ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 1ರಲ್ಲಿ ನೀವೇನು ಕಲಿತ್ರಿ?

ಭಾಗ 1ರಲ್ಲಿ ನೀವೇನು ಕಲಿತ್ರಿ?

ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:

  1. ಭವಿಷ್ಯದ ಬಗ್ಗೆ ಬೈಬಲ್‌ ಹೇಳುವ ಯಾವ ವಿಷಯ ನಿಮಗೆ ತುಂಬ ಇಷ್ಟ?

    (ಪಾಠ 02 ನೋಡಿ.)

  2. ಬೈಬಲ್‌ ದೇವರ ವಾಕ್ಯ ಅಂತ ನೀವು ಯಾಕೆ ನಂಬುತ್ತೀರಾ?

    (ಪಾಠ 03 ಮತ್ತು 05 ನೋಡಿ.)

  3. ಯೆಹೋವನ ಹೆಸರನ್ನ ಕರೆಯೋದು ಯಾಕಷ್ಟು ಪ್ರಾಮುಖ್ಯ?

    (ಪಾಠ 04 ನೋಡಿ.)

  4. ದೇವರು “ಜೀವದ ಮೂಲ” ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 36:9) ನೀವದನ್ನ ನಂಬುತ್ತೀರಾ?

    (ಪಾಠ 06 ನೋಡಿ.)

  5. ಜ್ಞಾನೋಕ್ತಿ 3:32 ಓದಿ.

    • ಯೆಹೋವ ದೇವರ ತರ ಇರೋ ಆಪ್ತ ಸ್ನೇಹಿತ ಇನ್ಯಾರು ಇಲ್ಲ ಯಾಕೆ?

    • ತನ್ನ ಸ್ನೇಹಿತರು ಏನು ಮಾಡಬೇಕು ಅಂತ ಯೆಹೋವನು ಇಷ್ಟಪಡ್ತಾನೆ? ಹಾಗೆ ಮಾಡೋಕೆ ನಮ್ಮಿಂದ ಆಗುತ್ತಾ?

  6. ಕೀರ್ತನೆ 62:8 ಓದಿ.

    • ನೀವು ಯಾವೆಲ್ಲಾ ವಿಷಯಗಳಿಗಾಗಿ ಯೆಹೋವ ದೇವರಿಗೆ ಪ್ರಾರ್ಥಿಸಿದ್ದೀರಾ? ಇನ್ನೂ ಯಾವೆಲ್ಲಾ ವಿಷಯಗಳಿಗಾಗಿ ಪ್ರಾರ್ಥನೆ ಮಾಡಬಹುದು?

    • ಯೆಹೋವನು ನಮ್ಮ ಪ್ರಾರ್ಥನೆಗೆ ಹೇಗೆಲ್ಲಾ ಉತ್ತರ ಕೊಡುತ್ತಾನೆ?

      (ಪಾಠ 09 ನೋಡಿ.)

  7. ಇಬ್ರಿಯ 10:​24, 25 ಓದಿ.

    • ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋದರೆ ನಿಮಗೆ ಯಾವೆಲ್ಲಾ ಪ್ರಯೋಜನವಿದೆ?

    • ಕೂಟಗಳಿಗೆ ಹೋಗೋಕೆ ನೀವು ಮಾಡುವ ಪ್ರಯತ್ನ ಸಾರ್ಥಕ ಅಂತ ನಿಮಗನಿಸುತ್ತಾ?

      (ಪಾಠ 10 ನೋಡಿ.)

  8. ಬೈಬಲನ್ನ ಪ್ರತಿದಿನ ತಪ್ಪದೇ ಓದೋದು ಯಾಕೆ ಒಳ್ಳೇದು? ಪ್ರತಿದಿನ ಬೈಬಲ್‌ ಓದೋಕೆ ನೀವು ಹೇಗೆ ಪ್ಲಾನ್‌ ಮಾಡಿದ್ದೀರಾ?

    (ಪಾಠ 11 ನೋಡಿ.)

  9. ಇಲ್ಲಿಯವರೆಗೆ ಮಾಡಿದ ಬೈಬಲ್‌ ಸ್ಟಡಿಯಲ್ಲಿ ನಿಮಗೆ ಯಾವುದು ತುಂಬ ಇಷ್ಟ ಆಯ್ತು?

  10. ಬೈಬಲ್‌ ಸ್ಟಡಿ ಶುರು ಆದಾಗ ಯಾವುದಾದ್ರು ಸಮಸ್ಯೆ ಬಂತಾ? ಅದು ಯಾವುದು? ಬೈಬಲ್‌ ಸ್ಟಡಿಯನ್ನ ನಿಲ್ಲಿಸದೇ ಇರೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

    (ಪಾಠ 12 ನೋಡಿ.)