“ನಿಮ್ಮನಿಮ್ಮೊಳಗೆ ಗಾಢವಾದ ಪ್ರೀತಿಯಿರಲಿ”
ಅಧ್ಯಾಯ ಹದಿನಾರು
“ನಿಮ್ಮನಿಮ್ಮೊಳಗೆ ಗಾಢವಾದ ಪ್ರೀತಿಯಿರಲಿ”
ಜನರು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಪ್ರಥಮ ಬಾರಿ ಬರುವಾಗ, ಅಲ್ಲಿ ತೋರಿಸಲ್ಪಡುವ ಪ್ರೀತಿಯಿಂದ ಅನೇಕವೇಳೆ ಪ್ರಭಾವಿತರಾಗುತ್ತಾರೆ. ತಮ್ಮನ್ನು ಸ್ವಾಗತಿಸಲಾಗುವ ವಿಧ ಮತ್ತು ಅಲ್ಲಿರುವ ಹೃದಯೋಲ್ಲಾಸಕರವಾದ ಸಹವಾಸದಲ್ಲಿ ಅವರು ಇದನ್ನು ಅವಲೋಕಿಸುತ್ತಾರೆ. ನಮ್ಮ ಅಧಿವೇಶನಗಳಿಗೆ ಭೇಟಿ ನೀಡುವವರು ಸಹ ಈ ಪ್ರೀತಿಯನ್ನು ಗಮನಿಸುತ್ತಾರೆ. ಪತ್ರಿಕಾ ವರದಿಗಾರನೊಬ್ಬನು ಒಂದು ಅಧಿವೇಶನದ ವಿಷಯದಲ್ಲಿ ಬರೆದುದು: ‘ಯಾರೂ ಅಮಲೌಷಧ ಅಥವಾ ಮದ್ಯದ ಅಮಲಿನಲ್ಲಿಲ್ಲ. ಕೂಗಾಟ ಚೀರಾಟಗಳಿಲ್ಲ. ತಳ್ಳಿ ದೂಡುವುದಿಲ್ಲ. ಯಾರೂ ದೂಷಿಸಿ ಬಯ್ಯುವುದಿಲ್ಲ. ಅಶ್ಲೀಲ ತಮಾಷೆಗಳಾಗಲಿ ಬಂಡುಮಾತುಗಳಾಗಲಿ ಇಲ್ಲ. ಸಿಗರೇಟ್ ಸೇದುವವರಿಲ್ಲ, ಕದಿಯುವವರಿಲ್ಲ. ಕುಡಿದು ಮೈದಾನದ ಮೇಲೆ ಬಿಸಾಡಿದ ಡಬ್ಬಿಗಳಿಲ್ಲ. ನಿಜವಾಗಿಯೂ ಅಪರೂಪವಾದ ಸ್ಥಳ.’ ಇದೆಲ್ಲಾ ‘ಮರ್ಯಾದೆಗೆಟ್ಟು ನಡೆಯದ, ಸ್ವಪ್ರಯೋಜನವನ್ನು ಚಿಂತಿಸದ’ ಪ್ರೀತಿಯ ಸಾಕ್ಷ್ಯವಾಗಿದೆ.—1 ಕೊರಿಂಥ 13:4-8.
2. (ಎ) ತಕ್ಕ ಕಾಲದಲ್ಲಿ, ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಏನು ಪ್ರತ್ಯಕ್ಷವಾಗಬೇಕು? (ಬಿ) ಕ್ರಿಸ್ತನ ಅನುಕರಣೆಯಲ್ಲಿ, ನಾವು ಯಾವ ರೀತಿಯ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು?
2 ನಿಜಕ್ರೈಸ್ತರನ್ನು ಗುರುತಿಸುವ ಚಿಹ್ನೆಯು ಅವರಲ್ಲಿರುವ ಸಹೋದರ ಪ್ರೀತಿಯೇ ಆಗಿದೆ. (ಯೋಹಾನ 13:35) ನಾವು ಆತ್ಮಿಕವಾಗಿ ಬೆಳೆಯುವಾಗ ಪ್ರೀತಿಯನ್ನು ಹೆಚ್ಚಾಗಿ ವ್ಯಕ್ತಪಡಿಸಲು ಕಲಿಯುತ್ತೇವೆ. ತನ್ನ ಜೊತೆ ಕ್ರೈಸ್ತರ ಪ್ರೀತಿಯು “ಹೆಚ್ಚುತ್ತಾ ಹೆಚ್ಚುತ್ತಾ” ಹೋಗಬೇಕೆಂದು ಪೌಲನು ಪ್ರಾರ್ಥಿಸಿದನು. (ಫಿಲಿಪ್ಪಿ 1:10) ನಮ್ಮ ಪ್ರೀತಿ ಸ್ವತ್ಯಾಗದ್ದಾಗಿರಬೇಕೆಂದು ಅಪೊಸ್ತಲ ಯೋಹಾನನು ತೋರಿಸಿದನು. ಅವನು ಬರೆದುದು: “[ದೇವಕುಮಾರನು] ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.” (1 ಯೋಹಾನ 3:16; ಯೋಹಾನ 15:12, 13) ನಾವು ವಾಸ್ತವವಾಗಿ ನಮ್ಮ ಪ್ರಾಣಗಳನ್ನು ನಮ್ಮ ಸಹೋದರರಿಗಾಗಿ ಕೊಡುವೆವೊ? ಅನೇಕ ಸನ್ನಿವೇಶಗಳು ಇದನ್ನು ನಮ್ಮಿಂದ ಕೇಳಿಕೊಳ್ಳುವುದಿಲ್ಲವಾದರೂ, ನಾವು ಈಗ ನಮಗೆ ಅನುಕೂಲವಿಲ್ಲದಿರುವಾಗಲೂ ಅವರಿಗೆ ಸಹಾಯಮಾಡಲು ಎಷ್ಟರ ಮಟ್ಟಿಗೆ ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದೇವೆ?
3. (ಎ) ನಾವು ನಮ್ಮ ಪ್ರೀತಿಯನ್ನು ಹೆಚ್ಚು ಪೂರ್ಣವಾಗಿ ಯಾವ ವಿಧದಲ್ಲಿ ವ್ಯಕ್ತಪಡಿಸಬಹುದು? (ಬಿ) ಈಗ ನಮ್ಮನಮ್ಮೊಳಗೆ ಗಾಢವಾದ ಪ್ರೀತಿಯಿರುವುದು ಮಹತ್ವದ್ದೇಕೆ?
3 ನಮ್ಮ ಕ್ರಿಯೆಗಳಲ್ಲಿ ಸ್ವತ್ಯಾಗದ ಮನೋಭಾವವನ್ನು ವ್ಯಕ್ತಪಡಿಸುವುದರೊಂದಿಗೆ, ನಾವು ನಮ್ಮ ಸಹೋದರರ ಕಡೆಗೆ ನಿಜವಾಗಿಯೂ ಹೃದಯೋಲ್ಲಾಸಕರವಾದ ಭಾವನೆಯನ್ನೂ ತೋರಿಸುವುದು ಅಗತ್ಯ. ದೇವರ ವಾಕ್ಯವು ನಮಗೆ ಪ್ರೋತ್ಸಾಹಿಸುವುದು: “ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ.” (ರೋಮಾಪುರ 12:10) ನಾವೆಲ್ಲರೂ ಕೆಲವರ ಕಡೆಗೆ ಆ ಭಾವವನ್ನು ತೋರಿಸುತ್ತೇವೆ ನಿಜ. ಆದರೆ ಅಂತಹ ಪ್ರೀತಿಯನ್ನು ಇನ್ನಿತರರಿಗೂ ತೋರಿಸಲು ನಾವು ಕಲಿಯಬಹುದೊ? ಈ ಹಳೆಯ ವ್ಯವಸ್ಥೆಯ ಅಂತ್ಯವು ಸಮೀಪಿಸುತ್ತಿರುವಾಗ, ನಮ್ಮ ಜೊತೆ ಕ್ರೈಸ್ತರಿಗೆ ಹೆಚ್ಚು ನಿಕಟವಾಗುತ್ತಾ ಹೋಗುವುದು ಮಹತ್ವದ ವಿಷಯವಾಗಿದೆ. ಬೈಬಲು ಹೇಳುವುದು: “ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; . . . ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ [“ಗಾಢವಾದ,” NW] ಪ್ರೀತಿಯಿರಲಿ; ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:7, 8.
ಸಮಸ್ಯೆಗಳು ಏಳುವಾಗ
4. (ಎ) ಸಭೆಯಲ್ಲಿರುವವರ ಮಧ್ಯೆ ಸಮಸ್ಯೆಗಳು ಏಕೆ ಏಳಸಾಧ್ಯವಿದೆ? (ಬಿ) ಬೈಬಲಿನ ಸಲಹೆಯನ್ನು ಸದಾ ಅನ್ವಯಿಸಿಕೊಳ್ಳುವ ಪ್ರವೃತ್ತಿ ನಮ್ಮದಾಗಿರದಿದ್ದರೂ, ಹಾಗೆ ಮಾಡುವಲ್ಲಿ ಯಾವ ಒಳ್ಳೆಯ ಫಲಗಳು ಫಲಿಸುವವು?
4 ನಾವು ಅಪರಿಪೂರ್ಣರಾಗಿರುವ ತನಕ, ಇತರರನ್ನು ಬೇಸರಗೊಳಿಸುವ ವಿಷಯಗಳನ್ನು ಮಾಡುವ ಸಮಯಗಳು ಇದ್ದೇ ಇರುವವು ಎಂಬುದು ನಿಶ್ಚಯ. ನಮ್ಮ ಸಹೋದರರೂ ಅನೇಕ ವಿಧಗಳಲ್ಲಿ ನಮ್ಮ ವಿರುದ್ಧವಾಗಿ ಪಾಪ ಮಾಡಿಯಾರು. (1 ಯೋಹಾನ 1:8) ನೀವು ಇಂತಹ ವಿಷಯಗಳಲ್ಲಿ ಸಿಕ್ಕಿಬೀಳುವುದಾದರೆ, ನೀವೇನು ಮಾಡಬೇಕು? ಶಾಸ್ತ್ರವು ಅಗತ್ಯವಿರುವ ಮಾರ್ಗದರ್ಶನವನ್ನು ಒದಗಿಸುತ್ತದೆ. ಆದರೆ ಅಲ್ಲಿ ಹೇಳಲ್ಪಟ್ಟಿರುವ ವಿಷಯಗಳು ಅಪರಿಪೂರ್ಣ ಮಾನವರಾದ ನಮ್ಮ ಪ್ರವೃತ್ತಿಗೆ ಹೊಂದಿಕೊಂಡಿರಲಿಕ್ಕಿಲ್ಲ. (ರೋಮಾಪುರ 7:21-23) ಆದರೂ ಬೈಬಲಿನಲ್ಲಿರುವ ಸಲಹೆಯನ್ನು ಶ್ರದ್ಧಾಪೂರ್ವಕವಾಗಿ ಅನ್ವಯಿಸಿಕೊಳ್ಳುವುದು, ಯೆಹೋವನನ್ನು ಮೆಚ್ಚಿಸಲು ನಮಗಿರುವ ಯಥಾರ್ಥವಾದ ಬಯಕೆಗೆ ರುಜುವಾತನ್ನು ಒದಗಿಸುವುದು. ಹಾಗೆ ಮಾಡುವುದು ಇತರರ ಕಡೆಗಿನ ನಮ್ಮ ಪ್ರೀತಿಯ ಗುಣಮಟ್ಟವನ್ನೂ ಹೆಚ್ಚಿಸುವುದು.
5. ನಮ್ಮನ್ನು ಯಾರಾದರೂ ನೋಯಿಸುವಲ್ಲಿ, ನಾವೇಕೆ ಸೇಡು ತೀರಿಸಬಾರದು?
ಜ್ಞಾನೋಕ್ತಿ 24:29; ರೋಮಾಪುರ 12:17-21) ಇತರರು ನೋಯಿಸಿದವನನ್ನು ಸಂಪರ್ಕಿಸದಿರಲು ಪ್ರಯತ್ನಿಸುತ್ತಾರೆ. ಆದರೆ ನಾವು ಜೊತೆ ಆರಾಧಕರಿಗೆ ಹಾಗೆ ಮಾಡಬಾರದು, ಏಕೆಂದರೆ ನಮ್ಮ ಆರಾಧನೆಯ ಸ್ವೀಕರಣೆಯು ಆಂಶಿಕವಾಗಿ ನಾವು ನಮ್ಮ ಸಹೋದರರನ್ನು ಪ್ರೀತಿಸುವುದರ ಮೇಲೆ ಹೊಂದಿಕೊಂಡಿರುತ್ತದೆ. (1 ಯೋಹಾನ 4:20) ಆದುದರಿಂದ ಪೌಲನು ಬರೆದುದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ನೀವು ಹಾಗೆ ಮಾಡಬಲ್ಲಿರೊ?
5 ಜನರ ಮನನೊಂದಾಗ, ನೋಯಿಸಿದವನ ಮೇಲೆ ಸೇಡು ತೀರಿಸುವ ಮಾರ್ಗಗಳಿಗಾಗಿ ಅವರು ಕೆಲವೊಮ್ಮೆ ಹುಡುಕುತ್ತಾರೆ. ಆದರೆ ಇದರಿಂದ ಪರಿಸ್ಥಿತಿಯು ಇನ್ನೂ ಕೆಡುತ್ತದೆ. ಮುಯ್ಯಿತೀರಿಸುವ ಅಗತ್ಯವಿದ್ದರೆ, ನಾವು ಅದನ್ನು ದೇವರಿಗೆ ಬಿಡಬೇಕು. (6. (ಎ) ನಾವು ನಮ್ಮ ಸಹೋದರರನ್ನು ಎಷ್ಟು ಬಾರಿ ಕ್ಷಮಿಸಬೇಕು? (ಬಿ) ನಮ್ಮ ವಿಷಯದಲ್ಲಿ ಯಾವುದನ್ನು ತಿಳಿಯುವುದು, ನಮ್ಮ ವಿರುದ್ಧವಾಗಿ ಒಬ್ಬನು ಮಾಡುವ ಪಾಪದೊಂದಿಗೆ ವ್ಯವಹರಿಸುವಂತೆ ನಮಗೆ ಸಹಾಯಮಾಡುವುದು?
6 ಆದರೆ ಯಾವನಾದರೂ ನಮ್ಮ ವಿರುದ್ಧವಾಗಿ ಪದೇ ಪದೇ ತಪ್ಪುಮಾಡುತ್ತಾನೆ, ಆದರೆ ಸಭೆಯಿಂದ ಬಹಿಷ್ಕರಿಸತಕ್ಕ ಗಂಭೀರವಾದ ಪಾಪಗಳನ್ನು ಮಾಡದಿರುತ್ತಾನೆ. ಆಗೇನು? ಇಂತಹ ಚಿಕ್ಕ ತಪ್ಪುಗಳಿಗೆ, “ಏಳು ಸಾರಿ” ಕ್ಷಮಿಸಬೇಕೆಂದು ಅಪೊಸ್ತಲ ಪೇತ್ರನು ಹೇಳಿದಾಗ, ಯೇಸು “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ” ಎಂದು ಹೇಳಿದನು. ಯಾವನೇ ಮಾನವನು ನಮಗೆ ಮಾಡುವ ತಪ್ಪುಗಳಿಗೆ ಹೋಲಿಕೆಯಾಗಿ ದೇವರಿಗೆ ವಿರುದ್ಧವಾಗಿ ನಾವು ಮಾಡುವ ಪಾಪಗಳ ಭಾರೀ ಮೊತ್ತವನ್ನು ಅವನು ಎತ್ತಿ ತೋರಿಸಿದನು. (ಮತ್ತಾಯ 18:21-35) ನಾವು ದೇವರ ವಿರುದ್ಧ ಪ್ರತಿ ದಿನ ಎಷ್ಟೋ ವಿಧಗಳಲ್ಲಿ ಪಾಪ ಮಾಡುತ್ತೇವೆ. ಕೆಲವೊಮ್ಮೆ ಸ್ವಾರ್ಥ ವರ್ತನೆಯ ಮೂಲಕ, ನಮ್ಮ ನುಡಿ ಮತ್ತು ಆಲೋಚನೆಯ ಮೂಲಕ ಅಥವಾ ಸರಿಯಾದುದನ್ನು ಮಾಡಲು ತಪ್ಪುವ ಮೂಲಕ ನಾವು ಪಾಪ ಮಾಡುತ್ತೇವೆ. ಹಾಗೆ ಮಾಡುವಾಗ ಅದನ್ನು ನಾವು ಗ್ರಹಿಸದೆಯೂ ಇರುತ್ತೇವೆ. (ರೋಮಾಪುರ 3:23) ಆದರೂ ದೇವರು ನಮಗೆ ಕರುಣೆಯನ್ನು ತೋರಿಸುತ್ತಾ ಹೋಗುತ್ತಾನೆ. (ಕೀರ್ತನೆ 103:10-14; 130:3, 4) ನಾವೂ ಪರಸ್ಪರವಾಗಿ ಹಾಗೆಯೇ ವ್ಯವಹರಿಸಬೇಕೆಂಬುದು ಆತನ ಅಪೇಕ್ಷೆ. (ಮತ್ತಾಯ 6:14, 15; ಎಫೆಸ 4:1-3) ಹಾಗೆ ಮಾಡುವಲ್ಲಿ ನಾವು ‘ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದ’ ರೀತಿಯ ಪ್ರೀತಿಯನ್ನು ಆಚರಣೆಗೆ ತರುತ್ತೇವೆ.—1 ಕೊರಿಂಥ 13:4, 5; 1 ಪೇತ್ರ 3:8, 9.
7. ಒಬ್ಬ ಸಹೋದರನಿಗೆ ನಮ್ಮ ಮೇಲೆ ಬೇಸರವಿರುವಲ್ಲಿ, ನಾವೇನು ಮಾಡಬೇಕು?
7 ಕೆಲವೊಮ್ಮೆ, ನಮಗೆ ಒಬ್ಬ ಸಹೋದರನ ಮೇಲೆ ಯಾವುದೇ ಬೇಸರವಿಲ್ಲದಿದ್ದರೂ ಅವನಿಗೆ ನಮ್ಮ ಮೇಲೆ ಬೇಸರವಿದೆ ಎಂದು ನಾವು ಗ್ರಹಿಸುತ್ತೇವೆ. 1 ಪೇತ್ರ 4:8ರಲ್ಲಿ ತಿಳಿಸುವಂತೆ ಅದನ್ನು ನಾವು ‘ಪ್ರೀತಿಯಿಂದ ಮುಚ್ಚಬಲ್ಲೆವು.’ ಇಲ್ಲವೆ ನಾವು ಅವನೊಂದಿಗೆ ಮಾತಾಡುವ ಪ್ರಥಮ ಹೆಜ್ಜೆಯನ್ನು ಇಟ್ಟು ಶಾಂತಿಸಂಬಂಧವನ್ನು ಪುನಸ್ಸ್ಥಾಪಿಸಲು ಪ್ರಯತ್ನಿಸಬಹುದು.—ಮತ್ತಾಯ 5:23, 24.
8. ನಮ್ಮನ್ನು ಅಸಮಾಧಾನಗೊಳಿಸುವ ಯಾವುದನ್ನೊ ಒಬ್ಬ ಜೊತೆ ವಿಶ್ವಾಸಿಯು ಮಾಡುವಲ್ಲಿ, ಅದರ ಕುರಿತು ಏನು ಮಾಡಸಾಧ್ಯವಿದೆ?
8 ನಿಮ್ಮನ್ನು ಮಾತ್ರವಲ್ಲ, ಇತರರನ್ನೂ ಅಸಮಾಧಾನಪಡಿಸುವ ಯಾವುದನ್ನೊ ಒಬ್ಬ ಜೊತೆ ವಿಶ್ವಾಸಿಯು ಮಾಡುತ್ತಿದ್ದಾನೆಂದು ಎಣಿಸೋಣ. ಆಗ ಅವನೊಂದಿಗೆ ಮಾತಾಡುವುದು ಉಚಿತವಾಗಿರಲಿಕ್ಕಿಲ್ಲವೊ? ಪ್ರಾಯಶಃ ಆಗಿದ್ದೀತು. ನೀವು ಅವನಿಗೆ ವ್ಯಕ್ತಿಪರವಾಗಿ ಆ ಸಮಸ್ಯೆಯನ್ನು ದಯಾಭಾವದಿಂದ ತಿಳಿಸುವಲ್ಲಿ, ಒಳ್ಳೆಯ ಫಲಿತಾಂಶ ಒದಗಿ ಬಂದೀತು. ಆದರೆ ಮೊದಲಾಗಿ ಸ್ವತಃ ಹೀಗೆ ಕೇಳಿಕೊಳ್ಳಿರಿ: ‘ಅವನು ಮಾಡುವ ಕೆಲಸವು ನಿಜವಾಗಿಯೂ ಶಾಸ್ತ್ರವಿರುದ್ಧವೊ? ಇಲ್ಲವೆ, ನನ್ನ ಹಿನ್ನೆಲೆ ಮತ್ತು ಬೆಳೆಸಲ್ಪಟ್ಟ ರೀತಿ ಅವನದ್ದಕ್ಕಿಂತ ಭಿನ್ನವಾಗಿರುವ ಕಾರಣ ಈ ಸಮಸ್ಯೆ ಎದ್ದಿದೆಯೊ?’ ನಿಮ್ಮ ಸ್ವಂತ ಮಟ್ಟವನ್ನು ಸ್ಥಾಪಿಸಿಕೊಂಡು ಅದರ ಮೇಲೆ ತೀರ್ಪುಮಾಡುವ ವಿಷಯದಲ್ಲಿ ಜಾಗ್ರತೆಯಿಂದಿರಿ. (ಯಾಕೋಬ 4:11, 12) ಯೆಹೋವನು ಎಲ್ಲಾ ರೀತಿಯ ಹಿನ್ನೆಲೆಗಳಿಂದ ಬರುವ ಜನರನ್ನು ಪಕ್ಷಪಾತವಿಲ್ಲದೆ ಅಂಗೀಕರಿಸುತ್ತಾನೆ ಮಾತ್ರವಲ್ಲ, ಅವರು ಆತ್ಮಿಕವಾಗಿ ಬೆಳೆಯುವಾಗ ಆತನು ಅವರ ವಿಷಯದಲ್ಲಿ ತಾಳ್ಮೆ ತೋರಿಸುತ್ತಾನೆ.
9. (ಎ) ಸಭೆಯಲ್ಲಿ ನಡೆಯುವ ದೊಡ್ಡ ತಪ್ಪುಗಳಿಗೆ ಯಾರು ಗಮನವನ್ನು ಕೊಡುತ್ತಾರೆ? (ಬಿ) ಯಾರ ವಿರುದ್ಧವಾಗಿ ಪಾಪಮಾಡಲಾಗಿದೆಯೊ ಅವನು ಮೊದಲು ಕ್ರಿಯೆಗೈಯಬೇಕಾದ ಜವಾಬ್ದಾರಿ ಯಾವಾಗ ಬರುತ್ತದೆ, ಮತ್ತು ಅದರ ಗುರಿಯೇನು?
9 ಸಭೆಯಲ್ಲಿರುವ ಯಾವನಾದರೂ ಲೈಂಗಿಕ ದುರಾಚಾರದಂತಹ ದೊಡ್ಡ ಪಾಪಗಳಲ್ಲಿ ಒಳಗೂಡುವುದಾದರೆ, ಒಡನೆ ಕ್ರಮವನ್ನು ಕೈಕೊಳ್ಳಬೇಕು. ಯಾರು? ಹಿರಿಯರೇ. (ಯಾಕೋಬ 5:14, 15) ಆದರೂ, ಮಾಡಿರುವ ಪಾಪವು ಒಬ್ಬನ ವಿರುದ್ಧವಾಗಿರುವಲ್ಲಿ, ಅದು ಒಂದುವೇಳೆ ವ್ಯಾಪಾರದಲ್ಲಿಯೊ ನಾಲಿಗೆಯ ಹಾನಿಕರವಾದ ಅಪಪ್ರಯೋಗದಲ್ಲಿಯೊ ಆಗಿರುವಲ್ಲಿ, ಆಗ ಯಾರ ವಿರುದ್ಧ ಪಾಪಮಾಡಲಾಗಿದೆಯೊ ಅವನು ಮೊದಲಾಗಿ ಪಾಪಮಾಡಿದವನನ್ನು ವೈಯಕ್ತಿಕವಾಗಿ ಸಮೀಪಿಸಲು ಪ್ರಯತ್ನಿಸಬೇಕು. (ಮತ್ತಾಯ 18:15) ಇದು ಆ ಸಮಸ್ಯೆಯನ್ನು ಬಗೆಹರಿಸದಿರುವಲ್ಲಿ, ಮತ್ತಾಯ 18:16, 17ರಲ್ಲಿ ತೋರಿಸಿರುವಂತೆ, ಮುಂದಿನ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಆವಶ್ಯಕ. ಪಾಪಮಾಡಿರುವ ನಮ್ಮ ಸಹೋದರನ ಕಡೆಗೆ ನಮಗಿರುವ ಪ್ರೀತಿ, ಮತ್ತು ಅವನನ್ನು ‘ಸಂಪಾದಿಸುವ’ ಅಪೇಕ್ಷೆಯು, ನಾವಿದನ್ನು ಅವನ ಹೃದಯವನ್ನು ಸ್ಪರ್ಶಿಸುವ ರೀತಿಯಲ್ಲಿ ಮಾಡುವಂತೆ ಸಹಾಯಮಾಡುವುದು.—ಜ್ಞಾನೋಕ್ತಿ 16:23.
10. ಸಮಸ್ಯೆಯು ಏಳುವಾಗ, ಅದನ್ನು ಸರಿಯಾದ ರೀತಿಯಲ್ಲಿ ವೀಕ್ಷಿಸಲು ಯಾವುದು ನಮಗೆ ಸಹಾಯಮಾಡುವುದು?
10 ಒಂದು ಸಮಸ್ಯೆಯು ತಲೆದೋರುವಾಗ, ಅದು ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಯೆಹೋವನು ಅದನ್ನು ಹೇಗೆ ವೀಕ್ಷಿಸುತ್ತಾನೆಂದು ತಿಳಿಯಲು ನಾವು ಪ್ರಯತ್ನಿಸುವಲ್ಲಿ ನಮಗೆ ಪ್ರಯೋಜನ ದೊರೆಯುತ್ತದೆ. ಆತನು ಪಾಪವನ್ನು ಯಾವುದೇ ರೀತಿಯಲ್ಲಿ ಒಪ್ಪದಿರುತ್ತಾನೆ ಮತ್ತು ಆತನ ಕ್ಲುಪ್ತ ಸಮಯದಲ್ಲಿ, ಗಂಭೀರ ಪಾಪಗಳನ್ನು ಮಾಡುತ್ತಾ ಹೋಗುವವರು ಆತನ ಸಂಸ್ಥೆಯಿಂದ ಎಫೆಸ 5:1, 2.
ಹೊರಗೆ ಹಾಕಲ್ಪಡುತ್ತಾರೆ. ಆದರೂ, ನಾವೆಲ್ಲರೂ ಚಿಕ್ಕ ಚಿಕ್ಕ ವಿಧಗಳಲ್ಲಿ ಪಾಪಗಳನ್ನು ಮಾಡುತ್ತೇವೆ, ಮತ್ತು ಆತನ ದೀರ್ಘಶಾಂತಿ ಮತ್ತು ಕರುಣೆ ನಮಗೆ ಆವಶ್ಯಕವೆಂಬುದನ್ನು ನಾವು ಮರೆಯದಿರೋಣ. ಯೆಹೋವನು ಈ ವಿಧದಲ್ಲಿ, ಇತರರು ನಮ್ಮ ವಿರುದ್ಧವಾಗಿ ಪಾಪಗಳನ್ನು ಮಾಡುವಾಗ ನಾವು ಅನುಕರಿಸಬೇಕಾದ ಮಾದರಿಯನ್ನು ಇಡುತ್ತಾನೆ. ನಾವು ಕರುಣೆ ತೋರಿಸುವಾಗ, ಆತನ ಪ್ರೀತಿಯನ್ನು ಪ್ರತಿಬಿಂಬಿಸುತ್ತೇವೆ.—‘ವಿಶಾಲಮಾಡಿಕೊಳ್ಳಲು’ ಮಾರ್ಗಗಳನ್ನು ಹುಡುಕಿರಿ
11. ಪೌಲನು ‘ವಿಶಾಲಮಾಡಿಕೊಳ್ಳಿರಿ’ ಎಂದು ಕೊರಿಂಥದವರಿಗೆ ಪ್ರೋತ್ಸಾಹ ಕೊಟ್ಟದ್ದೇಕೆ?
11 ಗ್ರೀಸ್‌ನಲ್ಲಿರುವ ಕೊರಿಂಥ ಸಭೆಯನ್ನು ಏಳಿಗೆಗೆ ತರಲು ಪೌಲನು ಅನೇಕ ತಿಂಗಳುಗಳನ್ನು ವ್ಯಯಿಸಿದನು. ಅಲ್ಲಿಯ ಸಹೋದರರಿಗೆ ಸಹಾಯಮಾಡಲು ಅವನು ಕಠಿನವಾಗಿ ಶ್ರಮಿಸಿದನು. ಅವನು ಅವರನ್ನು ಪ್ರೀತಿಸಿದನು. ಆದರೆ ಅವರಲ್ಲಿ ಕೆಲವರು ಅವನ ಕಡೆಗೆ ತಣ್ಣಗಿನ ಭಾವವನ್ನು ತೋರಿಸಿದರು. ಅವರು ಅವನನ್ನು ಅತಿಯಾಗಿ ಟೀಕಿಸಿದರು. ಆದುದರಿಂದ ಅವರು ಮಮತೆಯನ್ನು ತೋರಿಸುವುದರಲ್ಲಿ “ವಿಶಾಲಮಾಡಿ”ಕೊಳ್ಳಬೇಕೆಂದು ಅವನು ಪ್ರೋತ್ಸಾಹಿಸಿದನು. (2 ಕೊರಿಂಥ 6:11-13; 12:15) ಆದಕಾರಣ, ನಾವೆಲ್ಲರೂ ಎಷ್ಟರ ಮಟ್ಟಿಗೆ ಇತರರಿಗೆ ಪ್ರೀತಿಯನ್ನು ತೋರಿಸುತ್ತೇವೆಂಬುದನ್ನು ಪರಿಗಣಿಸಿ ಅದನ್ನು ವಿಸ್ತರಿಸಲು ಮಾರ್ಗಗಳನ್ನು ಹುಡುಕುವುದು ಲೇಸು.—1 ಯೋಹಾನ 3:14.
12. ಸಭೆಯಲ್ಲಿರುವ ಎಲ್ಲರ ಕಡೆಗಿನ ನಮ್ಮ ಪ್ರೀತಿಯಲ್ಲಿ ನಾವು ಹೇಗೆ ಬೆಳೆಯಬಲ್ಲೆವು?
12 ಸ್ನೇಹಿತರಾಗಲು ಕಷ್ಟಕರವೆಂದು ನಾವು ಕಂಡುಕೊಳ್ಳುವ ಕೆಲವರು ಸಭೆಯಲ್ಲಿದ್ದಾರೊ? ಅವರು ನಮ್ಮ ವ್ಯಕ್ತಿತ್ವ ವ್ಯತ್ಯಾಸಗಳನ್ನು ಅಲಕ್ಷಿಸಬೇಕೆಂದು ನಾವು ಬಯಸುವಂತೆಯೇ ನಾವೂ ಅವರ ವ್ಯಕ್ತಿತ್ವ ವ್ಯತ್ಯಾಸಗಳನ್ನು ಲಕ್ಷಿಸದೆ ಮನ್ನಿಸುವಲ್ಲಿ, ಇದು ನಮ್ಮ ಮಧ್ಯೆ ಹಾರ್ದಿಕ ಸಂಬಂಧಕ್ಕೆ ನಡೆಸಬಲ್ಲದು. ನಾವು ಅವರ ಒಳ್ಳೆಯ ಗುಣಗಳನ್ನು ಕಂಡುಹಿಡಿದು ಅವುಗಳ ಮೇಲೆ ಗಮನವಿಡುವಲ್ಲಿಯೂ ಅವರ ಕಡೆಗೆ ನಮಗಿರುವ ಸ್ನೇಹಭಾವವು ಉತ್ತಮಗೊಳ್ಳಬಲ್ಲದು. ಇದು ಅವರಿಗಾಗಿ ನಮ್ಮಲ್ಲಿರುವ ಪ್ರೀತಿಯನ್ನು ಬೆಳೆಯುವಂತೆ ಮಾಡುತ್ತದೆಂಬುದು ನಿಶ್ಚಯ.—ಲೂಕ 6:32, 33, 36.
13. ನಮ್ಮ ಸಭೆಯಲ್ಲಿರುವವರಿಗೆ ಪ್ರೀತಿ ತೋರಿಸುವುದರಲ್ಲಿ ನಾವು ನಮ್ಮನ್ನು ಹೇಗೆ ವಿಶಾಲಪಡಿಸಿಕೊಳ್ಳಬಲ್ಲೆವು?
13 ಇತರರಿಗೆ ನಾವು ಎಷ್ಟು ಸಹಾಯಮಾಡಬಹುದೆಂಬುದಕ್ಕೆ ಮಿತಿಯಿದೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯ. ನಾವು ಪ್ರತಿ ಕೂಟದಲ್ಲಿ ಎಲ್ಲರನ್ನೂ
ವಂದಿಸಲು ಸಾಧ್ಯವಿರಲಿಕ್ಕಿಲ್ಲ. ಸ್ನೇಹಿತರನ್ನು ಊಟಕ್ಕೆ ಕರೆಯುವಾಗ, ಅವರಲ್ಲಿ ಎಲ್ಲರನ್ನೂ ಕರೆಯಲು ಸಾಧ್ಯವಿರಲಿಕ್ಕಿಲ್ಲ. ಆದರೆ ನಮ್ಮ ಸಭೆಯಲ್ಲಿರುವ ಒಬ್ಬನ ಹೆಚ್ಚು ಪರಿಚಯ ಮಾಡಿಕೊಳ್ಳುವ ಉದ್ದೇಶದಿಂದ ಅವನೊಂದಿಗೆ ಕೆಲವು ನಿಮಿಷಗಳನ್ನಾದರೂ ಕಳೆದು ನಮ್ಮನ್ನು ವಿಶಾಲಮಾಡಿಕೊಳ್ಳಬಲ್ಲೆವೊ? ನಮಗೆ ಹೆಚ್ಚು ಪರಿಚಯವಿಲ್ಲದ ಒಬ್ಬನನ್ನು ನಮ್ಮೊಂದಿಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಒಮ್ಮೊಮ್ಮೆಯಾದರೂ ಆಮಂತ್ರಿಸಲು ಸಾಧ್ಯವಿರಬಹುದೊ?14. ನಾವು ಭೇಟಿಯಾಗಿದ್ದಿರದ ಕ್ರೈಸ್ತರ ಮಧ್ಯೆ ಇರುವಾಗ, ನಾವು ಒಬ್ಬರಿಗೊಬ್ಬರು ಗಾಢವಾದ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?
14 ನಮ್ಮ ಪ್ರೀತಿಯಲ್ಲಿ ವಿಶಾಲಗೊಳ್ಳಲು ಕ್ರೈಸ್ತ ಅಧಿವೇಶನಗಳು ಉತ್ತಮ ಸಂದರ್ಭಗಳಾಗಿವೆ. ಅಲ್ಲಿ ಸಾವಿರಾರು ಮಂದಿ ನೆರೆದು ಬರಬಹುದು. ನಾವು ಅವರೆಲ್ಲರನ್ನು ಭೇಟಿಯಾಗುವುದು ಅಸಾಧ್ಯ. ಆದರೆ ನಮ್ಮ ಅನುಕೂಲತೆಗಳ ಬದಲು ಇತರರ ಹಿತವನ್ನು ಬಯಸುತ್ತೇವೆಂಬ ರೀತಿಯಲ್ಲಿ ನಾವು ವರ್ತಿಸಲು ಸಾಧ್ಯವಿದೆ. ಸೆಷನ್‌ನ ಮಧ್ಯೆ ಬರುವ ವಿರಾಮ ಸಮಯದಲ್ಲಿ ನಮ್ಮ ಸುತ್ತಲಿರುವವರಲ್ಲಿ ಕೆಲವರನ್ನು ಭೇಟಿಮಾಡಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಸಾಧ್ಯವಿದೆ. ಬೇಗನೆ ಒಂದು ದಿನ, ಭೂಮಿಯ ಮೇಲೆ ಜೀವಿಸುವವರೆಲ್ಲರೂ ನಮ್ಮ ಸಹೋದರ ಸಹೋದರಿಯರಾಗಿರುವರು. ಅವರೆಲ್ಲರೂ ಸತ್ಯ ದೇವರೂ ಸರ್ವರ ಪಿತನೂ ಆದಾತನ ಆರಾಧಕರಾಗಿರುವರು. ಆಗ ಒಬ್ಬರು ಇನ್ನೊಬ್ಬರ ಪರಿಚಯ ಮಾಡಿಕೊಳ್ಳುವುದು ಅದೆಂಥ ಸಂತಸವಾಗಿರುವುದು! ನಾವು ಹಾಗೆ ಮಾಡುವಂತೆ ಗಾಢ ಪ್ರೀತಿಯು ನಮ್ಮನ್ನು ಪ್ರೇರಿಸುವುದು. ಹಾಗಿರುವಾಗ, ಅದನ್ನು ಈಗಲೇ ಏಕೆ ಆರಂಭಿಸಬಾರದು?
ಪುನರ್ವಿಮರ್ಶೆಯ ಚರ್ಚೆ
• ಕ್ರೈಸ್ತರ ಮಧ್ಯೆ ಸಮಸ್ಯೆಗಳೇಳುವಾಗ ಅವನ್ನು ಹೇಗೆ ಪರಿಹರಿಸಬೇಕು, ಮತ್ತು ಏಕೆ?
• ನಾವು ಆತ್ಮಿಕವಾಗಿ ಬೆಳೆಯುವಾಗ ನಮ್ಮ ಪ್ರೀತಿಯೂ ಯಾವ ವಿಧಗಳಲ್ಲಿ ಬೆಳೆಯಬೇಕು?
• ಆಪ್ತ ಸ್ನೇಹಿತರಿಗೆ ಮಾತ್ರವಲ್ಲ, ಇನ್ನೂ ಹೆಚ್ಚಿನವರಿಗೆ ನಾವು ಗಾಢವಾದ ಪ್ರೀತಿಯನ್ನು ತೋರಿಸುವುದು ಹೇಗೆ ಸಾಧ್ಯ?
[ಅಧ್ಯಯನ ಪ್ರಶ್ನೆಗಳು]
1. ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಅನೇಕವೇಳೆ ಯಾವುದು ಹೊಸಬರನ್ನು ಪ್ರಭಾವಿಸುತ್ತದೆ?
[ಪುಟ 148ರಲ್ಲಿರುವ ಚಿತ್ರ]
ಕ್ರೈಸ್ತ ಪ್ರೀತಿಯು ಸಭಾ ಕೂಟಗಳಲ್ಲಿ ತೋರಿಸಲ್ಪಡುವಂತೆ ಅನೇಕ ವಿಧಗಳಲ್ಲಿ ತೋರಿಸಲ್ಪಡುತ್ತದೆ