ಭಾಗ 11
ಯೆಹೋವನು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೋ?
ದೇವರು ಖಂಡಿತ ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆ. 1 ಪೇತ್ರ 3:12
ಯೆಹೋವನು ‘ಪ್ರಾರ್ಥನೆಯನ್ನು ಕೇಳುವಾತನು’ ಎಂದು ಬೈಬಲ್ ಹೇಳುತ್ತದೆ. (ಕೀರ್ತನೆ 65:2) ಆತನೊಂದಿಗೆ ಮಾತಾಡುವಾಗ ನಾವು ನಮ್ಮ ಮನದಾಳದಿಂದ ಮಾತಾಡಬೇಕೆಂದು ಆತನು ಬಯಸುತ್ತಾನೆ.
ನಾವು ಪ್ರಾರ್ಥನೆಯನ್ನು ಯೆಹೋವನೊಬ್ಬನಿಗೇ ಸಲ್ಲಿಸಬೇಕು.
1 ಯೋಹಾನ 5:14
ನಾವು ಅನೇಕ ವಿಷಯಗಳಿಗಾಗಿ ಪ್ರಾರ್ಥಿಸಬಹುದು.ದೇವರ ಚಿತ್ತ ಸ್ವರ್ಗದಲ್ಲೂ ಭೂಮಿಯಲ್ಲೂ ನೆರವೇರಲಿ ಎಂದು ಪ್ರಾರ್ಥಿಸಿ.
ಆಹಾರ, ಕೆಲಸ, ವಸತಿ, ಬಟ್ಟೆಬರೆ, ಆರೋಗ್ಯ ಇವುಗಳಿಗಾಗಿಯೂ ನೀವು ಪ್ರಾರ್ಥಿಸಬಹುದು. ಒಳ್ಳೆಯವರಾಗಿರಲು ಸಹಾಯ ಮಾಡುವಂತೆಯೂ ಯೆಹೋವನನ್ನು ಪ್ರಾರ್ಥಿಸಿ.
ನಿಮ್ಮ ಪ್ರಾರ್ಥನೆಯನ್ನು ಯೇಸುವಿನ ಮೂಲಕ ಸಲ್ಲಿಸಿ. ಹೀಗೆ, ಯೇಸು ನಿಮಗಾಗಿ ಮಾಡಿದ ತ್ಯಾಗಕ್ಕಾಗಿ ಕೃತಜ್ಞರಾಗಿದ್ದೀರಿ ಎಂದು ತೋರಿಸುತ್ತೀರಿ.