“ಇವರು ಲೋಕದವರಲ್ಲ”
ಅಧ್ಯಾಯ ಹದಿನೆಂಟು
“ಇವರು ಲೋಕದವರಲ್ಲ”
1. (ಎ) ತನ್ನ ಮರಣಕ್ಕೆ ಮುಂಚೆ, ಯೇಸು ತನ್ನ ಶಿಷ್ಯರ ಪರವಾಗಿ ಏನೆಂದು ಪಾರ್ಥಿಸಿದನು? (ಬಿ) “ಲೋಕದವರಲ್ಲ”ವಾಗಿರುವುದು ಅಷ್ಟು ಪ್ರಾಮುಖ್ಯವೇಕೆ?
ತಾನು ಕೊಲ್ಲಲ್ಪಡುವುದಕ್ಕೆ ಹಿಂದಿನ ರಾತ್ರಿ, ಯೇಸು ತನ್ನ ಶಿಷ್ಯರ ಪರವಾಗಿ ಪ್ರಾರ್ಥಿಸಿದನು. ಸೈತಾನನು ಅವರ ಮೇಲೆ ಭಾರೀ ಒತ್ತಡವನ್ನು ಹಾಕಲಿದ್ದಾನೆಂಬುದನ್ನು ತಿಳಿದವನಾಗಿ, ಯೇಸು ತನ್ನ ತಂದೆಗೆ ಹೇಳಿದ್ದು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:15, 16) ಲೋಕದಿಂದ ಪ್ರತ್ಯೇಕತೆಯು ಅಷ್ಟು ಪ್ರಾಮುಖ್ಯವೇಕೆ? ಏಕೆಂದರೆ ಸೈತಾನನು ಈ ಲೋಕದ ಅಧಿಪತಿಯಾಗಿದ್ದಾನೆ. ಮತ್ತು ಕ್ರೈಸ್ತರು ಅವನ ನಿಯಂತ್ರಣದಲ್ಲಿರುವ ಲೋಕದ ಭಾಗವಾಗಲು ಬಯಸುವುದಿಲ್ಲ.—ಲೂಕ 4:5-8; ಯೋಹಾನ 14:30; 1 ಯೋಹಾನ 5:19.
2. ಯಾವ ವಿಧಗಳಲ್ಲಿ ಯೇಸು ಲೋಕದ ಭಾಗವಾಗಿರಲಿಲ್ಲ?
2 ಯೇಸು ಲೋಕದವನಾಗಿರಲಿಲ್ಲ ಎಂಬುದು, ಅವನಿಗೆ ಇತರರ ಮೇಲೆ ಪ್ರೀತಿಯಿರಲಿಲ್ಲ ಎಂದರ್ಥೈಸಲಿಲ್ಲ. ಏಕೆಂದರೆ ಅವನು ರೋಗಿಗಳನ್ನು ಗುಣಪಡಿಸಿ, ಮೃತರನ್ನು ಎಬ್ಬಿಸಿ, ಜನರಿಗೆ ದೇವರ ರಾಜ್ಯದ ಕುರಿತು ಕಲಿಸಿದನು. ಅವನು ಮಾನವಕುಲಕ್ಕಾಗಿ ತನ್ನ ಜೀವವನ್ನೂ ತೆತ್ತನು. ಆದರೆ ಅವನು ಸೈತಾನನ ಲೋಕದ ಮನೋಪ್ರವೃತ್ತಿಯನ್ನು ತೋರಿಸಿದ ಜನರ ಅದೈವಿಕವಾದ ಮನೋಭಾವ ಮತ್ತು ವರ್ತನೆಗಳನ್ನು ಇಷ್ಟಪಡಲಿಲ್ಲ. ಆದುದರಿಂದ ಅವನು ಅನೈತಿಕ ಆಶೆಗಳು, ಪ್ರಾಪಂಚಿಕ ಜೀವನರೀತಿ, ಪ್ರಮುಖರಾಗಬೇಕೆಂಬ ಹೆಬ್ಬಯಕೆಗಳ ವಿಷಯದಲ್ಲಿ ಎಚ್ಚರಿಕೆ ಕೊಟ್ಟನು. (ಮತ್ತಾಯ 5:27, 28; 6:19-21; ಲೂಕ 20:46, 47) ಈ ಕಾರಣದಿಂದ, ಅವನು ಆ ಲೋಕದ ರಾಜಕೀಯ ವಿಚಾರಗಳಿಂದಲೂ ದೂರವಿದ್ದದ್ದು ಆಶ್ಚರ್ಯವಲ್ಲ. ಅವನು ಯೆಹೂದ್ಯನಾಗಿದ್ದರೂ, ರೋಮ್ ಮತ್ತು ಯೆಹೂದ್ಯರ ನಡುವೆ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟುಗಳಲ್ಲಿ ಯಾವುದೇ ಪಕ್ಷವನ್ನು ವಹಿಸಲಿಲ್ಲ.
