ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 16

ಯೇಸು ಭೂಮಿಯಲ್ಲಿದ್ದಾಗ ಏನು ಮಾಡಿದನು?

ಯೇಸು ಭೂಮಿಯಲ್ಲಿದ್ದಾಗ ಏನು ಮಾಡಿದನು?

ಯೇಸು ಅಂತ ಹೇಳಿದ ತಕ್ಷಣ ಕೆಲವರಿಗೆ, ಒಂದು ಪುಟ್ಟ ಮಗು ನೆನಪಾಗುತ್ತೆ, ಇನ್ನೂ ಕೆಲವರಿಗೆ ಕಂಬದ ಮೇಲೆ ಸಾಯುತ್ತಿರುವ ವ್ಯಕ್ತಿ ಅಥವಾ ಒಬ್ಬ ಒಳ್ಳೇ ಪ್ರವಾದಿ ನೆನಪಾಗುತ್ತೆ. ಆದರೆ ಯೇಸು ಭೂಮಿಯಲ್ಲಿದ್ದಾಗ ಏನೆಲ್ಲಾ ಮಾಡಿದನು ಅಂತ ಬೈಬಲಿನಿಂದ ತಿಳಿದುಕೊಂಡರೆ, ಆತನು ನಿಜವಾಗಿಯೂ ಯಾರು ಅಂತ ನಮಗೆ ಗೊತ್ತಾಗುತ್ತೆ. ಈ ಪಾಠದಲ್ಲಿ, ಯೇಸು ಕಲಿಸಿದ ಕೆಲವು ಪ್ರಾಮುಖ್ಯ ವಿಷಯಗಳ ಬಗ್ಗೆ ಮತ್ತು ಅದರಿಂದ ನಮಗೇನು ಪ್ರಯೋಜನ ಇದೆ ಅನ್ನೋದ್ರ ಬಗ್ಗೆ ಕಲಿಯಲಿದ್ದೇವೆ.

1. ಯೇಸು ಮುಖ್ಯವಾಗಿ ಯಾವ ಕೆಲಸ ಮಾಡುತ್ತಿದ್ದನು?

ಯೇಸು ಮುಖ್ಯವಾಗಿ “ದೇವರ ಆಳ್ವಿಕೆಯ ಸಿಹಿಸುದ್ದಿ” ಸಾರಿದನು. (ಲೂಕ 4:43 ಓದಿ.) ದೇವರು ಒಂದು ಆಳ್ವಿಕೆಯನ್ನ ತರುತ್ತಾನೆ. ಆ ಆಳ್ವಿಕೆ ಅಥವಾ ಸರ್ಕಾರ ಎಲ್ಲಾ ಮಾನವರ ಸಮಸ್ಯೆಗಳನ್ನ ತೆಗೆದುಹಾಕುತ್ತೆ ಅನ್ನೋ ಸಿಹಿಸುದ್ದಿಯನ್ನ ಸಾರಿದನು. a ಮೂರುವರೆ ವರ್ಷ ಯೇಸು ಈ ಸಿಹಿಸುದ್ದಿಯನ್ನ ಎಲ್ಲರಿಗೂ ತುಂಬ ಉತ್ಸಾಹದಿಂದ ಸಾರಿದನು.—ಮತ್ತಾಯ 9:35.

2. ಯೇಸು ಯಾಕೆ ಅದ್ಭುತಗಳನ್ನ ಮಾಡಿದನು?

ದೇವರು, ‘ಯೇಸುವಿನ ಮೂಲಕ ಅನೇಕ ಅದ್ಭುತಗಳನ್ನ, ಆಶ್ಚರ್ಯ ಹುಟ್ಟಿಸೋ ವಿಷ್ಯಗಳನ್ನ’ ಮಾಡಿದನು ಅಂತ ಬೈಬಲ್‌ ಹೇಳುತ್ತೆ. (ಅಪೊಸ್ತಲರ ಕಾರ್ಯ 2:22) ಯೆಹೋವನು ಕೊಟ್ಟ ಶಕ್ತಿಯಿಂದ ಯೇಸು ಬಿರುಗಾಳಿಯನ್ನ ನಿಲ್ಲಿಸಿದನು, ಸಾವಿರಾರು ಜನರಿಗೆ ಊಟ ಕೊಟ್ಟನು, ಕಾಯಿಲೆ ಇರೋರನ್ನ ಗುಣಪಡಿಸಿದನು, ಸತ್ತವರಿಗೆ ಪುನಃ ಜೀವ ಕೊಟ್ಟನು. (ಮತ್ತಾಯ 8:23-27; 14:15-21; ಮಾರ್ಕ 6:56; ಲೂಕ 7:11-17) ಯೇಸುವನ್ನ ಕಳಿಸಿದ್ದು ದೇವರೇ ಅಂತ ಆತನು ಮಾಡಿದ ಅದ್ಭುತಗಳಿಂದ ಗೊತ್ತಾಗುತ್ತೆ. ನಮ್ಮ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುವ ಶಕ್ತಿ ಯೆಹೋವನಿಗೆ ಮಾತ್ರ ಇದೆ ಅಂತನೂ ಈ ಅದ್ಭುತಗಳಿಂದ ಗೊತ್ತಾಗುತ್ತೆ.

