ಈ ಲೋಕವು ಯಾವ ದಿಕ್ಕಿಗೆ ಸಾಗುತ್ತಿದೆ?
ಈ ಲೋಕವು ಯಾವ ದಿಕ್ಕಿಗೆ ಸಾಗುತ್ತಿದೆ?
ಗಂಭೀರವಾದ ಸಮಸ್ಯೆಗಳು ಮತ್ತು ಭೀಕರ ಘಟನೆಗಳು ಲೋಕವ್ಯಾಪಕವಾಗಿ ಪ್ರತಿ ದಿನ ಸುದ್ದಿಯಲ್ಲಿವೆ! ಇದು ಏನನ್ನು ಅರ್ಥೈಸುತ್ತದೆ?
ವೈಯಕ್ತಿಕ ಸುರಕ್ಷೆ: ಮಾರುಕಟ್ಟೆಗಳಲ್ಲಿ ಬಾಂಬ್‌ಗಳ ಸ್ಫೋಟ. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹತ್ಯೆ. ಹೆತ್ತವರ ಕಣ್ತಪ್ಪಿಸಿ ಮಕ್ಕಳ ಅಪಹರಣ. ನಡುಹಗಲಿನಲ್ಲೇ ಮಹಿಳೆಯರ ಮತ್ತು ವೃದ್ಧ ಪುರುಷರ ಮೇಲೆ ಆಕ್ರಮಣ.
ಧಾರ್ಮಿಕ ಸನ್ನಿವೇಶ: ಯುದ್ಧಗಳಲ್ಲಿ ವಿರೋಧ ಪಕ್ಷಗಳಿಗೆ ಚರ್ಚುಗಳ ಬೆಂಬಲ. ಜನಾಂಗಹತ್ಯೆಯಲ್ಲಿ ಪಾದ್ರಿಗಳ ಕೈವಾಡದ ಆರೋಪ. ಪಾದ್ರಿಗಳಿಂದ ಯುವಜನರ ಲೈಂಗಿಕ ಶೋಷಣೆ; ಚರ್ಚಿನಿಂದ ಈ ಸಂಗತಿಯ ಮರೆಮಾಚುವಿಕೆ. ಚರ್ಚುಗಳಿಗೆ ಹೋಗುವವರ ಸಂಖ್ಯೆಯಲ್ಲಿ ಇಳಿತ; ಚರ್ಚ್ ಕಟ್ಟಡಗಳ ಮಾರಾಟ.
ಪರಿಸರ: ವಾಣಿಜ್ಯೋದ್ಯಮಗಳಿಗಾಗಿ ಕಾಡುಗಳ ಸಂಹಾರ. ಕಟ್ಟಿಗೆಗಾಗಿ ಬಡವರಿಂದ ವನ್ಯಪ್ರದೇಶಗಳ ನಿರ್ನಾಮ. ಅಂತರ್ಜಲ ಮಾಲಿನ್ಯ, ಜಲಸೇವನೆಯು ಅಪಾಯಕರ. ಮೀನುಗಾರಿಕೆಯ ಅಳಿವು; ಕೈಗಾರಿಕೆಯ ತ್ಯಾಜ್ಯವಸ್ತು ಮತ್ತು ಆಧುನಿಕ ವಿಧಾನಗಳೇ ಇದಕ್ಕೆ ಕಾರಣ. ಉಸಿರುಕಟ್ಟಿಸುವಂಥ ವಾಯು ಮಾಲಿನ್ಯ.
ಜೀವನೋಪಾಯ: ಅನೇಕ ಏಷಿಯನ್ ದೇಶಗಳಲ್ಲಿ ವ್ಯಕ್ತಿಯೊಬ್ಬನ ವಾರ್ಷಿಕ ಆದಾಯವು ತೀರ ಕಡಿಮೆಯಾಗಿದೆ ಎಂದು ವರದಿಸಲಾಗಿದೆ. ಅಧಿಕಾರಿಗಳ ಧನದಾಹದಿಂದ ವ್ಯಾಪಾರದಲ್ಲಿ ಕುಸಿತ, ಸಾವಿರಾರು ಮಂದಿಗೆ ನಿರುದ್ಯೋಗ ಸಮಸ್ಯೆ. ಮೋಸದಿಂದಾಗಿ ಬಂಡವಾಳಗಾರರ ಜೀವಮಾನಕಾಲದ ಉಳಿತಾಯ ಮಣ್ಣುಪಾಲು.
