ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರವಾದಿಗಳೆಲ್ಲರು ಯಾರ ಪರವಾಗಿ ಸಾಕ್ಷಿಹೇಳಿದರೊ ಆ ವ್ಯಕ್ತಿ

ಪ್ರವಾದಿಗಳೆಲ್ಲರು ಯಾರ ಪರವಾಗಿ ಸಾಕ್ಷಿಹೇಳಿದರೊ ಆ ವ್ಯಕ್ತಿ

ಅಧ್ಯಾಯ ನಾಲ್ಕು

ಪ್ರವಾದಿಗಳೆಲ್ಲರು ಯಾರ ಪರವಾಗಿ ಸಾಕ್ಷಿಹೇಳಿದರೊ ಆ ವ್ಯಕ್ತಿ

1. ಯೇಸುವಿನ ಮಾನವಪೂರ್ವ ಅಸ್ತಿತ್ವದ ನಿಜತ್ವಗಳು, ಅವನಿಗೆ ಯೆಹೋವನೊಂದಿಗಿದ್ದ ಸಂಬಂಧದ ಬಗ್ಗೆ ಏನು ತೋರಿಸುತ್ತವೆ?

“ತಂದೆಯು ಮಗನ ಮೇಲೆ ಮಮತೆಯನ್ನಿಟ್ಟು ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ.” (ಯೋಹಾನ 5:20) ಈ ಮಗನು ತನ್ನ ತಂದೆಯಾದ ಯೆಹೋವ ದೇವರೊಂದಿಗೆ ಎಷ್ಟು ಹೃದಯೋಲ್ಲಾಸಕರವಾದ ಸಂಬಂಧವನ್ನು ಅನುಭವಿಸುತ್ತಿದ್ದನು! ಈ ನಿಕಟ ಸಂಬಂಧವು, ಅವನು ಸೃಷ್ಟಿಸಲ್ಪಟ್ಟಾಗ ಅಂದರೆ ಅವನ ಮಾನವ ಜನನಕ್ಕೆ ಅಸಂಖ್ಯಾತ ವರುಷಗಳಿಗೆ ಮೊದಲು ಆರಂಭಗೊಂಡಿತು. ಅವನು ದೇವರ ಏಕಜಾತ ಪುತ್ರನು, ಅಂದರೆ ಯೆಹೋವನು ತಾನೇ ನೇರವಾಗಿ ಸೃಷ್ಟಿಸಿದವರಲ್ಲಿ ಏಕಮಾತ್ರನಾಗಿದ್ದನು. ಭೂಮ್ಯಾಕಾಶಗಳಲ್ಲಿರುವ ಸಕಲವೂ ಈ ಅತಿಪ್ರಿಯ ಜ್ಯೇಷ್ಠಪುತ್ರನ ಮುಖಾಂತರ ಸೃಷ್ಟಿಸಲ್ಪಟ್ಟಿತು. (ಕೊಲೊಸ್ಸೆ 1:​15, 16) ಅವನು ದೇವರ ವಾಕ್ಯ ಅಥವಾ ವದನಕನಾಗಿ, ಅಂದರೆ ದೈವಿಕ ಚಿತ್ತವು ಯಾರ ಮೂಲಕ ಇತರರಿಗೆ ರವಾನಿಸಲ್ಪಟ್ಟಿತೊ ಆ ವ್ಯಕ್ತಿಯಾಗಿ ಕಾರ್ಯನಡಿಸಿದನು. ದೇವರಿಗೆ ಅಚ್ಚುಮೆಚ್ಚಿನವನಾಗಿದ್ದ ಈ ದೇವಪುತ್ರನೇ ತರುವಾಯ ಮನುಷ್ಯನಾದ ಯೇಸು ಕ್ರಿಸ್ತನಾದನು.​—⁠ಜ್ಞಾನೋಕ್ತಿ 8:​22-30; ಯೋಹಾನ 1:​14, 18; 12:​49, 50.

2. ಬೈಬಲ್‌ ಪ್ರವಾದನೆಗಳು ಎಷ್ಟರ ಮಟ್ಟಿಗೆ ಯೇಸುವಿಗೆ ಸೂಚಿತವಾಗಿವೆ?