3. ಯೇಸುವಿನಿಂದ ನಾವೇನು ಕಲಿಯಬಹುದು?

ಯೇಸು ಪ್ರತಿಯೊಂದು ವಿಷಯದಲ್ಲೂ ಯೆಹೋವನ ಮಾತನ್ನ ಕೇಳಿದನು. (ಯೋಹಾನ 8:29 ಓದಿ.) ಎಷ್ಟೇ ವಿರೋಧಗಳಿದ್ದರೂ ಕೊನೇ ಉಸಿರಿರೋ ತನಕ ಯೆಹೋವ ದೇವರು ಬಯಸಿದ್ದನ್ನೇ ಮಾಡಿದನು. ಎಷ್ಟೇ ಕಷ್ಟ ಬಂದರೂ ನಾವು ಯೆಹೋವ ದೇವರ ಮಾತಿನಂತೆ ನಡೆಯಕ್ಕಾಗುತ್ತೆ ಅಂತ ಯೇಸು ತೋರಿಸಿಕೊಟ್ಟನು. ಹೀಗೆ, ‘ಆತನ ತರ ನಡಿಬೇಕು ಅಂತಾನೇ ಆತನು ನಮಗೋಸ್ಕರ ಮಾದರಿ ಇಟ್ಟಿದ್ದಾನೆ.’1 ಪೇತ್ರ 2:21.

ಹೆಚ್ಚನ್ನ ತಿಳಿಯೋಣ

ಯೇಸು ಹೇಗೆ ಸಿಹಿಸುದ್ದಿಯನ್ನ ಸಾರಿದನು ಮತ್ತು ಅದ್ಭುತಗಳನ್ನ ಮಾಡಿದನು ಅಂತ ನೋಡಿ.

4. ಯೇಸು ಸಿಹಿಸುದ್ದಿಯನ್ನ ಸಾರಿದನು

ಯೇಸು ನೂರಾರು ಕಿಲೋಮೀಟರ್‌ ನಡೆದು, ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಿಹಿಸುದ್ದಿಯನ್ನ ಸಾರಿದನು. ಲೂಕ 8:1 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೇಸು ತನ್ನ ಹತ್ತಿರ ಬಂದವರಿಗೆ ಮಾತ್ರ ಸಾರಿದನಾ?

  • ಜನರನ್ನ ಹುಡುಕಲು ಯೇಸು ಯಾವೆಲ್ಲಾ ಪ್ರಯತ್ನಗಳನ್ನ ಮಾಡಿದನು?

ಮೆಸ್ಸೀಯ ಸಿಹಿಸುದ್ದಿಯನ್ನ ಸಾರುತ್ತಾನೆ ಅಂತ ದೇವರು ಮುಂಚೆನೇ ತಿಳಿಸಿದ್ದನು. ಯೆಶಾಯ 61:1, 2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೇಸು ಈ ಭವಿಷ್ಯವಾಣಿಯನ್ನ ಹೇಗೆ ನೆರವೇರಿಸಿದನು?

  • ಇವತ್ತು ಜನರು ಸಿಹಿಸುದ್ದಿಯನ್ನ ಕೇಳಿಸಿಕೊಳ್ಳುವ ಅಗತ್ಯ ಇದೆ ಅಂತ ನಿಮಗನಿಸುತ್ತಾ?

