“ಅವರು ಲಕ್ಷ್ಯವನ್ನೇ ಕೊಡಲಿಲ್ಲ”
“ಅವರು ಲಕ್ಷ್ಯವನ್ನೇ ಕೊಡಲಿಲ್ಲ”
ಎಚ್ಚರಿಕೆಗಳನ್ನು ನಿರ್ಲಕ್ಷ್ಯದಿಂದ ಬದಿಗೊತ್ತುವುದರ ಫಲಿತಾಂಶವಾಗಿ ವಿಪತ್ತು ಬಂದೆರಗಸಾಧ್ಯವಿದೆ.
ಇಸವಿ 1974ರಲ್ಲಿ ಆಸ್ಟ್ರೇಲಿಯದ ಡಾರ್ವಿನ್ ಪಟ್ಟಣವು ರಜಾಕಾಲದ ಉತ್ಸವಗಳಿಗಾಗಿ ಸಿದ್ಧತೆಗಳನ್ನು ಮಾಡುತ್ತಿದ್ದಾಗ, ಬರಲಿಕ್ಕಿದ್ದಂಥ ಚಂಡಮಾರುತದ ಕುರಿತಾದ ಎಚ್ಚರಿಕೆಯ ಗಂಟೆಗಳು ಮೊಳಗಿದವು. ಆದರೆ ಸುಮಾರು 30ವರ್ಷಗಳಲ್ಲಿ ಒಂದು ಸಲವೂ ಚಂಡಮಾರುತದಿಂದ ಡಾರ್ವಿನ್ ಪಟ್ಟಣವು ಹಾನಿಗೊಳಗಾಗಿರಲಿಲ್ಲ. ಈಗ ಯಾಕೆ? ರಭಸವಾದ ಬಿರುಗಾಳಿಯು ಛಾವಣಿಗಳನ್ನು ಕಿತ್ತುಹಾಕಿ, ಜನರು ಕಿಕ್ಕಿರಿದಿದ್ದ ಮನೆಗಳ ಗೋಡೆಗಳನ್ನು ಬೀಳಿಸುವ ತನಕ ಅಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರು ಈ ಅಪಾಯವನ್ನು ನಿಜವಾಗಿಯೂ ಗಂಭೀರವಾದದ್ದೆಂದು ಪರಿಗಣಿಸಿರಲಿಲ್ಲ. ಮರುದಿನ ಬೆಳಗ್ಗೆಯಷ್ಟಕ್ಕೆ ಇಡೀ ಪಟ್ಟಣವು ಕಸದ ಕೊಂಪೆಯಾಗಿತ್ತು.
ಇಸವಿ 1985ರ ನವೆಂಬರ್ ತಿಂಗಳಿನಲ್ಲಿ ಕೊಲಂಬಿಯದಲ್ಲಿ ಒಂದು ಜ್ವಾಲಾಮುಖಿಯು ಹೊರಚಿಮ್ಮಿತು. ಕರಗುತ್ತಿರುವ ಹಿಮ ಮತ್ತು ಮಂಜು ದೊಡ್ಡ ಪ್ರವಾಹವನ್ನು ಹರಿಸಿತು; ಇದು ಆರ್‌ಮೇರೊ ಪಟ್ಟಣದ 20,000ಕ್ಕಿಂತಲೂ ಹೆಚ್ಚಿನ ನಿವಾಸಿಗಳನ್ನು ಸಮಾಧಿಮಾಡಿಬಿಟ್ಟಿತು. ಮುಂಚಿತವಾಗಿಯೇ ಎಚ್ಚರಿಕೆಯು ಕೊಡಲ್ಪಟ್ಟಿರಲಿಲ್ಲವೋ? ಅನೇಕ ತಿಂಗಳುಗಳಿಂದ ಈ ಪರ್ವತವು ಕಂಪಿಸಿತ್ತು. ಆದರೂ, ಜ್ವಾಲಾಮುಖಿಯ ಪಕ್ಕದಲ್ಲೇ ಜೀವಿಸುವ ರೀತಿಗೆ ಒಗ್ಗಿಹೋಗಿದ್ದ ಆರ್‌ಮೇರೊ ಪಟ್ಟಣದ ಅಧಿಕಾಂಶ ಜನರು ಇದರ ವಿಷಯದಲ್ಲಿ ಚಿಂತಿತರಾಗಿರಲಿಲ್ಲ. ಬೇಗನೆ ವಿಪತ್ತು ಬಂದೆರಗಲಿದೆ ಎಂಬ ಎಚ್ಚರಿಕೆಯು ಅಧಿಕಾರಿಗಳಿಗೆ ಕೊಡಲ್ಪಟ್ಟಿತಾದರೂ, ಸಾರ್ವಜನಿಕರನ್ನು ಎಚ್ಚರಿಸಲು ಅವರು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಜನರಿಗೆ ಭರವಸೆ ನೀಡುವ ಪ್ರಯತ್ನದಲ್ಲಿ ರೇಡಿಯೋದ ಮೂಲಕ ಪ್ರಕಟನೆಗಳು ಮಾಡಲ್ಪಟ್ಟವು. ಚರ್ಚಿನ ಧ್ವನಿವರ್ಧಕವು, ಜನರನ್ನು ಶಾಂತರಾಗಿರುವಂತೆ ಹುರಿದುಂಬಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿತು. ಒಂದು ಸಾಯಂಕಾಲ ಪ್ರಬಲವಾದ ಎರಡು ಸ್ಫೋಟಗಳು ಸಂಭವಿಸಿದವು. ಆಗ ನೀವು ನಿಮ್ಮ ಸೊತ್ತುಗಳನ್ನು ತೊರೆದು ಅಲ್ಲಿಂದ ಪಲಾಯನಗೈಯುತ್ತಿದ್ದಿರೊ? ಕಾಲವಿಳಂಬಿಸುವ ತನಕ ಹೊರಟುಹೋಗಲು ಪ್ರಯತ್ನಿಸಿದವರು ಕೇವಲ ಕೊಂಚ ಮಂದಿಯೇ.
ಎಲ್ಲಿ ಭೂಕಂಪಗಳು ಸಂಭವಿಸುತ್ತವೆ ಎಂಬುದನ್ನು ಭೂವಿಜ್ಞಾನಿಗಳು ಅನೇಕವೇಳೆ ಸಾಕಷ್ಟು ನಿಷ್ಕೃಷ್ಟತೆಯಿಂದ ಮುಂತಿಳಿಸುತ್ತಾರೆ. ಆದರೆ ಅವು ಯಾವಾಗ ಸಂಭವಿಸುತ್ತವೆ ಎಂಬುದನ್ನು ಅವರು ನಿಖರವಾಗಿ ಮುಂತಿಳಿಸಲು ಸಾಧ್ಯವಾಗುವುದು ತೀರ ವಿರಳ. ಇಸವಿ 1999ರಲ್ಲಿ, ಲೋಕವ್ಯಾಪಕವಾಗಿ ನಡೆದ ಭೂಕಂಪಗಳಲ್ಲಿ ಸುಮಾರು 20,000 ಜನರು ಮರಣವನ್ನಪ್ಪಿದರು. ಮರಣಪಟ್ಟವರಲ್ಲಿ ಅನೇಕರು, ಇದು ಎಂದಿಗೂ ನಮಗೆ ಸಂಭವಿಸುವುದೇ ಇಲ್ಲ ಎಂದು ನೆನಸಿದ್ದರು.