ಆಹಾರದ ಅಭಾವ: ಹೆಚ್ಚುಕಡಿಮೆ 80,00,00,000 ಜನರು ಲೋಕವ್ಯಾಪಕವಾಗಿ ಆಹಾರದ ಅಭಾವದಿಂದ ನರಳುತ್ತಾರೆ.
ಯುದ್ಧ: ಇಪ್ಪತ್ತನೆಯ ಶತಮಾನದ ಯುದ್ಧದ ಫಲಿತಾಂಶವಾಗಿ ಸುಮಾರು 10,00,00,000ಗಿಂತ ಹೆಚ್ಚು ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡರು. ಇಡೀ ಮಾನವಕುಲವನ್ನು ಅನೇಕ ಸಲ ನಾಶಮಾಡುವಷ್ಟು ಅಣುಶಸ್ತ್ರಾಸ್ತ್ರಗಳು ಲಭ್ಯ. ಅಂತರ್ಯುದ್ಧಗಳು. ಭಯೋತ್ಪಾದನೆಯು ಇಡೀ ಲೋಕವನ್ನೇ ಕಬಳಿಸುತ್ತಿದೆ.
ಸಾಂಕ್ರಾಮಿಕ ರೋಗಗಳು ಮತ್ತು ಇತರ ಅಸ್ವಸ್ಥತೆಗಳು: 1918ರಿಂದ ಸ್ಪ್ಯಾನಿಷ್ ಫ್ಲೂ ರೋಗವು 2,10,00,000 ಜನರನ್ನು ಕೊಂದಿದೆ. ಏಯ್ಡ್ಸ್ ಈಗ “ಮಾನವ ಇತಿಹಾಸದಲ್ಲೇ ಅತಿ ವಿನಾಶಕರ ಸರ್ವವ್ಯಾಪಿ ರೋಗವಾಗಿ” ಪರಿಣಮಿಸಿದೆ. ಕ್ಯಾನ್ಸರ್ ಮತ್ತು ಹೃದ್ರೋಗವು ಇಡೀ ಜಗತ್ತಿಗೆ ಉಭಯಸಂಕಟವನ್ನು ಉಂಟುಮಾಡಿದೆ.
ಒಂದೊಂದೇ ವಾರ್ತಾ ವಿಷಯಗಳ ಮೇಲೆ ಗಮನಹರಿಸದಿರಿ. ಇವೆಲ್ಲವೂ ಅಪರೂಪದ ಘಟನೆಗಳಾಗಿವೆಯೊ? ಅಥವಾ ಇವು ನಿಜ ವೈಶಿಷ್ಟ್ಯವಿರುವ ಭೌಗೋಳಿಕ ನಮೂನೆಯ ಒಂದು ಭಾಗವಾಗಿವೆಯೊ?
[ಪುಟ 5ರಲ್ಲಿರುವ ಚೌಕ/ಚಿತ್ರ]
ದೇವರು ನಿಜವಾಗಿಯೂ ನಮ್ಮ ಕುರಿತು ಕಾಳಜಿ ವಹಿಸುತ್ತಾನೆಯೆ?
ಆಘಾತಕರ ಘಟನೆಗಳಿಂದ ಅಥವಾ ವೈಯಕ್ತಿಕ ಬೇಗುದಿಯ ಕಾರಣದಿಂದ ಸಂಕಟಕ್ಕೊಳಗಾಗಿರುವ ಅನೇಕ ಜನರು, ಇಂಥ ಅವಗಡಗಳನ್ನು ದೇವರು ಯಾಕೆ ತಡೆಗಟ್ಟುವುದಿಲ್ಲ ಎಂದು ಹಲುಬುತ್ತಾರೆ.