5. ಯೇಸು ಅಮೂಲ್ಯ ಪಾಠಗಳನ್ನ ಕಲಿಸಿದನು

ಯೇಸು ಕ್ರಿಸ್ತನು, ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರಿದ್ದಷ್ಟೇ ಅಲ್ಲ ಜೀವನಕ್ಕೆ ಬೇಕಾದ ಅಮೂಲ್ಯ ಪಾಠಗಳನ್ನೂ ಕಲಿಸಿದನು. ಬೆಟ್ಟದ ಭಾಷಣದಲ್ಲಿ ಆತನು ಕಲಿಸಿದ ಕೆಲವು ಪಾಠಗಳನ್ನ ನೋಡಿ. ಮತ್ತಾಯ 6:14, 34 ಮತ್ತು 7:12 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:

  • ಯೇಸು ಯಾವ ಪಾಠಗಳನ್ನ ಕಲಿಸಿದನು?

  • ಈ ಪಾಠಗಳಿಂದ ಜನರಿಗೆ ಇವತ್ತೂ ಪ್ರಯೋಜನ ಇದೆ ಅಂತ ನಿಮಗೆ ಅನಿಸುತ್ತಾ?

6. ಯೇಸು ಅದ್ಭುತಗಳನ್ನ ಮಾಡಿದನು

ಯೆಹೋವ ದೇವರು ಯೇಸುವಿಗೆ ಅದ್ಭುತಗಳನ್ನ ಮಾಡುವ ಶಕ್ತಿ ಕೊಟ್ಟನು. ಉದಾಹರಣೆಗೆ ಮಾರ್ಕ 5:25-34 ಓದಿ ಅಥವಾ ವಿಡಿಯೋ ನೋಡಿ ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ.

  • ವಿಡಿಯೋದಲ್ಲಿದ್ದ ಸ್ತ್ರೀಗೆ ಯಾವ ನಂಬಿಕೆಯಿತ್ತು?

  • ಈ ವಿಡಿಯೋದಲ್ಲಿ ನಿಮಗೇನು ಇಷ್ಟವಾಯ್ತು?

ಯೋಹಾನ 5:36 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:

  • ಯೇಸು ಮಾಡಿದ ಅದ್ಭುತಗಳು ಯಾವುದಕ್ಕೆ “ಸಾಕ್ಷಿ” ಅಥವಾ ರುಜುವಾತು ಕೊಡುತ್ತೆ?

ನಿಮಗೆ ಗೊತ್ತಿತ್ತಾ?

ಯೇಸುವಿನ ಬಗ್ಗೆ ನಮಗೆ ಗೊತ್ತಿರೋ ಹೆಚ್ಚಿನ ವಿಷಯಗಳು ಬೈಬಲಿನ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ (ಮತ್ತಾಯ, ಮಾರ್ಕ, ಲೂಕ, ಯೋಹಾನ) ಇರೋದೇ. ಈ ಪ್ರತಿಯೊಂದು ಪುಸ್ತಕದ ಬರಹಗಾರರು ಯೇಸುವಿನ ಜೀವನದಲ್ಲಿ ನಡೆದ ಕೆಲವು ಬೇರೆಬೇರೆ ಮಾಹಿತಿಗಳನ್ನ ಬರೆದಿದ್ದಾರೆ, ಅದಕ್ಕೆ ಈ ನಾಲ್ಕೂ ಪುಸ್ತಕಗಳನ್ನ ಓದುವಾಗ ಯೇಸುವಿನ ಬಗ್ಗೆ ಸುಂದರ ಚಿತ್ರಣ ಸಿಗುತ್ತೆ.

  • ಮತ್ತಾಯ

    ಸುವಾರ್ತಾ ಪುಸ್ತಕದಲ್ಲಿ ಮೊದಲ ಪುಸ್ತಕ. ಇದರಲ್ಲಿ ಹೆಚ್ಚಾಗಿ ಯೇಸುವಿನ ಬೋಧನೆಗಳಿವೆ. ಅದರಲ್ಲೂ ಮುಖ್ಯವಾಗಿ ದೇವರ ಆಳ್ವಿಕೆಯ ಬಗ್ಗೆ ಯೇಸು ಕಲಿಸಿದ ವಿಷಯಗಳಿವೆ.

  • ಮಾರ್ಕ

    ಅತಿ ಚಿಕ್ಕ ಸುವಾರ್ತಾ ಪುಸ್ತಕ. ಯೇಸುವಿನ ಜೀವನದಲ್ಲಾದ ಅನೇಕ ಆಶ್ಚರ್ಯ ಹುಟ್ಟಿಸೋ ಘಟನೆಗಳಿವೆ.

