ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ

ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ

ಅಧ್ಯಾಯ ಮೂರು

ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ

1. (ಎ) ದೇವರ ವಾಕ್ಯದ ಸತ್ಯತೆಯನ್ನು ಪುರಾತನ ಇಸ್ರಾಯೇಲ್‌ ಹೇಗೆ ಅನುಭವಿಸಿತು? (ಬಿ) ಅದು ನಮಗೆ ಏಕೆ ಆಸಕ್ತಿಯ ವಿಷಯವಾಗಿದೆ?

“ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋಶುವ 23:14-16) ಇಸ್ರಾಯೇಲ್ಯರು ವಾಗ್ದತ್ತ ದೇಶದಕ್ಕೆ ಬಂದು ನೆಲೆಸಿದ ಮೇಲೆ ಯೆಹೋಶುವನು ಅವರ ಹಿರೀಪುರುಷರಿಗೆ ಹೀಗೆ ಹೇಳಿದನು. ಹೌದು, ಯೆಹೋವನ ವಾಗ್ದಾನಗಳು ಭರವಸಾರ್ಹವಾಗಿ ರುಜುವಾದವು. ಆ ದಾಖಲೆಯೂ ಬೈಬಲಿನ ಉಳಿದ ಭಾಗವೂ, “ನಾವು . . . ನಿರೀಕ್ಷೆಯುಳ್ಳವರಾಗಿರುವಂತೆ” ನಮಗಾಗಿ ಕಾಪಾಡಿ ಉಳಿಸಲ್ಪಟ್ಟಿತು.​—⁠ರೋಮಾಪುರ 15:⁠4.

2. (ಎ) ಬೈಬಲು ಯಾವ ಅರ್ಥದಲ್ಲಿ “ದೈವಪ್ರೇರಿತ”ವಾಗಿದೆ? (ಬಿ) ಬೈಬಲು ದೈವಿಕವಾಗಿ ಪ್ರೇರಿಸಲ್ಪಟ್ಟಿದೆ ಎಂಬುದನ್ನು ತಿಳಿದವರಾದ ನಮಗೆ ಯಾವ ಜವಾಬ್ದಾರಿಯಿದೆ?

2 ಬೈಬಲನ್ನು ಬರೆಯಲು ಸುಮಾರು 40 ಮಂದಿ ಮಾನವ ಲೇಖಕರನ್ನು ಉಪಯೋಗಿಸಲಾಯಿತಾದರೂ, ಅದರ ಗ್ರಂಥಕರ್ತನು ಯೆಹೋವನು ತಾನೇ ಆಗಿದ್ದಾನೆ. ಆತನು ಅದರಲ್ಲಿರುವ ಸಕಲವೂ ಬರೆಯಲ್ಪಡುವುದನ್ನು ತಾನೇ ಕ್ರಿಯಾಶೀಲವಾಗಿ ನಿರ್ದೇಶಿಸಿದನೆಂದು ಇದರ ಅರ್ಥವೊ? ಹೌದು. ಆತನು ಇದನ್ನು ತನ್ನ ಬಲಾಢ್ಯವಾದ ಪವಿತ್ರಾತ್ಮದ ಮೂಲಕ, ತನ್ನ ಕ್ರಿಯಾಶೀಲ ಶಕ್ತಿಯ ಮೂಲಕ ಮಾಡಿದನು. ಅಪೊಸ್ತಲ ಪೌಲನು ನಿಜವಾಗಿಯೇ ಹೇಳಿದ್ದು: ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ, ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು.’ ಇದು ಮನದಟ್ಟಾಗಿರುವ ಜನರು ಬೈಬಲಿಗೆ ಗಮನಕೊಟ್ಟು, ಅದರ ಬೋಧನೆಗಳ ಸುತ್ತಲೂ ತಮ್ಮ ಜೀವಿತಗಳನ್ನು ಕಟ್ಟುತ್ತಾರೆ.​—⁠2 ತಿಮೊಥೆಯ 3:​16, 17; 1 ಥೆಸಲೊನೀಕ 2:13.

ಅದನ್ನು ಮಾನ್ಯಮಾಡಲು ಇತರರಿಗೆ ಸಹಾಯ ನೀಡಿರಿ

3. ಬೈಬಲು ದೇವರ ವಾಕ್ಯವೆಂದು ಮನದಟ್ಟಾಗಿರದವರಿಗೆ ಸಹಾಯಮಾಡುವ ಅತ್ಯುತ್ತಮ ವಿಧವು ಯಾವುದು?

3 ನಾವು ಯಾರೊಂದಿಗೆ ಮಾತಾಡುತ್ತೇವೊ ಅವರಲ್ಲಿ ಅನೇಕರು ಬೈಬಲು ದೇವರ ವಾಕ್ಯವೆಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ನಂಬುವುದಿಲ್ಲ. ನಾವು ಅವರಿಗೆ ಹೇಗೆ ಸಹಾಯಮಾಡಬಲ್ಲೆವು? ಅನೇಕವೇಳೆ, ಇದಕ್ಕೆ ಅತ್ಯುತ್ತಮ ವಿಧವು ಬೈಬಲನ್ನು ತೆರೆದು ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ತೋರಿಸುವುದೇ. “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) “ದೇವರ ವಾಕ್ಯವು” ಮೃತ ಇತಿಹಾಸವಲ್ಲ; ಅದು ಸಜೀವವಾಗಿದೆ! ಬೈಬಲಿನ ವಾಗ್ದಾನಗಳು ಅವುಗಳ ನೆರವೇರಿಕೆಯ ಮಾರ್ಗದಲ್ಲಿ ತಡೆಯಲಾಗದಂಥ ರೀತಿಯಲ್ಲಿ ಚಲಿಸುತ್ತವೆ. ಒಬ್ಬನ ಹೃದಯದ ನಿಜವಾದ ಪ್ರಚೋದನೆಯ ಮೇಲೆ ಬೈಬಲಿನ ಸಂದೇಶವು ಬೀರುವ ಪ್ರಭಾವವು, ನಾವು ವೈಯಕ್ತಿಕವಾಗಿ ಹೇಳುವ ಯಾವುದೇ ಮಾತುಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ.

4. ಬೈಬಲ್‌ ಸತ್ಯಗಳ ಯಾವ ವಿವರಣೆಗಳು ಬೈಬಲಿನ ಕಡೆಗೆ ಕೆಲವರಿಗಿದ್ದ ಮನೋಭಾವವನ್ನು ಬದಲಾಯಿಸಿವೆ, ಮತ್ತು ಏಕೆ?

