ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 10

ದೇವರ ಮಾತನ್ನು ಆಲಿಸಿದರೆ ಯಾವೆಲ್ಲ ಆಶೀರ್ವಾದ ಸಿಗುತ್ತವೆ?

ದೇವರ ಮಾತನ್ನು ಆಲಿಸಿದರೆ ಯಾವೆಲ್ಲ ಆಶೀರ್ವಾದ ಸಿಗುತ್ತವೆ?

ಸತ್ತವರಲ್ಲಿ ಅನೇಕರು ಪುನರುತ್ಥಾನಗೊಂಡು ಇದೇ ಭೂಮಿಯಲ್ಲಿ ಬಾಳುವರು. ಅ. ಕಾರ್ಯಗಳು 24:15

ಏನೆಲ್ಲ ಆಶೀರ್ವಾದಗಳು ಸಿಗಬಹುದು ಎಂದು ಸ್ವಲ್ಪ ಯೋಚಿಸಿ. ಕಾಯಿಲೆ ಎನ್ನುವುದೇ ಇರುವುದಿಲ್ಲ; ಪರಿಪೂರ್ಣ ಆರೋಗ್ಯವಿರುವುದು. ನಿಮ್ಮ ಸುತ್ತಲೂ ಒಳ್ಳೇ ಜನರೇ ಇರುವರು. ಯಾರೂ ಮೋಸಮಾಡರು.

ದುಃಖ, ವೇದನೆ, ಕಣ್ಣೀರು ಯಾವುದೂ ಇರುವುದಿಲ್ಲ. ಮುದಿತನ ಮರಣದ ಮಾತೇ ಇರುವುದಿಲ್ಲ.

ಬಂಧುಮಿತ್ರರೊಂದಿಗೆ ಉಲ್ಲಾಸದಿಂದ ಇರುವಿರಿ. ಪರದೈಸಿನಲ್ಲಿ ಜೀವನ ಸುಖಮಯವಾಗಿರುವುದು!

ಅಲ್ಲಿ ಯಾರೂ ಭಯಪಡಬೇಕಾಗಿಲ್ಲ. ಎಲ್ಲಿ ನೋಡಿದರಲ್ಲಿ ಸಂತೋಷ ತುಂಬಿತುಳುಕುವುದು.

ದೇವರ ರಾಜ್ಯ ಎಲ್ಲ ರೀತಿಯ ಕಷ್ಟ ತೊಂದರೆಗಳನ್ನು ಕೊನೆಗಾಣಿಸುವುದು. ಪ್ರಕಟನೆ 21:3, 4