ನಿಮ್ಮ ಮಾಹಿತಿಗಾಗಿ
ವಿಶೇಷ ಕೂಟಗಳು
ರಾಜ್ಯ ಪ್ರಚಾರಕರ ಶಾಲೆ ಈ ಶಾಲೆಗೆ ಅರ್ಜಿಹಾಕಲು ಬಯಸುವವರಿಗಾಗಿ ಭಾನುವಾರ ಮಧ್ಯಾಹ್ನ ಕೂಟ ನಡೆಸಲಾಗುತ್ತದೆ. 23 ರಿಂದ 65 ವಯಸ್ಸಿನೊಳಗಿನ ಪಯನೀಯರರು ಸೇವೆಯನ್ನು ಹೆಚ್ಚಿಸಲು ಬಯಸುವಲ್ಲಿ ಈ ಕೂಟಕ್ಕೆ ಹಾಜರಾಗಬಹುದು. ಕೂಟ ನಡೆಯುವ ಸ್ಥಳ ಹಾಗೂ ಸಮಯವನ್ನು ತಿಳಿಸಲಾಗುವುದು.
‘ಧೈರ್ಯವಾಗಿರಿ’! ಯೆಹೋವನ ಸಾಕ್ಷಿಗಳ ಅಧಿವೇಶನ 2018 ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಡಿಸಲಾಗಿದೆನಿಮ್ಮ ಮಾಹಿತಿಗಾಗಿ
ಸಹಾಯಕರು: ನಿಮಗೆ ನೆರವು ನೀಡಲೆಂದೇ ಸಹಾಯಕರನ್ನು ನೇಮಿಸಲಾಗಿದೆ. ವಾಹನ ನಿಲುಗಡೆ, ಜನರ ಗುಂಪು ನಿಯಂತ್ರಣ, ಸೀಟು ಹಿಡಿಯುವುದು ಮುಂತಾದ ವಿಷಯಗಳ ಕುರಿತು ಅವರು ಕೊಡುವ ಮಾರ್ಗದರ್ಶನವನ್ನು ದಯವಿಟ್ಟು ಪಾಲಿಸಿ, ಅವರಿಗೆ ಪೂರ್ಣ ಸಹಕಾರ ನೀಡಿ.
ಕಾಣಿಕೆ: ಅಧಿವೇಶನದ ಕಾರ್ಯಕ್ರಮವನ್ನು ಎಲ್ಲರೂ ಆನಂದಿಸಿ ಯೆಹೋವ ದೇವರಿಗೆ ಆಪ್ತರಾಗಬೇಕೆನ್ನುವ ಸಲುವಾಗಿ ಸೀಟಿನ ವ್ಯವಸ್ಥೆ, ಧ್ವನಿವರ್ಧಕ ಮತ್ತು ಇತರ ಸೌಲಭ್ಯಗಳನ್ನು ಮಾಡಲಾಗಿದೆ. ಇದಕ್ಕಾಗಿ ಖರ್ಚು ತಗಲುತ್ತದೆ. ನೀವು ಮನಸಾರೆ ಕೊಡುವ ಕಾಣಿಕೆಗಳು ಈ ಎಲ್ಲಾ ಖರ್ಚನ್ನು ನೋಡಿಕೊಳ್ಳಲು ನೆರವಾಗುವುದಲ್ಲದೆ ಲೋಕವ್ಯಾಪಕ ಕೆಲಸವನ್ನೂ ಬೆಂಬಲಿಸುತ್ತವೆ. ನಿಮ್ಮ ಅನುಕೂಲಕ್ಕಾಗಿ ಅಲ್ಲಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದೆ. ನೀವು ದೇವರ ರಾಜ್ಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಮನಸಾರೆ ಕೊಡುತ್ತಿರುವ ಬೆಂಬಲಕ್ಕಾಗಿ ಆಡಳಿತ ಮಂಡಲಿ ನಿಮಗೆ ಧನ್ಯವಾದ ಹೇಳುತ್ತದೆ. ನಿಮ್ಮೆಲ್ಲರ ಕಾಣಿಕೆಗಳನ್ನು ತುಂಬ ಅಮೂಲ್ಯವಾಗಿ ಎಣಿಸುತ್ತದೆ.
ಪ್ರಥಮ ಚಿಕಿತ್ಸೆ: ಇದು ತುರ್ತು ಪರಿಸ್ಥಿತಿಗಳಿಗಾಗಿ ಮಾತ್ರ ಎನ್ನುವುದನ್ನು ದಯವಿಟ್ಟು ನೆನಪಿನಲ್ಲಿಡಿ.
ಲಾಸ್ಟ್ ಆ್ಯಂಡ್ ಫೌಂಡ್: ಬೇರೆಯವರ ವಸ್ತು ಸಿಕ್ಕಿದರೆ ಲಾಸ್ಟ್ ಆ್ಯಂಡ್ ಫೌ೦ಡ್ ಇಲಾಖೆಗೆ ಕೊಡಿ. ನಿಮ್ಮ ವಸ್ತು ಕಳೆದು ಹೋಗಿರುವಲ್ಲಿ ಈ ಇಲಾಖೆಗೆ ಹೋಗಿ ಕೇಳಿನೋಡಿ. ಹೆತ್ತವರ ಕೈತಪ್ಪಿದ ಮಕ್ಕಳನ್ನು ಈ ಇಲಾಖೆಗೆ ಒಪ್ಪಿಸಿ. ಆದರೆ ಈ ಇಲಾಖೆಯನ್ನು ಮಕ್ಕಳನ್ನು ನೋಡಿಕೊಳ್ಳುವ ನರ್ಸರಿ ಎಂಬಂತೆ ವೀಕ್ಷಿಸಬಾರದು. ನಿಮ್ಮ ಮಕ್ಕಳು ನಿಮ್ಮೊಟ್ಟಿಗೇ ಇರುವಂತೆ ದಯವಿಟ್ಟು ನೋಡಿಕೊಳ್ಳಿ.
ಸೀಟಿನ ವ್ಯವಸ್ಥೆ: ದಯವಿಟ್ಟು ಇತರರಿಗೆ ಪರಿಗಣನೆ ತೋರಿಸಿ. ನಿಮ್ಮ ಕಾರ್ನಲ್ಲಿ ಪ್ರಯಾಣಿಸುತ್ತಿರುವವರಿಗೆ, ನಿಮ್ಮೊಟ್ಟಿಗೆ ವಾಸಿಸುತ್ತಿರುವವರಿಗೆ, ಈಗ ನೀವು ಬೈಬಲ್ ಅಧ್ಯಯನ ಮಾಡುತ್ತಿರುವವರಿಗೆ ಮಾತ್ರ ಸೀಟುಗಳನ್ನು ಕಾದಿರಿಸಬೇಕು. ನಿಮಗೆ ಬೇಕಾದಷ್ಟು ಸೀಟುಗಳನ್ನು ಕಾದಿರಿಸಿದ ಮೇಲೆ ದಯವಿಟ್ಟು ಬೇರೆ ಸೀಟುಗಳನ್ನು ಕಾದಿರಿಸಬೇಡಿ.
ಸ್ವಯಂಸೇವೆ: ಅಧಿವೇಶನಕ್ಕೆ ಸಂಬಂಧಪಟ್ಟ ಕೆಲಸಕ್ಕೆ ಸಹಾಯಮಾಡಲು ನೀವು ಇಷ್ಟಪಡುವುದಾದರೆ ಮಾಹಿತಿ ಮತ್ತು ಸ್ವಯಂಸೇವೆಯ ಇಲಾಖೆಯನ್ನು ಸಂಪರ್ಕಿಸಿ.
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಾಡು ಮಾಡಲಾಗಿದೆ