  • ಲೂಕ

    ಯೇಸು ಪ್ರಾರ್ಥನೆ ಮಾಡೋಕೆ ಎಷ್ಟು ಪ್ರಾಮುಖ್ಯತೆ ಕೊಟ್ಟನು ಮತ್ತು ಸ್ತ್ರೀಯರಿಗೆ ಹೇಗೆ ಕರುಣೆ ತೋರಿಸಿದನು ಅಂತ ಕಲಿಯಬಹುದು.

  • ಯೋಹಾನ

    ಈ ಪುಸ್ತಕದಲ್ಲಿ ಯೇಸು ತನ್ನ ಆಪ್ತ ಸ್ನೇಹಿತರ ಜೊತೆ ಮತ್ತು ಬೇರೆಯವರ ಜೊತೆ ಮಾಡಿದ ಮಾತುಕಥೆ ಇದೆ. ಇದರಿಂದ ಯೇಸುವಿನ ಗುಣಗಳ ಬಗ್ಗೆ ಕಲಿಯಬಹುದು.

ಕೆಲವರು ಹೀಗಂತಾರೆ: “ಯೇಸು ಸರ್ವಶಕ್ತ ದೇವರು.”

  • ನಿಮಗೇನು ಅನಿಸುತ್ತೆ?

ನಾವೇನು ಕಲಿತ್ವಿ

ದೇವರ ಆಳ್ವಿಕೆಯ ಬಗ್ಗೆ ಯೇಸು ಸಾರಿದನು, ಅದ್ಭುತಗಳನ್ನ ಮಾಡಿದನು ಮತ್ತು ಯಾವಾಗ್ಲೂ ಯೆಹೋವನ ಮಾತು ಕೇಳಿದನು.

ನೆನಪಿದೆಯಾ

  • ಯೇಸು ಭೂಮಿಯಲ್ಲಿದ್ದಾಗ ಮುಖ್ಯವಾಗಿ ಏನು ಮಾಡಿದನು?

  • ಯೇಸು ಮಾಡಿದ ಅದ್ಭುತಗಳಿಂದ ಏನು ಗೊತ್ತಾಗುತ್ತೆ?

  • ಯೇಸು ಯಾವ ಪಾಠಗಳನ್ನ ಕಲಿಸಿದನು?

ಇದನ್ನ ಮಾಡಿ ನೋಡಿ

ಇದನ್ನೂ ನೋಡಿ

ಯೇಸು ನಿಜಕ್ಕೂ ಅದ್ಭುತಗಳನ್ನ ಮಾಡಿದನು ಅಂತ ನಾವು ಹೇಗೆ ನಂಬಬಹುದು ಅನ್ನೋದನ್ನ ನೋಡಿ.

“ಯೇಸುವಿನ ಅದ್ಭುತಗಳು—ನೀವೇನು ಕಲಿಯಬಲ್ಲಿರಿ?” (ಕಾವಲಿನಬುರುಜು, ಜುಲೈ 15, 2004)

ಯೇಸು ಮಾಡಿದ ತ್ಯಾಗದ ಬಗ್ಗೆ ತಿಳಿದುಕೊಂಡ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವ ಬದಲಾವಣೆ ಮಾಡಿಕೊಂಡ ಅಂತ ನೋಡಿ.

“ನನ್ನ ಜೀವನವನ್ನ ನನ್ನ ಇಷ್ಟದಂತೆ ನಡೆಸ್ತಿದ್ದೆ” (ಕಾವಲಿನಬುರುಜು ಲೇಖನ)

ಯೇಸುವಿನ ಜೀವನದಲ್ಲಾದ ಕೆಲವು ಮುಖ್ಯ ಘಟನೆಗಳು ಒಂದರ ನಂತರ ಒಂದರಂತೆ ಯಾವಾಗ ಮತ್ತು ಎಲ್ಲಿ ನಡೆದವು ಅನ್ನೋದನ್ನ ನೋಡಿ.

“ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು” (ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರ, ಪರಿಶಿಷ್ಟ ಎ7)

a ಪಾಠ 31-33 ರಲ್ಲಿ ದೇವರ ಆಳ್ವಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಬಹುದು.