ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಡೆಯುತ್ತಿರುವ ಘಟನೆಗಳೆಲ್ಲಾ ಏನನ್ನು ಅರ್ಥೈಸುತ್ತವೆ?

ನಡೆಯುತ್ತಿರುವ ಘಟನೆಗಳೆಲ್ಲಾ ಏನನ್ನು ಅರ್ಥೈಸುತ್ತವೆ?

ನಡೆಯುತ್ತಿರುವ ಘಟನೆಗಳೆಲ್ಲಾ ಏನನ್ನು ಅರ್ಥೈಸುತ್ತವೆ?

ಯೇಸು ಕ್ರಿಸ್ತನು ಹೇಳಿದ್ದು: “ಯುಗದ ಸಮಾಪ್ತಿ”ಯು, ಯುದ್ಧ, ಆಹಾರದ ಅಭಾವ, ಸಾಂಕ್ರಾಮಿಕ ರೋಗಗಳು, ಮತ್ತು ಭೂಕಂಪಗಳಿಂದ ಗುರುತಿಸಲ್ಪಡುವುದು.​—ಮತ್ತಾಯ 24:1-8; ಲೂಕ 21:10, 11.

ಇಸವಿ 1914ರಿಂದ, ಅನೇಕವೇಳೆ ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ತಲೆಹಾಕಿರುವುದರ ಫಲಿತಾಂಶವಾಗಿ ಮತ್ತು ಇತ್ತೀಚಿಗೆ ಜಗದ್ವ್ಯಾಪಕವಾಗಿ ಭಯೋತ್ಪಾದಕರ ಆಕ್ರಮಣಗಳ ಫಲಿತಾಂಶವಾಗಿ, ರಾಷ್ಟ್ರಗಳ ಹಾಗೂ ಕುಲಸಂಬಂಧಿತ ಗುಂಪುಗಳ ನಡುವಣ ಯುದ್ಧಗಳಿಂದ ಜೀವನವು ಜರ್ಜರಿತಗೊಂಡಿದೆ.

ಆಹಾರದ ಉತ್ಪಾದನೆಯಲ್ಲಿ ಎಷ್ಟೇ ವೈಜ್ಞಾನಿಕ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ಭೂವ್ಯಾಪಕವಾಗಿ ಜೀವಿಸುತ್ತಿರುವ ನೂರಾರು ಕೋಟಿ ಜನರು ವಿಪರೀತ ಆಹಾರದ ಅಭಾವದಿಂದ ನರಳುತ್ತಿದ್ದಾರೆ. ಪ್ರತಿ ವರ್ಷ ದಶಲಕ್ಷಗಳಷ್ಟು ಜನರು ಆಹಾರದ ಅಭಾವದಿಂದ ಮರಣವನ್ನಪ್ಪುತ್ತಾರೆ.

ಸಾಂಕ್ರಾಮಿಕ ರೋಗಗಳು ಸಹ ಯೇಸುವಿನಿಂದ ಕೊಡಲ್ಪಟ್ಟ ಸೂಚನೆಯ ಭಾಗವಾಗಿವೆ. ಒಂದನೆಯ ಲೋಕ ಯುದ್ಧದ ಬಳಿಕ, ಇನ್‌ಫ್ಲುಯೆನ್ಸ ಎಂಬ ಸಾಂಕ್ರಾಮಿಕ ರೋಗವು 2,10,00,000 ಜೀವಗಳನ್ನು ಬಲಿತೆಗೆದುಕೊಂಡಿತು. ಗತಕಾಲದಲ್ಲಿ ಕೆಲವೇ ನಿರ್ದಿಷ್ಟ ಕ್ಷೇತ್ರಗಳನ್ನು ಮಾತ್ರ ಬಾಧಿಸಿದಂಥ ರೋಗಗಳಿಗೆ ಅಸದೃಶವಾಗಿ ಈ ರೋಗವು ಭೂಮಿಯಾದ್ಯಂತ ಇರುವ ದೇಶಗಳನ್ನು ಮತ್ತು ಅತಿ ದೂರದಲ್ಲಿರುವ ದ್ವೀಪಗಳನ್ನೂ ಬಾಧಿಸಿತು. ಈಗ ಏಯ್ಡ್ಸ್‌ ರೋಗವು ಜಗತ್ತಿನಾದ್ಯಂತ ಇರುವ ಅನೇಕ ಜನರನ್ನು ಬಾಧಿಸುತ್ತಿದೆ, ಮತ್ತು ಕ್ಷಯ, ಮಲೇರಿಯ, ಟೈಫಾಯ್ಡ್‌, ಹಾಗೂ ಡೆಂಗ್ಯೂ ಜ್ವರದಂಥ ಕಾಯಿಲೆಗಳು ಪ್ರಗತಿಶೀಲ ರಾಷ್ಟ್ರಗಳಲ್ಲಿರುವ ಜನರನ್ನು ಬಾಧಿಸುತ್ತಿವೆ.

ವರದಿಗನುಸಾರವಾಗಿ, ಪ್ರತಿ ವರ್ಷ ವಿವಿಧ ಮಟ್ಟದ ಪ್ರಖರತೆಯಿರುವ ಹತ್ತಾರು ಸಾವಿರ ಭೂಕಂಪಗಳು ಸಂಭವಿಸುತ್ತಿವೆ. ಅನೇಕ ಸಾಧನಗಳು ಮತ್ತು ಭೂಕಂಪಗಳು ಹಾಗೂ ಅವುಗಳ ತೀಕ್ಷ್ಣತೆಯನ್ನು ವರದಿಸುವ ಉತ್ತಮ ವಿಧಾನಗಳು ಲಭ್ಯವಿರುವುದಾದರೂ, ಭೂಕಂಪಗಳ ಪರಿಣಾಮವಾಗಿ ಅಪಾರ ಜನಸಂಖ್ಯೆಯಿರುವ ಕ್ಷೇತ್ರಗಳಲ್ಲಿ ನಡೆಯುವ ವಿಪತ್ತುಗಳೇ ಪದೇ ಪದೇ ವಾರ್ತೆಗಳಲ್ಲಿ ಕೇಳಿಬರುತ್ತವೆ.

ಬೈಬಲು ಇನ್ನೂ ಮುಂತಿಳಿಸಿದ್ದು: “ಕಡೇ ದಿವಸಗಳಲ್ಲಿ [“ನಿಭಾಯಿಸಲು ಕಷ್ಟಕರವಾದ,” NW] ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.”​—2 ತಿಮೊಥೆಯ 3:1-5.

‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ?

ಜನರು ವಿಪರೀತ ಸ್ವಾರ್ಥಚಿಂತಕರೂ ಹಣದಾಸೆಯವರೂ ಅಹಂಕಾರಿಗಳೂ ಆಗಿದ್ದಾರೆ ಎಂಬುದನ್ನು ನೀವು ಗಮನಿಸಿದ್ದೀರೋ?

ಈ ಲೋಕವು, ಸ್ವಾರ್ಥಮಗ್ನರೂ ಕೃತಘ್ನರೂ ಸಮಾಧಾನವಾಗದವರೂ ನಿಷ್ಠಾರಹಿತರೂ ಆಗಿರುವ ಜನರಿಂದ ತುಂಬಿತುಳುಕುತ್ತಿದೆ ಎಂಬುದನ್ನು ಯಾರು ತಾನೆ ಅಲ್ಲಗಳೆಯಬಲ್ಲರು?

ಹೆತ್ತವರಿಗೆ ತೋರಿಸಲ್ಪಡುವ ಅವಿಧೇಯತೆ ಹಾಗೂ ಸ್ವಲ್ಪವೂ ಮಮತೆಯಿಲ್ಲದಿರುವಿಕೆಯು, ಕೆಲವೇ ಸ್ಥಳಗಳಲ್ಲಿ ಅಲ್ಲ ಬದಲಾಗಿ ಭೂಗೋಳದಾದ್ಯಂತ ಅತ್ಯಧಿಕ ಮಟ್ಟದಲ್ಲಿ ಹೆಚ್ಚಿದೆ ಎಂಬುದು ನಿಮಗೆ ತಿಳಿದಿದೆಯೊ?

ಸುಖಾನುಭವದ ಮತ್ತೇರಿರುವ, ಆದರೆ ಒಳ್ಳೇತನದ ಪ್ರೀತಿಯ ಕೊರತೆಯಿರುವಂಥ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ನೀವು ಗ್ರಹಿಸುತ್ತಿದ್ದೀರಿ ಎಂಬುದರಲ್ಲಿ ಸಂದೇಹವೇ ಇಲ್ಲ. “ಕಡೇ ದಿವಸಗಳಲ್ಲಿ” ಇದೇ ರೀತಿಯ ಮನೋಭಾವಗಳು ಮೇಲುಗೈ ಪಡೆಯುತ್ತವೆ ಎಂದು ಬೈಬಲ್‌ ವಿವರಿಸುತ್ತದೆ.

ನಾವು ಜೀವಿಸುತ್ತಿರುವ ಈ ಕಾಲವನ್ನು ಗುರುತಿಸಲು ಇನ್ನೂ ಹೆಚ್ಚಿನ ರುಜುವಾತಿನ ಆವಶ್ಯಕತೆಯಿದೆಯೋ? ಇದೇ ಸಮಯದಲ್ಲಿ ದೇವರ ರಾಜ್ಯದ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು ಎಂದು ಸಹ ಯೇಸು ಮುಂತಿಳಿಸಿದನು. (ಮತ್ತಾಯ 24:14) ಈ ಕೆಲಸವು ಮಾಡಲ್ಪಡುತ್ತಿದೆಯೋ?

ಯೆಹೋವನ ರಾಜ್ಯದ ಸುವಾರ್ತೆಯನ್ನು ಪ್ರಕಟಿಸಲಿಕ್ಕಾಗಿ ಮೀಸಲಾಗಿಡಲ್ಪಟ್ಟಿರುವ ಕಾವಲಿನಬುರುಜು ಎಂಬ ಬೈಬಲಾಧಾರಿತ ಪತ್ರಿಕೆಯು, ಇತರ ಯಾವುದೇ ನಿಯತಕಾಲಿಕಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಕ್ರಮವಾಗಿ ಮುದ್ರಿಸಲ್ಪಡುತ್ತಿದೆ.

ಪ್ರತಿ ವರ್ಷ ಯೆಹೋವನ ಸಾಕ್ಷಿಗಳು, ದೇವರ ರಾಜ್ಯದ ಕುರಿತು ಇತರರಿಗೆ ವೈಯಕ್ತಿಕವಾಗಿ ಸಾಕ್ಷಿನೀಡಲಿಕ್ಕಾಗಿ ಶತಕೋಟಿಗಿಂತಲೂ ಹೆಚ್ಚು ತಾಸುಗಳನ್ನು ವಿನಿಯೋಗಿಸುತ್ತಾರೆ.

ಬೈಬಲನ್ನು ವಿವರಿಸುವಂಥ ಸಾಹಿತ್ಯವು ಅವರಿಂದ ಸುಮಾರು 400 ಭಾಷೆಗಳಲ್ಲಿ​—ಅತಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಚಿಕ್ಕ ಜನಸಂಖ್ಯೆಯಿರುವ ಗುಂಪುಗಳಿಂದ ಓದಲ್ಪಡುವ ಭಾಷೆಗಳಲ್ಲಿ ಸಹ—ಪ್ರಕಾಶನ ಮಾಡಲ್ಪಡುತ್ತಿದೆ. ಯೆಹೋವನ ಸಾಕ್ಷಿಗಳು ಎಲ್ಲಾ ಜನಾಂಗಗಳಿಗೆ ಸುವಾರ್ತೆಯನ್ನು ತಲಪಿಸಿದ್ದಾರೆ; ರಾಜಕೀಯ ದೃಷ್ಟಿಕೋನದಿಂದ ನೋಡುವಾಗ ತೀರ ಕ್ಷುಲ್ಲಕವಾಗಿರುವಂಥ ಅನೇಕ ದ್ವೀಪಗಳಲ್ಲಿ ಮತ್ತು ಟೆರಿಟೊರಿಗಳಲ್ಲಿಯೂ ಅವರು ಸಾರುವ ಕೆಲಸವನ್ನು ಪೂರೈಸಿದ್ದಾರೆ. ಬಹುತೇಕ ದೇಶಗಳಲ್ಲಿ ಅವರು ಕ್ರಮವಾದ ಬೈಬಲ್‌ ಶಿಕ್ಷಣ ಕಾರ್ಯಕ್ರಮವನ್ನು ನಡೆಸುತ್ತಾರೆ.

ವಾಸ್ತವದಲ್ಲಿ, ದೇವರ ರಾಜ್ಯದ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾರಲ್ಪಡುತ್ತಿರುವುದು ಲೋಕವನ್ನು ಮತಾಂತರಿಸಲಿಕ್ಕಾಗಿ ಅಲ್ಲ, ಸಾಕ್ಷಿಯನ್ನು ನೀಡಲಿಕ್ಕಾಗಿಯೇ. ಎಲ್ಲಾ ಕಡೆಗಳಲ್ಲಿರುವ ಜನರು, ಭೂಪರಲೋಕಗಳನ್ನು ಸೃಷ್ಟಿಸಿದ್ದು ಯಾರು ಎಂಬ ವಿಷಯದಲ್ಲಿ ಆಸಕ್ತರಾಗಿದ್ದಾರೋ ಮತ್ತು ಆತನ ನಿಯಮಗಳನ್ನು ಗೌರವಿಸುವರೋ ಹಾಗೂ ಜೊತೆ ಮಾನವರಿಗೆ ಪ್ರೀತಿಯನ್ನು ವ್ಯಕ್ತಪಡಿಸುವರೋ ಎಂಬುದನ್ನು ತೋರಿಸಲಿಕ್ಕಾಗಿ ಅವರಿಗೆ ಒಂದು ಸದವಕಾಶವು ಕೊಡಲ್ಪಡುತ್ತಿದೆ.​—ಲೂಕ 10:​25-27; ಪ್ರಕಟನೆ 4:11.

ಅತಿ ಬೇಗನೆ ದೇವರ ರಾಜ್ಯವು ಭೂಮಿಯಿಂದ ಎಲ್ಲಾ ದುಷ್ಟರನ್ನು ತೆಗೆದುಹಾಕುವುದು ಮತ್ತು ಅದನ್ನು ಒಂದು ಭೌಗೋಳಿಕ ಪರದೈಸಾಗಿ ಮಾಡುವುದು.​—ಲೂಕ 23:43.

[ಪುಟ 6ರಲ್ಲಿರುವ ಚೌಕ]

ಯಾವುದರ ಕಡೇ ದಿವಸಗಳು?

ಇವು ಮಾನವಕುಲದ ಕಡೇ ದಿವಸಗಳಲ್ಲ. ಏಕೆಂದರೆ, ದೇವರ ಚಿತ್ತವನ್ನು ನೆರವೇರಿಸುವವರಿಗೆ ಬೈಬಲು ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ನೀಡುತ್ತದೆ.​—ಯೋಹಾನ 3:16, 36; 1 ಯೋಹಾನ 2:17.

ಇವು ಭೂಮಿಯ ಕಡೇ ದಿವಸಗಳಲ್ಲ. ನಿವಾಸಿತ ಭೂಮಿಯು ಯುಗಯುಗಾಂತರಕ್ಕೂ ಅಸ್ತಿತ್ವದಲ್ಲಿರುವುದು ಎಂದು ದೇವರ ವಾಕ್ಯವು ವಾಗ್ದಾನಿಸುತ್ತದೆ.​—ಕೀರ್ತನೆ 37:29; 104:5; ಯೆಶಾಯ 45:18.

ಅದಕ್ಕೆ ಬದಲಾಗಿ, ಇವು ಈ ಹಿಂಸಾತ್ಮಕ, ಪ್ರೀತಿರಹಿತ ವಿಷಯಗಳ ವ್ಯವಸ್ಥೆಯ ಮತ್ತು ಇದರ ರೀತಿನೀತಿಗಳಿಗೆ ಬಲವಾಗಿ ಅಂಟಿಕೊಂಡಿರುವವರ ಕಡೇ ದಿವಸಗಳಾಗಿವೆ.​—ಜ್ಞಾನೋಕ್ತಿ 2:​21, 22.

[ಪುಟ 7ರಲ್ಲಿರುವ ಚೌಕ/ಚಿತ್ರ]

ಬೈಬಲು ನಿಜವಾಗಿಯೂ ದೇವರ ವಾಕ್ಯವಾಗಿದೆಯೆ?

ಬೈಬಲ್‌ ಪ್ರವಾದಿಗಳು ಅನೇಕಾವರ್ತಿ “ಯೆಹೋವನು ಹೀಗನ್ನುತ್ತಾನೆ” ಎಂದು ಬರೆದರು. (ಯೆಶಾಯ 43:14; ಯೆರೆಮೀಯ 2:2) ದೇವಕುಮಾರನಾಗಿರುವ ಯೇಸು ಕ್ರಿಸ್ತನು ಸಹ, ‘ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೇ ನಾನೇ ಆಡುವುದಿಲ್ಲ’ ಎಂದು ಒತ್ತಿಹೇಳಿದನು. (ಯೋಹಾನ 14:​10) ಬೈಬಲು ತಾನೇ ಸ್ಪಷ್ಟವಾಗಿ ಹೇಳುವುದು: ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ.’​—2 ತಿಮೊಥೆಯ 3:16.

ಬೇರೆ ಯಾವುದೇ ಗ್ರಂಥವು ಇದರಷ್ಟು ಹೆಚ್ಚು ಭಾಷೆಗಳಲ್ಲಿ ಪ್ರಕಟಿಸಲ್ಪಟ್ಟಿಲ್ಲ​—ಯುನೈಟೆಡ್‌ ಬೈಬಲ್‌ ಸೊಸೈಟೀಸ್‌ನಿಂದ ವರದಿಸಲ್ಪಟ್ಟಂತೆ, ಬೈಬಲು 2,200ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಪ್ರಕಟಿಸಲ್ಪಟ್ಟಿದೆ. ಬೇರೆ ಯಾವುದೇ ಪುಸ್ತಕವು ಇದರಷ್ಟು ಹೆಚ್ಚು ಪ್ರಮಾಣದಲ್ಲಿ ವಿತರಿಸಲ್ಪಟ್ಟಿಲ್ಲ​—ಈಗ ನಾಲ್ಕು ಶತಕೋಟಿಗಿಂತಲೂ ಹೆಚ್ಚು ಪ್ರತಿಗಳು ವಿತರಿಸಲ್ಪಟ್ಟಿವೆ. ಸರ್ವ ಮಾನವಕುಲಕ್ಕಾಗಿ ದೇವರಿಂದ ಕೊಡಲ್ಪಟ್ಟಿರುವ ಒಂದು ಸಂದೇಶದ ವಿಷಯದಲ್ಲಿ ನೀವು ಇದನ್ನೇ ನಿರೀಕ್ಷಿಸುತ್ತೀರಲ್ಲವೇ?

ಬೈಬಲು ದೈವಪ್ರೇರಿತ ಗ್ರಂಥವಾಗಿದೆ ಎಂಬುದರ ಪುರಾವೆಗಳ ಕುರಿತಾದ ಇನ್ನೂ ಹೆಚ್ಚಿನ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರನ್ನು ನೋಡಿ.

ಬೈಬಲು ನಿಜವಾಗಿಯೂ ದೇವರ ವಾಕ್ಯವಾಗಿದೆ ಎಂಬ ವಾಸ್ತವಾಂಶಕ್ಕಾಗಿರುವ ಗಣ್ಯತೆಯೊಂದಿಗೆ ನೀವು ಅದನ್ನು ಓದುವಲ್ಲಿ, ಖಂಡಿತವಾಗಿಯೂ ಅದರಿಂದ ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳುವಿರಿ.

[ಪುಟ 8ರಲ್ಲಿರುವ ಚೌಕ/ಚಿತ್ರಗಳು]

ದೇವರ ರಾಜ್ಯವೆಂದರೇನು?

ಇದು ಸ್ವರ್ಗೀಯ ಸರಕಾರವಾಗಿದ್ದು, ಭೂಪರಲೋಕಗಳ ಸೃಷ್ಟಿಕರ್ತನಾಗಿರುವ ಸತ್ಯ ದೇವರಾದ ಯೆಹೋವನ ಆಳ್ವಿಕೆಯನ್ನು ವ್ಯಕ್ತಪಡಿಸುತ್ತದೆ.​—ಯೆರೆಮೀಯ 10:​10, 12.

ಇಂಥ ಆಳುವ ಅಧಿಕಾರವನ್ನು ದೇವರು ಯೇಸು ಕ್ರಿಸ್ತನಿಗೇ ಕೊಡುವನು ಎಂಬುದನ್ನು ಬೈಬಲು ಸ್ಪಷ್ಟಪಡಿಸುತ್ತದೆ. (ಪ್ರಕಟನೆ 11:15) ಯೇಸು ಭೂಮಿಯಲ್ಲಿದ್ದಾಗ, ಆಗಲೇ ದೇವರಿಂದ ಬಹಳಷ್ಟು ಅಧಿಕಾರವು ತನಗೆ ಕೊಡಲ್ಪಟ್ಟಿದೆಯೆಂಬುದನ್ನು ರುಜುಪಡಿಸಿದನು. ಈ ಅಧಿಕಾರವು ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸುವ, ಎಲ್ಲಾ ರೀತಿಯ ಅಸ್ವಸ್ಥತೆಗಳನ್ನು ವಾಸಿಮಾಡುವ, ಮತ್ತು ಮೃತರನ್ನು ಸಹ ಪುನರುತ್ಥಾನಗೊಳಿಸುವ ಸಾಮರ್ಥ್ಯವನ್ನು ಅವನಿಗೆ ನೀಡಿತು. (ಮತ್ತಾಯ 9:2-8; ಮಾರ್ಕ 4:37-41; ಯೋಹಾನ 11:11-44) ‘ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವನ್ನೂ ಘನತೆಯನ್ನೂ ರಾಜ್ಯವನ್ನೂ’ ದೇವರು ಕೊಡುವನು ಎಂದು ಪ್ರೇರಿತ ಬೈಬಲ್‌ ಪ್ರವಾದನೆಯು ಮುಂತಿಳಿಸಿತು. (ದಾನಿಯೇಲ 7:​13, 14) ಆ ಸರಕಾರವೇ ಸ್ವರ್ಗೀಯ ರಾಜ್ಯವೆಂದು ಕರೆಯಲ್ಪಟ್ಟಿದೆ; ಈಗ ಯೇಸು ಕ್ರಿಸ್ತನು ಅಧಿಕಾರ ನಡೆಸುತ್ತಿರುವುದು ಸ್ವರ್ಗದಿಂದಲೇ.

[ಪುಟ 7ರಲ್ಲಿರುವ ಚಿತ್ರಗಳು]

ಸುವಾರ್ತೆಯ ಭೂವ್ಯಾಪಕ ಸಾರುವಿಕೆ