“ನನ್ನ ರಾಜ್ಯವು ಈ ಲೋಕದ್ದಲ್ಲ”
3. (ಎ) ಯೆಹೂದಿ ಧಾರ್ಮಿಕ ಮುಖಂಡರು ಪಿಲಾತನಿಗೆ ಯೇಸುವಿನ ಕುರಿತು ಯಾವ ದೂರನ್ನು ಹೊರಿಸಿದರು, ಮತ್ತು ಏಕೆ? (ಬಿ) ಮಾನವ ಅರಸನಾಗುವ ಯಾವುದೇ ಆಸಕ್ತಿ ಯೇಸುವಿಗಿರಲಿಲ್ಲವೆಂಬುದನ್ನು ಯಾವುದು ತೋರಿಸುತ್ತದೆ?
3 ಯೆಹೂದಿ ಧಾರ್ಮಿಕ ಮುಖಂಡರು ಯೇಸುವನ್ನು ದಸ್ತಗಿರಿ ಮಾಡಿ ರೋಮನ್ ರಾಜ್ಯಪಾಲ ಪೊಂತ್ಯ ಪಿಲಾತನ ಬಳಿಗೆ ಕೊಂಡೊಯ್ದಾಗ ನಡೆದದ್ದನ್ನು ಪರಿಗಣಿಸಿರಿ. ವಾಸ್ತವದಲ್ಲಿ, ಯೇಸು ಅವರ ಕಾಪಟ್ಯವನ್ನು ಬಯಲುಪಡಿಸಿದ ಕಾರಣ ಆ ನಾಯಕರು ಕೋಪಗೊಂಡಿದ್ದರು. ಆದುದರಿಂದ ರಾಜ್ಯಪಾಲನು ಯೇಸುವನ್ನು ಶಿಕ್ಷೆಗೊಳಪಡಿಸುವಂತೆ ಮಾಡಲು ಅವರು, “ಇವನು ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದು ಹೇಳುತ್ತಾ ಕೈಸರನಿಗೆ ತೆರಿಗೆಕೊಡಬಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸು ಕೆಡಿಸುವದನ್ನು ನಾವು ಕಂಡೆವು” ಎಂದು ಅವನ ಮೇಲೆ ದೂರು ಹೊರಿಸಿದರು. (ಲೂಕ 23:2) ಇದು ಸುಳ್ಳಾಗಿತ್ತು, ಏಕೆಂದರೆ ಒಂದು ವರುಷಕ್ಕೆ ಹಿಂದೆ ಜನರು ಯೇಸುವನ್ನು ರಾಜನಾಗಿ ಮಾಡಲು ಬಯಸಿದಾಗ, ಅವನು ಅದನ್ನು ನಿರಾಕರಿಸಿದ್ದನು. (ಯೋಹಾನ 6:15) ತಾನು ಭವಿಷ್ಯತ್ತಿನಲ್ಲಿ ಸ್ವರ್ಗೀಯ ಅರಸನಾಗಲಿದ್ದೇನೆಂಬುದು ಅವನಿಗೆ ತಿಳಿದಿತ್ತು. (ಲೂಕ 19:11, 12) ಅಲ್ಲದೆ, ಅವನ ಸಿಂಹಾಸನಾರೋಹಣವು ಮನುಷ್ಯರಿಂದಲ್ಲ, ಯೆಹೋವನಿಂದಲೇ ಆಗಲಿಕ್ಕಿತ್ತು.
4. ತೆರಿಗೆಯನ್ನು ನೀಡುವುದರ ವಿಷಯದಲ್ಲಿ ಯೇಸುವಿನ ಮನೋಭಾವವೇನಾಗಿತ್ತು?
4 ಯೇಸುವಿನ ದಸ್ತಗಿರಿಗೆ ಕೇವಲ ಮೂರು ದಿನಗಳಿಗೆ ಮುಂಚಿತವಾಗಿ, ತೆರಿಗೆ ತೆರುವುದರ ಸಂಬಂಧದಲ್ಲಿ ಯೇಸುವನ್ನು ಅಪರಾಧಕ್ಕೆ ಗುರಿಮಾಡುವಂತಹ ಏನನ್ನಾದರೂ ಅವನು ಹೇಳುವಂತೆ ಮಾಡಲು ಫರಿಸಾಯರು ಪ್ರಯತ್ನಿಸಿದರು. ಆದರೆ ಅವನು ಹೇಳಿದ್ದು: “ನನಗೆ ಒಂದು ಹಣವನ್ನು [ಒಂದು ರೋಮನ್ ನಾಣ್ಯವನ್ನು] ತೋರಿಸಿರಿ. ಇದರಲ್ಲಿ ಯಾರ ತಲೆಯೂ ಮುದ್ರೆಯೂ ಅದೆ”? “ಕೈಸರನದು” ಎಂದು ಅವರು ಹೇಳಿದಾಗ, ಅವನು ಪ್ರತ್ಯುತ್ತರಿಸಿದ್ದು: “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ.”—ಲೂಕ 20:20-25.
5. (ಎ) ದಸ್ತಗಿರಿಯ ಸಮಯದಲ್ಲಿ ಯೇಸು ತನ್ನ ಶಿಷ್ಯರಿಗೆ ಯಾವ ಪಾಠವನ್ನು ಕಲಿಸಿದನು? (ಬಿ) ತಾನು ವರ್ತಿಸಿದ ವಿಧಕ್ಕೆ ಕಾರಣವನ್ನು ಯೇಸು ಹೇಗೆ ವಿವರಿಸಿದನು? (ಸಿ) ಆ ವಿಚಾರಣೆಯ ಫಲಿತಾಂಶವೇನಾಗಿ ಪರಿಣಮಿಸಿತು?
5 ಇಲ್ಲ, ಲೋಕಾಧಿಪತಿಗಳಿಗೆ ವಿರೋಧವಾಗಿ ದಂಗೆಯೇಳಬೇಕೆಂದು ಯೇಸು ಕಲಿಸಲೇ ಇಲ್ಲ. ಸೈನಿಕರೂ ಇತರರೂ ಯೇಸುವನ್ನು ದಸ್ತಗಿರಿ ಮತ್ತಾಯ 26:51, 52) ಮರುದಿನ, ತನ್ನ ವರ್ತನೆಯನ್ನು ಯೇಸು ಪಿಲಾತನಿಗೆ ಹೀಗೆ ತಿಳಿಯಪಡಿಸಿದನು: “ನನ್ನ ರಾಜ್ಯವು ಈ ಲೋಕದ್ದಲ್ಲ; ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು.” (ಯೋಹಾನ 18:36) ಯೇಸುವಿನ ವಿರುದ್ಧವಾಗಿ “ಒಂದು ತಪ್ಪಾದರೂ ನನಗೆ ಕಾಣಲಿಲ್ಲ” ಎಂದು ಪಿಲಾತನು ಒಪ್ಪಿಕೊಂಡನು. ಆದರೆ ದೊಂಬಿಯ ಒತ್ತಡಕ್ಕೆ ಮಣಿದು, ಪಿಲಾತನು ಯೇಸುವನ್ನು ಶೂಲಕ್ಕೇರಿಸಿದನು.—ಲೂಕ 23:13-15; ಯೋಹಾನ 19:12-16.
ಮಾಡಲು ಬಂದಾಗ, ಪೇತ್ರನು ಕತ್ತಿಯನ್ನು ತೆಗೆದು ಒಬ್ಬ ಮನುಷ್ಯನ ಕಿವಿಯನ್ನು ಕತ್ತರಿಸಿದನು. ಆದರೆ ಯೇಸು ಹೇಳಿದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಶಿಷ್ಯರು ಯೇಸುವಿನ ನಾಯಕತ್ವವನ್ನು ಅನುಸರಿಸುತ್ತಾರೆ
6. ತಾವು ಲೋಕದ ಮನೋಭಾವವನ್ನು ತ್ಯಜಿಸಿದರೂ ಜನರನ್ನು ಪ್ರೀತಿಸುತ್ತೇವೆಂಬುದನ್ನು ಆದಿಕ್ರೈಸ್ತರು ಹೇಗೆ ತೋರಿಸಿದರು?
6 ಹೀಗೆ ಲೋಕದ ಭಾಗವಾಗದೆ ಇರುವುದರಲ್ಲಿ ತಮ್ಮಿಂದ ಏನು ಅಪೇಕ್ಷಿಸಲ್ಪಡುತ್ತದೆ ಎಂಬುದನ್ನು ಯೇಸುವಿನ ಶಿಷ್ಯರು ತಿಳಿದಿದ್ದರು. ರೋಮನ್ ಮಲ್ಲರಂಗ ಮತ್ತು ನಾಟ್ಯರಂಗಗಳಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಮತ್ತು ಅನೈತಿಕ ವಿನೋದಾವಳಿಗಳು ಸೇರಿದ್ದ ಲೋಕದ ಅದೈವಿಕ ಮನೋಭಾವ ಮತ್ತು ವರ್ತನೆಗಳಿಂದ ದೂರವಿರಬೇಕೆಂಬುದು ಇದರ ಅರ್ಥವಾಗಿತ್ತು. ಹೀಗೆ ಅವುಗಳನ್ನು ತ್ಯಜಿಸಿದಾಗ, ಆ ಶಿಷ್ಯರನ್ನು ಮಾನವದ್ವೇಷಿಗಳು ಎಂದು ಕರೆಯಲಾಯಿತು. ಆದರೆ ಅವರು ಜೊತೆ ಮಾನವರನ್ನು ದ್ವೇಷಿಸುವ ಬದಲು, ರಕ್ಷಣೆಗಾಗಿರುವ ದೇವರ ಏರ್ಪಾಡುಗಳಿಂದ ಪ್ರಯೋಜನ ಪಡೆಯುವಂತೆ ಇತರರಿಗೆ ಸಹಾಯಮಾಡಲು ಶ್ರಮಿಸಿದರು.
7. (ಎ) ಲೋಕದ ಭಾಗವಾಗಿ ಪರಿಣಮಿಸದೆ ಇದ್ದುದಕ್ಕೆ, ಆದಿಕ್ರೈಸ್ತರು ಏನನ್ನು ಅನುಭವಿಸಿದರು? (ಬಿ) ಸರಕಾರೀ ಅಧಿಕಾರಿಗಳನ್ನು ಮತ್ತು ತೆರಿಗೆ ಸಲ್ಲಿಸುವುದನ್ನು ಅವರು ಹೇಗೆ ವೀಕ್ಷಿಸಿದರು, ಮತ್ತು ಏಕೆ?
7 ಯೇಸುವಿನಂತೆಯೇ ಅವನ ಶಿಷ್ಯರಿಗೂ ಅನೇಕವೇಳೆ ತಪ್ಪಭಿಪ್ರಾಯವಿದ್ದ ಸರಕಾರೀ ಅಧಿಕಾರಿಗಳಿಂದ ಹಿಂಸೆಯು ಬಂತು. ಆದರೂ, ಸಾ.ಶ. 56ರ ಸುಮಾರಿಗೆ, ಅಪೊಸ್ತಲ ಪೌಲನು ರೋಮಿನ ಕ್ರೈಸ್ತರನ್ನು ಪ್ರೋತ್ಸಾಹಿಸುತ್ತಾ, “ಅಧಿಕಾರಿಗಳಿಗೆ [ರಾಜಕೀಯ ಅಧಿಕಾರಿಗಳಿಗೆ] ಅಧೀನರಾಗಿರಿ; ಯಾಕಂದರೆ ರೋಮಾಪುರ 13:1-7; ತೀತ 3:1, 2.
ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ,” ಎಂದು ಹೇಳಿದನು. ಯೆಹೋವನು ಐಹಿಕ ಸರಕಾರಗಳನ್ನು ಸ್ಥಾಪಿಸುತ್ತಾನೆಂದು ಇದರ ಅರ್ಥವಲ್ಲ; ಆತನ ರಾಜ್ಯವೊಂದೇ ಭೂಮಿಯಲ್ಲೆಲ್ಲ ಆಳುವ ತನಕ ಆತನು ಅವುಗಳನ್ನು ಅಸ್ತಿತ್ವದಲ್ಲಿರುವಂತೆ ಅನುಮತಿಸುತ್ತಾನೆಂದು ಅದರ ಅರ್ಥ. ಸಮಂಜಸವಾಗಿಯೇ, ಸರಕಾರೀ ಅಧಿಕಾರಿಗಳನ್ನು ಗೌರವಿಸಿ, ತೆರಿಗೆ ಸಲ್ಲಿಸಬೇಕೆಂದು ಪೌಲನು ಕ್ರೈಸ್ತರಿಗೆ ಸಲಹೆಕೊಟ್ಟನು.—8. (ಎ) ಮೇಲಧಿಕಾರಿಗಳಿಗೆ ಕ್ರೈಸ್ತರು ಎಷ್ಟರ ಮಟ್ಟಿಗೆ ಅಧೀನರಾಗಿರಬೇಕಾಗಿತ್ತು? (ಬಿ) ಆದಿಕ್ರೈಸ್ತರು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಿದರು?
8 ಆದರೂ, ಸರಕಾರೀ ಅಧಿಕಾರಿಗಳಿಗೆ ನಾವು ತೋರಿಸುವ ಅಧೀನತೆಯು ಅಪರಿಮಿತವಲ್ಲ, ಪರಿಮಿತವಾಗಿದೆ. ಯೆಹೋವನ ನಿಯಮಗಳು ಮತ್ತು ಮಾನವನ ನಿಯಮಗಳ ಮಧ್ಯೆ ಘರ್ಷಣೆಯು ಬರುವಾಗ, ಯೆಹೋವನನ್ನು ಸೇವಿಸುವವರು ಆತನ ನಿಯಮಗಳನ್ನೇ ಪಾಲಿಸುತ್ತಾರೆ. ನಾಗರಿಕತೆಗೆ ಹೋಗುವ ಹಾದಿಯಲ್ಲಿ—ಒಂದು ಜಾಗತಿಕ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ಆದಿಕ್ರೈಸ್ತರ ವಿಷಯದಲ್ಲಿ ಹೇಳುವುದನ್ನು ಗಮನಿಸಿರಿ: “ರೋಮನ್ ನಾಗರಿಕರ ಕೆಲವು ಕರ್ತವ್ಯಗಳಲ್ಲಿ ಭಾಗವಹಿಸಲು ಕ್ರೈಸ್ತರು ನಿರಾಕರಿಸಿದರು. ಕ್ರೈಸ್ತರು . . . ಮಿಲಿಟರಿಗೆ ಸೇರುವುದನ್ನು ತಮ್ಮ ನಂಬಿಕೆಯ ಉಲ್ಲಂಘನೆಯೆಂದೆಣಿಸಿದರು. ಅವರು ರಾಜಕೀಯ ಹುದ್ದೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅವರು ಚಕ್ರವರ್ತಿಯನ್ನು ಆರಾಧಿಸುತ್ತಿರಲಿಲ್ಲ.” ಯೆಹೂದಿ ಉಚ್ಚ ನ್ಯಾಯಾಲಯವು, ಶಿಷ್ಯರು ಸಾರುವುದನ್ನು ನಿಲ್ಲಿಸಬೇಕೆಂದು “ಖಂಡಿತವಾಗಿ ಅಪ್ಪಣೆ”ಕೊಟ್ಟಾಗ, ಅವರು ಉತ್ತರ ಕೊಟ್ಟದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.”—ಅ. ಕೃತ್ಯಗಳು 5:27-29.
9. (ಎ) ಸಾ.ಶ. 66ರಲ್ಲಿ ಯೆರೂಸಲೇಮಿನಲ್ಲಿದ್ದ ಕ್ರೈಸ್ತರು ಪಲಾಯನ ಮಾಡಿದ್ದೇಕೆ? (ಬಿ) ಅದು ಯಾವ ವಿಧದಲ್ಲಿ ಒಂದು ಬೆಲೆಬಾಳುವ ಮಾದರಿಯಾಗಿದೆ?
9 ರಾಜಕೀಯ ಹಾಗೂ ಮಿಲಿಟರಿ ವಿವಾದಗಳಲ್ಲಿ, ಶಿಷ್ಯರು ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಪಾಲಿಸಿದರು. ಸಾ.ಶ. 66ರಲ್ಲಿ ಯೆಹೂದದ ಯೆಹೂದ್ಯರು ಕೈಸರನಿಗೆದುರಾಗಿ ದಂಗೆಯೆದ್ದರು. ಆಗ ಒಡನೆ ರೋಮನ್ ಸೈನ್ಯವು ಯೆರೂಸಲೇಮನ್ನು ಆವರಿಸಿತು. ಆಗ ನಗರದಲ್ಲಿದ್ದ ಕ್ರೈಸ್ತರೇನು ಮಾಡಿದರು? ನಗರದಿಂದ ಓಡಿಹೋಗುವಂತೆ ಯೇಸು ನೀಡಿದ್ದ ಸಲಹೆಯನ್ನು ಅವರು ನೆನಪಿಸಿಕೊಂಡರು. ರೋಮನರು ತಾತ್ಕಾಲಿಕವಾಗಿ ಹಿಮ್ಮೆಟ್ಟಿ ಹೋದಾಗ, ಈ ಲೂಕ 21:20-24) ಅಂದಿನ ಅವರ ತಾಟಸ್ಥ್ಯವು ತರುವಾಯ ಬರಲಿದ್ದ ನಂಬಿಗಸ್ತ ಕ್ರೈಸ್ತರಿಗೆ ಮಾದರಿಯಾಗಿ ಕಾರ್ಯನಡಿಸುತ್ತದೆ.
ಕ್ರೈಸ್ತರು ಯೊರ್ದನ್ ನದಿಯನ್ನು ದಾಟಿ ಪೆಲ ಬೆಟ್ಟಪ್ರದೇಶಕ್ಕೆ ಓಡಿಹೋದರು. (ಈ ಕಡೇ ದಿವಸಗಳಲ್ಲಿರುವ ಕ್ರೈಸ್ತ ತಟಸ್ಥ ವ್ಯಕ್ತಿಗಳು
10. (ಎ) ಯೆಹೋವನ ಸಾಕ್ಷಿಗಳು ಯಾವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ, ಮತ್ತು ಏಕೆ? (ಬಿ) ಯಾವ ವಿಷಯದಲ್ಲಿ ಅವರು ತಟಸ್ಥರಾಗಿದ್ದಾರೆ?
10 ಈ ಕಡೇ ದಿವಸಗಳಲ್ಲಿರುವ ಯಾವುದೇ ಒಂದು ಜನರ ಗುಂಪು ಆದಿಕ್ರೈಸ್ತರನ್ನು ಅನುಕರಿಸುತ್ತಾ, ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಬೆನ್ನಟ್ಟಿದೆಯೆಂಬುದನ್ನು ಐತಿಹಾಸಿಕ ದಾಖಲೆಯು ತೋರಿಸುತ್ತದೆಯೆ? ಹೌದು, ಯೆಹೋವನ ಸಾಕ್ಷಿಗಳು ಹಾಗೆ ಮಾಡಿರುತ್ತಾರೆ. ಈ ಎಲ್ಲಾ ಸಮಯದಲ್ಲಿ, ಬಾಳುವ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರುವ ಏಕಮಾತ್ರ ಮಾಧ್ಯಮವು ದೇವರ ರಾಜ್ಯವೆಂಬುದನ್ನು ಅವರು ಸಾರುತ್ತಾ ಹೋಗಿರುತ್ತಾರೆ. (ಮತ್ತಾಯ 24:14) ಆದರೆ ಜನಾಂಗಗಳ ಮಧ್ಯೆ ನಡೆಯುವ ವಾದ ವಿವಾದಗಳಲ್ಲಿ ಅವರು ಕಟ್ಟುನಿಟ್ಟಿನ ತಾಟಸ್ಥ್ಯವನ್ನು ಕಾಪಾಡಿಕೊಂಡಿದ್ದಾರೆ.
11. (ಎ) ಸಾಕ್ಷಿಗಳ ತಾಟಸ್ಥ್ಯವು ಧಾರ್ಮಿಕ ಮುಖಂಡರ ವರ್ತನೆಗೆ ಹೇಗೆ ವ್ಯತಿರಿಕ್ತವಾಗಿದೆ? (ಬಿ) ಇತರರು ರಾಜಕೀಯ ವಿಚಾರಗಳ ಕುರಿತು ಏನು ಮಾಡುತ್ತಾರೊ ಅದರ ಬಗ್ಗೆ ಯೆಹೋವನ ಸಾಕ್ಷಿಗಳ ವೀಕ್ಷಣವೇನು?
11 ಇದಕ್ಕೆ ತೀರ ವ್ಯತಿರಿಕ್ತವಾಗಿ, ಈ ಲೋಕದ ಧರ್ಮಗಳ ಮುಖಂಡರು ರಾಜಕೀಯ ವಿಚಾರಗಳಲ್ಲಿ ತೀರ ತಲ್ಲೀನರಾಗಿದ್ದಾರೆ. ಕೆಲವು ದೇಶಗಳಲ್ಲಿ ಅವರು ಉಮೇದುವಾರರ ಪರವಾಗಿಯೊ ವಿರುದ್ಧವಾಗಿಯೊ ಮತಹಾಕುವಂತೆ ವಿನಂತಿಸುವುದರಲ್ಲಿ ಭಾಗಿಗಳಾಗುತ್ತಾರೆ. ಕೆಲವು ಧಾರ್ಮಿಕ ಮುಖಂಡರು ರಾಜಕೀಯ ಅಧಿಕಾರವನ್ನೂ ವಹಿಸಿಕೊಳ್ಳುತ್ತಾರೆ. ಇತರರು, ಧಾರ್ಮಿಕ ಮುಖಂಡ ವರ್ಗವು ಒಪ್ಪಿಗೆಕೊಡುವ ಕಾರ್ಯಕ್ರಮಗಳನ್ನು ರಾಜಕಾರಣಿಗಳು ಬೆಂಬಲಿಸುವಂತೆ ಒತ್ತಡ ಹಾಕುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ತಲೆಹಾಕುವುದೂ ಇಲ್ಲ, ರಾಜಕೀಯ ಪಕ್ಷವನ್ನು ಸೇರುವ, ರಾಜಕೀಯ ಅಧಿಕಾರ ಸ್ಥಾನಕ್ಕೆ ಉಮೇದುವಾರರಾಗಿ ನಿಲ್ಲುವ, ಇಲ್ಲವೆ ಚುನಾವಣೆಯಲ್ಲಿ ಮತನೀಡುವ ವಿಷಯದಲ್ಲಿ ಇತರರು ಏನು ಮಾಡುತ್ತಾರೊ ಅದರಲ್ಲಿ ಕೈಹಾಕುವುದೂ ಇಲ್ಲ. ತನ್ನ ಶಿಷ್ಯರು ಲೋಕದ ಭಾಗವಾಗಿರುವುದಿಲ್ಲವೆಂದು ಯೇಸು ಹೇಳಿರುವುದರಿಂದ ಯೆಹೋವನ ಸಾಕ್ಷಿಗಳು ರಾಜಕೀಯ ವಿಚಾರಗಳಲ್ಲಿ ಯಾವ ಭಾಗವನ್ನೂ ತೆಗೆದುಕೊಳ್ಳುವುದಿಲ್ಲ.
12. ಈ ಲೋಕದ ಧರ್ಮಗಳು ತಟಸ್ಥವಾಗಿಲ್ಲದ ಕಾರಣ ಏನು ಪರಿಣಮಿಸಿದೆ?
ಮತ್ತಾಯ 24:3, 6, 7) ಧಾರ್ಮಿಕ ಮುಖಂಡರು ಹೆಚ್ಚು ಕಡಮೆ ಯಾವಾಗಲೂ ಒಂದು ಜನಾಂಗವನ್ನೊ ಪಂಗಡವನ್ನೊ ಬೆಂಬಲಿಸಿ, ತಮ್ಮ ಹಿಂಬಾಲಕರೂ ಹಾಗೆ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಇದರ ಪರಿಣಾಮವೇನು? ರಾಷ್ಟ್ರ ಅಥವಾ ಕುಲವು ಭಿನ್ನವಾಗಿರುವ ಕಾರಣ ಒಂದೇ ಧರ್ಮದ ಸದಸ್ಯರು ಯುದ್ಧದಲ್ಲಿ ಒಬ್ಬರನ್ನೊಬ್ಬರು ಸಂಹರಿಸಿಕೊಳ್ಳುತ್ತಾರೆ. ಇದು ದೇವರ ಚಿತ್ತಕ್ಕೆ ಪ್ರತಿಕೂಲವಾಗಿರುತ್ತದೆ.—1 ಯೋಹಾನ 3:10-12; 4:8, 20.
12 ಯೇಸು ಮುಂತಿಳಿಸಿದಂತೆ, ಜನಾಂಗಗಳು ಪದೇ ಪದೇ ಯುದ್ಧಕ್ಕಿಳಿದಿರುತ್ತವೆ. ಜನಾಂಗಗಳೊಳಗಿರುವ ಪಂಗಡಗಳೂ ಒಂದು ಇನ್ನೊಂದರೊಂದಿಗೆ ಹೋರಾಡಿವೆ. (13. ಯೆಹೋವನ ಸಾಕ್ಷಿಗಳ ತಾಟಸ್ಥ್ಯದ ಕುರಿತು ನಿಜತ್ವಗಳು ಏನನ್ನು ತೋರಿಸುತ್ತವೆ?
13 ಆದರೆ ಯೆಹೋವನ ಸಾಕ್ಷಿಗಳು ಎಲ್ಲಾ ಹೋರಾಟಗಳಲ್ಲಿಯೂ ಕಟ್ಟುನಿಟ್ಟಿನ ತಾಟಸ್ಥ್ಯವನ್ನು ಕಾಪಾಡಿಕೊಂಡಿದ್ದಾರೆ. 1939, ನವಂಬರ್ 1ರ ಕಾವಲಿನಬುರುಜು (ಇಂಗ್ಲಿಷ್) ತಿಳಿಸಿದ್ದು: “ಕರ್ತನ ಪಕ್ಷದಲ್ಲಿರುವವರೆಲ್ಲರೂ ಯುದ್ಧಹೂಡುತ್ತಿರುವ ಜನಾಂಗಗಳ ವಿಷಯದಲ್ಲಿ ತಟಸ್ಥರಾಗಿರುವರು.” ಎಲ್ಲಾ ಜನಾಂಗಗಳ ಯೆಹೋವನ ಸಾಕ್ಷಿಗಳು, ಎಲ್ಲಾ ಪರಿಸ್ಥಿತಿಗಳಲ್ಲಿ ಈ ನಿಲುವನ್ನು ತೆಗೆದುಕೊಳ್ಳುತ್ತಾರೆ. ಲೋಕದ ವಿಭಾಜಕ ರಾಜಕೀಯವೊ ಯುದ್ಧಗಳೊ ತಮ್ಮ ಅಂತಾರಾಷ್ಟ್ರೀಯ ಸಹೋದರತ್ವವನ್ನು ಮುರಿಯುವಂತೆ ಅವರು ಬಿಡುವುದಿಲ್ಲ. ಅವರು “ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡು”ತ್ತಾರೆ. ತಟಸ್ಥರಾಗಿರುವುದರಿಂದ, ಅವರು ಯುದ್ಧಮಾಡಲು ಕಲಿಯುವುದಿಲ್ಲ.—ಯೆಶಾಯ 2:3, 4; 2 ಕೊರಿಂಥ 10:3, 4.
14. ಲೋಕದಿಂದ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ಕಾರಣ, ಯೆಹೋವನ ಸಾಕ್ಷಿಗಳು ಏನನ್ನು ಅನುಭವಿಸಿದ್ದಾರೆ?
14 ಅವರ ತಾಟಸ್ಥ್ಯದಿಂದ ಉಂಟಾಗಿರುವ ಒಂದು ಪರಿಣಾಮವೇನು? ಯೇಸು ಹೇಳಿದ್ದು: “ನೀವು ಲೋಕದ ಕಡೆಯವರಲ್ಲದೆ ಇರುವದರಿಂದ . . . ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.” (ಯೋಹಾನ 15:19) ದೇವರ ಸೇವಕರಾಗಿರುವ ಕಾರಣ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಬಂಧಿಸಲ್ಪಟ್ಟಿದ್ದಾರೆ. ಪ್ರಥಮ ಶತಮಾನದ ಕ್ರೈಸ್ತರಿಗೆ ಸಂಭವಿಸಿರುವಂತೆಯೇ, ಕೆಲವರು ಚಿತ್ರಹಿಂಸೆಗೊಳಗಾಗಿದ್ದಾರೆ, ಕೊಲ್ಲಲ್ಪಟ್ಟಿದ್ದಾರೆ ಸಹ. ಇದಕ್ಕೆ ಕಾರಣವು, “ಈ ಪ್ರಪಂಚದ ದೇವರು” ಆಗಿರುವ ಸೈತಾನನು ಲೋಕದ ಭಾಗವಾಗಿಲ್ಲದಿರುವ ಯೆಹೋವನ ಸೇವಕರನ್ನು ವಿರೋಧಿಸುವುದೇ.—2 ಕೊರಿಂಥ 4:4; ಪ್ರಕಟನೆ 12:12.
