೀಕ್ ಗ್ರಂಥಪಾಠದಲ್ಲಿ ಯೆಹೋವನ ಹೆಸರನ್ನು ಚತುರಕ್ಷರಿ ಅಂದರೆ ನಾಲ್ಕು ಹೀಬ್ರು ಅಕ್ಷರಗಳಲ್ಲಿ (יהוה) ಸ್ಪಷ್ಟವಾಗಿ ತೋರಿಸಲಾಗಿದೆ. ಪ್ರೊಫೆಸರ್ ಜಾರ್ಜ್ ಹಾವರ್ಡ್ ಬರೆದದ್ದು: “ಕ್ರೈಸ್ತಪೂರ್ವ ಕಾಲದ ಸೆಪ್ಟ್ಯುಅಜಿಂಟ್ ಗ್ರೀಕ್ ಬೈಬಲಿನ ಮೂರು ಪ್ರತಿಗಳು ನಮ್ಮ ಬಳಿ ಇವೆ. ಇವುಗಳಲ್ಲಿ ಎಲ್ಲಿಯೂ ಚತುರಕ್ಷರಿಯನ್ನು ಕಿರೀಯಾಸ್ ಎಂದು ಭಾಷಾಂತರಿಸದೇ ಹಾಗೆಯೇ ಇಡಲಾಗಿದೆ. ಹೊಸ ಒಡಂಬಡಿಕೆಯ ಕಾಲದಲ್ಲಿ, ಅದರ ಮುಂಚೆ ಮತ್ತು ನಂತರವೂ ಹೀಬ್ರು ಶಾಸ್ತ್ರಗ್ರಂಥವನ್ನು ಗ್ರೀಕ್ ಭಾಷೆಗೆ ಭಾಷಾಂತರಿಸುವಾಗ ದೈವಿಕ ಹೆಸರನ್ನು . . . ಹೀಬ್ರುವಿನಲ್ಲೇ ಬರೆಯುವ ಯೆಹೂದಿ ಪದ್ಧತಿಯಿತ್ತೆಂದು ನಾವೀಗ ಬಹುಮಟ್ಟಿಗೆ ಖಂಡಿತವಾಗಿಯೇ ಹೇಳಬಲ್ಲೆವು.”—ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂ.
ಯೇಸುವಿನ ಅಪೊಸ್ತಲರೂ ಶಿಷ್ಯರೂ ದೇವರ ಪ್ರೇರಣೆಯ ಮೇರೆಗೆ ಬರೆದ ಬರಹಗಳಲ್ಲಿ ದೈವಿಕ ಹೆಸರನ್ನು ಬಳಸಿದರೋ? ಪ್ರೊಫೆಸರ್ ಹಾವರ್ಡ್ ಹೇಳುವುದು: “ಹೊಸ ಒಡಂಬಡಿಕೆಯಲ್ಲಿ ವರ್ಣಿಸಲಾದ ಸಭೆ ಬಳಸಿ, ಉಲ್ಲೇಖಿಸುತ್ತಿದ್ದ ಸೆಪ್ಟ್ಯುಅಜಿಂಟ್‌ನಲ್ಲಿ ದೇವರ ಹೆಸರು ಹೀಬ್ರು ಭಾಷೆಯಲ್ಲಿದ್ದ ಕಾರಣ ಹೊಸ ಒಡಂಬಡಿಕೆಯನ್ನು ಬರೆದ ಲೇಖಕರು ಸೆಪ್ಟ್ಯುಅಜಿಂಟ್‌ನಿಂದ ವಚನಗಳನ್ನು ಉಲ್ಲೇಖಿಸಿದಾಗ ನಿಸ್ಸಂದೇಹವಾಗಿ ಚತುರಕ್ಷರಿಯನ್ನು ಸೇರಿಸಿದರು.”
ಹೀಗಿರುವುದರಿಂದ ಆದಿ ಕ್ರೈಸ್ತರು ಹೀಬ್ರು ಶಾಸ್ತ್ರಗ್ರಂಥದ ಗ್ರೀಕ್ ಭಾಷಾಂತರಗಳಲ್ಲೂ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಪ್ರತಿಗಳಲ್ಲೂ ದೇವರ ಹೆಸರನ್ನು ಓದಸಾಧ್ಯವಿತ್ತೆಂದು ಹೇಳಬಹುದು.
[ಕೃಪೆ]
ಎಲ್ಲ ಫೋಟೋಗಳು: Société Royale de Papyrologie du Caire
[ಪುಟ 17, 18ರಲ್ಲಿರುವ ಚಿತ್ರ]
ಮೃತ ಸಮುದ್ರದ ಸುರುಳಿಗಳಲ್ಲಿ ರುವ ಯೆಶಾಯನ ಪ್ರವಾದನೆಯ ಒಂದು ಭಾಗ. ದೇವರ ಹೆಸರಿಗೆ ಸುತ್ತುಗೆರೆ ಹಾಕಲಾಗಿದೆ
[ಕೃಪೆ]
Shrine of the Book, Photo © The Israel Museum, Jerusalem
[ಪುಟ 19ರಲ್ಲಿರುವ ಚಿತ್ರ]
ಚರ್ಚುಗಳು ಯೆಹೂದ್ಯರ ಸಂಪ್ರದಾಯದ ನಿಮಿತ್ತವೂ ಕೆಲವೊಮ್ಮೆ ಲಾಭಕ್ಕಾಗಿಯೂ ಬೈಬಲಿನಿಂದ ದೇವರ ಹೆಸರನ್ನು ತೆಗೆದಿವೆ
[ಪುಟ 20ರಲ್ಲಿರುವ ಚಿತ್ರ]
ದೇವರ ಹೆಸರನ್ನು ತಿಳಿಯಪಡಿಸುವುದರಲ್ಲಿ ಯೇಸು ಮಾದರಿಯನ್ನಿಟ್ಟನು