ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೀವು ಪ್ರಲೋಭನೆಯೊಳಗೆ ಪ್ರವೇಶಿಸದಿರುವಂತೆ”

“ನೀವು ಪ್ರಲೋಭನೆಯೊಳಗೆ ಪ್ರವೇಶಿಸದಿರುವಂತೆ”

“ನೀವು ಪ್ರಲೋಭನೆಯೊಳಗೆ ಪ್ರವೇಶಿಸದಿರುವಂತೆ”

“ನೀವು ಪ್ರಲೋಭನೆಯೊಳಗೆ ಪ್ರವೇಶಿಸದಿರುವಂತೆ ಎಚ್ಚರಿಕೆಯಿಂದಿದ್ದು, ಎಡೆಬಿಡದೆ ಪ್ರಾರ್ಥಿಸಿರಿ.”​—ಮತ್ತಾಯ 26:41, NW.

ಈ ಒತ್ತಡವು, ದೇವಕುಮಾರನಾದ ಯೇಸು ಕ್ರಿಸ್ತನು ಈ ಮುಂಚೆ ಅನುಭವಿಸಿದ್ದ ಯಾವುದೇ ಒತ್ತಡಕ್ಕಿಂತ ಹೆಚ್ಚು ತೀಕ್ಷ್ಣವಾಗಿತ್ತು. ಅವನ ಭೂಜೀವಿತದ ಅಂತ್ಯವು ಸಮೀಪಿಸಿತ್ತು. ಬೇಗನೆ ತನ್ನನ್ನು ಬಂಧಿಸಲಾಗುತ್ತದೆ, ಮರಣಕ್ಕೆ ಒಪ್ಪಿಸಲಾಗುತ್ತದೆ, ಮತ್ತು ಯಾತನಾ ಕಂಬದ ಮೇಲೆ ತೂಗುಹಾಕಲಾಗುತ್ತದೆ ಎಂಬುದನ್ನು ಯೇಸು ಗ್ರಹಿಸಿದನು. ತನ್ನ ಪ್ರತಿಯೊಂದು ನಿರ್ಣಯಗಳು ಮತ್ತು ಕೃತ್ಯಗಳು ತನ್ನ ತಂದೆಯ ಹೆಸರಿಗೆ ಕೀರ್ತಿಯನ್ನು ಇಲ್ಲವೆ ಅಪಕೀರ್ತಿಯನ್ನು ತರುತ್ತವೆ ಎಂಬುದು ಅವನಿಗೆ ಗೊತ್ತಿತ್ತು. ಮಾನವಕುಲದ ಭಾವೀ ಜೀವಿತದ ಪ್ರತೀಕ್ಷೆಗಳು ಈಗ ನಿರ್ಧರಿಸಲ್ಪಡಲಿಕ್ಕಿವೆ ಎಂಬುದೂ ಯೇಸುವಿಗೆ ತಿಳಿದಿತ್ತು. ಈ ಎಲ್ಲಾ ಒತ್ತಡವನ್ನು ಎದುರಿಸುತ್ತಿದ್ದಾಗ ಅವನು ಏನು ಮಾಡಿದನು?

2 ತನ್ನ ಶಿಷ್ಯರೊಂದಿಗೆ ಯೇಸು ಗೆತ್ಸೇಮನೆ ತೋಟಕ್ಕೆ ಹೋದನು. ಇದು ಯೇಸುವಿಗೆ ತುಂಬ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಅಲ್ಲಿ ಅವನು ತನ್ನ ಶಿಷ್ಯರನ್ನು ಬಿಟ್ಟು ಒಬ್ಬನೇ ಸ್ವಲ್ಪ ಮುಂದಕ್ಕೆ ಹೋದನು. ಕಟ್ಟಾಸಕ್ತಿಯ ಪ್ರಾರ್ಥನೆಯಲ್ಲಿ ತನ್ನ ಆಳವಾದ ಅನಿಸಿಕೆಗಳನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಅವನು ಬಲಕ್ಕಾಗಿ ತನ್ನ ಸ್ವರ್ಗೀಯ ತಂದೆಯ ಬಳಿ ಬೇಡಿಕೊಂಡನು​—ಕೇವಲ ಒಂದು ಸಲವಲ್ಲ, ಬದಲಾಗಿ ಮೂರು ಸಲ ಪ್ರಾರ್ಥಿಸಿದನು. ಯೇಸು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ದನಾದರೂ, ತನ್ನ ಸ್ವಂತ ಬಲದಿಂದಲೇ ಒತ್ತಡಗಳನ್ನು ಎದುರಿಸಬಲ್ಲೆ ಎಂದು ಅವನು ಎಂದೂ ನೆನಸಲಿಲ್ಲ.​—ಮತ್ತಾಯ 26:​36-44.

3 ಇಂದು ನಾವು ಸಹ ಒತ್ತಡದ ಕೆಳಗಿದ್ದೇವೆ. ಇದಕ್ಕೆ ಮುಂಚೆ ಈ ಬ್ರೋಷರಿನಲ್ಲಿ, ಈ ದುಷ್ಟ ವ್ಯವಸ್ಥೆಯ ಕಡೇ ದಿವಸಗಳಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದಕ್ಕಿರುವ ಪುರಾವೆಯನ್ನು ಪರಿಗಣಿಸಿದೆವು. ಸೈತಾನನ ಲೋಕದ ಪ್ರಲೋಭನೆಗಳು ಮತ್ತು ಒತ್ತಡಗಳು ದಿನೇ ದಿನೇ ತೀವ್ರಗೊಳ್ಳುತ್ತಿವೆ. ಸತ್ಯ ದೇವರ ಸೇವೆಮಾಡುತ್ತೇವೆಂದು ಹೇಳಿಕೊಳ್ಳುವಂಥ ಜನರ ನಿರ್ಣಯಗಳು ಮತ್ತು ಕೃತ್ಯಗಳು ಆತನ ಹೆಸರಿನ ಮೇಲೆ ಪ್ರಭಾವ ಬೀರುತ್ತವೆ ಮತ್ತು ಆತನ ಹೊಸ ಲೋಕದಲ್ಲಿನ ಜೀವಿತಕ್ಕಾಗಿರುವ ನಮ್ಮ ವೈಯಕ್ತಿಕ ಪ್ರತೀಕ್ಷೆಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ. ನಾವು ಯೆಹೋವನನ್ನು ಪ್ರೀತಿಸುತ್ತೇವೆ. ನಾವು ‘ಕಡೇ ವರೆಗೆ’​—ಅದು ನಮ್ಮ ಜೀವಿತದ ಕೊನೆಯಾಗಿರಬಹುದು ಅಥವಾ ಈ ವ್ಯವಸ್ಥೆಯ ಕೊನೆಯಾಗಿರಬಹುದು​—‘ತಾಳಿಕೊಳ್ಳಲು’ ಬಯಸುತ್ತೇವೆ; ಯಾವುದೇ ಮೊದಲು ಬರುವುದಾದರೂ ನಾವು ತಾಳಿಕೊಳ್ಳಲು ಇಷ್ಟಪಡುತ್ತೇವೆ. (ಮತ್ತಾಯ 24:13) ಆದರೆ ನಾವು ಹೇಗೆ ನಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ ಮತ್ತು ಎಚ್ಚರಿಕೆಯಿಂದಿರಸಾಧ್ಯವಿದೆ?

4 ಆಗ ಇದ್ದ ಮತ್ತು ಈಗ ಇರುವ ತನ್ನ ಶಿಷ್ಯರು ಸಹ ಒತ್ತಡಕ್ಕೆ ಒಳಗಾಗುವರು ಎಂಬುದನ್ನು ತಿಳಿದವನಾಗಿದ್ದ ಯೇಸು ಉತ್ತೇಜಿಸಿದ್ದು: “ನೀವು ಪ್ರಲೋಭನೆಯೊಳಗೆ ಪ್ರವೇಶಿಸದಿರುವಂತೆ ಎಚ್ಚರಿಕೆಯಿಂದಿದ್ದು, ಎಡೆಬಿಡದೆ ಪ್ರಾರ್ಥಿಸಿರಿ.” (ಮತ್ತಾಯ 26:​41, NW) ಈ ಮಾತುಗಳು ಇಂದು ನಮಗೆ ಏನನ್ನು ಅರ್ಥೈಸುತ್ತವೆ? ನೀವು ಯಾವ ಪ್ರಲೋಭನೆಯನ್ನು ಎದುರಿಸುತ್ತೀರಿ? ಮತ್ತು ನೀವು ಹೇಗೆ ‘ಎಚ್ಚರಿಕೆಯಿಂದಿರಬಲ್ಲಿರಿ?’

ಏನನ್ನು ಮಾಡುವ ಪ್ರಲೋಭನೆ?

5 ಪ್ರತಿದಿನ ನಾವು “ಸೈತಾನನ ಉರ್ಲಿಗೆ” ಸಿಕ್ಕಿಬೀಳುವ ಪ್ರಲೋಭನೆಯನ್ನು ಎದುರಿಸುತ್ತೇವೆ. (2 ತಿಮೊಥೆಯ 2:26) ಸೈತಾನನು ವಿಶೇಷವಾಗಿ ಯೆಹೋವನ ಆರಾಧಕರ ಮೇಲೆ ಗುರಿಯಿಟ್ಟಿದ್ದಾನೆ ಎಂದು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ. (1 ಪೇತ್ರ 5:8; ಪ್ರಕಟನೆ 12:12, 17) ಯಾವ ಉದ್ದೇಶಕ್ಕಾಗಿ? ನಮ್ಮನ್ನು ಕೊಲ್ಲುವುದೇ ಅವನ ಉದ್ದೇಶವಾಗಿರಬೇಕೆಂದೇನಿಲ್ಲ. ನಾವು ದೇವರಿಗೆ ನಂಬಿಗಸ್ತರಾಗಿ ಸಾಯುವುದಾದರೆ ಅದು ಸೈತಾನನಿಗೆ ಜಯವನ್ನೇನೂ ತರುವುದಿಲ್ಲ. ತನ್ನ ತಕ್ಕ ಸಮಯದಲ್ಲಿ ಯೆಹೋವನು ಪುನರುತ್ಥಾನದ ಮೂಲಕ ಮರಣವನ್ನು ಇಲ್ಲವಾಗಿಸುವನು ಎಂಬುದು ಸೈತಾನನಿಗೆ ಗೊತ್ತಿದೆ.​—ಲೂಕ 20:​37, 38.

6 ಸೈತಾನನು ನಮ್ಮ ಸದ್ಯದ ಜೀವನಕ್ಕಿಂತಲೂ ಹೆಚ್ಚು ಅಮೂಲ್ಯವಾದ ವಿಚಾರವನ್ನು, ಅಂದರೆ ದೇವರ ಕಡೆಗಿನ ನಮ್ಮ ಸಮಗ್ರತೆಯನ್ನು ಹಾಳುಮಾಡಲು ಬಯಸುತ್ತಾನೆ. ತಾನು ಜನರನ್ನು ಯೆಹೋವನಿಂದ ವಿಮುಖಗೊಳಿಸಬಲ್ಲೆ ಎಂಬುದನ್ನು ರುಜುಪಡಿಸಲು ಸೈತಾನನು ಅತ್ಯಾತುರನಾಗಿದ್ದಾನೆ. ಆದುದರಿಂದಲೇ, ಒಂದುವೇಳೆ ನಾವು ಅಪನಂಬಿಗಸ್ತರಾಗುವಂತೆ, ಅಂದರೆ ಸುವಾರ್ತೆಯನ್ನು ಸಾರುವುದನ್ನು ನಿಲ್ಲಿಸುವಂತೆ ಅಥವಾ ಕ್ರೈಸ್ತ ಮಟ್ಟಗಳನ್ನು ತೊರೆಯುವಂತೆ ಪ್ರಭಾವಿಸಲ್ಪಡುವಲ್ಲಿ, ಇದು ಸೈತಾನನಿಗೆ ಒಂದು ವಿಜಯವಾಗಿರಬಲ್ಲದು! (ಎಫೆಸ 6:​11-13) ಹೀಗೆ “ಪ್ರಲೋಭನಕಾರನು” ನಮ್ಮ ಮುಂದೆ ಪ್ರಲೋಭನೆಗಳನ್ನು ಒಡ್ಡುತ್ತಾನೆ.​—ಮತ್ತಾಯ 4:3, NW.

7 ಸೈತಾನನು ಬೇರೆ ಬೇರೆ ರೀತಿಯ ‘ತಂತ್ರೋಪಾಯಗಳನ್ನು’ ಉಪಯೋಗಿಸುತ್ತಾನೆ. (ಎಫೆಸ 6:​11) ಪ್ರಾಪಂಚಿಕತೆ, ಭಯ, ಸಂಶಯ, ಅಥವಾ ಸುಖಾನುಭೋಗಗಳ ಹುಡುಕಾಟದ ಮೂಲಕ ಅವನು ನಮ್ಮನ್ನು ಪ್ರಲೋಭನೆಗೊಳಪಡಿಸಬಹುದು. ಆದರೆ ಅವನ ಅತ್ಯಂತ ಪರಿಣಾಮಕಾರಿ ವಿಧಗಳಲ್ಲಿ ಒಂದು, ನಿರುತ್ತೇಜನವೇ ಆಗಿದೆ. ಅವನು ಒಬ್ಬ ಕೃತ್ರಿಮ ಅವಕಾಶವಾದಿಯಾಗಿರುವುದರಿಂದ, ಹತಾಶೆಯು ನಮ್ಮನ್ನು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಸಾಧ್ಯವಿದೆ ಮತ್ತು ಸುಲಭವಾಗಿ ಪ್ರಲೋಭನೆಗೆ ಒಳಗಾಗಿಸಸಾಧ್ಯವಿದೆ ಎಂಬುದನ್ನು ತಿಳಿದಿದ್ದಾನೆ. (ಜ್ಞಾನೋಕ್ತಿ 24:10) ಆದುದರಿಂದ, ವಿಶೇಷವಾಗಿ ನಾವು ಭಾವನಾತ್ಮಕವಾಗಿ ‘ಮನಗುಂದಿದವರಾಗಿರುವಾಗ,’ ಪ್ರಯತ್ನವನ್ನು ಕೈಬಿಡುವಂತೆ ಮಾಡಲು ಅವನು ಪ್ರಲೋಭನೆಯನ್ನು ಉಪಯೋಗಿಸುತ್ತಾನೆ.​—ಕೀರ್ತನೆ 38:8.

8 ನಾವು ಕಡೇ ದಿವಸಗಳ ಅಂತ್ಯವನ್ನು ಸಮೀಪಿಸುತ್ತಿರುವಾಗ, ನಿರುತ್ತೇಜನಕ್ಕಾಗಿರುವ ಕಾರಣಗಳು ಹೆಚ್ಚುತ್ತಿರುವಂತೆ ತೋರುತ್ತದೆ, ಮತ್ತು ನಾವೇನೂ ಇದರಿಂದ ಮುಕ್ತರಲ್ಲ. (“ನಿರುತ್ತೇಜನವನ್ನು ಉಂಟುಮಾಡುವಂಥ ಕೆಲವು ಸಂಗತಿಗಳು” ಎಂಬ ಚೌಕವನ್ನು ನೋಡಿ.) ಕಾರಣವು ಏನೇ ಆಗಿರಲಿ, ನಿರುತ್ತೇಜನವು ಮಾತ್ರ ನಮ್ಮ ಬಲವನ್ನು ಹೀರಿಬಿಡುತ್ತದೆ ಎಂಬುದಂತೂ ನಿಜ. ನಾವು ಶಾರೀರಿಕವಾಗಿ, ಮಾನಸಿಕವಾಗಿ, ಮತ್ತು ಭಾವನಾತ್ಮಕವಾಗಿ ಬಳಲಿಹೋಗಿರುವಲ್ಲಿ, ಬೈಬಲ್‌ ಅಧ್ಯಯನಮಾಡುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು, ಮತ್ತು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದನ್ನೂ ಒಳಗೊಂಡು ಆಧ್ಯಾತ್ಮಿಕ ಕರ್ತವ್ಯಗಳಿಗಾಗಿ “ಅನುಕೂಲಕರ ಸಮಯವನ್ನು ಖರೀದಿಸುವುದು” ಖಂಡಿತವಾಗಿಯೂ ಕಷ್ಟಕರವಾಗಿರಸಾಧ್ಯವಿದೆ. (ಎಫೆಸ 5:​15, 16, NW) ನೀವು ಪ್ರಯತ್ನವನ್ನು ಬಿಟ್ಟುಬಿಡುವುದೇ ಪ್ರಲೋಭನಕಾರನ ಬಯಕೆಯಾಗಿದೆ ಎಂಬುದನ್ನು ಮರೆಯದಿರಿ. ಆದರೆ ಇದು ನಿಧಾನಗೊಳ್ಳುವ ಅಥವಾ ನಾವು ಜೀವಿಸುತ್ತಿರುವಂಥ ಕಾಲಗಳ ಕುರಿತಾದ ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳುವ ಸಮಯವಲ್ಲ! (ಲೂಕ 21:​34-36) ನೀವು ಹೇಗೆ ಪ್ರಲೋಭನೆಯನ್ನು ಎದುರಿಸಿ, ಎಚ್ಚರಿಕೆಯಿಂದಿರಬಲ್ಲಿರಿ? ಸಹಾಯಮಾಡಸಾಧ್ಯವಿರುವ ನಾಲ್ಕು ಸಲಹೆಗಳನ್ನು ಪರಿಗಣಿಸಿರಿ.

ಸತತವಾಗಿ “ಪ್ರಾರ್ಥಿಸಿರಿ”

9ಪ್ರಾರ್ಥನೆಯ ಮೂಲಕ ಯೆಹೋವನನ್ನು ಅವಲಂಬಿಸಿರಿ. ಗೆತ್ಸೇಮನೆ ತೋಟದಲ್ಲಿನ ಯೇಸುವಿನ ಮಾದರಿಯನ್ನು ನೆನಪಿಗೆ ತಂದುಕೊಳ್ಳಿ. ತೀವ್ರವಾದ ಭಾವನಾತ್ಮಕ ಒತ್ತಡದ ಕೆಳಗಿದ್ದಾಗ ಅವನು ಏನು ಮಾಡಿದನು? ಸಹಾಯಕ್ಕಾಗಿ ಯೆಹೋವನ ಕಡೆಗೆ ತಿರುಗಿದನು; ಅವನು ಎಷ್ಟು ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದನೆಂದರೆ, ಅವನ “ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.” (ಲೂಕ 22:44) ಇದರ ಕುರಿತು ತುಸು ಆಲೋಚಿಸಿರಿ. ಸೈತಾನನ ಬಗ್ಗೆ ಯೇಸು ಎಲ್ಲವನ್ನೂ ಬಲ್ಲವನಾಗಿದ್ದನು. ದೇವರ ಸೇವಕರನ್ನು ಪಾಶದಲ್ಲಿ ಸಿಕ್ಕಿಸಲಿಕ್ಕಾಗಿ ಯಾವೆಲ್ಲಾ ಪ್ರಯತ್ನಗಳನ್ನು ಅವನು ಮಾಡುತ್ತಾನೆ ಎಂಬುದನ್ನು ಯೇಸು ಸ್ವರ್ಗದಿಂದ ಗಮನಿಸಿದ್ದನು. ಆದರೂ, ಪ್ರಲೋಭನಕಾರನು ತನ್ನ ಮುಂದೆ ಯಾವುದೇ ಪ್ರಲೋಭನೆಗಳನ್ನು ಬರಮಾಡುವುದಾದರೂ ತಾನು ಅವುಗಳನ್ನು ಸುಲಭವಾಗಿ ಜಯಿಸಬಲ್ಲೆ ಎಂದು ಯೇಸು ನೆನಸಲಿಲ್ಲ. ದೇವರ ಪರಿಪೂರ್ಣ ಕುಮಾರನಿಗೆ ದೈವಿಕ ಸಹಾಯ ಹಾಗೂ ಬಲಕ್ಕಾಗಿ ಪ್ರಾರ್ಥಿಸುವ ಅಗತ್ಯದ ಅನಿಸಿಕೆಯಾಗಿರುವಾಗ, ನಮಗೆ ಇನ್ನೂ ಎಷ್ಟು ಅಧಿಕವಾಗಿ ಇದರ ಅಗತ್ಯವಿದೆ!​—1 ಪೇತ್ರ 2:21.

10 ಸತತವಾಗಿ ‘ಪ್ರಾರ್ಥಿಸುವಂತೆ’ ತನ್ನ ಶಿಷ್ಯರನ್ನು ಉತ್ತೇಜಿಸಿದ ಬಳಿಕ, “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು” ಎಂದು ಯೇಸು ಹೇಳಿದನು ಎಂಬುದನ್ನು ನೆನಪಿನಲ್ಲಿಡಿರಿ. (ಮತ್ತಾಯ 26:41) ಯೇಸು ಯಾರ ದೇಹವನ್ನು ಸೂಚಿಸಿ ಮಾತಾಡುತ್ತಿದ್ದನು? ಖಂಡಿತವಾಗಿಯೂ ಅವನ ಸ್ವಂತ ದೇಹವನ್ನಲ್ಲ; ಅವನ ಪರಿಪೂರ್ಣ ಮಾನವ ದೇಹದಲ್ಲಿ ಬಲಹೀನವಾದದ್ದೇನೂ ಇರಲಿಲ್ಲ. (1 ಪೇತ್ರ 2:22) ಆದರೆ ಅವನ ಶಿಷ್ಯರ ಸನ್ನಿವೇಶವು ಬೇರೆಯಾಗಿತ್ತು. ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆ ಮತ್ತು ಪಾಪಭರಿತ ಪ್ರವೃತ್ತಿಗಳ ಕಾರಣದಿಂದ, ಪ್ರಲೋಭನೆಯನ್ನು ಎದುರಿಸಲಿಕ್ಕಾಗಿ ಅವರಿಗೆ ಸಹಾಯದ ವಿಶೇಷ ಆವಶ್ಯಕತೆಯಿತ್ತು. (ರೋಮಾಪುರ 7:​21-24) ಆದುದರಿಂದಲೇ, ಪ್ರಲೋಭನೆಯನ್ನು ಯಶಸ್ವಿಕರವಾಗಿ ನಿಭಾಯಿಸುವುದರಲ್ಲಿ ಸಹಾಯಕ್ಕಾಗಿ ಪ್ರಾರ್ಥಿಸುವಂತೆ ಅವರನ್ನು ಮತ್ತು ಅವರ ನಂತರದ ಎಲ್ಲಾ ಸತ್ಯ ಕ್ರೈಸ್ತರನ್ನು ಅವನು ಪ್ರೋತ್ಸಾಹಿಸಿದನು. (ಮತ್ತಾಯ 6:13) ಯೆಹೋವನು ಇಂಥ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ. (ಕೀರ್ತನೆ 65:2) ಹೇಗೆ? ಕಡಿಮೆಪಕ್ಷ ಎರಡು ವಿಧಗಳಲ್ಲಿ.

11 ಮೊದಲನೆಯದಾಗಿ, ಪ್ರಲೋಭನೆಗಳನ್ನು ಗುರುತಿಸುವಂತೆ ದೇವರು ನಮಗೆ ಸಹಾಯಮಾಡುತ್ತಾನೆ. ಸೈತಾನನ ಪ್ರಲೋಭನೆಗಳು ಕತ್ತಲುಗವಿದಿರುವಂಥ ಒಂದು ಹಾದಿಯಲ್ಲಿ ಹರವಲ್ಪಟ್ಟಿರುವ ಬಲೆಗಳಂತಿವೆ. ನೀವು ಅವುಗಳನ್ನು ನೋಡದಿರುವಲ್ಲಿ, ಅವುಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳ ಮೂಲಕ ಯೆಹೋವನು ಸೈತಾನನ ಬಲೆಗಳ ಮೇಲೆ ಬೆಳಕು ಬೀರುತ್ತಾನೆ; ಹೀಗೆ ಪ್ರಲೋಭನೆಗೆ ಒಳಗಾಗದಂತೆ ದೂರವಿರಲು ನಮಗೆ ನೆರವು ನೀಡುತ್ತಾನೆ. ಅನೇಕ ವರ್ಷಗಳಿಂದಲೂ ಮುದ್ರಿತ ಸಾಹಿತ್ಯ ಮತ್ತು ಅಧಿವೇಶನ ಹಾಗೂ ಸಮ್ಮೇಳನ ಕಾರ್ಯಕ್ರಮಗಳು, ಮನುಷ್ಯನ ಭಯ, ಲೈಂಗಿಕ ಅನೈತಿಕತೆ, ಪ್ರಾಪಂಚಿಕತೆ, ಮತ್ತು ಸೈತಾನನಿಂದ ಬರುವ ಇತರ ಪ್ರಲೋಭನೆಗಳಂಥ ಅಪಾಯಗಳ ಬಗ್ಗೆ ಪುನಃ ಪುನಃ ನಮ್ಮನ್ನು ಎಚ್ಚರಿಸಿವೆ. (ಜ್ಞಾನೋಕ್ತಿ 29:25; 1 ಕೊರಿಂಥ 10:8-11; 1 ತಿಮೊಥೆಯ 6:9, 10) ಸೈತಾನನ ವಂಚನಾತ್ಮಕ ಯೋಜನೆಗಳ ವಿಷಯದಲ್ಲಿ ಯೆಹೋವನು ನಮ್ಮನ್ನು ಎಚ್ಚರಿಸುತ್ತಿರುವುದಕ್ಕಾಗಿ ನೀವು ಆತನಿಗೆ ಕೃತಜ್ಞರಾಗಿಲ್ಲವೋ? (2 ಕೊರಿಂಥ 2:11) ಈ ಎಲ್ಲಾ ಎಚ್ಚರಿಕೆಗಳು, ಪ್ರಲೋಭನೆಯನ್ನು ಎದುರಿಸುವುದರಲ್ಲಿ ಸಹಾಯವನ್ನು ಯಾಚಿಸಿ ನೀವು ಮಾಡಿದ ಪ್ರಾರ್ಥನೆಗಳಿಗೆ ಉತ್ತರಗಳಾಗಿವೆ.

12 ಎರಡನೆಯದಾಗಿ, ಪ್ರಲೋಭನೆಯನ್ನು ತಾಳಿಕೊಳ್ಳಲು ನಮಗೆ ಬಲವನ್ನು ನೀಡುವ ಮೂಲಕ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ. ಆತನ ವಾಕ್ಯವು ಹೇಳುವುದು: “ದೇವರು . . . ನಿಮ್ಮ ಶಕ್ತಿಯನ್ನು ಮೀರುವ ಶೋಧನೆ [“ಪ್ರಲೋಭನೆ,” NW]ಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆ [“ಪ್ರಲೋಭನೆ,” NW]ಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ಒಂದುವೇಳೆ ನಾವು ದೇವರನ್ನು ಅವಲಂಬಿಸುತ್ತಾ ಮುಂದುವರಿಯುವಲ್ಲಿ, ಪ್ರಲೋಭನೆಯನ್ನು ಎದುರಿಸಲು ಅಸಮರ್ಥರಾಗುವಷ್ಟರ ಮಟ್ಟಿಗೆ ಆಧ್ಯಾತ್ಮಿಕ ಬಲವನ್ನು ಕಳೆದುಕೊಳ್ಳುವ ಹಾಗೆ ಒಂದು ಪ್ರಲೋಭನೆಯು ನಮ್ಮನ್ನು ನಿಸ್ಸಹಾಯಕರನ್ನಾಗಿ ಮಾಡುವಂತೆ ಆತನು ಎಂದೂ ಅನುಮತಿಸುವುದಿಲ್ಲ. ಆತನು ನಮಗಾಗಿ “ತಪ್ಪಿಸಿಕೊಳ್ಳುವ ಮಾರ್ಗವನ್ನು” ಹೇಗೆ ಸಿದ್ಧಮಾಡುತ್ತಾನೆ? ತನ್ನನ್ನು ‘ಬೇಡಿಕೊಳ್ಳುವವರಿಗೆ ಆತನು ಪವಿತ್ರಾತ್ಮವರವನ್ನು ಕೊಡುತ್ತಾನೆ.’ (ಲೂಕ 11:13) ಈ ಪವಿತ್ರಾತ್ಮವು, ಸರಿಯಾದದ್ದನ್ನು ಮಾಡಲಿಕ್ಕಾಗಿರುವ ನಮ್ಮ ನಿರ್ಧಾರವನ್ನು ಇನ್ನಷ್ಟು ಬಲಪಡಿಸಬಲ್ಲ ಹಾಗೂ ವಿವೇಕಯುತವಾದ ನಿರ್ಣಯಗಳನ್ನು ಮಾಡುವಂತೆ ಸಹಾಯಮಾಡಬಲ್ಲ ಬೈಬಲ್‌ ಮೂಲತತ್ತ್ವಗಳನ್ನು ಜ್ಞಾಪಿಸಿಕೊಳ್ಳಲು ನಮಗೆ ಸಹಾಯವನ್ನೀಯಬಹುದು. (ಯೋಹಾನ 14:26; ಯಾಕೋಬ 1:​5, 6) ಕೆಟ್ಟ ಪ್ರವೃತ್ತಿಗಳನ್ನು ಜಯಿಸಲು ಬೇಕಾಗಿರುವ ಗುಣಗಳನ್ನು ನಾವು ತೋರಿಸುವಂತೆ ಇದು ನಮಗೆ ಸಹಾಯಮಾಡಸಾಧ್ಯವಿದೆ. (ಗಲಾತ್ಯ 5:​22, 23) ಜೊತೆ ವಿಶ್ವಾಸಿಗಳು ‘ನಮಗೆ ಉಪಶಮನವನ್ನು’ ನೀಡುವಂತೆಯೂ ದೇವರಾತ್ಮವು ಪ್ರಚೋದಿಸಬಹುದು. (ಕೊಲೊಸ್ಸೆ 4:11) ಸಹಾಯಕ್ಕಾಗಿರುವ ನಮ್ಮ ಪ್ರಾರ್ಥನೆಗಳಿಗೆ ಯೆಹೋವನು ಇಂಥ ಪ್ರೀತಿಭರಿತ ವಿಧಾನಗಳಲ್ಲಿ ಪ್ರತಿಕ್ರಿಯಿಸುವುದಕ್ಕಾಗಿ ನೀವು ಆತನಿಗೆ ಕೃತಜ್ಞರಾಗಿಲ್ಲವೋ?

ನಿಮಗೆ ವಾಸ್ತವಿಕ ನಿರೀಕ್ಷಣೆಗಳಿರಲಿ

13 ಎಚ್ಚರಿಕೆಯಿಂದಿರಲಿಕ್ಕಾಗಿ ನಾವು ವಾಸ್ತವಿಕ ನಿರೀಕ್ಷಣೆಗಳನ್ನು ಇಟ್ಟುಕೊಳ್ಳುವ ಅಗತ್ಯವಿದೆ. ಜೀವನದ ಒತ್ತಡಗಳ ಕಾರಣದಿಂದ ನಾವೆಲ್ಲರೂ ಅನೇಕವೇಳೆ ಬೇಸರಗೊಳ್ಳುತ್ತೇವೆ. ಆದರೆ ಈ ಹಳೇ ವ್ಯವಸ್ಥೆಯಲ್ಲಿ ನಾವು ಸಮಸ್ಯೆರಹಿತ ಜೀವನದಲ್ಲಿ ಆನಂದಿಸುವೆವು ಎಂಬ ವಾಗ್ದಾನವನ್ನು ದೇವರೆಂದೂ ಮಾಡಲಿಲ್ಲ ಎಂಬುದನ್ನು ನಾವೆಂದಿಗೂ ಮರೆಯಬಾರದು. ಬೈಬಲ್‌ ಸಮಯಗಳಲ್ಲಿಯೂ ದೇವರ ಸೇವಕರು ಹಿಂಸೆ, ಬಡತನ, ಖಿನ್ನತೆ, ಮತ್ತು ಅಸ್ವಸ್ಥತೆಗಳನ್ನೂ ಸೇರಿಸಿ ಅನೇಕ ವಿಪತ್ತುಗಳನ್ನು ಎದುರಿಸಿದರು.​—ಅ. ಕೃತ್ಯಗಳು 8:1; 2 ಕೊರಿಂಥ 8:1, 2; 1 ಥೆಸಲೋನಿಕ 5:14; 1 ತಿಮೊಥೆಯ 5:23.

14 ಇಂದು ನಮಗೆ ಸಹ ಸಮಸ್ಯೆಗಳಿವೆ. ನಾವು ಹಿಂಸೆಯನ್ನು ಎದುರಿಸಬಹುದು, ಹಣಕಾಸಿನ ವಿಷಯದಲ್ಲಿ ಚಿಂತಿಸಬಹುದು, ಖಿನ್ನತೆಯಿಂದ ನರಳಬಹುದು, ಅಸ್ವಸ್ಥರಾಗಬಹುದು, ಅಥವಾ ಇನ್ನಿತರ ವಿಧಗಳಲ್ಲಿ ಕಷ್ಟಾನುಭವಿಸಬಹುದು. ಈ ಎಲ್ಲಾ ಹಾನಿಯಿಂದ ಯೆಹೋವನು ನಮ್ಮನ್ನು ಅದ್ಭುತಕರವಾದ ರೀತಿಯಲ್ಲಿ ಸಂರಕ್ಷಿಸುವಲ್ಲಿ, ಯೆಹೋವನನ್ನು ದೂರಲು ಸೈತಾನನಿಗೆ ಇದು ಒಂದು ಆಧಾರವನ್ನು ನೀಡುವುದಿಲ್ಲವೋ? (ಜ್ಞಾನೋಕ್ತಿ 27:11) ತನ್ನ ಸೇವಕರು ಪ್ರಲೋಭನೆಗೆ ಒಳಗಾಗುವಂತೆ ಮತ್ತು ಪರೀಕ್ಷಿಸಲ್ಪಡುವಂತೆ​—ಕೆಲವೊಮ್ಮೆ ವಿರೋಧಿಗಳ ಕೈಯಲ್ಲಿ ಅಕಾಲ ಮರಣವನ್ನು ಪಡೆಯುವ ಹಂತದ ವರೆಗೂ​—ಯೆಹೋವನು ಅನುಮತಿಸುತ್ತಾನೆ.​—ಯೋಹಾನ 16:2.

15 ಹಾಗಾದರೆ ಯೆಹೋವನು ಏನನ್ನು ವಾಗ್ದಾನಿಸಿದ್ದಾನೆ? ಈ ಮುಂಚೆಯೇ ನಾವು ಗಮನಿಸಿದಂತೆ, ಎಷ್ಟರ ತನಕ ನಾವು ಸಂಪೂರ್ಣವಾಗಿ ಆತನ ಮೇಲೆ ಭರವಸೆಯಿಡುತ್ತೇವೋ ಅಷ್ಟರ ತನಕ, ನಾವು ಎದುರಿಸಬಹುದಾದ ಯಾವುದೇ ಪ್ರಲೋಭನೆಯನ್ನು ಪ್ರತಿರೋಧಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುವ ವಾಗ್ದಾನವನ್ನು ಆತನು ಮಾಡಿದ್ದಾನೆ. (ಜ್ಞಾನೋಕ್ತಿ 3:​5, 6) ಆತನೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯಮಾಡುತ್ತಾ, ತನ್ನ ವಾಕ್ಯ, ಪವಿತ್ರಾತ್ಮ, ಮತ್ತು ಸಂಸ್ಥೆಯ ಮೂಲಕ ಆತನು ನಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸುತ್ತಾನೆ. ಆ ಸಂಬಂಧಕ್ಕೆ ಯಾವುದೇ ಧಕ್ಕೆಯು ಬಾರದಿರುವಲ್ಲಿ, ಒಂದುವೇಳೆ ನಾವು ಸಾಯುವುದಾದರೂ ಜಯವನ್ನು ಸಾಧಿಸುತ್ತೇವೆ. ದೇವರು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲವನ್ನು ಕೊಡುವುದರಿಂದ ಆತನನ್ನು ಯಾವುದೂ—ಮರಣವು ಸಹ​—ತಡೆಯಲಾರದು. (ಇಬ್ರಿಯ 11:6) ಮತ್ತು ಈಗ ಸಮೀಪಿಸುತ್ತಿರುವ ಹೊಸ ಲೋಕದಲ್ಲಿ, ತನ್ನನ್ನು ಪ್ರೀತಿಸುವವರಿಗಾಗಿ ಯೆಹೋವನು ಮಾಡಿರುವ ಆಶೀರ್ವಾದಗಳ ಅದ್ಭುತಕರ ವಾಗ್ದಾನಗಳಲ್ಲಿ ಉಳಿದವುಗಳೆಲ್ಲವನ್ನೂ ನೆರವೇರಿಸುವುದರಲ್ಲಿ ಆತನೆಂದೂ ವಿಫಲಗೊಳ್ಳನು.​—ಕೀರ್ತನೆ 145:16.

ವಿವಾದಾಂಶಗಳನ್ನು ನೆನಪಿನಲ್ಲಿಡಿರಿ

16 ಕಡೇ ವರೆಗೆ ತಾಳಿಕೊಳ್ಳಬೇಕಾದರೆ, ದೇವರು ದುಷ್ಟತನವನ್ನು ಅನುಮತಿಸಿದ್ದರಲ್ಲಿ ಒಳಗೂಡಿರುವ ಅತ್ಯಾವಶ್ಯಕ ವಿವಾದಾಂಶಗಳನ್ನು ನಾವು ನೆನಪಿನಲ್ಲಿಡಬೇಕು. ಕೆಲವೊಮ್ಮೆ ನಾವು ವಿಪರೀತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರಯತ್ನವನ್ನು ಕೈಬಿಡುವ ಪ್ರಲೋಭನೆಗೆ ಒಳಗಾಗುವಲ್ಲಿ, ಸೈತಾನನು ಯೆಹೋವನ ಪರಮಾಧಿಕಾರದ ಯೋಗ್ಯತೆಯನ್ನು ಪಂಥಾಹ್ವಾನಕ್ಕೊಡ್ಡಿದ್ದಾನೆ ಎಂಬ ವಿಷಯವನ್ನು ಮರುಜ್ಞಾಪಿಸಿಕೊಳ್ಳುವುದು ಒಳ್ಳೇದು. ಆ ವಂಚಕನು ದೇವರ ಆರಾಧಕರ ಭಕ್ತಿ ಹಾಗೂ ಸಮಗ್ರತೆಯನ್ನು ಸಹ ಸಂಶಯಿಸಿದ್ದಾನೆ. (ಯೋಬ 1:​8-11; 2:​3, 4) ಈ ವಿವಾದಾಂಶಗಳು ಮತ್ತು ಇವುಗಳನ್ನು ಬಗೆಹರಿಸಲು ಯೆಹೋವನು ಆಯ್ಕೆಮಾಡಿರುವ ವಿಧವು, ನಮ್ಮ ಸ್ವಂತ ಜೀವಗಳಿಗಿಂತಲೂ ಎಷ್ಟೋ ಹೆಚ್ಚು ಪ್ರಾಮುಖ್ಯವಾದದ್ದಾಗಿದೆ. ಹೇಗೆ?

17 ಕಷ್ಟದ ಪರಿಸ್ಥಿತಿಯನ್ನು ದೇವರು ತಾತ್ಕಾಲಿಕವಾಗಿ ಅನುಮತಿಸಿರುವುದು, ಇತರರೂ ಸತ್ಯವನ್ನು ಸ್ವೀಕರಿಸಲು ಸಾಕಷ್ಟು ಸಮಯವನ್ನು ನೀಡಿದೆ. ಇದರ ಕುರಿತು ತುಸು ಯೋಚಿಸಿರಿ: ನಾವು ಜೀವವನ್ನು ಪಡೆಯಸಾಧ್ಯವಾಗುವಂತೆ ಯೇಸು ಕಷ್ಟಾನುಭವಿಸಿದನು. (ಯೋಹಾನ 3:16) ನಾವಿದಕ್ಕೆ ಕೃತಜ್ಞರಾಗಿಲ್ಲವೋ? ಆದರೆ ಇನ್ನೂ ಹೆಚ್ಚಿನವರು ಜೀವವನ್ನು ಪಡೆಯಸಾಧ್ಯವಾಗುವಂತೆ ನಾವು ಇನ್ನಷ್ಟು ಕಾಲ ಕಷ್ಟವನ್ನು ತಾಳಿಕೊಳ್ಳಲು ಸಿದ್ಧರಾಗಿದ್ದೇವೊ? ಇದನ್ನು ಮಾಡಬೇಕಾದರೆ, ಯೆಹೋವನ ವಿವೇಕವು ನಮ್ಮ ವಿವೇಕಕ್ಕಿಂತ ಎಷ್ಟೋ ಉನ್ನತವಾಗಿದೆ ಎಂಬುದನ್ನು ನಾವು ಮನಗಾಣಬೇಕಾಗಿದೆ. (ಯೆಶಾಯ 55:9) ಎಬ್ಬಿಸಲ್ಪಟ್ಟಿರುವ ವಿವಾದಾಂಶಗಳನ್ನು ಬಗೆಹರಿಸಲಿಕ್ಕಾಗಿ ಮತ್ತು ನಮ್ಮ ನಿತ್ಯ ಒಳಿತಿಗಾಗಿ, ಅತಿ ಹೆಚ್ಚು ಸೂಕ್ತವಾದ ಸಮಯದಲ್ಲೇ ಆತನು ದುಷ್ಟತನವನ್ನು ಕೊನೆಗೊಳಿಸುವನು. ವಿವಾದಾಂಶಗಳನ್ನು ಬಗೆಹರಿಸಲು ಇದಕ್ಕಿಂತ ಹೆಚ್ಚು ಉತ್ತಮವಾದ ಮಾರ್ಗವು ಬೇರೆ ಯಾವುದಾದರೂ ಇದೆಯೋ? ದೇವರಲ್ಲಿ ಅನ್ಯಾಯವಿಲ್ಲ!​—ರೋಮಾಪುರ 9:​14-24.