2 ದೇವರ ಜ್ಯೇಷ್ಠಪುತ್ರನು ಅದ್ಭುತ ರೀತಿಯಲ್ಲಿ ಮಾನವನಾಗಿ ಗರ್ಭತಾಳಲ್ಪಡುವುದಕ್ಕೆ ಮೊದಲು ಅವನ ಕುರಿತು ಹತ್ತಾರು ಪ್ರವಾದನೆಗಳು ಬರೆಯಲ್ಪಟ್ಟವು. ಅಪೊಸ್ತಲ ಪೇತ್ರನು ಕೊರ್ನೇಲ್ಯನಿಗೆ, “ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿಹೇಳಿದ್ದಾರೆ” ಎಂದು ಹೇಳಿದನು. (ಅ. ಕೃತ್ಯಗಳು 10:43) ಯೇಸು ವಹಿಸಲಿದ್ದ ಪಾತ್ರವನ್ನು ಬೈಬಲಿನಲ್ಲಿ ಎಷ್ಟು ವಿಸ್ತಾರವಾಗಿ ಸೂಚಿಸಲಾಗಿದೆಯೆಂದರೆ, ಒಬ್ಬ ದೇವದೂತನು ಅಪೊಸ್ತಲ ಯೋಹಾನನಿಗೆ, “ಯೇಸುವಿನ ವಿಷಯವಾದ ಸಾಕ್ಷಿಯು ಪ್ರವಾದನೆಯ ಆತ್ಮವೇ” ಎಂದು ಹೇಳಿದನು. (ಪ್ರಕಟನೆ 19:10) ಆ ಪ್ರವಾದನೆಗಳು ಅವನನ್ನು ಮೆಸ್ಸೀಯನೆಂದು ಸ್ಪಷ್ಟವಾಗಿ ಗುರುತಿಸಿದವು. ದೇವರ ಉದ್ದೇಶಗಳನ್ನು ನೆರವೇರಿಸುವುದರಲ್ಲಿ ಅವನು ವಹಿಸಲಿದ್ದ ವಿವಿಧ ಪಾತ್ರಗಳಿಗೆ ಅವು ಗಮನವನ್ನು ಹರಿಸಿದವು. ಇವೆಲ್ಲವೂ ಇಂದು ನಮಗೆ ತೀವ್ರಾಸಕ್ತಿಯನ್ನು ಉಂಟುಮಾಡುವಂತಹ ವಿಷಯಗಳಾಗಿರಬೇಕು.

ಪ್ರವಾದನೆಗಳು ಏನನ್ನು ತೋರಿಸಿವೆ?

3. (ಎ) ಆದಿಕಾಂಡ 3:15ರ ಪ್ರವಾದನೆಯಲ್ಲಿ, ಸರ್ಪವನ್ನು, “ಸ್ತ್ರೀ”ಯನ್ನು ಮತ್ತು ‘ಸರ್ಪನ ಸಂತಾನ’ವನ್ನು ಯಾರು ಪ್ರತಿನಿಧಿಸುತ್ತಾರೆ? (ಬಿ) ‘ಸರ್ಪನ ತಲೆಯನ್ನು ಜಜ್ಜುವ’ ವಿಷಯವು ಯೆಹೋವನ ಸೇವಕರಿಗೆ ಮಹಾ ಆಸಕ್ತಿಯ ವಿಷಯವಾಗಿರುವುದೇಕೆ?

3 ಇಂತಹ ಪ್ರವಾದನೆಗಳಲ್ಲಿ ಪ್ರಥಮ ಪ್ರವಾದನೆಯು ಏದೆನಿನಲ್ಲಿ ನಡೆದ ದಂಗೆಯ ತರುವಾಯ ನುಡಿಯಲ್ಪಟ್ಟಿತು. ಅಲ್ಲಿ ಯೆಹೋವನು ಸರ್ಪಕ್ಕೆ ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಆ ಪ್ರವಾದನೆಯನ್ನು ನಿಜವಾಗಿಯೂ ಸರ್ಪದಿಂದ ಪ್ರತಿನಿಧಿಸಲ್ಪಟ್ಟಿದ್ದ ಸೈತಾನನಿಗೆ ಸಂಬೋಧಿಸಲಾಗಿತ್ತು. “ಈ ಸ್ತ್ರೀ,” ಯೆಹೋವನಿಗೆ ಸ್ವಾಮಿನಿಷ್ಠೆಯುಳ್ಳ ಪತ್ನಿಯಂತಿರುವ ಆತನ ಸ್ವಂತ ನಿಷ್ಠಾವಂತ ಸ್ವರ್ಗೀಯ ಸಂಸ್ಥೆಯಾಗಿದೆ. ‘ಸರ್ಪನ ಸಂತಾನ’ದಲ್ಲಿ ಸೈತಾನನ ಮನೋಭಾವವನ್ನು ತೋರ್ಪಡಿಸುವ ಮತ್ತು ಯೆಹೋವನ ಹಾಗೂ ಆತನ ಜನರನ್ನು ವಿರೋಧಿಸುವ ಸಕಲ ಆತ್ಮಜೀವಿಗಳೂ ಮಾನವರೂ ಸೇರಿದ್ದಾರೆ. ‘ಸರ್ಪನ ತಲೆಯನ್ನು ಜಜ್ಜುವುದು’ ಅಂದರೆ, ಯೆಹೋವನ ಮೇಲೆ ಅಪವಾದ ಹೊರಿಸಿ ಮಾನವವರ್ಗಕ್ಕೆ ಮಹಾ ವ್ಯಥೆಯನ್ನು ತಂದಿರುವ ದಂಗೆಕೋರ ಸೈತಾನನ ಅಂತಿಮ ನಾಶನವೆಂದರ್ಥ. ಆದರೆ ತಲೆಯನ್ನು ಜಜ್ಜುವ “ಸಂತಾನ”ದ ಪ್ರಧಾನ ಭಾಗವಾಗಿರುವವನ ಗುರುತೇನು? ಅನೇಕ ಶತಮಾನಗಳಲ್ಲಿ ಅದೊಂದು “ಪವಿತ್ರ ರಹಸ್ಯ”ವಾಗಿತ್ತು.​—⁠ರೋಮಾಪುರ 16:​20, 25, 26, NW.

4. ಯೇಸು ವಾಗ್ದತ್ತ ಸಂತಾನವೆಂಬುದನ್ನು ಗುರುತಿಸಲು, ಅವನ ವಂಶಾವಳಿಯು ಹೇಗೆ ಸಹಾಯಮಾಡಿತು?

4 ಸುಮಾರು 2,000 ವರುಷಗಳ ಮಾನವ ಇತಿಹಾಸದ ಬಳಿಕ, ಇನ್ನೂ ಹೆಚ್ಚಿನ ವಿವರಗಳನ್ನು ಯೆಹೋವನು ಒದಗಿಸಿದನು. ಆ ಸಂತಾನವು ಅಬ್ರಹಾಮನ ಮನೆತನದಿಂದ ಬರುವುದೆಂದು ಸೂಚಿಸಿದನು. (ಆದಿಕಾಂಡ 22:​15-18) ಆದರೂ, ಆ ಸಂತಾನದ ಜನನಕ್ಕೆ ನಡೆಸುವ ಸಂತತಿಯು ಹುಟ್ಟಿನ ಮೇಲಲ್ಲ, ದೇವರ ಆಯ್ಕೆಯ ಮೇಲೆ ಹೊಂದಿಕೊಂಡಿರುವುದು. ಹೀಗೆ, ಅಬ್ರಹಾಮನು ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನನ್ನು ಹೆಚ್ಚು ಪ್ರೀತಿಸಿದರೂ, ಯೆಹೋವನು ಹೇಳಿದ್ದು: “ಆ ನನ್ನ ಒಡಂಬಡಿಕೆಯನ್ನು ಇಸಾಕನ ಸಂಗಡಲೇ ಸ್ಥಾಪಿಸಿಕೊಳ್ಳುತ್ತೇನೆ; . . . ಸಾರಳು ಅವನನ್ನು ಹೆರುವಳು.” (ಆದಿಕಾಂಡ 17:18-21) ತರುವಾಯ, ಆ ಒಡಂಬಡಿಕೆಯು ಇಸಾಕನ ಜೇಷ್ಠಪುತ್ರನಾಗಿದ್ದ ಏಸಾವನಿಗಲ್ಲ, ಇಸ್ರಾಯೇಲಿನ 12 ಗೋತ್ರಗಳು ಯಾರಿಂದ ಬಂದವೊ ಆ ಯಾಕೋಬನಿಗೆ ದೃಢೀಕರಿಸಲ್ಪಟ್ಟಿತು. (ಆದಿಕಾಂಡ 28:​10-14) ತಕ್ಕ ಸಮಯದಲ್ಲಿ ಆ ಸಂತಾನವು ಯೆಹೂದ ಕುಲದಲ್ಲಿ, ದಾವೀದನ ಕುಟುಂಬದಲ್ಲಿ ಹುಟ್ಟುವುದೆಂದು ಸೂಚಿಸಲಾಯಿತು.​—⁠ಆದಿಕಾಂಡ 49:10; 1 ಪೂರ್ವಕಾಲವೃತ್ತಾಂತ 17:​3, 4, 11-14.

5. ಯೇಸು ತನ್ನ ಭೂಶುಶ್ರೂಷೆಯನ್ನು ಆರಂಭಿಸಿದಾಗ, ಅವನೇ ಮೆಸ್ಸೀಯನೆಂದು ಯಾವುದು ಸ್ಪಷ್ಟವಾಗಿ ತೋರಿಸಿತು?

5 ಆ ಸಂತಾನವನ್ನು ಗುರುತಿಸಲು ಇನ್ನಾವ ಸುಳಿವುಗಳನ್ನು ಕೊಡಲಾಯಿತು? 700 ವರ್ಷಗಳಿಗೂ ಮೊದಲು, ವಾಗ್ದತ್ತ ಸಂತಾನದ ಜನ್ಮಸ್ಥಳವನ್ನು ಬೇತ್ಲೆಹೇಮೆಂದು ಬೈಬಲು ಹೆಸರಿಸಿತು. ಆ ಸಂತಾನವಾದಾತನು ‘ಅನಾದಿಯಿಂದಲೂ’ ಅಂದರೆ ಅವನು ಸ್ವರ್ಗದಲ್ಲಿ ಸೃಷ್ಟಿಸಲ್ಪಟ್ಟಂದಿನಿಂದಲೂ ಅಸ್ತಿತ್ವದಲ್ಲಿದ್ದನೆಂದು ಸಹ ಅದು ಪ್ರಕಟಪಡಿಸಿತು. (ಮೀಕ 5:⁠2) ಅವನು ಮೆಸ್ಸೀಯನಾಗಿ ಭೂಮಿಗೆ ಬರುವ ನಿರ್ದಿಷ್ಟ ಸಮಯವನ್ನೂ ದಾನಿಯೇಲ ಪ್ರವಾದಿಯ ಮೂಲಕ ಮುಂತಿಳಿಸಲಾಗಿತ್ತು. (ದಾನಿಯೇಲ 9:24-26) ಯೇಸು ಪವಿತ್ರಾತ್ಮದಿಂದ ಅಭಿಷೇಕ ಹೊಂದಿ, ನಿಜವಾಗಿಯೂ ಯೆಹೋವನ ಅಭಿಷಿಕ್ತನಾದಾಗ, ಪರಲೋಕದಿಂದ ಬಂದ ದೇವರ ಸ್ವಂತ ಸ್ವರವು ಅವನನ್ನು ಆತನ ಪುತ್ರನನ್ನಾಗಿ ಗುರುತಿಸಿತು. (ಮತ್ತಾಯ 3:​16, 17) ಹೀಗೆ ಸಂತಾನವು ಯಾರೆಂದು ತಿಳಿಸಲ್ಪಟ್ಟಿತು! ಆದುದರಿಂದಲೇ, ಫಿಲಿಪ್ಪನು ನಿಶ್ಚಿತಾಭಿಪ್ರಾಯದಿಂದ, “ಯಾವನ ವಿಷಯವಾಗಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನು ನಮಗೆ ಸಿಕ್ಕಿದನು; ಆತನು ಯಾರಂದರೆ ಯೋಸೇಫನ ಮಗನಾದ ನಜರೇತಿನ ಯೇಸು” ಎಂದು ಹೇಳಸಾಧ್ಯವಾಯಿತು.​—⁠ಯೋಹಾನ 1:45.

6. (ಎ) ಲೂಕ 24:27ಕ್ಕನುಸಾರ, ಯೇಸುವಿನ ಹಿಂಬಾಲಕರು ಏನನ್ನು ಗ್ರಹಿಸಿದರು? (ಬಿ) ‘ಸ್ತ್ರೀಯ ಸಂತಾನದ’ ಪ್ರಧಾನ ಭಾಗವು ಯಾರು, ಮತ್ತು ಅವನು ಸರ್ಪನ ತಲೆಯನ್ನು ಜಜ್ಜುವನು ಎಂಬುದರ ಅರ್ಥವೇನು?

6 ಆ ಬಳಿಕ ಯೇಸುವಿನ ಹಿಂಬಾಲಕರು, ಅವನ ಕುರಿತಾಗಿ ಹೇಳಲ್ಪಟ್ಟ ಅನೇಕ ಪ್ರವಾದನಾ ವಚನಗಳು ಪ್ರೇರಿತ ವಾಕ್ಯದ ಭಾಗವಾಗಿ ಮಾಡಲ್ಪಟ್ಟಿವೆ ಎಂಬುದನ್ನು ಗ್ರಹಿಸಿದರು. (ಲೂಕ 24:27) ‘ಸ್ತ್ರೀಯ ಸಂತಾನದಲ್ಲಿ’ ಯೇಸುವೇ ಪ್ರಧಾನ ಭಾಗವೆಂದೂ, ಅವನು ಸರ್ಪನ ತಲೆಯನ್ನು ಜಜ್ಜಿ, ಸೈತಾನನನ್ನು ನಿರ್ನಾಮ ಮಾಡುವವನೆಂದೂ ಇನ್ನೂ ಹೆಚ್ಚು ಸ್ಪಷ್ಟವಾಗಿ ತಿಳಿದುಬಂತು. ಮತ್ತು ಮಾನವಕುಲಕ್ಕೆ ದೇವರು ಕೊಟ್ಟ ವಾಗ್ದಾನಗಳೆಲ್ಲಾ, ಅಂದರೆ ನಾವು ಶ್ರದ್ಧಾಪೂರ್ವಕವಾಗಿ ಹಾರೈಸುವ ಎಲ್ಲಾ ವಿಷಯಗಳು ಯೇಸುವಿನ ಮೂಲಕ ನೆರವೇರಿಸಲ್ಪಡುವವು.​—⁠2 ಕೊರಿಂಥ 1:​20.

7. ಪ್ರವಾದನೆಗಳಲ್ಲಿ ಸೂಚಿಸಿರುವವನನ್ನು ಗುರುತಿಸುವುದಲ್ಲದೆ, ಇನ್ನೇನನ್ನೂ ಗ್ರಹಿಸಿಕೊಳ್ಳುವುದು ನಮಗೆ ಪ್ರಯೋಜನಕರ?

7 ಇದರ ಕುರಿತು ತಿಳಿದಿರುವುದು ನಮ್ಮನ್ನು ಹೇಗೆ ಪ್ರಭಾವಿಸಬೇಕು? ಬರಲಿದ್ದ ಉದ್ಧಾರಕ ಮತ್ತು ಮೆಸ್ಸೀಯನ ಬಗ್ಗೆ ಈ ಪ್ರವಾದನೆಗಳಲ್ಲಿ ಕೆಲವನ್ನು ಓದಿದ್ದ ಐಥಿಯೋಪ್ಯದ ಕಂಚುಕಿಯ ವಿಷಯದಲ್ಲಿ ಬೈಬಲು ಮಾತಾಡುತ್ತದೆ. ಗಲಿಬಿಲಿಗೊಂಡಿದ್ದ ಅವನು, “ಪ್ರವಾದಿಯು ಇದನ್ನು ಯಾರ ವಿಷಯದಲ್ಲಿ ಹೇಳಿದ್ದಾನೆ?” ಎಂದು ಸೌವಾರ್ತಿಕನಾದ ಫಿಲಿಪ್ಪನನ್ನು ಕೇಳಿದನು. ಅವನಿಗೆ ಉತ್ತರ ದೊರೆತ ಮೇಲೆ, ಆ ಕಂಚುಕಿಯು ವಿಷಯವನ್ನು ಅಷ್ಟಕ್ಕೇ ಬಿಡಲಿಲ್ಲ. ಫಿಲಿಪ್ಪನು ಕೊಟ್ಟ ವಿವರಣೆಯನ್ನು ಜಾಗರೂಕತೆಯಿಂದ ಕೇಳಿಸಿಕೊಂಡ ಬಳಿಕ, ಈ ನೆರವೇರಿರುವ ಪ್ರವಾದನೆಗೆ ಕೃತಜ್ಞತೆಯು ತನ್ನಿಂದ ಕ್ರಿಯೆಯನ್ನು ಅಗತ್ಯಪಡಿಸುತ್ತದೆಂಬುದನ್ನು ಮನಗಂಡನು. ತನಗೆ ದೀಕ್ಷಾಸ್ನಾನವು ಅಗತ್ಯವೆಂದು ಅವನು ತಿಳಿದುಕೊಂಡನು. (ಅ. ಕೃತ್ಯಗಳು 8:​32-38; ಯೆಶಾಯ 53:​3-9) ನಾವೂ ಅದೇ ರೀತಿ ಪ್ರತಿವರ್ತನೆ ತೋರಿಸುತ್ತೇವೊ?

8. (ಎ) ಇಸಾಕನನ್ನು ಅರ್ಪಿಸಲು ಮಾಡಿದ ಅಬ್ರಹಾಮನ ಪ್ರಯತ್ನವು ಯಾವುದನ್ನು ಮುನ್‌ಚಿತ್ರಿಸುತ್ತದೆ? (ಬಿ) ವಾಗ್ದತ್ತ ಸಂತಾನದ ಮೂಲಕ ಸಕಲ ಜನಾಂಗಗಳು ತಮ್ಮನ್ನು ಆಶೀರ್ವದಿಸಿಕೊಳ್ಳುವವು ಎಂದು ಯೆಹೋವನು ಅಬ್ರಹಾಮನಿಗೆ ಹೇಳಿದ್ದೇಕೆ, ಮತ್ತು ಇದು ನಮಗೆ ಇಂದು ಹೇಗೆ ಅನ್ವಯಿಸುತ್ತದೆ?

8 ಅಬ್ರಹಾಮನು ಸಾರಳಿಂದ ಪಡೆದಿದ್ದ ಒಬ್ಬನೇ ಮಗ ಇಸಾಕನನ್ನು ಯಜ್ಞಾರ್ಪಿಸಲು ಪ್ರಯತ್ನಿಸಿದ ಆ ಹೃದಯಸ್ಪರ್ಶಿ ವೃತ್ತಾಂತವನ್ನೂ ಪರಿಗಣಿಸಿರಿ. (ಆದಿಕಾಂಡ 22:​1-18) ಯೆಹೋವನು ಏನು ಮಾಡಲಿದ್ದನೊ ಅದನ್ನು ಅಂದರೆ ತನ್ನ ಏಕಜಾತ ಪುತ್ರನನ್ನು ಸಮರ್ಪಿಸುವುದನ್ನು ಇದು ಮುನ್‌ಚಿತ್ರಿಸಿತು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ತನ್ನ ಏಕಜಾತ ಪುತ್ರನನ್ನು ಕೊಟ್ಟಂತೆಯೇ, ಆತನು ‘ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವುದಿಲ್ಲ.’ (ರೋಮಾಪುರ 8:32) ಹಾಗಾದರೆ ಇದು ನಮ್ಮಿಂದ ಏನನ್ನು ಅಗತ್ಯಪಡಿಸುತ್ತದೆ? ಆದಿಕಾಂಡ 22:18ರಲ್ಲಿ ಬರೆದಿರುವಂತೆ, “[ಅಬ್ರಹಾಮನು ದೇವರ] ಮಾತನ್ನು ಕೇಳಿದ್ದರಿಂದ” ಆ ಸಂತಾನದ ಮೂಲಕ ಸಕಲ ಜನಾಂಗಗಳೂ ತಮ್ಮನ್ನು ಆಶೀರ್ವದಿಸಿಕೊಳ್ಳುವವು ಎಂದು ಯೆಹೋವನು ಅಬ್ರಹಾಮನಿಗೆ ಹೇಳಿದನು. ಆದಕಾರಣ, ನಾವು ಸಹ ಯೆಹೋವನಿಗೂ ಆತನ ಪುತ್ರನಿಗೂ ಕಿವಿಗೊಡಬೇಕು: “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.”​—⁠ಯೋಹಾನ 3:36.

9. ಯೇಸುವಿನ ಯಜ್ಞದ ಮೂಲಕ ಸಾಧ್ಯವಿರುವ ನಿತ್ಯಜೀವದ ನಿರೀಕ್ಷೆಗೆ ಕೃತಜ್ಞರಾಗಿರುವಲ್ಲಿ ನಾವೇನು ಮಾಡುವೆವು?

9 ಯೇಸುವಿನ ಯಜ್ಞವು ಸಾಧ್ಯಮಾಡಿರುವ ನಿತ್ಯಜೀವದ ನಿರೀಕ್ಷೆಯನ್ನು ನಾವು ಮಾನ್ಯಮಾಡುವುದಾದರೆ, ಯೆಹೋವನು ಯೇಸುವಿನ ಮೂಲಕ ನಮಗೆ ಹೇಳಿರುವ ವಿಷಯಗಳನ್ನು ನಾವು ಮಾಡಲಪೇಕ್ಷಿಸುವೆವು. ಇವು ದೇವರ ಮತ್ತು ನೆರೆಯವರ ಮೇಲೆ ನಮಗಿರುವ ಪ್ರೀತಿಗೆ ನಿಕಟ ಸಂಬಂಧವುಳ್ಳವುಗಳಾಗಿವೆ. (ಮತ್ತಾಯ 22:​37-39) ಯೆಹೋವನ ಮೇಲಿರುವ ನಮ್ಮ ಪ್ರೀತಿಯು, ನಾವು ಇತರರಿಗೆ ‘[ಯೇಸು ಕ್ರಿಸ್ತನು ನಮಗೆ] ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳಲು’ ಕಲಿಸುವಂತೆ ನಮ್ಮನ್ನು ಪ್ರಚೋದಿಸಬೇಕು ಎಂದು ಯೇಸು ತೋರಿಸಿದನು. (ಮತ್ತಾಯ 28:​19, 20) ಮತ್ತು ನಾವು ಯೆಹೋವನ ಜೊತೆ ಸೇವಕರೊಂದಿಗೆ ಕ್ರಮವಾಗಿ “ಸಭೆಯಾಗಿ ಕೂಡಿಕೊಳ್ಳುವ” ಮೂಲಕ ಆ ಪ್ರೀತಿಯನ್ನು ಹಂಚಿಕೊಳ್ಳಲು ಬಯಸುತ್ತೇವೆ. (ಇಬ್ರಿಯ 10:​25; ಗಲಾತ್ಯ 6:10) ಅಲ್ಲದೆ, ದೇವರಿಗೂ ಆತನ ಪುತ್ರನಿಗೂ ಕಿವಿಗೊಡುವಾಗ, ಅವರು ನಮ್ಮಿಂದ ಪರಿಪೂರ್ಣತೆಯನ್ನು ಬಯಸುತ್ತಾರೆಂದು ನಾವು ನೆನಸಬಾರದು. ನಮ್ಮ ಮಹಾಯಾಜಕನಾದ ಯೇಸು, “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪ” ತೋರಿಸಬಲ್ಲನೆಂದು ಇಬ್ರಿಯ 4:15 ಹೇಳುತ್ತದೆ. ವಿಶೇಷವಾಗಿ ನಾವು ನಮ್ಮ ಬಲಹೀನತೆಗಳನ್ನು ಜಯಿಸಲು ಪ್ರಾರ್ಥನೆಯಲ್ಲಿ ಕ್ರಿಸ್ತನ ಮೂಲಕ ದೇವರನ್ನು ಸಮೀಪಿಸುವಾಗ, ಇದೆಷ್ಟು ಸಾಂತ್ವಾನದಾಯಕವಾಗಿದೆ!​—⁠ಮತ್ತಾಯ 6:12.

ಕ್ರಿಸ್ತನಲ್ಲಿ ನಂಬಿಕೆಯನ್ನು ತೋರಿಸಿರಿ

10. ಯೇಸು ಕ್ರಿಸ್ತನನ್ನು ಬಿಟ್ಟರೆ ಇನ್ನಾರಲ್ಲಿಯೂ ರಕ್ಷಣೆಯಿಲ್ಲವೇಕೆ?

10 ಬೈಬಲ್‌ ಪ್ರವಾದನೆಗಳು ಯೇಸುವಿನಲ್ಲಿ ನೆರವೇರಿವೆಯೆಂದು ಯೆರೂಸಲೇಮಿನ ಯೆಹೂದಿ ಹಿರೀಸಭೆಗೆ ವಿವರಿಸಿದ ಬಳಿಕ, ಅಪೊಸ್ತಲ ಪೇತ್ರನು ಶಕ್ತಿಯುತವಾಗಿ ಕೊನೆಗೊಳಿಸಿದ್ದು: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅ. ಕೃತ್ಯಗಳು 4:12) ಆದಾಮನ ವಂಶಜರೆಲ್ಲರೂ ಪಾಪಿಗಳಾಗಿರುವುದರಿಂದ, ಅವರ ಮರಣವು ಯಾವನಿಗೂ ವಿಮೋಚನೆಯನ್ನು ಕೊಡುವಷ್ಟು ಬೆಲೆಯುಳ್ಳದ್ದಾಗಿರುವುದಿಲ್ಲ. ಆದರೆ, ಯೇಸು ಪರಿಪೂರ್ಣನಾಗಿದ್ದುದರಿಂದ ಅವನ ಜೀವಕ್ಕೆ ಯಜ್ಞಾರ್ಹವಾದ ಬೆಲೆಯಿತ್ತು. (ಕೀರ್ತನೆ 49:​6-9; ಇಬ್ರಿಯ 2:⁠9) ಆದಾಮನು ಕಳೆದುಕೊಂಡ ಪರಿಪೂರ್ಣ ಜೀವಬೆಲೆಗೆ ಸರಿಯಾಗಿ ಅನುರೂಪವಾಗಿದ್ದ ವಿಮೋಚನಾ ಬೆಲೆಯನ್ನು ಯೇಸು ದೇವರಿಗೆ ಅರ್ಪಿಸಿದನು. (1 ತಿಮೊಥೆಯ 2:​5, 6) ಇದು ನಮಗೆ, ದೇವರ ನೂತನ ಲೋಕದಲ್ಲಿ ನಿತ್ಯಜೀವವನ್ನು ಪಡೆಯಲು ಅವಕಾಶವನ್ನು ತೆರೆಯಿತು.

11. ಯೇಸುವಿನ ಯಜ್ಞವು ನಮಗೆ ಮಹತ್ತಾದ ಪ್ರಯೋಜನವನ್ನು ಹೇಗೆ ತರಬಲ್ಲದೆಂದು ವಿವರಿಸಿರಿ.

11 ವಿಮೋಚನಾ ಯಜ್ಞವು, ನಾವು ಈಗ ಕೂಡ ಬೇರೆ ಪ್ರಯೋಜನಗಳನ್ನು ಪಡೆಯುವಂತೆ ದಾರಿಯನ್ನು ತೆರೆಯಿತು. ಉದಾಹರಣೆಗೆ, ನಾವು ಪಾಪಿಗಳಾಗಿದ್ದೇವಾದರೂ, ಪಾಪಕ್ಷಮೆಯ ಮೂಲಕ ಯೇಸುವಿನ ಯಜ್ಞವು ನಾವು ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರುವಂತೆ ಮಾಡುತ್ತದೆ. ಮೋಶೆಯ ಧರ್ಮಶಾಸ್ತ್ರವು ಅಗತ್ಯಪಡಿಸಿದ ಪ್ರಾಣಿಯಜ್ಞಗಳಿಂದ ಇಸ್ರಾಯೇಲ್ಯರಿಗೆ ದೊರೆತ ಯಾವುದೇ ಪಾಪಕ್ಷಮೆಗಿಂತ ಇದು ಎಷ್ಟೋ ಶ್ರೇಷ್ಠವಾಗಿದೆ. (ಅ. ಕೃತ್ಯಗಳು 13:​38, 39; ಇಬ್ರಿಯ 9:​13, 14; 10:22) ಆದರೆ ಇಂತಹ ಕ್ಷಮಾಪಣೆ ನಮಗೆ ದೊರೆಯಬೇಕಾದರೆ, ನಮಗೆ ಕ್ರಿಸ್ತನ ಯಜ್ಞವು ಎಷ್ಟು ಆವಶ್ಯಕವೆಂಬುದನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳುವುದು ಅಗತ್ಯ: “ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ. ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.”​—⁠1 ಯೋಹಾನ 1:8, 9.

12. ದೇವರ ಮುಂದೆ ಒಳ್ಳೆಯ ಮನಸ್ಸಾಕ್ಷಿಯನ್ನು ಪಡೆಯುವುದರಲ್ಲಿ ನೀರಿನ ನಿಮಜ್ಜನವು ಏಕೆ ಪ್ರಾಮುಖ್ಯ?

12 ಪಾಪಿಗಳು ಕ್ರಿಸ್ತನಲ್ಲಿ ಮತ್ತು ಅವನ ಯಜ್ಞದಲ್ಲಿ ನಂಬಿಕೆಯನ್ನು ಹೇಗೆ ವ್ಯಕ್ತಪಡಿಸಬಲ್ಲರು? ಪ್ರಥಮ ಶತಮಾನದಲ್ಲಿ ಜನರು ವಿಶ್ವಾಸಿಗಳಾದಾಗ, ಅವರು ಅದನ್ನು ಬಹಿರಂಗವಾಗಿ ತೋರಿಸಿಕೊಟ್ಟರು. ಹೇಗೆ? ಅವರು ದೀಕ್ಷಾಸ್ನಾನ ಹೊಂದಿದರು. ಅದೇಕೆ? ತನ್ನ ಶಿಷ್ಯರೆಲ್ಲರೂ ದೀಕ್ಷಾಸ್ನಾನ ಹೊಂದಬೇಕೆಂದು ಯೇಸು ಆಜ್ಞಾಪಿಸಿದ್ದರಿಂದಲೇ. (ಮತ್ತಾಯ 28:19, 20: ಅ. ಕೃತ್ಯಗಳು 8:12; 18:⁠8) ಯೆಹೋವನು ಯೇಸುವಿನ ಮೂಲಕ ಮಾಡಿದ ಈ ಪ್ರೀತಿಯ ಏರ್ಪಾಡಿಗಾಗಿ ಒಬ್ಬನ ಹೃದಯವು ನಿಜವಾಗಿಯೂ ಪ್ರಚೋದಿಸಲ್ಪಡುವುದಾದರೆ, ಅವನು ಕ್ರಿಯೆಗೈಯುವುದರಿಂದ ಹಿಂಜರಿಯನು. ಅವನು ತನ್ನ ಜೀವನದಲ್ಲಿ ಬೇಕಾಗಿರುವ ಯಾವುದೇ ಬದಲಾವಣೆಗಳನ್ನು ಮಾಡಿ, ಪ್ರಾರ್ಥನೆಯಲ್ಲಿ ತನ್ನನ್ನು ದೇವರಿಗೆ ಸಮರ್ಪಿಸಿಕೊಂಡು, ನೀರಿನ ನಿಮಜ್ಜನದ ಮೂಲಕ ಆ ಸಮರ್ಪಣೆಯನ್ನು ಸೂಚಿಸುವನು. ಅವನು ತನ್ನ ನಂಬಿಕೆಯನ್ನು ಈ ರೀತಿಯಲ್ಲಿ ತೋರಿಸಿಯೇ, “ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿ”ಕೊಳ್ಳುತ್ತಾನೆ.​—⁠1 ಪೇತ್ರ 3:21.

