ಪಾಠ 20
ಸಭೆಯನ್ನ ಹೇಗೆ ಸಂಘಟಿಸಲಾಗಿದೆ?
ಯೆಹೋವ ದೇವರು ಎಲ್ಲವನ್ನ ಅಚ್ಚುಕಟ್ಟಾಗಿ ಮಾಡುವ ದೇವರು. (1 ಕೊರಿಂಥ 14:33) ಹಾಗಾಗಿ ಆತನ ಸೇವಕರು ಕೂಡ ಹಾಗೇ ಇರಬೇಕು. ಸಭೆಯಲ್ಲಿ ಹೇಗೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ? ಸಭೆಯಲ್ಲಿ ಎಲ್ಲಾ ಚೆನ್ನಾಗಿ ನಡೆಯಲು ನಾವೇನು ಮಾಡಬೇಕು?
1. ಸಭೆಯ ಯಜಮಾನ ಯಾರು?
“ಕ್ರಿಸ್ತನು ಸಭೆ ಅನ್ನೋ ದೇಹಕ್ಕೆ ಯಜಮಾನ.” (ಎಫೆಸ 5:23) ಯೇಸು ಸ್ವರ್ಗದಿಂದ ದೇವಜನರ ಎಲ್ಲಾ ಚಟುವಟಿಕೆಗಳನ್ನ ನೋಡಿಕೊಳ್ಳುತ್ತಾನೆ. ಯೇಸು ಈ ಕೆಲಸಕ್ಕಾಗಿ ಅನುಭವ ಇರುವ ಹಿರಿಯರ ಒಂದು ಚಿಕ್ಕ ಗುಂಪನ್ನ ಅಂದ್ರೆ ಆಡಳಿತ ಮಂಡಲಿಯನ್ನು ನೇಮಿಸಿದ್ದಾನೆ. ಅವರನ್ನ “ನಂಬಿಗಸ್ತ, ವಿವೇಕಿ ಆದ ಆಳು” ಅಂತ ಕರೆಯಲಾಗಿದೆ. (ಮತ್ತಾಯ 24:45-47 ಓದಿ.) ಈ ಆಡಳಿತ ಮಂಡಲಿ ಒಂದನೇ ಶತಮಾನದಲ್ಲಿದ್ದ ಅಪೊಸ್ತಲರ ಮತ್ತು ಯೆರೂಸಲೇಮಿನಲ್ಲಿದ್ದ ಹಿರಿಯರ ತರ ಇದೆ. ಈ ಮಂಡಲಿ ಭೂಮಿಯ ಎಲ್ಲಾ ಕಡೆ ಇರುವ ಸಭೆಗಳಿಗೆ ನಿರ್ದೇಶನಗಳನ್ನ ಕೊಡುತ್ತೆ. (ಅಪೊಸ್ತಲರ ಕಾರ್ಯ 15:2) ಆದರೆ ಆಡಳಿತ ಮಂಡಲಿಯ ಸದಸ್ಯರು ನಮ್ಮ ಸಂಘಟನೆಯ ನಾಯಕರಲ್ಲ. ಯೆಹೋವನ ಮಾರ್ಗದರ್ಶನಕ್ಕಾಗಿ ಅವರು ಬೈಬಲನ್ನ ಓದುತ್ತಾರೆ ಮತ್ತು ಯೇಸು ಕ್ರಿಸ್ತನ ಮಾತಿನಂತೆ ನಡೆಯುತ್ತಾರೆ.
2. ಹಿರಿಯರು ಅಂದರೆ ಯಾರು? ಅವರು ಏನೆಲ್ಲಾ ಮಾಡ್ತಾರೆ?
ಹಿರಿಯರು ಅನುಭವ ಇರುವ ನಂಬಿಗಸ್ತ ದೇವಸೇವಕರು. ಅವರು ದೇವಜನರಿಗೆ ಬೈಬಲಿನಿಂದ ಕಲಿಸುತ್ತಾರೆ, ಸಹಾಯ ಮಾಡ್ತಾರೆ ಮತ್ತು ಪ್ರೋತ್ಸಾಹ ಕೊಡ್ತಾರೆ. ಅವರು ಮಾಡುವ ಸೇವೆಗೆ ಅವರಿಗೆ ಹಣ ಸಿಗಲ್ಲ. ‘ದೇವರ ಇಷ್ಟದ ಪ್ರಕಾರ ಮನಸಾರೆ ಸೇವೆ ಮಾಡ್ತಾರೆ, ಯಾವುದೇ ಲಾಭಕ್ಕಾಗಿ ಅಲ್ಲ, ಸೇವೆ ಮಾಡಬೇಕು ಅನ್ನೋ ಮನಸ್ಸಿನಿಂದ’ ಮಾಡ್ತಾರೆ. (1 ಪೇತ್ರ 5:1, 2) ಸಹಾಯಕ ಸೇವಕರು ಹಿರಿಯರಿಗೆ ಸಹಾಯ ಮಾಡ್ತಾರೆ. ಅವರಲ್ಲಿ ಕೆಲವರು ಮುಂದೆ ಹಿರಿಯರಾಗ್ತಾರೆ.
ಆಡಳಿತ ಮಂಡಲಿ ಕೆಲವು ಹಿರಿಯರನ್ನ ಸಂಚರಣ ಮೇಲ್ವಿಚಾರಕರಾಗಿ ನೇಮಿಸುತ್ತೆ. ಇವರು ಬೇರೆಬೇರೆ ಸಭೆಗಳಿಗೆ ಹೋಗಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಕೊಡ್ತಾರೆ. ಸಂಚರಣ ಮೇಲ್ವಿಚಾರಕರು, ಬೈಬಲಿನಲ್ಲಿ ಕೊಟ್ಟಿರುವ ಅರ್ಹತೆಗಳನ್ನ ಪಡೆದಿರುವ ಪುರುಷರನ್ನ ಹಿರಿಯರನ್ನಾಗಿ ಮತ್ತು ಸಹಾಯಕ ಸೇವಕರನ್ನಾಗಿ ನೇಮಿಸುತ್ತಾರೆ.—1 ತಿಮೊತಿ 3:1-10, 12; ತೀತ 1:5-9.
3. ಸಭೆಯಲ್ಲಿರುವ ಪ್ರತಿಯೊಬ್ಬ ಸಾಕ್ಷಿಗೆ ಯಾವ ಜವಾಬ್ದಾರಿಯಿದೆ?
ಸಭೆಯಲ್ಲಿ ಸ್ತುತಿ ಗೀತೆಗಳನ್ನ ಹಾಡುವ, ಉತ್ತರಗಳನ್ನ ಕೊಡುವ ಮತ್ತು ತಮ್ಮ ಕೈಲಾದಷ್ಟು ಸಿಹಿಸುದ್ದಿಯನ್ನ ಸಾರುವ ಮೂಲಕ ಎಲ್ಲರೂ ‘ಯೆಹೋವನ ಹೆಸರನ್ನ ಕೊಂಡಾಡುತ್ತಾರೆ.’—ಕೀರ್ತನೆ 148:12, 13 ಓದಿ.
ಹೆಚ್ಚನ್ನ ತಿಳಿಯೋಣ
ಯೇಸು ಯಾವ ರೀತಿಯ ನಾಯಕನಾಗಿದ್ದಾನೆ ಮತ್ತು ಹಿರಿಯರು ಹೇಗೆ ಯೇಸುವಿನ ಮಾದರಿಯನ್ನ ಅನುಕರಿಸುತ್ತಾರೆ ಅಂತ ಕಲಿಯಿರಿ. ನಾವು ಹೇಗೆ ಯೇಸುವಿನ ಮಾತನ್ನ ಕೇಳಬಹುದು ಮತ್ತು ಹಿರಿಯರಿಗೆ ಬೆಂಬಲ ಕೊಡಬಹುದು ಅಂತನೂ ತಿಳಿಯಿರಿ.
4. ಯೇಸು ಪ್ರೀತಿಯಿರುವ ನಾಯಕ
ಯೇಸು ನಮಗೆಲ್ಲರಿಗೆ ಪ್ರೀತಿಯ ಆಮಂತ್ರಣವನ್ನ ಕೊಡ್ತಿದ್ದಾನೆ. ಮತ್ತಾಯ 11:28-30 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ಯೇಸು ಯಾವ ರೀತಿಯ ನಾಯಕ? ಅಂಥ ನಾಯಕ ಇರೋದ್ರಿಂದ ನಿಮಗೆ ಹೇಗನಿಸುತ್ತೆ?
ಹಿರಿಯರು ಹೇಗೆ ಯೇಸುವನ್ನ ಅನುಕರಿಸುತ್ತಾರೆ? ವಿಡಿಯೋ ನೋಡಿ.
ಹಿರಿಯರು ತಮ್ಮ ಜವಾಬ್ದಾರಿಗಳನ್ನ ಹೇಗೆ ಮಾಡಬೇಕು ಅಂತ ಬೈಬಲ್ ಹೇಳುತ್ತೆ.
ಯೆಶಾಯ 32:2 ಮತ್ತು 1 ಪೇತ್ರ 5:1-3 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ಹಿರಿಯರು ಯೇಸುವಿನ ತರ ಪ್ರೀತಿಯಿಂದ ನಡೆದುಕೊಳ್ತಾರೆ ಅಂತ ತಿಳಿದುಕೊಂಡಾಗ ನಿಮಗೆ ಹೇಗನಿಸುತ್ತೆ?
-
ಹಿರಿಯರು ಇನ್ನೂ ಯಾವೆಲ್ಲಾ ವಿಧಗಳಲ್ಲಿ ಯೇಸುವನ್ನ ಅನುಕರಿಸುತ್ತಾರೆ?
5. ಹಿರಿಯರು ತಮ್ಮ ಮಾದರಿ ಮೂಲಕ ಕಲಿಸುತ್ತಾರೆ
ಹಿರಿಯರು ತಮ್ಮ ಜವಾಬ್ದಾರಿಯನ್ನ ಹೇಗೆ ನೋಡಿಕೊಳ್ಳಬೇಕು ಅಂತ ಯೇಸು ಬಯಸುತ್ತಾನೆ ಅನ್ನೋದನ್ನ ತಿಳಿಯಲು ವಿಡಿಯೋ ನೋಡಿ.
ಸಭೆಯಲ್ಲಿ ಮುಂದಾಳತ್ವ ವಹಿಸುವವರು ಹೇಗಿರಬೇಕು ಅನ್ನೋ ಮಾರ್ಗದರ್ಶನವನ್ನ ಯೇಸು ಕೊಟ್ಟಿದ್ದಾನೆ. ಮತ್ತಾಯ 23:8-12 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ಹಿರಿಯರು ಹೇಗೆ ನಡೆದುಕೊಳ್ಳಬೇಕು ಅಂತ ಬೈಬಲ್ ಹೇಳುತ್ತೆ? ಆದರೆ ಧರ್ಮ ಗುರುಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ?
-
A. ಹಿರಿಯರು ಯೆಹೋವ ದೇವರ ಆಪ್ತ ಸ್ನೇಹಿತರಾಗಿರುತ್ತಾರೆ. ಅದನ್ನೇ ತಮ್ಮ ಕುಟುಂಬದವರಿಗೂ ಕಲಿಸುತ್ತಾರೆ
-
B. ಹಿರಿಯರು ಸಭೆಯಲ್ಲಿರುವ ಎಲ್ಲರನ್ನ ಪ್ರೀತಿಸ್ತಾರೆ
-
C. ಹಿರಿಯರು ಹುರುಪಿನಿಂದ ಸಿಹಿಸುದ್ದಿ ಸಾರುತ್ತಾರೆ
-
D. ಹಿರಿಯರು ಚೆನ್ನಾಗಿ ಕಲಿಸುತ್ತಾರೆ. ಅಷ್ಟೇ ಅಲ್ಲ, ಅವರು ಶುಚಿತ್ವ ಮತ್ತು ಇನ್ನಿತರ ಕೆಲಸಗಳನ್ನೂ ಮಾಡುತ್ತಾರೆ
6. ನಾವು ಹಿರಿಯರಿಗೆ ಬೆಂಬಲ ಕೊಡಬೇಕು
ನಾವು ಯಾಕೆ ಹಿರಿಯರ ಮಾತನ್ನ ಕೇಳಬೇಕು ಅನ್ನೋದಕ್ಕೆ ಒಂದು ಮುಖ್ಯ ಕಾರಣವನ್ನ ಬೈಬಲ್ ಹೇಳುತ್ತೆ. ಇಬ್ರಿಯ 13:17 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
-
ನಾವು ಹಿರಿಯರಿಗೆ ಮನಸಾರೆ ಅಧೀನತೆ ತೋರಿಸಬೇಕು ಅಂತ ಬೈಬಲ್ ಯಾಕೆ ಹೇಳುತ್ತೆ? ಇದರ ಬಗ್ಗೆ ನಿಮಗೇನು ಅನಿಸುತ್ತೆ?