ದೇವರು ನಿಶ್ಚಯವಾಗಿಯೂ ಕಾಳಜಿ ವಹಿಸುತ್ತಾನೆ. ಆತನು ಈಗ ವಿಶ್ವಾಸಾರ್ಹ ಮಾರ್ಗದರ್ಶನವನ್ನು ಹಾಗೂ ನಿಜವಾದ ಪರಿಹಾರವನ್ನು ಒದಗಿಸುತ್ತಾನೆ. (ಮತ್ತಾಯ 11:28-30; 2 ತಿಮೊಥೆಯ 3:16, 17) ಹಿಂಸಾಚಾರ, ಅಸ್ವಸ್ಥತೆ, ಮತ್ತು ಮರಣವನ್ನು ಶಾಶ್ವತವಾಗಿ ಕೊನೆಗೊಳಿಸಲಿಕ್ಕಾಗಿ ಏರ್ಪಾಡುಗಳನ್ನು ಮಾಡಿದ್ದಾನೆ. ಆತನು ಮಾಡಿರುವ ಒದಗಿಸುವಿಕೆಗಳು, ಆತನು ಕೇವಲ ಒಂದು ದೇಶದ ಜನರಲ್ಲಿ ಮಾತ್ರವಲ್ಲ ಎಲ್ಲಾ ಜನಾಂಗ, ಕುಲ, ಮತ್ತು ಭಾಷೆಗಳ ಜನರಲ್ಲಿ ಕಾಳಜಿ ವಹಿಸುತ್ತಾನೆ ಎಂಬುದನ್ನು ರುಜುಪಡಿಸುತ್ತವೆ.—ಅ. ಕೃತ್ಯಗಳು 10:34, 35.
ದೇವರ ಬಗ್ಗೆ ನಾವೆಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತೇವೆ? ಭೂಪರಲೋಕಗಳ ಸೃಷ್ಟಿಕರ್ತನು ಯಾರು? ಆತನ ಹೆಸರೇನು? ಆತನ ಉದ್ದೇಶವೇನು ಎಂಬುದು ನಿಮಗೆ ಗೊತ್ತಿದೆಯೊ? ಈ ಪ್ರಶ್ನೆಗಳಿಗೆ ಆತನು ಬೈಬಲಿನಲ್ಲಿ ಉತ್ತರ ನೀಡುತ್ತಾನೆ. ಹಿಂಸಾಚಾರ, ಅಸ್ವಸ್ಥತೆ, ಮತ್ತು ಮರಣವನ್ನು ಪೂರ್ಣವಾಗಿ ನಿರ್ಮೂಲಮಾಡಲಿಕ್ಕಾಗಿ ಆತನು ಯಾವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾನೆ ಎಂಬುದನ್ನು ನಮಗೆ ಬೈಬಲಿನಲ್ಲಿ ತಿಳಿಸುತ್ತಾನೆ. ಇದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ನಾವೇನು ಮಾಡುವ ಅಗತ್ಯವಿದೆ? ನಾವು ಆತನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಕಲಿಯುವ ಅಗತ್ಯವಿದೆ. ನಾವು ಆತನಲ್ಲಿ ನಂಬಿಕೆಯನ್ನು ತೋರಿಸದಿದ್ದರೆ, ಆತನ ಒದಗಿಸುವಿಕೆಗಳಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುವುದನ್ನು ಹೇಗೆ ನಿರೀಕ್ಷಿಸಸಾಧ್ಯವಿದೆ? (ಯೋಹಾನ 3:16; ಇಬ್ರಿಯ 11:6) ಆತನು ಏನನ್ನು ಅಪೇಕ್ಷಿಸುತ್ತಾನೋ ಅದಕ್ಕೆ ವಿಧೇಯತೆಯನ್ನು ತೋರಿಸುವುದೂ ಅತ್ಯಗತ್ಯವಾಗಿದೆ. (1 ಯೋಹಾನ 5:3) ದೇವರ ಅಪೇಕ್ಷೆಗಳಿಗೆ ವಿಧೇಯರಾಗುವಷ್ಟರ ಮಟ್ಟಿಗೆ ನೀವು ಆತನಲ್ಲಿ ಕಾಳಜಿ ವಹಿಸುತ್ತೀರೋ?
ಸದ್ಯದ ಪರಿಸ್ಥಿತಿಗಳು ದೇವರಿಂದ ಏಕೆ ಅನುಮತಿಸಲ್ಪಟ್ಟಿವೆ ಎಂಬುದನ್ನು ತಿಳಿಯಬೇಕಾದರೆ, ನಾವು ಒಂದು ಅತ್ಯಾವಶ್ಯಕ ವಿವಾದಾಂಶವನ್ನು ಅರ್ಥಮಾಡಿಕೊಳ್ಳಲೇಬೇಕಾಗಿದೆ. ಅದನ್ನು ಬೈಬಲು ವಿವರಿಸುತ್ತದೆ. ಈ ಪ್ರಕಾಶನದ 15ನೆಯ ಪುಟದಲ್ಲಿ, ಈ ವಿವಾದಾಂಶವು ಏನಾಗಿದೆ ಎಂಬುದನ್ನು ನೀವು ಓದಸಾಧ್ಯವಿದೆ.