4 ದೇವರ ಹೆಸರು ಬೈಬಲಿನಲ್ಲಿರುವುದನ್ನು ನೋಡುವುದೇ ಅನೇಕರು ಅದನ್ನು ಆಳವಾಗಿ ಪರೀಕ್ಷಿಸುವಂತೆ ಪ್ರಚೋದಿಸಿದೆ. ಇತರರು, ಜೀವನದ ಉದ್ದೇಶ, ದೇವರು ದುಷ್ಟತನವನ್ನು ಅನುಮತಿಸಿರುವುದಕ್ಕೆ ಕಾರಣ, ಈಗ ನಡೆಯುತ್ತಿರುವ ಘಟನೆಗಳ ವಿಶೇಷತೆ ಅಥವಾ ಪರದೈಸ ಭೂಮಿಯಲ್ಲಿ ನಿತ್ಯಜೀವದ ನಿರೀಕ್ಷೆಯ ಕುರಿತು ಬೈಬಲು ಏನು ಹೇಳುತ್ತದೆಂಬುದನ್ನು ತೋರಿಸಿದಾಗ, ಬೈಬಲ್‌ ಅಧ್ಯಯನ ಮಾಡಲು ನಿರ್ಣಯಿಸುತ್ತಾರೆ. ಧಾರ್ಮಿಕ ಪದ್ಧತಿಗಳು ಜನರನ್ನು ದುಷ್ಟಾತ್ಮಗಳ ಕಿರುಕುಳಕ್ಕೆ ಒಡ್ಡಿರುವ ದೇಶಗಳಲ್ಲಿ, ಇದಕ್ಕೆ ಕಾರಣವೇನು ಮತ್ತು ಉಪಶಮನವನ್ನು ಹೇಗೆ ಪಡೆಯಬಹುದೆಂಬ ವಿಷಯದಲ್ಲಿ ಬೈಬಲು ಕೊಟ್ಟಿರುವ ವಿವರಣೆಯು ಆಸಕ್ತಿಯನ್ನು ಕೆರಳಿಸಿದೆ. ಈ ಸಂಗತಿಗಳು ಯಥಾರ್ಥವಂತರಾದ ಜನರನ್ನು ಮೆಚ್ಚಿಸುವುದೇಕೆ? ಏಕೆಂದರೆ, ಇಂತಹ ಎಲ್ಲಾ ಮಹತ್ವದ ವಿಚಾರಗಳಲ್ಲಿ ಬೈಬಲೊಂದೇ ಭರವಸಯೋಗ್ಯ ಮಾಹಿತಿಯ ಮೂಲವಾಗಿದೆ.​—⁠ಕೀರ್ತನೆ 119:130.

5. (ಎ) ತಾವು ಬೈಬಲನ್ನು ನಂಬುವುದಿಲ್ಲವೆಂದು ಜನರು ಹೇಳುವಾಗ, ಅದಕ್ಕೆ ಯಾವ ಕಾರಣಗಳಿರಬಹುದು? (ಬಿ) ಅಂತಹ ಜನರಿಗೆ ನಾವು ಹೇಗೆ ಸಹಾಯಮಾಡಬಹುದು?

5 ಆದರೆ, ತಾವು ಬೈಬಲನ್ನೇ ನಂಬುವುದಿಲ್ಲವೆಂದು ಜನರು ಹೇಳುವಲ್ಲಿ ಏನು ಮಾಡಬಹುದು? ಆಗ ನಮ್ಮ ಸಂಭಾಷಣೆಯನ್ನು ಕೊನೆಗೊಳಿಸಿಬಿಡಬೇಕೆಂದಿದೆಯೊ? ಜನರಿಗೆ ನ್ಯಾಯಸಮ್ಮತವಾಗಿ ತರ್ಕಿಸಲು ಮನಸ್ಸಿರುವಲ್ಲಿ ಸಂಭಾಷಣೆಯನ್ನು ಕೊನೆಗೊಳಿಸಬೇಕೆಂದಿಲ್ಲ. ಏಕೆಂದರೆ ಅವರು ಒಂದುವೇಳೆ ಬೈಬಲನ್ನು ಕ್ರೈಸ್ತಪ್ರಪಂಚದ ಗ್ರಂಥವಾಗಿ ವೀಕ್ಷಿಸುತ್ತಿರಬಹುದು. ಕ್ರೈಸ್ತಪ್ರಪಂಚದ ಕಪಟಾಚಾರಣೆಯ ಇತಿಹಾಸ ಮತ್ತು ರಾಜಕೀಯ ಹಸ್ತಕ್ಷೇಪ ಹಾಗೂ ಹಣಕ್ಕಾಗಿ ಅದರ ತಪ್ಪದ ಮನವಿಯು ಬೈಬಲಿನ ಕಡೆಗೆ ಅವರಿಗಿರುವ ನಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಿರಬಹುದು. ಅದು ನಿಜವೊ ಎಂದು ಅವರನ್ನು ಏಕೆ ಕೇಳಬಾರದು? ಕ್ರೈಸ್ತಪ್ರಪಂಚದ ಪ್ರಾಪಂಚಿಕ ವಿಧಗಳ ಕುರಿತು ಬೈಬಲು ಮಾಡುವ ಖಂಡನೆ ಹಾಗೂ ಕ್ರೈಸ್ತಪ್ರಪಂಚ ಮತ್ತು ಸತ್ಯ ಕ್ರೈಸ್ತತ್ವಗಳ ಮಧ್ಯೆ ಇರುವ ವ್ಯತ್ಯಾಸಗಳ ತೋರಿಸುವಿಕೆಯು ಅವರ ಆಸಕ್ತಿಯನ್ನು ಕೆರಳಿಸಬಹುದು.​—⁠ಮೀಕ 3:​11, 12; ಮತ್ತಾಯ 15:​7-9; ಯಾಕೋಬ 4:⁠4.

6. (ಎ) ಬೈಬಲು ದೇವರ ವಾಕ್ಯವೆಂಬುದನ್ನು ವ್ಯಕ್ತಿಪರವಾಗಿ ನಿಮಗೆ ಯಾವುದು ಮನಗಾಣಿಸುತ್ತದೆ? (ಬಿ) ಬೈಬಲು ನಿಜವಾಗಿಯೂ ದೇವರಿಂದ ಬಂದಿದೆಯೆಂದು ಜನರು ಮಾನ್ಯಮಾಡುವಂತೆ ಬೇರೆ ಯಾವ ತರ್ಕಸರಣಿಗಳನ್ನು ಉಪಯೋಗಿಸಸಾಧ್ಯವಿದೆ?

6 ಇತರರಿಗೆ, ಬೈಬಲು ದೈವಪ್ರೇರಿತವಾಗಿದೆ ಎಂಬುದಕ್ಕೆ ಇರುವ ಪುರಾವೆಗಳ ನೇರವಾದ ಚರ್ಚೆಯು ಸಹಾಯಕರವಾಗಬಹುದು. ಬೈಬಲು ಯೆಹೋವ ದೇವರಿಂದ ಬಂದಿರುತ್ತದೆ ಎಂಬುದನ್ನು ನಿಮಗೆ ಯಾವುದು ಸ್ಪಷ್ಟವಾಗಿ ರುಜುಪಡಿಸುತ್ತದೆ? ಬೈಬಲು ತಾನೇ ಅದರ ಮೂಲದ ಕುರಿತು ಏನನ್ನುತ್ತದೊ ಅದೇ ನಿಮಗೆ ಈ ಖಾತ್ರಿಯನ್ನು ನೀಡುತ್ತದೊ? ಅಥವಾ ಭವಿಷ್ಯದ ಕುರಿತು ಸವಿವರವಾದ ಜ್ಞಾನವನ್ನು ಪ್ರತಿಬಿಂಬಿಸುವ ಪ್ರವಾದನೆಗಳು, ಮನುಷ್ಯಾತೀತ ಮೂಲದಿಂದ ಬಂದಿರಲೇ ಬೇಕಾದ ಪ್ರವಾದನೆಗಳು ಬೈಬಲಿನಲ್ಲಿ ಅಡಕವಾಗಿವೆ ಎಂಬ ವಿಷಯವೊ? (2 ಪೇತ್ರ 1:​20, 21) ಅಥವಾ, 40 ಜನರು ಸುಮಾರು 1,600 ವರುಷಗಳಲ್ಲಿ ಬರೆದಿರುವುದಾದರೂ, ಬೈಬಲು ಅದ್ಭುತಕರವಾದ ಆಂತರಿಕ ಸಾಮರಸ್ಯವನ್ನು ತೋರಿಸುತ್ತದೆ ಎಂಬ ವಿಷಯವೊ? ಇಲ್ಲವೆ ಆ ದಿನಗಳ ಇತರ ಬರಹಗಳಿಗೆ ವ್ಯತಿರಿಕ್ತವಾಗಿ ಅದು ತೋರಿಸುವ ವೈಜ್ಞಾನಿಕ ನಿಷ್ಕೃಷ್ಟತೆಯೊ? ಅಥವಾ ಅದರ ಲೇಖಕರ ಬಿಚ್ಚುಮನವೊ? ಅಥವಾ ಅದನ್ನು ನಾಶಮಾಡಲು ಮಾಡಿದ ಭಯಂಕರ ಪ್ರಯತ್ನಗಳ ಎದುರಿನಲ್ಲಿಯೂ ಅದು ಕಾಪಾಡಲ್ಪಟ್ಟದ್ದೊ? ನೀವು ವ್ಯಕ್ತಿಪರವಾಗಿ ಯಾವುದನ್ನು ಪರಿಣಾಮಕಾರಕವಾಗಿ ಕಂಡುಕೊಂಡಿದ್ದೀರೊ ಅದನ್ನು ಇತರರಿಗೆ ಸಹಾಯಮಾಡಲು ಸಹ ಉಪಯೋಗಿಸಬಲ್ಲಿರಿ. *

ನಮ್ಮ ಬೈಬಲ್‌ ವಾಚನ

7, 8. (ಎ) ನಾವು ಬೈಬಲನ್ನು ಹೇಗೆ ಉಪಯೋಗಿಸಬೇಕು? (ಬಿ) ಸ್ವಂತ ಬೈಬಲ್‌ ವಾಚನವಲ್ಲದೆ ನಮಗೆ ಇನ್ನೇನು ಅಗತ್ಯ? (ಸಿ) ನೀವು ಯೆಹೋವನ ಉದ್ದೇಶಗಳ ತಿಳಿವಳಿಕೆಯನ್ನು ವ್ಯಕ್ತಿಪರವಾಗಿ ಹೇಗೆ ಪಡೆದುಕೊಂಡಿದ್ದೀರಿ?

7 ಬೈಬಲನ್ನು ನಂಬುವಂತೆ ಇತರರಿಗೆ ಸಹಾಯಮಾಡುವುದಲ್ಲದೆ, ಅದನ್ನು ಕ್ರಮವಾಗಿ ಓದಲಿಕ್ಕಾಗಿ ನಾವೇ ಸಮಯವನ್ನು ಬದಿಗಿರಿಸಬೇಕು. ನೀವು ಹಾಗೆ ಮಾಡುತ್ತಿದ್ದೀರೊ? ಇದುವರೆಗೆ ಉತ್ಪಾದಿಸಲ್ಪಟ್ಟಿರುವ ಗ್ರಂಥಗಳಲ್ಲಿ ಇದೇ ಅತಿ ಪ್ರಾಮುಖ್ಯವಾದ ಗ್ರಂಥವಾಗಿದೆ. ಅಂದರೆ, ನಾವಾಗಿ ಅದನ್ನು ಓದುವಲ್ಲಿ ಇನ್ನಾವುದರ ಆವಶ್ಯಕತೆಯೂ ನಮಗಿರುವುದಿಲ್ಲವೆಂದು ಇದರ ಅರ್ಥವಲ್ಲ. ನಾವು ನಮ್ಮನ್ನು ಬೇರ್ಪಡಿಸಿಕೊಂಡು ಒಂಟಿಗರಾಗಿರುವುದರ ಕುರಿತು ಬೈಬಲು ನಮ್ಮನ್ನು ಎಚ್ಚರಿಸುತ್ತದೆ. ನಾವು ಸ್ವತಂತ್ರವಾಗಿ ಸಂಶೋಧನೆ ನಡೆಸುವುದರ ಮೂಲಕ ನಮಗೆ ಸಕಲ ಉತ್ತರಗಳೂ ದೊರೆಯುವವು ಎಂದು ನಾವು ಎಣಿಸಬಾರದು. ನಾವು ಸಮತೆಯುಳ್ಳ ಕ್ರೈಸ್ತರಾಗಿರಬೇಕಾದರೆ, ಸ್ವಂತ ಅಧ್ಯಯನವೂ ದೇವಜನರ ಕೂಟಗಳಲ್ಲಿ ಕ್ರಮದ ಉಪಸ್ಥಿತಿಯೂ ಆವಶ್ಯಕ.​—⁠ಜ್ಞಾನೋಕ್ತಿ 18:1; ಇಬ್ರಿಯ 10:​24, 25.

8 ಈ ಸಂಬಂಧದಲ್ಲಿ ಬೈಬಲು, ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದ ಐಥಿಯೋಪ್ಯದ ಅಧಿಕಾರಿಯ ಬಗ್ಗೆ ತಿಳಿಸುತ್ತದೆ. ಕ್ರೈಸ್ತ ಸೌವಾರ್ತಿಕನಾದ ಫಿಲಿಪ್ಪನು ಆ ಮನುಷ್ಯನಿಗೆ ಹೀಗೆ ಕೇಳುವಂತೆ ಒಬ್ಬ ದೇವದೂತನು ನಡೆಸಿದನು: “ನೀನು ಓದುವದು ನಿನಗೆ ತಿಳಿಯುತ್ತದೋ?” ಆಗ ಐಥಿಯೋಪ್ಯ ದೇಶದ ಆ ಮನುಷ್ಯನು ನಮ್ರತೆಯಿಂದ, “ಯಾವನಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು?” ಎಂದು ಉತ್ತರ ಕೊಟ್ಟನು. ಆ ಶಾಸ್ತ್ರಭಾಗದ ಅರ್ಥವನ್ನು ತಿಳಿಸುವಂತೆ ಅವನು ಫಿಲಿಪ್ಪನನ್ನು ಕೇಳಿಕೊಂಡನು. ಇಲ್ಲಿ, ಫಿಲಿಪ್ಪನು ಶಾಸ್ತ್ರದ ವಿಷಯದಲ್ಲಿ ತನ್ನ ಸ್ವಂತ ಅಭಿಪ್ರಾಯವನ್ನು ಕೊಟ್ಟ ಕೇವಲ ಸ್ವತಂತ್ರ ಬೈಬಲ್‌ ವಾಚಕನಾಗಿರಲಿಲ್ಲವೆಂಬುದನ್ನು ನೋಡಿರಿ. ಅವನು ದೇವರ ದೃಶ್ಯ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದನು. ಈ ಕಾರಣದಿಂದ, ಅವನಿಗೆ ಯೆಹೋವನು ಆ ಸಂಸ್ಥೆಯ ಮೂಲಕ ಲಭ್ಯಗೊಳಿಸುತ್ತಿದ್ದ ಮಾಹಿತಿಯಿಂದ ಐಥಿಯೋಪ್ಯದವನೂ ಪ್ರಯೋಜನ ಪಡೆಯುವಂತೆ ಸಹಾಯಮಾಡಲು ಸಾಧ್ಯವಾಯಿತು. (ಅ. ಕೃತ್ಯಗಳು 6:​5, 6; 8:​5, 26-35) ಅದೇ ರೀತಿ ಇಂದು ಸಹ, ಯಾವನೂ ತನ್ನ ಸ್ವಂತ ಪ್ರಯತ್ನದಿಂದ ಯೆಹೋವನ ಉದ್ದೇಶಗಳ ಸರಿಯಾದ ತಿಳಿವಳಿಕೆಯನ್ನು ಪಡೆಯನು. ಯೆಹೋವನು ತನ್ನ ದೃಶ್ಯ ಸಂಸ್ಥೆಯ ಮೂಲಕ ಪ್ರೀತಿಪೂರ್ವಕವಾಗಿ ಒದಗಿಸುವ ಸಹಾಯದ ಅಗತ್ಯವು ನಮಗೆಲ್ಲರಿಗೂ ಇದೆ.

9. ಬೈಬಲ್‌ ವಾಚನದ ಯಾವ ಕಾರ್ಯಕ್ರಮವು ನಮಗೆಲ್ಲರಿಗೂ ಪ್ರಯೋಜನ ತರಬಲ್ಲದು?

9 ನಾವು ಬೈಬಲಿನ ತಿಳಿವಳಿಕೆಯನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು, ಯೆಹೋವನ ಸಂಸ್ಥೆಯು ವಿವಿಧ ಪ್ರಕಾಶನಗಳ ಮೂಲಕ ಅತ್ಯುತ್ತಮ ಶಾಸ್ತ್ರೀಯ ವಿಷಯಗಳನ್ನು ಒದಗಿಸುತ್ತದೆ. ಇದಕ್ಕೆ ಕೂಡಿಸಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಎಲ್ಲಾ ಸಭೆಗಳಲ್ಲಿ ನಡೆಯುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಸಂಬಂಧದಲ್ಲಿ, ಕ್ರಮಬದ್ಧವಾದ ಬೈಬಲ್‌ ವಾಚನದ ಶೆಡ್ಯೂಲನ್ನು ನಮಗಾಗಿ ಕೊಡಲಾಗಿದೆ. ನಾವು ಪವಿತ್ರ ಶಾಸ್ತ್ರವನ್ನು ವ್ಯಕ್ತಿಪರವಾಗಿ ಪರೀಕ್ಷಿಸುವುದರಿಂದ ಮಹತ್ವಪೂರ್ಣವಾದ ಪ್ರಯೋಜನಗಳನ್ನು ಪಡೆದುಕೊಳ್ಳಬಲ್ಲೆವು. (ಕೀರ್ತನೆ 1:1-3; 19:7, 8) ಬೈಬಲನ್ನು ಕ್ರಮವಾಗಿ ಓದಲು ವಿಶೇಷ ಪ್ರಯತ್ನವನ್ನು ಮಾಡಿರಿ. ನೀವು ಎಲ್ಲವನ್ನೂ ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಕ್ಕಿಲ್ಲವಾದರೂ, ಶಾಸ್ತ್ರದ ವ್ಯಾಪಕವಾದ ಗ್ರಹಿಕೆಯು ಅತಿ ಬೆಲೆಯುಳ್ಳದ್ದಾಗಿರುವುದು. ಉದಾಹರಣೆಗೆ, ನೀವು ದಿನಕ್ಕೆ ಕೇವಲ ನಾಲ್ಕೊ ಐದೊ ಪುಟಗಳನ್ನು ಓದುವಲ್ಲಿ, ಸುಮಾರು ಒಂದು ವರ್ಷದಲ್ಲಿ ನೀವು ಬೈಬಲನ್ನು ಓದಿ ಮುಗಿಸಬಲ್ಲಿರಿ.

10. (ಎ) ನೀವು ನಿಮ್ಮ ಬೈಬಲ್‌ ವಾಚನವನ್ನು ಯಾವಾಗ ಮಾಡುತ್ತೀರಿ? (ಬಿ) ಬೈಬಲನ್ನು ಓದುವುದರಲ್ಲಿ ಯಾರೆಲ್ಲ ಸೇರಿರಬೇಕು, ಮತ್ತು ಕ್ರಮದ ವಾಚನ ಏಕೆ ಪ್ರಾಮುಖ್ಯ?

10 ನೀವು ಬೈಬಲ್‌ ವಾಚನವನ್ನು ಯಾವಾಗ ಮಾಡಬಲ್ಲಿರಿ? ಅದಕ್ಕಾಗಿ ಪ್ರತಿದಿನ 10 ಅಥವಾ 15 ನಿಮಿಷಗಳನ್ನು ಬದಿಗಿರಿಸುವುದಾದರೂ, ನೀವು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಹಾಗೆ ಮಾಡಲು ಆಗದಿರುವಲ್ಲಿ, ಪ್ರತಿ ವಾರ ಕ್ರಮವಾಗಿ ಅದನ್ನು ಓದುವ ಸಮಯಗಳನ್ನು ಶೆಡ್ಯುಲ್‌ಮಾಡಿ, ಆ ಸಮಯಕ್ಕೆ ಅಂಟಿಕೊಳ್ಳಲು ಪ್ರಯತ್ನಿಸಿರಿ. ನೀವು ವಿವಾಹಿತರಾಗಿರುವಲ್ಲಿ, ನೀವೂ ನಿಮ್ಮ ಸಂಗಾತಿಯೂ ಬೈಬಲನ್ನು ಗಟ್ಟಿಯಾಗಿ ಒಬ್ಬರಿಗೊಬ್ಬರು ಓದಿಹೇಳುವುದರಲ್ಲಿ ಆನಂದಿಸಬಹುದು. ಓದುವಷ್ಟು ಪ್ರಾಯದ ಮಕ್ಕಳಿರುವಲ್ಲಿ, ಅವರು ಅದನ್ನು ಗಟ್ಟಿಯಾಗಿ, ಸರದಿಯ ಪ್ರಕಾರ ಓದಬಹುದು. ಬೈಬಲ್‌ ವಾಚನವು, ಆಹಾರ ಸೇವನೆಯು ಹೇಗೊ ಹಾಗೆ, ಜೀವಾವಧಿಯ ಅಭ್ಯಾಸವಾಗಿರಬೇಕು. ನಿಮಗೆ ತಿಳಿದಿರುವಂತೆ, ಒಬ್ಬನ ಆಹಾರಕ್ರಮವು ನ್ಯೂನತೆಯುಳ್ಳದ್ದಾಗಿರುವಲ್ಲಿ ಅವನ ಆರೋಗ್ಯಕ್ಕೆ ಧಕ್ಕೆ ಬರುತ್ತದೆ. ಹಾಗೆಯೇ, ನಮ್ಮ ಆತ್ಮಿಕ ಜೀವನ ಮತ್ತು ಹೀಗೆ ನಮ್ಮ ನಿತ್ಯಜೀವವು, ‘ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ’ ಪೋಷಿಸಲ್ಪಡುವುದರ ಮೇಲೆ ಹೊಂದಿಕೊಂಡಿದೆ.​—⁠ಮತ್ತಾಯ 4:⁠4.

ನಮ್ಮ ಗುರಿ

11. ಬೈಬಲ್‌ ವಾಚನದಲ್ಲಿ ನಮ್ಮ ಗುರಿ ಏನಾಗಿರಬೇಕು?

11 ಬೈಬಲನ್ನು ಓದುವುದರಲ್ಲಿ ನಮ್ಮ ಗುರಿ ಏನಾಗಿರಬೇಕು? ಕೆಲವು ಪುಟಗಳನ್ನು ಓದಿ ಮುಗಿಸುವುದೇ ನಮ್ಮ ಗುರಿಯಾಗಿರಬಾರದು. ನಮ್ಮ ಉದ್ದೇಶವು, ದೇವರ ಕಡೆಗೆ ನಮಗಿರುವ ಪ್ರೀತಿಯನ್ನು ಹೆಚ್ಚಿಸಲಿಕ್ಕಾಗಿ ಮತ್ತು ಆತನನ್ನು ಸ್ವೀಕಾರಾರ್ಹವಾಗಿ ಆರಾಧಿಸಲಿಕ್ಕಾಗಿ ಆತನನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವುದೇ ಆಗಿರಬೇಕು. (ಯೋಹಾನ 5:​39-42) ಒಬ್ಬ ಬೈಬಲ್‌ ಲೇಖಕನಿಗಿದ್ದಂಥ ಮನೋಭಾವ ನಮಗೂ ಇರಬೇಕು. ಅವನು ಹೇಳಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು.”​—⁠ಕೀರ್ತನೆ 25:⁠4.

12. (ಎ) “ನಿಷ್ಕೃಷ್ಟ ಜ್ಞಾನ”ವನ್ನು ಪಡೆದುಕೊಳ್ಳುವುದು ಅಗತ್ಯವೇಕೆ, ಮತ್ತು ವಾಚನದ ಸಮಯದಲ್ಲಿ ಆ ಜ್ಞಾನವನ್ನು ಪಡೆದುಕೊಳ್ಳಲು ಯಾವ ಪ್ರಯತ್ನವನ್ನು ಮಾಡಬೇಕಾದೀತು? (ಬಿ)ನಾವು ಬೈಬಲಿನಲ್ಲಿ ಏನು ಓದುತ್ತೇವೊ ಅದನ್ನು ಯಾವ ನಾಲ್ಕು ದೃಷ್ಟಿಕೋನಗಳನ್ನು ಉಪಯೋಗಿಸುವ ಮೂಲಕ ಪ್ರಯೋಜನಕರವಾಗಿ ವಿಶ್ಲೇಷಿಸಬಹುದು? (ಪುಟ 30ರಲ್ಲಿರುವ ಚೌಕವನ್ನು ನೋಡಿ.) (ಸಿ) ಈ ಪರಿಚ್ಛೇದದಲ್ಲಿ ಕೊಡಲಾಗಿರುವ ಪ್ರಶ್ನೆಗಳನ್ನು ಉತ್ತರಿಸುತ್ತಾ ಈ ಅಂಶಗಳನ್ನು ದೃಷ್ಟಾಂತಿಸಿರಿ. ಉಲ್ಲೇಖಿಸಿರುವ ಆದರೆ ಉದ್ಧರಿಸದ ಶಾಸ್ತ್ರವಚನಗಳನ್ನು ತೆರೆದು ನೋಡಿರಿ.

12 ನಾವು ಯೆಹೋವನಿಂದ ಬೋಧನೆಗಳನ್ನು ಪಡೆಯುತ್ತಿರುವಾಗ, “ನಿಷ್ಕೃಷ್ಟ ಜ್ಞಾನ”ವನ್ನು ಪಡೆಯುವುದು ನಮ್ಮ ಅಪೇಕ್ಷೆಯಾಗಿರಬೇಕು. ಹಾಗಿರದಿದ್ದರೆ, ಯೆಹೋವನ ವಾಕ್ಯವನ್ನು ನಮ್ಮ ಜೀವಿತಗಳಲ್ಲಿ ನಾವು ಹೇಗೆ ತಾನೇ ಅನ್ವಯಿಸಿಕೊಂಡೇವು, ಇಲ್ಲವೆ ಸರಿಯಾಗಿ ಅದನ್ನು ಬೇರೆಯವರಿಗೆ ವಿವರಿಸೇವು? (ಕೊಲೊಸ್ಸೆ 3:​10, NW; 2 ತಿಮೊಥೆಯ 2:15) ನಿಷ್ಕೃಷ್ಟ ಜ್ಞಾನವನ್ನು ಪಡೆಯಬೇಕಾದರೆ ನಾವು ಜಾಗರೂಕತೆಯಿಂದ ಓದುವುದು ಅಗತ್ಯ, ಮತ್ತು ಅದರ ಒಂದು ಭಾಗವು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರುವಲ್ಲಿ, ಅದರ ಅರ್ಥವನ್ನು ತಿಳಿಯಲು ನಾವು ಒಂದಕ್ಕಿಂತ ಹೆಚ್ಚು ಬಾರಿ ಓದಬೇಕಾದೀತು. ಆ ವಿಷಯದ ಕುರಿತು ಧ್ಯಾನಿಸಲು, ಅಂದರೆ ವಿವಿಧ ವೀಕ್ಷಣಗಳಿಂದ ಅದನ್ನು ಯೋಚಿಸಲು ನಾವು ಸಮಯವನ್ನು ತೆಗೆದುಕೊಳ್ಳುವಲ್ಲಿ ಸಹ ನಮಗೆ ಪ್ರಯೋಜನ ದೊರೆಯುವುದು. ಇದನ್ನು ಸಂಶೋಧಿಸಲು 30ನೆಯ ಪುಟದಲ್ಲಿ ಬೆಲೆಬಾಳುವ ನಾಲ್ಕು ವಿಧಗಳನ್ನು ತೋರಿಸಲಾಗಿದೆ. ಅಲ್ಲಿರುವ ಒಂದು ಅಥವಾ ಹೆಚ್ಚು ದೃಷ್ಟಿಕೋನಗಳನ್ನು ಉಪಯೋಗಿಸುವುದರ ಮೂಲಕ ಅನೇಕ ಶಾಸ್ತ್ರಭಾಗಗಳನ್ನು ಪ್ರಯೋಜನದಾಯಕವಾಗಿ ವಿಶ್ಲೇಷಿಸಸಾಧ್ಯವಿದೆ. ಮುಂದಿನ ಪುಟಗಳ ಪ್ರಶ್ನೆಗಳಿಗೆ ನೀವು ಉತ್ತರ ಕೊಡುವಾಗ, ಅದು ಹೇಗೆಂದು ನೀವು ತಿಳಿದುಕೊಳ್ಳುವಿರಿ.

(1) ಅನೇಕವೇಳೆ, ನೀವು ಓದುತ್ತಿರುವ ವಚನಭಾಗವು ಯೆಹೋವನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬ ವಿಷಯದಲ್ಲಿ ಏನನ್ನಾದರೂ ತಿಳಿಸಬಲ್ಲದು. ದೃಷ್ಟಾಂತಕ್ಕೆ, ಕೀರ್ತನೆ 139:​13, 14ರಲ್ಲಿ, ಇನ್ನೂ ಹುಟ್ಟದಿರುವ ಮಗುವಿಗೆ ದೇವರು ತೋರಿಸುವ ಮಹಾ ಚಿಂತೆಯ ಬಗ್ಗೆ ಕಲಿಯುತ್ತೇವೆ: “ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” ಯೆಹೋವನ ಸೃಷ್ಟಿಕಾರ್ಯಗಳು ಎಷ್ಟು ಅದ್ಭುತಕರವಾಗಿವೆ! ಮಾನವರನ್ನು ನಿರ್ಮಿಸಿರುವ ವಿಧವು ದೇವರು ನಮಗೆ ತೋರಿಸಿರುವ ಮಹಾ ಪ್ರೀತಿಯ ರುಜುವಾತಾಗಿದೆ.

ಯೋಹಾನ 14:​9, 10ರಲ್ಲಿ ಏನು ಹೇಳಲಾಗಿದೆಯೊ ಅದರ ದೃಷ್ಟಿಯಲ್ಲಿ, ಯೇಸು ಇತರರೊಂದಿಗೆ ವ್ಯವಹರಿಸಿದ ವಿಧದ ಬಗ್ಗೆ ನಾವು ಓದುವಾಗ, ಯೆಹೋವನು ತಾನೇ ಹೇಗೆ ವ್ಯವಹರಿಸುತ್ತಾನೆಂಬುದನ್ನು ನಾವು ನಿಜವಾಗಿಯೂ ನೋಡುತ್ತೇವೆ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಲೂಕ 5:​12, 13 ಮತ್ತು ಲೂಕ 7:​11-15ರಲ್ಲಿರುವ ಘಟನೆಗಳಿಂದ ನಾವು ಯೆಹೋವನ ವಿಷಯದಲ್ಲಿ ಯಾವ ನಿರ್ಣಯಕ್ಕೆ ಬರಬಲ್ಲೆವು?

(2) ಒಂದು ವೃತ್ತಾಂತವು, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಮತ್ತು ವಾಗ್ದತ್ತ ಸಂತಾನವಾದ ಯೇಸು ಕ್ರಿಸ್ತನ ಅಧಿಕಾರದಲ್ಲಿರುವ ರಾಜ್ಯದ ಮುಖೇನ, ಯೆಹೋವನ ನಾಮದ ಶುದ್ಧೀಕರಣವೆಂಬ ಬೈಬಲಿನ ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸುತ್ತದೆಂಬುದನ್ನು ಪರಿಗಣಿಸಿರಿ.

ಬೈಬಲಿನ ಮುಖ್ಯ ವಿಷಯವು ಯೆಹೆಜ್ಕೇಲ ಮತ್ತು ದಾನಿಯೇಲರಿಂದ ಹೇಗೆ ಒತ್ತಿಹೇಳಲ್ಪಟ್ಟಿತು? (ಯೆಹೆಜ್ಕೇಲ 38:​21-23; ದಾನಿಯೇಲ 2:44; 4:17; 7:​9-14)

ಬೈಬಲು ಯೇಸುವನ್ನು ವಾಗ್ದತ್ತ ಸಂತಾನವಾಗಿ ಸ್ಪಷ್ಟವಾಗಿ ಗುರುತಿಸುವುದು ಹೇಗೆ? (ಗಲಾತ್ಯ 3:⁠16)

ಪ್ರಕಟನೆ ಪುಸ್ತಕವು ಬೈಬಲಿನ ಮುಖ್ಯ ವಿಷಯವಾದ ರಾಜ್ಯದ ಮಹಾ ಪರಮಾವಧಿಯನ್ನು ಹೇಗೆ ವರ್ಣಿಸುತ್ತದೆ? (ಪ್ರಕಟನೆ 11:15; 12:​7-10; 17:​16-18; 19:​11-16; 20:​1-3; 21:​1-5)

(3) ನೀವು ಓದುತ್ತಿರುವುದನ್ನು ನಿಮಗೆ ವೈಯಕ್ತಿಕವಾಗಿ ಹೇಗೆ ಅನ್ವಯಿಸಿಕೊಳ್ಳಬಹುದೆಂದು ಪ್ರಶ್ನಿಸಿಕೊಳ್ಳಿರಿ. ಉದಾಹರಣೆಗೆ, ನಾವು ವಿಮೋಚನಕಾಂಡದಿಂದ ಧರ್ಮೋಪದೇಶಕಾಂಡದ ವರೆಗೆ ಇಸ್ರಾಯೇಲಿನ ಅನೈತಿಕತೆ ಮತ್ತು ದಂಗೆಕೋರತನದ ಕುರಿತು ಓದುತ್ತೇವೆ. ಅಂತಹ ಮನೋಭಾವಗಳೂ ಕ್ರಿಯೆಗಳೂ ದುಷ್ಪರಿಣಾಮವನ್ನು ತಂದವೆಂದು ನಾವು ಕಲಿಯುತ್ತೇವೆ. ಆದುದರಿಂದ, ಇಸ್ರಾಯೇಲಿನ ಕೆಟ್ಟ ಮಾದರಿಯನ್ನು ಅನುಸರಿಸದೆ, ಯೆಹೋವನನ್ನು ಮೆಚ್ಚಿಸುವಂತೆ ನಾವು ಪ್ರಚೋದಿಸಲ್ಪಡಬೇಕು. “ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ.”​—⁠1 ಕೊರಿಂಥ 10:11.

ಕಾಯಿನನು ಹೇಬೆಲನನ್ನು ಕೊಂದ ದಾಖಲೆಯಲ್ಲಿ ನಮಗೆ ಯಾವ ಪಾಠವಿದೆ? (ಆದಿಕಾಂಡ 4:​3-12; ಇಬ್ರಿಯ 11:4; 1 ಯೋಹಾನ 3:​10-15; 4:​20, 21)

ಸ್ವರ್ಗೀಯ ನಿರೀಕ್ಷೆಯಿರುವವರಿಗೆ ಬೈಬಲು ಕೊಡುವ ಸಲಹೆಯು, ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವ ನಿರೀಕ್ಷೆಯುಳ್ಳವರಿಗೂ ಅನ್ವಯಿಸುತ್ತದೊ? (ಅರಣ್ಯಕಾಂಡ 15:16; ಯೋಹಾನ 10:16)

ಕ್ರೈಸ್ತ ಸಭೆಯಲ್ಲಿ ನಮಗೆ ಒಳ್ಳೆಯ ಹೆಸರಿರುವುದಾದರೂ, ನಮಗೆ ಈಗಾಗಲೇ ತಿಳಿದಿರುವ ಬೈಬಲಿನ ಬುದ್ಧಿವಾದವನ್ನು ಹೆಚ್ಚು ಪೂರ್ಣವಾಗಿ ಅನ್ವಯಿಸುವುದು ಹೇಗೆಂಬುದನ್ನು ನಾವು ಪರಿಗಣಿಸುವ ಅಗತ್ಯವಿದೆ ಏಕೆ? (2 ಕೊರಿಂಥ 13:5; 1 ಥೆಸಲೊನೀಕ 4:⁠1)

(4) ನೀವು ಏನನ್ನು ಓದುತ್ತಿದ್ದೀರೊ ಅದನ್ನು ಇತರರಿಗೆ ಸಹಾಯಮಾಡಲು ಹೇಗೆ ಉಪಯೋಗಿಸಬಹುದೆಂಬುದರ ಕುರಿತು ಯೋಚಿಸಿರಿ. ಆರೋಗ್ಯ ಸಮಸ್ಯೆಗಳ ವಿಷಯದಲ್ಲಿ ಎಲ್ಲರೂ ಚಿಂತಿತರಾಗಿದ್ದಾರೆ. ಆದುದರಿಂದ, ಯೇಸುವಿನ ರಾಜ್ಯಾಧಿಕಾರದ ಸಮಯದಲ್ಲಿ ಹೆಚ್ಚು ದೊಡ್ಡ ಪ್ರಮಾಣದಲ್ಲಿ ಅವನು ಏನು ಮಾಡಲಿದ್ದಾನೆಂದು ಚಿತ್ರಿಸಲು ನಾವು ಅವರಿಗೆ ಇದನ್ನು ಓದಬಹುದು: “ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು.”​—⁠ಮತ್ತಾಯ 15:30.

