ನಿಮಗೆ ತಿಳಿದಿತ್ತೋ?
ಪುರಾತನ ಕಾಲದಲ್ಲಿ ಬೀಸುವ ಕಲ್ಲನ್ನು ಹೇಗೆ ಉಪಯೋಗಿಸುತ್ತಿದ್ದರು?
ಬೀಸುವ ಕಲ್ಲನ್ನು ಉಪಯೋಗಿಸಿ ಧಾನ್ಯಗಳನ್ನು ಪುಡಿ ಮಾಡಿ ಅದರಿಂದ ರೊಟ್ಟಿ ತಯಾರಿಸುತ್ತಿದ್ದರು. ಆಗಿನ ಸ್ತ್ರೀಯರಿಗೆ ಅಥವಾ ಆಳುಗಳಿಗೆ ಬೀಸುವ ಕಲ್ಲಿಂದ ಹಿಟ್ಟನ್ನು ಮಾಡುವುದು ದಿನನಿತ್ಯದ ಕೆಲಸವಾಗಿತ್ತು. ಆದ್ದರಿಂದ ಬೀಸುವ ಕಲ್ಲಿನ ಅರೆಯುವ ಶಬ್ದ ಆಗಿನ ಜನರಿಗೆ ಸಾಮಾನ್ಯವಾಗಿತ್ತು.—ವಿಮೋಚನಕಾಂಡ 11:5; ಯೆರೆಮಿಾಯ 25:10.
ಪುರಾತನ ಈಜಿಪ್ಟಿನ ಚಿತ್ರಗಳಲ್ಲಿ ಮತ್ತು ಕೆತ್ತನೆಗಳಲ್ಲಿ ಈ ಕೆಲಸವನ್ನು ಹೇಗೆ ಮಾಡಲಾಗುತ್ತಿತ್ತೆಂದು ತೋರಿಸಲಾಗಿದೆ. ಹಿಟ್ಟು ಮಾಡಲು ಎರಡು ಕಲ್ಲುಗಳನ್ನು ಉಪಯೋಗಿಸಲಾಗುತ್ತಿತ್ತು. ಧಾನ್ಯವನ್ನು ಉದ್ದನೆಯ ಕೆಳಕಲ್ಲಿನ ಮೇಲೆ ಇಡುತ್ತಿದ್ದರು. ಅದರ ಮೇಲ್ಮೈ ಸ್ವಲ್ಪ ಒಳಬಾಗಿರುತ್ತಿತ್ತು. ಅರೆಯುವವಳು ಆ ಕಲ್ಲಿನ ಎದುರಿಗೆ ಕುಳಿತು ಮೇಲಿನ ಕಲ್ಲನ್ನು ಮುಂದಕ್ಕೆ ಹಿಂದಕ್ಕೆ ಉಜ್ಜುತ್ತಿದ್ದಳು. ಆಗ ಆ ಧಾನ್ಯ ಪುಡಿಯಾಗುತ್ತಿತ್ತು. ಈ ಮೇಲಿನ ಕಲ್ಲು ಸುಮಾರು 2 ರಿಂದ 4 ಕೆ.ಜಿ. ತೂಕ ಇರುತ್ತಿತ್ತು ಎಂದು ಒಂದು ಮೂಲದಿಂದ ತಿಳಿದು ಬಂದಿದೆ. ಇದೇ ಕಲ್ಲನ್ನು ಆಯುಧದಂತೆ ಉಪಯೋಗಿಸಿದರೆ ಎದುರಾಳಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.—ನ್ಯಾಯಸ್ಥಾಪಕರು 9:50-54.
ಧಾನ್ಯಗಳನ್ನು ಈ ರೀತಿಯಲ್ಲಿ ಪುಡಿ ಅಥವಾ ಹಿಟ್ಟು ಮಾಡುವುದು ಕುಟುಂಬದ ಜೀವನೋಪಾಯಕ್ಕೆ ಪ್ರಾಮುಖ್ಯವಾದ ವಿಷಯವಾಗಿತ್ತು. ಆದ್ದರಿಂದಲೇ ಬೈಬಲ್‍ನಲ್ಲಿ ಈ ಬೀಸುವ ಕಲ್ಲನ್ನು ಒತ್ತೆ ಇಡಬಾರದೆಂಬ ನಿಯಮ ಇದೆ. “ಬೀಸುವಕಲ್ಲನ್ನು ಪೂರ್ತಿಯಾಗಲಿ ಅರ್ಧವಾಗಲಿ ಒತ್ತೆತೆಗೆದುಕೊಳ್ಳಬಾರದು; ಅದು ಜೀವನಾಧಾರವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಾಗುವದು” ಎಂದು ಧರ್ಮೋಪದೇಶಕಾಂಡ 24:6 ತಿಳಿಸುತ್ತದೆ. ▪ (w15-E 07/01)
“ಎದೆಯ ಸ್ಥಾನದಲ್ಲಿರುವ” ಎಂಬ ಅಭಿವ್ಯಕ್ತಿಯ ಅರ್ಥವೇನು?