“ದೇವರ ಸಮೀಪಕ್ಕೆ ಬನ್ನಿರಿ”

18 ನಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳಬೇಕಾದರೆ, ನಾವು ಯೆಹೋವನಿಗೆ ನಿಕಟವಾಗಿ ಉಳಿಯುವ ಅಗತ್ಯವಿದೆ. ಯೆಹೋವನೊಂದಿಗಿನ ನಮ್ಮ ಒಳ್ಳೇ ಸಂಬಂಧವನ್ನು ಹಾಳುಮಾಡಲಿಕ್ಕಾಗಿ ಸೈತಾನನು ತನ್ನಿಂದಾದುದೆಲ್ಲವನ್ನೂ ಮಾಡುತ್ತಿದ್ದಾನೆ ಎಂಬುದನ್ನು ಎಂದಿಗೂ ಮರೆಯದಿರಿ. ಅಂತ್ಯವು ಎಂದಿಗೂ ಬರುವುದಿಲ್ಲ ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ಅಥವಾ ಬೈಬಲ್‌ ಮಟ್ಟಗಳಿಗೆ ಅನುಸಾರವಾಗಿ ಜೀವಿಸುವುದರಲ್ಲಿ ಅರ್ಥವೇ ಇಲ್ಲ ಎಂಬುದನ್ನು ನಾವು ನಂಬುವಂತೆ ಮಾಡಲು ಸೈತಾನನು ಪ್ರಯತ್ನಿಸುತ್ತಾನೆ. ಆದರೆ ಅವನು “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.” (ಯೋಹಾನ 8:44) ನಾವು ‘ಸೈತಾನನನ್ನು ಎದುರಿಸಲು’ ದೃಢವಾಗಿ ನಿರ್ಧರಿಸಬೇಕಾಗಿದೆ. ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ನಾವೆಂದೂ ಕ್ಷುಲ್ಲಕವಾಗಿ ಪರಿಗಣಿಸಬಾರದು. ಬೈಬಲು ಪ್ರೀತಿಯಿಂದ ನಮ್ಮನ್ನು ಎಚ್ಚರಿಸುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:7, 8) ನೀವು ಹೇಗೆ ಯೆಹೋವನ ಸಮೀಪಕ್ಕೆ ಬರಸಾಧ್ಯವಿದೆ?

19 ಪ್ರಾರ್ಥನಾಪೂರ್ವಕವಾದ ಧ್ಯಾನಿಸುವಿಕೆಯು ಅತ್ಯಾವಶ್ಯಕವಾಗಿದೆ. ಜೀವನದ ಒತ್ತಡಗಳು ಮೇಲುಗೈ ಪಡೆಯುತ್ತಿರುವಂತೆ ತೋರುವಾಗ, ನಿಮ್ಮ ಹೃದಯವನ್ನು ಯೆಹೋವನ ಮುಂದೆ ತೋಡಿಕೊಳ್ಳಿರಿ. ನಿಮ್ಮ ವಿನಂತಿಗಳು ಸಾಕಷ್ಟು ನಿರ್ದಿಷ್ಟವಾಗಿ ತಿಳಿಸಲ್ಪಡುವಲ್ಲಿ, ಅದಕ್ಕೆ ತಕ್ಕ ಉತ್ತರವನ್ನು ಆತನಿಂದ ಪಡೆದುಕೊಳ್ಳುವುದನ್ನು ಗಮನಿಸುವುದು ಹೆಚ್ಚು ಸುಲಭವಾಗಿರುವುದು. ನಿಮ್ಮ ಮನಸ್ಸಿನಲ್ಲಿ ಏನಿರುತ್ತದೋ ಅದೇ ಉತ್ತರವು ಯಾವಾಗಲೂ ನಿಮಗೆ ಕೊಡಲ್ಪಡದಿರಬಹುದು, ಆದರೆ ಆತನನ್ನು ಗೌರವಿಸುವುದು ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ನಿಮ್ಮ ಬಯಕೆಯಾಗಿರುವಲ್ಲಿ, ನೀವು ಸಫಲದಾಯಕವಾಗಿ ತಾಳಿಕೊಳ್ಳಲು ಅಗತ್ಯವಿರುವ ಸಹಾಯವನ್ನು ಆತನು ಒದಗಿಸುವನು. (1 ಯೋಹಾನ 5:14) ನಿಮ್ಮ ಜೀವನದಲ್ಲಿ ಆತನ ಮಾರ್ಗದರ್ಶನವನ್ನು ನೀವು ಮನಗಾಣುವಾಗ, ಖಂಡಿತವಾಗಿಯೂ ನೀವು ಆತನಿಗೆ ಸಮೀಪವಾಗುವಿರಿ. ಬೈಬಲಿನಲ್ಲಿ ಪ್ರಕಟಪಡಿಸಲ್ಪಟ್ಟಿರುವ ಯೆಹೋವನ ಗುಣಗಳು ಮತ್ತು ಮಾರ್ಗಗಳ ಕುರಿತು ಓದುವುದು ಹಾಗೂ ಮನನಮಾಡುವುದು ಸಹ ಅತ್ಯಾವಶ್ಯಕವಾಗಿದೆ. ಈ ರೀತಿಯ ಧ್ಯಾನಿಸುವಿಕೆಯು ನೀವು ಆತನನ್ನು ಹೆಚ್ಚು ಅರಿತುಕೊಳ್ಳುವಂತೆ ಸಹಾಯಮಾಡುತ್ತದೆ; ಇದು ನಿಮ್ಮ ಹೃದಯವನ್ನು ಪ್ರಚೋದಿಸುತ್ತದೆ ಮತ್ತು ಆತನಿಗಾಗಿರುವ ನಿಮ್ಮ ಪ್ರೀತಿಯನ್ನು ಇನ್ನಷ್ಟು ಆಳಗೊಳಿಸುತ್ತದೆ. (ಕೀರ್ತನೆ 19:14) ಮತ್ತು ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ ಈ ಪ್ರೀತಿಯು, ಪ್ರಲೋಭನೆಯನ್ನು ಎದುರಿಸಲು ಮತ್ತು ಎಚ್ಚರಿಕೆಯಿಂದಿರಲು ನಿಮಗೆ ಸಹಾಯಮಾಡುವುದು.​—1 ಯೋಹಾನ 5:3.

20 ಯೆಹೋವನಿಗೆ ಸಮೀಪವಾಗಬೇಕಾದರೆ, ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಆಪ್ತರಾಗಿ ಉಳಿಯುವುದು ಪ್ರಾಮುಖ್ಯವಾದ ಸಂಗತಿಯಾಗಿದೆ. ಈ ಬ್ರೋಷರಿನ ಕೊನೆಯ ಭಾಗದಲ್ಲಿ ಇದನ್ನು ಚರ್ಚಿಸಲಾಗುವುದು.

ಅಧ್ಯಯನದ ಪ್ರಶ್ನೆಗಳು

• ಯೇಸುವಿನ ಭೂಜೀವಿತದ ಅಂತ್ಯದ ಸಮಯದಲ್ಲಿ ಅವನು ವಿಪರೀತ ಒತ್ತಡದ ಕೆಳಗಿದ್ದಾಗ ಏನು ಮಾಡಿದನು, ಮತ್ತು ಅವನು ತನ್ನ ಶಿಷ್ಯರಿಗೆ ಏನು ಮಾಡುವಂತೆ ಹುರಿದುಂಬಿಸಿದನು? (ಪ್ಯಾರ. 1-4)

• ಸೈತಾನನು ಯೆಹೋವನ ಆರಾಧಕರ ಮೇಲೆ ಏಕೆ ಗುರಿಯಿಟ್ಟಿದ್ದಾನೆ, ಮತ್ತು ಯಾವ ವಿಧಗಳಲ್ಲಿ ಅವನು ನಮ್ಮನ್ನು ಪ್ರಲೋಭನೆಗೊಳಪಡಿಸುತ್ತಾನೆ? (ಪ್ಯಾರ. 5-8)

• ಪ್ರಲೋಭನೆಯನ್ನು ಎದುರಿಸಲಿಕ್ಕಾಗಿ ನಾವು ಏಕೆ ಸತತವಾಗಿ ಪ್ರಾರ್ಥಿಸಬೇಕು (ಪ್ಯಾರ. 9-12), ವಾಸ್ತವಿಕ ನಿರೀಕ್ಷಣೆಗಳನ್ನು ಇಟ್ಟುಕೊಂಡಿರಬೇಕು (ಪ್ಯಾರ. 13-15), ವಿವಾದಾಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು (ಪ್ಯಾರ. 16-17), ಮತ್ತು ‘ದೇವರ ಸಮೀಪಕ್ಕೆ ಬರಬೇಕು’ (ಪ್ಯಾರ. 18-20)?

[ಪುಟ 25ರಲ್ಲಿರುವ ಚೌಕ]

ನಿರುತ್ತೇಜನವನ್ನು ಉಂಟುಮಾಡುವಂಥ ಕೆಲವು ಸಂಗತಿಗಳು

ಆರೋಗ್ಯ/ವಯಸ್ಸು. ನಾವು ದೀರ್ಘ ಕಾಲದಿಂದ ಇರುವಂಥ ಒಂದು ರೋಗದಿಂದ ನರಳುತ್ತಿರುವಲ್ಲಿ ಅಥವಾ ವೃದ್ಧಾಪ್ಯವು ನಮಗೆ ಇತಿಮಿತಿಗಳನ್ನೊಡ್ಡುವಲ್ಲಿ, ದೇವರ ಸೇವೆಯಲ್ಲಿ ಹೆಚ್ಚನ್ನು ಮಾಡಶಕ್ತರಾಗಿಲ್ಲ ಎಂಬ ಕಾರಣಕ್ಕಾಗಿ ನಾವು ಖಿನ್ನರಾಗಬಹುದು.​—ಇಬ್ರಿಯ 6:10.

ನಿರಾಶೆ. ದೇವರ ವಾಕ್ಯವನ್ನು ಸಾರುವುದರಲ್ಲಿ ನಾವು ಮಾಡುವ ಪ್ರಯತ್ನಗಳಿಗೆ ಸ್ವಲ್ಪವೇ ಪ್ರತಿಕ್ರಿಯೆ ಸಿಗುವುದನ್ನು ನೋಡಿ ನಾವು ಎದೆಗುಂದಬಹುದು.​—ಜ್ಞಾನೋಕ್ತಿ 13:12.

ಅನರ್ಹ ಭಾವನೆಗಳು. ಅನೇಕ ವರ್ಷಗಳ ದುರುಪಚಾರದ ಕಾರಣದಿಂದ ವ್ಯಕ್ತಿಯೊಬ್ಬನು ತನ್ನನ್ನು ಯಾರೂ ಪ್ರೀತಿಸುವುದಿಲ್ಲ, ಯೆಹೋವನೂ ಪ್ರೀತಿಸುವುದಿಲ್ಲ ಎಂಬ ತಪ್ಪು ನಿರ್ಧಾರಕ್ಕೆ ಬರಬಹುದು.​—1 ಯೋಹಾನ 3:​19, 20.

ನೋವಿನ ಅನಿಸಿಕೆಗಳು. ಒಬ್ಬ ಜೊತೆ ವಿಶ್ವಾಸಿಯಿಂದ ಯಾರಾದರೊಬ್ಬರು ಆಳವಾಗಿ ನೋಯಿಸಲ್ಪಟ್ಟಿರುವಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ಅಥವಾ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸುವಷ್ಟರ ಮಟ್ಟಿಗೆ ಆ ವ್ಯಕ್ತಿಯು ಕೋಪಗೊಳ್ಳಬಹುದು.​—ಲೂಕ 17:1.

ಹಿಂಸೆ. ನಿಮ್ಮ ನಂಬಿಕೆಯಲ್ಲಿ ಪಾಲಿಗರಾಗಿರದಂಥ ಇನ್ನಿತರರು ನಿಮ್ಮನ್ನು ವಿರೋಧಿಸಬಹುದು, ಹಿಂಸಿಸಬಹುದು, ಅಥವಾ ಕುಚೋದ್ಯಮಾಡಬಹುದು.​—2 ತಿಮೊಥೆಯ 3:12; 2 ಪೇತ್ರ 3:3, 4.

[ಪುಟ 26ರಲ್ಲಿರುವ ಚಿತ್ರ]

ಪ್ರಲೋಭನೆಯನ್ನು ಎದುರಿಸಲು ಸಹಾಯಕ್ಕಾಗಿ ಸತತವಾಗಿ ‘ಪ್ರಾರ್ಥಿಸುವಂತೆ’ ಯೇಸು ನಮ್ಮನ್ನು ಉತ್ತೇಜಿಸಿದನು