ಯಾಯೀರನ ಮಗಳಿಗಾದ ಪುನರುತ್ಥಾನದ ಕುರಿತಾದ ವೃತ್ತಾಂತದಿಂದ ನಾವು ಯಾರಿಗೆ ಸಹಾಯವನ್ನು ನೀಡಬಹುದು? (ಲೂಕ 8:​41, 42, 49-56)

13. ಯೆಹೋವನ ಸಂಸ್ಥೆಯೊಂದಿಗೆ ಬೈಬಲಿನ ವಾಚನ ಮತ್ತು ಅಧ್ಯಯನದ ಮುಂದುವರಿಯುವ ಕಾರ್ಯಕ್ರಮದಿಂದ ಯಾವ ಫಲಿತಾಂಶಗಳನ್ನು ನಾವು ನಿರೀಕ್ಷಿಸಬಲ್ಲೆವು?

13 ಮೇಲೆ ಹೇಳಲ್ಪಟ್ಟಿರುವ ನಾಲ್ಕು ವಿಷಯಗಳನ್ನು ನಾವು ಪರಿಗಣಿಸುವಲ್ಲಿ ಬೈಬಲ್‌ ವಾಚನವು ಎಷ್ಟು ಪ್ರತಿಫಲದಾಯಕವಾಗಿ ಪರಿಣಮಿಸುತ್ತದೆ! ನಿಜವಾಗಿ ಹೇಳುವುದಾದರೆ, ಬೈಬಲನ್ನು ಓದುವುದು ಒಂದು ಪಂಥಾಹ್ವಾನವೇ ಸರಿ. ಆದರೆ ಅದು ನಮ್ಮ ಜೀವಾವಧಿಯುದ್ದಕ್ಕೂ ಲಾಭದಾಯಕವಾಗಿರಬಲ್ಲದು. ಏಕೆಂದರೆ, ನಾವು ಶಾಸ್ತ್ರವನ್ನು ಓದುತ್ತಾ ಮುಂದುವರಿದಾಗ, ಆತ್ಮಿಕವಾಗಿ ಹೆಚ್ಚು ಬಲವನ್ನು ಪಡೆದುಕೊಳ್ಳುವೆವು. ಕ್ರಮದ ಬೈಬಲ್‌ ವಾಚನವು ನಮ್ಮನ್ನು ನಮ್ಮ ಪ್ರಿಯ ಪಿತನಾದ ಯೆಹೋವನ ಸಮೀಪಕ್ಕೂ, ನಮ್ಮ ಕ್ರೈಸ್ತ ಸಹೋದರರ ಹೆಚ್ಚು ಸಮೀಪಕ್ಕೂ ಸೆಳೆಯಬಲ್ಲದು. ಇದು, “ಜೀವವಾಕ್ಯವನ್ನು ಬಿಗಿಯಾಗಿ ಹಿಡಿದು”ಕೊಳ್ಳಿರೆಂದು ಹೇಳುವ ಸಲಹೆಗೆ ನಾವು ಕಿವಿಗೊಡುವಂತೆ ಸಹಾಯಮಾಡುವುದು.​—⁠ಫಿಲಿಪ್ಪಿ 2:​16, NW.

[ಪಾದಟಿಪ್ಪಣಿ]

^ ಪ್ಯಾರ. 6 ಬೈಬಲು ಪರಿಗಣನೆಗೆ ಏಕೆ ಯೋಗ್ಯವಾಗಿದೆ ಎಂಬ ಚರ್ಚೆಗೆ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾಗಿರುವ ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರನ್ನು ನೋಡಿ.

ಪುನರ್ವಿಮರ್ಶೆಯ ಚರ್ಚೆ

• ಬೈಬಲ್‌ ಬರೆಯಲ್ಪಟ್ಟದ್ದೂ ನಮ್ಮ ದಿನಗಳ ವರೆಗೆ ಕಾಪಾಡಲ್ಪಟ್ಟಿರುವುದೂ ಏಕೆ?

• ಇತರರು ಬೈಬಲನ್ನು ಮಾನ್ಯಮಾಡುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು?

• ಕ್ರಮವಾದ ವೈಯಕ್ತಿಕ ಬೈಬಲ್‌ ವಾಚನವು ಲಾಭದಾಯಕವೇಕೆ? ನಾವು ಓದುವುದನ್ನು ಪ್ರಯೋಜನಕರವಾಗಿ ವಿಶ್ಲೇಷಿಸಲು ಯಾವ ನಾಲ್ಕು ದೃಷ್ಟಿಕೋನಗಳನ್ನು ಉಪಯೋಗಿಸಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 30ರಲ್ಲಿರುವ ಚೌಕ/ಚಿತ್ರ]

ನೀವು ಬೈಬಲಿನ ಒಂದು ಭಾಗವನ್ನು ಓದುವಾಗ, ಇದನ್ನು ಪರಿಗಣಿಸಿರಿ

ಒಬ್ಬ ವ್ಯಕ್ತಿಯೋಪಾದಿ ಅದು ಯೆಹೋವನ ಕುರಿತು ನಿಮಗೆ ತಿಳಿಸುವ ಸಂಗತಿ

ಬೈಬಲಿನ ಸಂಪೂರ್ಣ ಮುಖ್ಯ ವಿಷಯಕ್ಕೆ ಅದು ಸಂಬಂಧಿಸುವ ರೀತಿ

ಅದು ನಿಮ್ಮ ಸ್ವಂತ ಜೀವಿತವನ್ನು ಪ್ರಭಾವಿಸಬೇಕಾದ ವಿಧ

ಇತರರಿಗೆ ಸಹಾಯಮಾಡಲು ನೀವು ಅದನ್ನು ಉಪಯೋಗಿಸಸಾಧ್ಯವಿರುವ ವಿಧ