ಭಾಗ 4ರಲ್ಲಿ ನೀವೇನು ಕಲಿತ್ರಿ?
ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಜ್ಞಾನೋಕ್ತಿ 13:20 ಓದಿ.
ಸ್ನೇಹಿತರನ್ನ ವಿವೇಕದಿಂದ ಆಯ್ಕೆ ಮಾಡೋದು ಯಾಕೆ ಪ್ರಾಮುಖ್ಯ?
(ಪಾಠ 48 ನೋಡಿ.)
ಬೈಬಲಿನಲ್ಲಿರುವ ಯಾವ ಸಲಹೆ ಸಹಾಯ ಮಾಡುತ್ತೆ . . .
ನೀವು ಗಂಡ ಅಥವಾ ಹೆಂಡತಿಯಾಗಿದ್ರೆ?
ನೀವು ಹೆತ್ತವರು ಅಥವಾ ಮಗ/ಮಗಳಾಗಿದ್ರೆ?
ನಾವು ಯಾವ ರೀತಿಯಲ್ಲಿ ಮಾತಾಡಿದ್ರೆ ಯೆಹೋವನಿಗೆ ಖುಷಿಯಾಗುತ್ತೆ? ಯಾವ ರೀತಿಯಲ್ಲಿ ಮಾತಾಡಿದ್ರೆ ಆತನಿಗೆ ಬೇಜಾರಾಗುತ್ತೆ?
(ಪಾಠ 51 ನೋಡಿ.)
ನಿಮ್ಮ ಹೊರತೋರಿಕೆಯ ವಿಷಯದಲ್ಲಿ ಒಳ್ಳೇ ತೀರ್ಮಾನಗಳನ್ನ ತೆಗೆದುಕೊಳ್ಳಲು ಯಾವ ಬೈಬಲ್ ತತ್ವಗಳು ಸಹಾಯ ಮಾಡುತ್ತೆ?
(ಪಾಠ 52 ನೋಡಿ.)
ನೀವು ಆಯ್ಕೆ ಮಾಡುವ ಮನರಂಜನೆ ಯೆಹೋವನಿಗೆ ಇಷ್ಟವಾಗಬೇಕು ಅಂದರೆ ಏನು ಮಾಡಬೇಕು?
(ಪಾಠ 53 ನೋಡಿ.)
ಮತ್ತಾಯ 24:45-47 ಓದಿ.
“ನಂಬಿಗಸ್ತ, ವಿವೇಕಿ ಆದ ಆಳು” ಯಾರು?
(ಪಾಠ 54 ನೋಡಿ.)
ನಿಮ್ಮ ಸಮಯ, ಶಕ್ತಿ, ಮತ್ತು ಹಣ ಆಸ್ತಿ ಬಳಸಿ ನೀವು ಹೇಗೆ ಸಭೆಯನ್ನ ಬೆಂಬಲಿಸಬಹುದು?
(ಪಾಠ 55 ನೋಡಿ.)
ಕೀರ್ತನೆ 133:1 ಓದಿ.
ಸಭೆಯ ಐಕ್ಯತೆಯನ್ನ ಕಾಪಾಡಲು ನೀವು ಏನೆಲ್ಲಾ ಮಾಡಬಹುದು?
(ಪಾಠ 56.)
ಒಂದುವೇಳೆ ನೀವು ಗಂಭೀರ ತಪ್ಪನ್ನ ಮಾಡಿದ್ರೆ ಹೇಗೆ ಯೆಹೋವನ ಸಹಾಯ ಪಡೆಯಬಹುದು?
(ಪಾಠ 57 ನೋಡಿ.)
1 ಪೂರ್ವಕಾಲವೃತ್ತಾಂತ 28:9 ಓದಿ ಮತ್ತು ಪಾದಟಿಪ್ಪಣಿ.
ಬೇರೆಯವರು ಸತ್ಯ ಆರಾಧನೆಯನ್ನ ವಿರೋಧಿಸಿದಾಗ ಅಥವಾ ಸತ್ಯವನ್ನ ಬಿಟ್ಟು ಹೋದಾಗ ನೀವು ಯೆಹೋವನಿಗೆ “ಸಂಪೂರ್ಣ ಭಕ್ತಿಯಿಂದ” ಇರುತ್ತೀರ ಅಂತ ಹೇಗೆ ತೋರಿಸಿಕೊಡಬಹುದು?
ಯೆಹೋವನಿಗೆ ನಿಷ್ಠೆಯಿಂದ ಇರಲು ಮತ್ತು ಸುಳ್ಳು ಧರ್ಮದಿಂದ ಬೇರೆಯಾಗಲು ನೀವು ಇನ್ನೂ ಯಾವುದಾದ್ರೂ ಬದಲಾವಣೆಗಳನ್ನ ಮಾಡಿಕೊಳ್ಳಬೇಕಾಗಿದೆಯಾ?
(ಪಾಠ 58 ನೋಡಿ.)
ಮುಂದೆ ಬರಲಿರುವ ಹಿಂಸೆಯನ್ನ ಎದುರಿಸಲಿಕ್ಕೆ ನೀವು ಹೇಗೆ ತಯಾರಾಗಬಹುದು?
(ಪಾಠ 59 ನೋಡಿ.)
ಯೆಹೋವನ ಜೊತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳುತ್ತಾ ಇರಕ್ಕೆ ನೀವು ಯಾವ ಪ್ಲಾನ್ ಮಾಡಿದ್ದೀರಾ?
(ಪಾಠ 60 ನೋಡಿ.)