ದೇವರಿಂದ ತಾನೇ ಬರುವ ಎಚ್ಚರಿಕೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
ಕಡೇ ದಿವಸಗಳನ್ನು ಗುರುತಿಸುವಂಥ ಘಟನೆಗಳನ್ನು ಬೈಬಲು ಬಹಳ ದೀರ್ಘ ಕಾಲಕ್ಕೆ ಮುಂಚೆಯೇ ಸುಸ್ಪಷ್ಟವಾಗಿ ವರ್ಣಿಸಿತು. ಈ ವರ್ಣನೆಗೆ ಹೊಂದಿಕೆಯಲ್ಲಿ, ‘ನೋಹನ ದಿವಸಗಳನ್ನು’ ಪರಿಗಣಿಸುವಂತೆ ಅದು ನಮ್ಮನ್ನು ಉತ್ತೇಜಿಸುತ್ತದೆ. “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ” ಜನರು ಹಿಂಸಾಚಾರದ ವ್ಯಾಪಕತೆಯ ವಿಷಯದಲ್ಲಿ ಖಂಡಿತವಾಗಿಯೂ ಚಿಂತಿತರಾಗಿದ್ದರಾದರೂ, ಜೀವನದ ಮತ್ತಾಯ 24:37-39, NW) ನೀವು ಈ ಎಚ್ಚರಿಕೆಗೆ ಲಕ್ಷ್ಯಕೊಡುತ್ತಿದ್ದಿರೊ? ಈಗ ನೀವು ಹಾಗೆ ಮಾಡುತ್ತೀರೊ?
ಮಾಮೂಲಿ ಚಟುವಟಿಕೆಗಳಲ್ಲಿ ಅವರು ಪೂರ್ಣವಾಗಿ ತಲ್ಲೀನರಾಗಿದ್ದರು. ತನ್ನ ಸೇವಕನಾದ ನೋಹನ ಮೂಲಕ ದೇವರು ಕೊಟ್ಟ ಎಚ್ಚರಿಕೆಯ ವಿಷಯದಲ್ಲಿ ಹೇಳುವುದಾದರೆ, “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಅವರು ಲಕ್ಷ್ಯವನ್ನೇ ಕೊಡಲಿಲ್ಲ.” (ಅಬ್ರಹಾಮನ ಸೋದರಳಿಯನಾಗಿದ್ದ ಲೋಟನೆಂಬ ಹೆಸರಿನ ವ್ಯಕ್ತಿಯ ದಿನಗಳಲ್ಲಿ ಸೊದೋಮ್‌ನಲ್ಲಿ—ಮೃತ ಸಮುದ್ರದ ಬಳಿ—ನೀವು ಜೀವಿಸುತ್ತಿದ್ದಲ್ಲಿ ಆಗೇನು? ಅದರ ಗ್ರಾಮ ಪ್ರದೇಶವು ಒಂದು ಪರದೈಸಿನಂತಿತ್ತು. ಅದು ತುಂಬ ಸಮೃದ್ಧವಾದ ಪಟ್ಟಣವಾಗಿತ್ತು. ಜನರು ಹಾಯಾಗಿ ಕಾಲಕಳೆಯುತ್ತಿದ್ದರು. ಲೋಟನ ದಿನಗಳಲ್ಲಿ, “ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು, ಕಟ್ಟುತ್ತಿದ್ದರು.” ಅವರು ಜೀವಿಸುತ್ತಿದ್ದ ಸಮಾಜವು ಸಹ ವಿಪರೀತ ಅನೈತಿಕತೆಯಿಂದ ತುಂಬಿತ್ತು. ಲೋಟನು ದುಷ್ಟ ಆಚಾರಗಳನ್ನು ಬಲವಾಗಿ ಖಂಡಿಸುತ್ತಾ ಕೊಟ್ಟ ಎಚ್ಚರಿಕೆಯನ್ನು ನೀವು ಮನಸ್ಸಿಗೆ ತೆಗೆದುಕೊಳ್ಳುತ್ತಿದ್ದಿರೊ? ದೇವರು ಸೊದೋಮ್ ಪಟ್ಟಣದ ಮೇಲೆ ನಾಶನವನ್ನು ಬರಮಾಡಲು ನಿರ್ಧರಿಸಿದ್ದಾನೆ ಎಂದು ಅವನು ನಿಮಗೆ ಹೇಳುವಾಗ ನೀವು ಅವನಿಗೆ ಕಿವಿಗೊಡುತ್ತಿದ್ದಿರೊ? ಅಥವಾ ಲೋಟನ ಭಾವೀ ಅಳಿಯಂದಿರಂತೆ ನೀವು ಅವನ ಮಾತುಗಳನ್ನು ಗೇಲಿಮಾಡುತ್ತಿದ್ದಿರೊ? ಬಹುಶಃ ನೀವು ಪಲಾಯನಗೈಯಲು ಆರಂಭಿಸುತ್ತಿದ್ದಿರಾದರೂ, ಲೋಟನ ಹೆಂಡತಿಯಂತೆ ಹಿಂದಿರುಗಿ ನೋಡುತ್ತಿದ್ದಿರೊ? ಇತರರು ಆ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲವಾದರೂ, ಲೋಟನು ಸೊದೋಮನ್ನು ಬಿಟ್ಟುಹೋದ ದಿವಸದಲ್ಲಿ “ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶ ಮಾಡಿದವು.”—ಲೂಕ 17:28, 29.
