ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ

ಆಸಕ್ತಿಕರವಾಗಿ ಓದಲು ಇನ್ನೇನು ಮಾಡಬೇಕು?

ಆಸಕ್ತಿಕರವಾಗಿ ಓದಲು ಇನ್ನೇನು ಮಾಡಬೇಕು?

ಬೈಬಲ್‌ ಓದುವುದೆಂದರೆ ನಿಮಗೆ ಖುಷಿಯಾಗುತ್ತಾ? ಅಥವಾ ಬೋರಾಗುತ್ತಾ? ಈ ಪ್ರಶ್ನೆಗೆ ಉತ್ತರ, ನೀವು ಹೇಗೆ ಓದುತ್ತೀರಾ ಅನ್ನುವುದರ ಮೇಲೆ ಹೊಂದಿಕೊಂಡಿದೆ. ಆಸಕ್ತಿಕರವಾಗಿ ಮತ್ತು ಖುಷಿ ಖುಷಿಯಾಗಿ ಬೈಬಲ್‌ ಓದಲು ನೀವೇನು ಮಾಡಬಹುದು ಅಂತ ನೋಡೋಣ ಬನ್ನಿ.

ಸರಿಯಾದ ಮತ್ತು ಸರಳ ಭಾಷಾಂತರವನ್ನು ಉಪಯೋಗಿಸಿ. ಹಳೆಯ ಭಾಷೆಯ ಅಥವಾ ಕಷ್ಟದ ಪದಗಳಿರುವ ಬೈಬಲನ್ನು ಓದಿದರೆ ಸಾಕಾಗಿ ಹೋಗುತ್ತದೆ. ಆದ್ದರಿಂದ, ನಿಮಗೆ ಸುಲಭವಾಗಿ ಅರ್ಥವಾಗುವ, ನಿಮ್ಮ ಹೃದಯ ಮುಟ್ಟುವ ಭಾಷಾಂತರವನ್ನು ಹುಡುಕಿ. ಆದರೆ, ಅದು ನಿಖರವಾದ ಅಥವಾ ಸರಿಯಾದ ಭಾಷಾಂತರವಾಗಿರಬೇಕು. *

ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ. ಬೈಬಲ್‌, ಮುದ್ರಿತ ರೂಪದಲ್ಲಿ ಮಾತ್ರವೇ ಅಲ್ಲ ಎಲೆಕ್ಟ್ರಾನಿಕ್‌ ರೂಪದಲ್ಲೂ ಲಭ್ಯವಿದೆ. ಕೆಲವು ಬೈಬಲ್‌ಗಳನ್ನು ಇಂಟರ್‌ನೆಟ್‌ನಲ್ಲಿ ಓದಬಹುದು ಅಥವಾ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಮೊಬೈಲ್‌, ಟ್ಯಾಬ್‌ ಮತ್ತು ಕಂಪ್ಯೂಟರ್‌ನಲ್ಲಿ ಓದಬಹುದು. ಎಲೆಕ್ಟ್ರಾನಿಕ್‌ ರೂಪದ ಕೆಲವು ಬೈಬಲ್‌ಗಳಲ್ಲಿ ನೀವು ಓದುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಬೇರೆ ವಚನಗಳನ್ನು ಕ್ಷಣ ಮಾತ್ರದಲ್ಲೇ ಹುಡುಕುವ ಮತ್ತು ಬೇರೆ ಬೇರೆ ಭಾಷಾಂತರಗಳನ್ನು ಹೋಲಿಸಿ ನೋಡುವ ವೈಶಿಷ್ಟ್ಯಗಳು ಸಹ ಇರುತ್ತವೆ. ಕೆಲವು ಭಾಷೆಗಳಲ್ಲಿ ರೆಕಾರ್ಡ್‌ ಮಾಡಲಾಗಿರುವ ಬೈಬಲ್‌ಗಳೂ ಇವೆ. ಹಾಗಾಗಿ ನೀವು ಓದುವ ಬದಲು ಕೇಳಿಸಿಕೊಳ್ಳಲೂಬಹುದು. ತುಂಬ ಜನ, ಪ್ರಯಾಣಿಸುವಾಗ ಅಥವಾ ಬೇರೆ ಕೆಲಸಗಳನ್ನು ಮಾಡುವಾಗ ಕೇಳಿಸಿಕೊಳ್ಳುತ್ತಾರೆ. ಬೈಬಲ್‌ ಓದಲು ಈ ವಿಧಾನಗಳಲ್ಲಿ ನಿಮಗೆ ಸೂಕ್ತವಾದ ಯಾವುದಾದರೂ ಒಂದು ವಿಧಾನವನ್ನು ಆರಿಸಿಕೊಳ್ಳಿ.

ಅಧ್ಯಯನ ಸಹಾಯಕಗಳನ್ನು ಉಪಯೋಗಿಸಿ. ಬೈಬಲ್‌ ಓದುವುದರಿಂದ ಹೆಚ್ಚು ಪ್ರಯೋಜನ ಪಡೆಯಲು ಬೈಬಲ್‌ ಅಧ್ಯಯನ ಸಹಾಯಕಗಳು ನಿಮಗೆ ಸಹಾಯ ಮಾಡುತ್ತವೆ. ಯಾವ ಸ್ಥಳದಲ್ಲಿ ಏನಾಯಿತು ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇವುಗಳಲ್ಲಿ ಬೈಬಲಿನಲ್ಲಿ ತಿಳಿಸಿರುವ ದೇಶಗಳ ಭೂಪಟಗಳಿವೆ. ಈ ಪತ್ರಿಕೆಯಲ್ಲಿರುವ ಲೇಖನಗಳು ಮತ್ತು jw.org ವೆಬ್‌ಸೈಟ್‌ನಲ್ಲಿರುವ ಇತರ ಲೇಖನಗಳು ಬೈಬಲಿನ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ವಿಭಿನ್ನ ವಿಧಾನಗಳನ್ನು ಬಳಸಿ. ಬೈಬಲಿನ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದುವುದು ಅಸಾಧ್ಯ ಎಂದು ನಿಮಗನಿಸಿದರೆ ಬೇರೆ ವಿಧಾನ ಬಳಸಿ. ಉದಾಹರಣೆಗೆ, ನಿಮಗಿಷ್ಟವಾದ ಬೈಬಲಿನ ಭಾಗವನ್ನು ಆರಿಸಿ ಓದಿ. ಬೈಬಲಿನಲ್ಲಿ ತಿಳಿಸಿರುವ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ತಿಳಿಯಲು ಇಷ್ಟವಿದ್ದರೆ, ನೀವು ಅವರ ವಿವರಗಳಿರುವ ಭಾಗಗಳನ್ನು ಓದಿ. ಒಂದರ ನಂತರ ಒಂದು ವಿಷಯವನ್ನು ಓದಬಹುದು. ಇದನ್ನು ಹೇಗೆ ಮಾಡಬಹುದು ಎಂದು “ ಬೈಬಲ್‌ ಬಗ್ಗೆ ಹೆಚ್ಚನ್ನು ತಿಳಿಯಲು ಅದರಲ್ಲಿನ ಜನರ ಬಗ್ಗೆ ತಿಳಿಯಿರಿ” ಎಂಬ ಚೌಕದಲ್ಲಿ ಕೊಡಲಾಗಿದೆ. ಅಥವಾ ಘಟನೆಗಳು ನಡೆದ ಕ್ರಮದಲ್ಲಿ ಓದಬಹುದು. ಇವುಗಳಲ್ಲಿ ಒಂದನ್ನು ನೀವು ಪ್ರಯತ್ನಿಸಿ ನೋಡಬಹುದಲ್ಲವೇ?

^ ಪ್ಯಾರ. 4 ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ ಎಂಬ ಬೈಬಲ್‌ ನಿಖರವಾದ, ಭರವಸಾರ್ಹ ಮತ್ತು ಸರಳ ಭಾಷಾಂತರವಾಗಿದೆ ಎಂದು ತುಂಬ ಜನ ಕಂಡುಕೊಂಡಿದ್ದಾರೆ. ಈ ಬೈಬಲನ್ನು ಯೆಹೋವನ ಸಾಕ್ಷಿಗಳು ಭಾಷಾಂತರಿಸಿದ್ದು, ಇದೀಗ 130ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. jw.org ವೆಬ್‌ಸೈಟಿಂದ ಅಥವಾ JW ಲೈಬ್ರರಿ ಆ್ಯಪ್‌ನಿಂದ ನೀವು ಈ ಬೈಬಲನ್ನು ಡೌನ್‌ಲೋಡ್‌ಮಾಡಿಕೊಳ್ಳಬಹುದು. ನೀವು ಇಷ್ಟಪಟ್ಟರೆ, ಯೆಹೋವನ ಸಾಕ್ಷಿಗಳಲ್ಲೊಬ್ಬರು ನಿಮ್ಮ ಮನೆಗೆ ಬಂದು ಈ ಭಾಷಾಂತರದ ಒಂದು ಪ್ರತಿಯನ್ನು ಉಚಿತವಾಗಿ ಕೊಡುವರು.