15. (ಎ) ಸಕಲ ಜನಾಂಗಗಳು ಯಾವುದರ ಕಡೆಗೆ ಮುನ್ನಡೆಯುತ್ತಿವೆ, ಮತ್ತು ಯೆಹೋವನ ಸಾಕ್ಷಿಗಳು ಯಾವುದರಿಂದ ದೂರವಿರಲು ಜಾಗ್ರತೆ ವಹಿಸುತ್ತಾರೆ? (ಬಿ) ಲೋಕದಿಂದ ಪ್ರತ್ಯೇಕತೆಯು ಅಷ್ಟು ಗಂಭೀರವಾದ ವಿಷಯವಾಗಿರುವುದೇಕೆ?
15 ತಾವು ಲೋಕದ ಭಾಗವಾಗಿಲ್ಲದೆ ಇರುವುದಕ್ಕೆ ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ. ಏಕೆಂದರೆ ಲೋಕದ ಜನಾಂಗಗಳು ಅರ್ಮಗೆದೋನಿನಲ್ಲಿ ಬರಲಿರುವ ಅಂತ್ಯದ ಕಡೆಗೆ ಮುನ್ನಡೆಯುತ್ತಾ ಇವೆ. (ದಾನಿಯೇಲ 2:44; ಪ್ರಕಟನೆ 16:14, 16; 19:11-21) ಆದರೆ ನಾವು ಲೋಕದಿಂದ ಪ್ರತ್ಯೇಕವಾಗಿರುವುದರಿಂದ ಅದರ ಅಂತ್ಯವನ್ನು ಪಾರಾಗುವೆವು. ಭೂವ್ಯಾಪಕವಾಗಿ ಐಕ್ಯಜನರಾಗಿರುವ ನಾವು ದೇವರ ಸ್ವರ್ಗೀಯ ರಾಜ್ಯಕ್ಕೆ ನಿಷ್ಠರಾಗಿದ್ದೇವೆ. ಲೋಕದ ಭಾಗವಾಗಿಲ್ಲದಿರುವುದರಿಂದ, ನಾವು ಅದರ ಅಪಹಾಸ್ಯ, ಹಿಂಸೆಗಳಿಗೆ ಬಲಿಯಾಗುತ್ತೇವೆ ನಿಜ. ಆದರೆ ಇದು ಅತಿ ಬೇಗನೆ ನಿಂತುಹೋಗುವುದು, ಏಕೆಂದರೆ ಸೈತಾನನ ಕೆಳಗಿರುವ ಈಗಿನ ದುಷ್ಟ ಲೋಕವು ನಿತ್ಯಕ್ಕೂ ನಾಶಗೊಳ್ಳುವುದು. ಆದರೆ ಯೆಹೋವನನ್ನು ಸೇವಿಸುವವರು ದೇವರ ರಾಜ್ಯದ ಕೆಳಗಿನ ಆತನ ನೀತಿಯ ನೂತನ ಲೋಕದಲ್ಲಿ ಅನಂತವಾಗಿ ಜೀವಿಸುವರು.—2 ಪೇತ್ರ 3:10-13; 1 ಯೋಹಾನ 2:15-17.
ಪುನರ್ವಿಮರ್ಶೆಯ ಚರ್ಚೆ
• ‘ಲೋಕದ ಭಾಗವಾಗಿಲ್ಲದೆ’ ಇರುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ಯೇಸು ಹೇಗೆ ತೋರಿಸಿದನು?
• ಆದಿಕ್ರೈಸ್ತರ ಮನೋಭಾವವು (ಎ) ಲೋಕದ ಆತ್ಮದ ವಿಷಯದಲ್ಲಿ, (ಬಿ) ಐಹಿಕ ಅಧಿಕಾರಿಗಳ ವಿಷಯದಲ್ಲಿ, ಮತ್ತು (ಸಿ) ತೆರಿಗೆ ಸಲ್ಲಿಸುವ ವಿಷಯದಲ್ಲಿ ಏನಾಗಿತ್ತು?
• ಆಧುನಿಕ ದಿನಗಳ ಯೆಹೋವನ ಸಾಕ್ಷಿಗಳು ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ಯಾವ ವಿಧಗಳಲ್ಲಿ ಸಾಬೀತುಪಡಿಸಿದ್ದಾರೆ?
[ಅಧ್ಯಯನ ಪ್ರಶ್ನೆಗಳು]
[ಪುಟ 165ರಲ್ಲಿರುವ ಚಿತ್ರ]
ತಾನೂ ತನ್ನ ಹಿಂಬಾಲಕರೂ “ಲೋಕದವರಲ್ಲ” ಎಂದು ಯೇಸು ತಿಳಿಯಪಡಿಸಿದನು