ಬೈಬಲಿನ ಯೋಹಾನ 1:18 ರ ಪಾದಟಿಪ್ಪಣಿಯಲ್ಲಿ ಯೇಸು ತನ್ನ ‘ತಂದೆಯ ಎದೆಯ ಸ್ಥಾನದಲ್ಲಿದ್ದಾನೆ’ ಎಂದು ಹೇಳಲಾಗಿದೆ. ಈ ಮಾತು ಯೇಸುವಿಗೆ ದೇವರೊಂದಿಗೆ ಇರುವ ಆಪ್ತ ಸಂಬಂಧ ಮತ್ತು ಪ್ರೀತಿಯನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ, ಇದು ಯೆಹೂದ್ಯರು ಊಟ ಮಾಡುವಾಗ ಅನುಸರಿಸುತ್ತಿದ್ದ ಪದ್ಧತಿಯನ್ನು ನೆನಪು ಹುಟ್ಟಿಸುತ್ತದೆ.
ಯೇಸುವಿನ ದಿನಗಳಲ್ಲಿ, ಯೆಹೂದ್ಯರ ಊಟದ ಮೇಜಿನ ಸುತ್ತಲೂ ದಿಂಬುಗಳಿರುತ್ತಿದ್ದವು. ಊಟಕ್ಕೆ ಕುಳಿತುಕೊಳ್ಳುವವರು ಎಡಗೈಯನ್ನು ದಿಂಬಿಗೆ ಊರಿ ಎಡಬದಿಗೆ ಒರಗಿಕೊಳ್ಳುತ್ತಿದ್ದರು. ಅವರ ತಲೆ ಮೇಜಿನ ಕಡೆಗಿದ್ದು ಕಾಲನ್ನು ಹಿಂದಕ್ಕೆ ಚಾಚಿಕೊಳ್ಳುತ್ತಿದ್ದರು. ಈ ರೀತಿ ಕುಳಿತುಕೊಳ್ಳುವುದರಿಂದ ಬಲಗೈಯಿಂದ ಊಟಮಾಡಲು ಅಥವಾ ಏನನ್ನಾದರೂ ತೆಗೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಹೀಗೆ ತಮ್ಮ ಎಡಬದಿಗೆ ಒರಗುತ್ತಿದ್ದದರಿಂದ ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳಬೇಕಾಗುತ್ತಿತ್ತು. ಆಗ ‘ಒಬ್ಬ ವ್ಯಕ್ತಿಯ ತಲೆ ಅವನ ಹಿಂದೆ ಕುಳಿತವನ ಎದೆಯ ಹತ್ತಿರಕ್ಕೆ ಬರುತ್ತಿತ್ತು. ಆದ್ದರಿಂದಲೇ ಅವನನ್ನು ಹಿಂದೆ ಕುಳಿತವನ ಎದೆಯ ಸ್ಥಾನದಲ್ಲಿರುವವನು ಎನ್ನಲಾಗುತ್ತದೆ’ ಎಂದು ಒಂದು ಮೂಲ ತಿಳಿಸುತ್ತದೆ.
ಕುಟುಂಬದ ಯಜಮಾನನ ಅಥವಾ ಊಟಕ್ಕೆ ಕರೆದವನ ಎದೆಯ ಸ್ಥಾನದಲ್ಲಿ ಅಂದರೆ ಪಕ್ಕದಲ್ಲಿ ಕುಳಿತುಕೊಳ್ಳುವುದನ್ನು ಗೌರವವೆಂದು ಅಥವಾ ಸುಯೋಗವೆಂದು ಭಾವಿಸಲಾಗುತ್ತಿತ್ತು. ಯೇಸುವಿನ ಕೊನೆಯ ಪಸ್ಕದೂಟದ ಸಮಯದಲ್ಲಿ ‘ಯೇಸುವಿನ ಪ್ರಿಯ ಶಿಷ್ಯ’ ಯೋಹಾನನು ಅವನ ಪಕ್ಕ ಕುಳಿತಿದ್ದನು. ಅವನು ಪ್ರಶ್ನೆ ಕೇಳಲು ‘ಯೇಸುವಿನ ಎದೆಗೆ ಒರಗಿದನು’ ಎನ್ನುತ್ತದೆ ಬೈಬಲ್.—ಯೋಹಾನ 13: