ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3

ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?

ಏದೆನ್‌ ಉದ್ಯಾನದಲ್ಲಿ ಜೀವನ ಹೇಗಿತ್ತು?

ಯೆಹೋವನು ಆದಾಮ ಹವ್ವರಿಗೆ ಎಲ್ಲವನ್ನು ಕೊಟ್ಟನು. ಆದಿಕಾಂಡ 1:28

ಯೆಹೋವನು ಮೊದಲ ಸ್ತ್ರೀಯಾದ ಹವ್ವಳನ್ನು ಉಂಟುಮಾಡಿದನು. ಅವಳನ್ನು ಆದಾಮನಿಗೆ ಹೆಂಡತಿಯಾಗಿ ಕೊಟ್ಟನು.—ಆದಿಕಾಂಡ 2:21, 22.

ಯೆಹೋವನು ಸೃಷ್ಟಿಸಿದಾಗ ಆದಾಮ ಹವ್ವ ಶುದ್ಧ ಮನಸ್ಸು ಮತ್ತು ದೋಷವಿಲ್ಲದ ಪರಿಪೂರ್ಣ ದೇಹವನ್ನು ಹೊಂದಿದ್ದರು.

ಏದೆನ್‌ ಉದ್ಯಾನ ಅವರ ವಾಸಸ್ಥಳವಾಗಿತ್ತು. ಹರಿಯುವ ನದಿ, ಹಣ್ಣಿನ ಮರಗಳು ಮತ್ತು ಪ್ರಾಣಿಪಕ್ಷಿಗಳಿಂದ ತುಂಬಿದ ಅತೀ ಸುಂದರವಾದ ಉದ್ಯಾನ ಅದಾಗಿತ್ತು.

ಯೆಹೋವನು ಅವರೊಂದಿಗೆ ಮಾತಾಡುತ್ತಿದ್ದನು, ಮಾರ್ಗದರ್ಶನ ನೀಡುತ್ತಿದ್ದನು. ಅವರು ಆತನ ಮಾತನ್ನು ಕೇಳಿ ನಡೆದರೆ ಆ ಸುಂದರ ಪರದೈಸ್‌ ಉದ್ಯಾನದಲ್ಲಿ ಸದಾಕಾಲ ಜೀವಿಸಸಾಧ್ಯವಿತ್ತು.

ಆದರೆ ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರದೆಂದು ಹೇಳಿದನು. ಆದಿಕಾಂಡ 2:16, 17

ಒಬ್ಬ ದೇವದೂತನು ಯೆಹೋವನ ವಿರುದ್ಧ ತಿರುಗಿಬಿದ್ದನು. ಅವನೇ ಪಿಶಾಚನಾದ ಸೈತಾನ.

ಯೆಹೋವನು ಆದಾಮ ಹವ್ವಳಿಗೆ ಒಂದು ಮರವನ್ನು ತೋರಿಸಿ, ಅದರ ಹಣ್ಣನ್ನು ತಿನ್ನಬಾರದೆಂದು, ತಿಂದರೆ ಸಾಯುವರೆಂದು ಹೇಳಿದನು.

ಆದಾಮ ಹವ್ವ ಯೆಹೋವನ ಮಾತಿಗೆ ವಿಧೇಯತೆ ತೋರಿಸುವುದು ಸೈತಾನನಿಗೆ ಇಷ್ಟವಿರಲಿಲ್ಲ. ಹಾಗಾಗಿ, ಹಾವಿನ ಮೂಲಕ ಅವನು ಹವ್ವಳಿಗೆ ಸುಳ್ಳು ಹೇಳಿದನು. ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿದ್ದ ಹಣ್ಣನ್ನು ತಿನ್ನುವಂತೆಯೂ ತಿಂದರೆ ಸಾಯುವುದಿಲ್ಲ ಬದಲಾಗಿ ದೇವರಂತೆ ಆಗುವಳೆಂದೂ ಹೇಳಿದನು.—ಆದಿಕಾಂಡ 3:1-5.