ಲೂಕ 16:10 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
-
ಚಿಕ್ಕಚಿಕ್ಕ ವಿಷಯಗಳಲ್ಲೂ ನಾವು ಯಾಕೆ ಹಿರಿಯರಿಗೆ ಬೆಂಬಲ ಕೊಡಬೇಕು?
ಕೆಲವರು ಹೀಗಂತಾರೆ: “ಯಾವ ಧರ್ಮನೂ ಬೇಕಾಗಿಲ್ಲ, ನಾನು ಮನಸ್ಸಲ್ಲೇ ದೇವರನ್ನ ನೆನಸ್ತೀನಿ.”
-
ಸಭೆಯಾಗಿ ಸೇರಿ ಬಂದು ದೇವರನ್ನ ಆರಾಧಿಸೋದ್ರಿಂದ ಏನೆಲ್ಲಾ ಪ್ರಯೋಜನ ಇದೆ?
ನಾವೇನು ಕಲಿತ್ವಿ
ಯೇಸು ಸಭೆಯ ಯಜಮಾನ. ಆತನು ಹಿರಿಯರಿಗೆ ಸಭೆಯನ್ನ ನೋಡಿಕೊಳ್ಳುವ ಜವಾಬ್ದಾರಿ ಕೊಟ್ಟಿದ್ದಾನೆ. ಅವರು ನಮಗೆ ಚೈತನ್ಯ ಕೊಡ್ತಾರೆ ಮತ್ತು ತಮ್ಮ ಮಾದರಿಯಿಂದ ನಮಗೆ ಕಲಿಸ್ತಾರೆ. ಹಾಗಾಗಿ ನಾವು ಅವರಿಗೆ ಮನಸಾರೆ ಅಧೀನತೆ ತೋರಿಸುತ್ತೇವೆ.
ನೆನಪಿದೆಯಾ
-
ಸಭೆಯ ಯಜಮಾನ ಯಾರು?
-
ಹಿರಿಯರು ಸಭೆಗೆ ಹೇಗೆ ಸಹಾಯ ಮಾಡ್ತಾರೆ?
-
ಪ್ರತಿಯೊಬ್ಬ ಸಾಕ್ಷಿಯ ಜವಾಬ್ದಾರಿ ಏನು?
ಇದನ್ನೂ ನೋಡಿ
ಆಡಳಿತ ಮಂಡಲಿಗೆ ಮತ್ತು ಇತರ ಹಿರಿಯರಿಗೆ ತಮ್ಮ ಜೊತೆ ಸಹೋದರರ ಮೇಲೆ ಎಷ್ಟು ಪ್ರೀತಿ, ಕಾಳಜಿ ಇದೆ ಅನ್ನೋದಕ್ಕೆ ಆಧಾರ ನೋಡಿ.
ಸಂಚರಣ ಮೇಲ್ವಿಚಾರಕರು ಮಾಡುವ ಕೆಲಸಗಳ ಬಗ್ಗೆ ತಿಳಿದುಕೊಳ್ಳಿ.
ಸಭೆಯಲ್ಲಿ ಸ್ತ್ರೀಯರಿಗೆ ಇರುವ ಪ್ರಾಮುಖ್ಯ ಪಾತ್ರದ ಬಗ್ಗೆ ತಿಳಿದುಕೊಳ್ಳಿ.
“ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಕಲಿಸುತ್ತಾರಾ?” (ಕಾವಲಿನಬುರುಜು ಲೇಖನ)
ಜೊತೆ ಆರಾಧಕರನ್ನ ಪ್ರೋತ್ಸಾಹಿಸೋಕೆ ಹಿರಿಯರು ಎಷ್ಟು ಪ್ರಯತ್ನ ಹಾಕುತ್ತಾರೆ ಅಂತ ತಿಳಿದುಕೊಳ್ಳಿ.
“ಕ್ರೈಸ್ತ ಹಿರಿಯರು ‘ನಮ್ಮ ಸಂತೋಷಕ್ಕಾಗಿ ಜೊತೆ ಕೆಲಸದವರು’” (ಕಾವಲಿನಬುರುಜು, ಜನವರಿ 15, 2013)