ನಮ್ಮ ದಿನಗಳಲ್ಲಿಯೂ ಅಧಿಕಾಂಶ ಜನರು ಲಕ್ಷ್ಯವನ್ನೇ ಕೊಡುವುದಿಲ್ಲ. ಆದರೆ ಈ ಉದಾಹರಣೆಗಳು ನಮಗೆ ಎಚ್ಚರಿಕೆ ನೀಡಲಿಕ್ಕಾಗಿ, ನಾವು ಎಚ್ಚರಿಕೆಯಿಂದಿರುವಂತೆ ಉತ್ತೇಜಿಸಲಿಕ್ಕಾಗಿ ದೇವರ ವಾಕ್ಯದಲ್ಲಿ ಜೋಪಾನವಾಗಿ ಸಂರಕ್ಷಿಸಲ್ಪಟ್ಟಿವೆ!
[ಪುಟ 22ರಲ್ಲಿರುವ ಚೌಕ/ಚಿತ್ರ]
ಭೌಗೋಳಿಕ ಜಲಪ್ರಳಯವು ನಿಜವಾಗಿಯೂ ಸಂಭವಿಸಿತೋ?
ಇಲ್ಲ ಎಂದು ಅನೇಕ ವಿಮರ್ಶಕರು ಹೇಳುತ್ತಾರೆ. ಆದರೆ ಸಂಭವಿಸಿತು ಎಂದು ಬೈಬಲ್ ಹೇಳುತ್ತದೆ.
ಯೇಸು ಕ್ರಿಸ್ತನು ತಾನೇ ಇದರ ಕುರಿತು ಮಾತಾಡಿದನು, ಮತ್ತು ಇದು ಸಂಭವಿಸಿದಾಗ ಅವನು ಬದುಕಿದ್ದು, ಪರಲೋಕದಿಂದ ಇದನ್ನು ನೋಡಿದ್ದನು.
[ಪುಟ 23ರಲ್ಲಿರುವ ಚೌಕ/ಚಿತ್ರ]
ಸೊದೋಮ್ ಮತ್ತು ಗೊಮೋರ ಪಟ್ಟಣಗಳು ನಿಜವಾಗಿಯೂ ನಾಶವಾದವೊ?
ಪ್ರಾಕ್ತನಶಾಸ್ತ್ರವು ಈ ಘಟನೆಗೆ ಸಾಕ್ಷ್ಯನೀಡುತ್ತದೆ.
ಐಹಿಕ ಇತಿಹಾಸವು ಇದರ ಕುರಿತು ಪ್ರಸ್ತಾಪಿಸುತ್ತದೆ.
ಯೇಸು ಕ್ರಿಸ್ತನು ಈ ಘಟನೆಯನ್ನು ದೃಢಪಡಿಸಿದನು, ಮತ್ತು ಬೈಬಲಿನ 14 ಬೇರೆ ಬೇರೆ ಪುಸ್ತಕಗಳಲ್ಲಿ ಈ ಘಟನೆಯ ಕುರಿತು ಸೂಚಿಸಲಾಗಿದೆ.