13. ನಾವು ಪಾಪಮಾಡಿದ್ದೇವೆಂದು ತಿಳಿಯುವಲ್ಲಿ ನಾವೇನು ಮಾಡಬೇಕು, ಮತ್ತು ಏಕೆ?

13 ಇದನ್ನು ಮಾಡಿದ ಬಳಿಕವೂ ಪಾಪಪ್ರವೃತ್ತಿಗಳು ತೋರಿಬರುತ್ತವೆ ನಿಶ್ಚಯ. ಆಗೇನು? ಅಪೊಸ್ತಲ ಯೋಹಾನನು ಹೇಳಿದ್ದು: “ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ.” (1 ಯೋಹಾನ 2:1, 2) ಅಂದರೆ, ನಾವು ಯಾವುದೇ ಪಾಪವನ್ನು ಮಾಡುವುದಾದರೂ, ದೇವರಲ್ಲಿ ಕ್ಷಮೆಯನ್ನು ಯಾಚಿಸುವಲ್ಲಿ, ಎಲ್ಲವೂ ಕ್ಷಮಿಸಲ್ಪಡುವುದೆಂದು ಇದರ ಅರ್ಥವೊ? ಹಾಗಿರಬೇಕೆಂದಿಲ್ಲ. ನಿಜ ಪಶ್ಚಾತ್ತಾಪವೇ ಕ್ಷಮೆಗೆ ಕೀಲಿ ಕೈ. ಕ್ರೈಸ್ತ ಸಭೆಯಲ್ಲಿರುವ ಪ್ರಾಯಸ್ಥರು ಹಾಗೂ ಹೆಚ್ಚು ಅನುಭವಸ್ಥರಿಂದಲೂ ಸಹಾಯವು ಬೇಕಾದೀತು. ನಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡು, ಅದಕ್ಕೆ ಯಥಾರ್ಥವಾದ ಪಶ್ಚಾತ್ತಾಪವನ್ನು ತೋರಿಸಬೇಕು. ಆಗ ಅದನ್ನು ಪುನಃ ಮಾಡುವುದರಿಂದ ದೂರವಿರಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ನಾವು ಮಾಡುವೆವು. (ಅ. ಕೃತ್ಯಗಳು 3:19; ಯಾಕೋಬ 5:​13-16) ನಾವು ಹೀಗೆ ಮಾಡುವಲ್ಲಿ, ಯೇಸುವಿನ ಸಹಾಯವನ್ನು ಮತ್ತು ಯೆಹೋವನ ಅನುಗ್ರಹವನ್ನು ಪುನಃ ಪಡೆಯುವ ಆಶ್ವಾಸನೆ ನಮಗಿರಬಲ್ಲದು.

14. (ಎ) ಯೇಸುವಿನ ಯಜ್ಞವು ನಮಗೆ ಪ್ರಯೋಜನವನ್ನು ತಂದಿರುವ ಒಂದು ಪ್ರಾಮುಖ್ಯ ವಿಧವನ್ನು ತಿಳಿಸಿರಿ. (ಬಿ) ನಮಗೆ ನಿಜ ನಂಬಿಕೆಯಿರುವಲ್ಲಿ, ನಾವೇನು ಮಾಡುವೆವು?

14 ಯೇಸುವಿನ ಯಜ್ಞವು, ಆದಿಕಾಂಡ 3:15ರಲ್ಲಿ ಹೇಳಿರುವ ಸಂತಾನದ ಉಪಭಾಗವಾದ ‘ಚಿಕ್ಕ ಹಿಂಡಿಗೆ’ ಸ್ವರ್ಗದಲ್ಲಿ ನಿತ್ಯಜೀವವನ್ನು ಪಡೆಯುವ ದಾರಿಯನ್ನು ತೆರೆದಿದೆ. (ಲೂಕ 12:32; ಗಲಾತ್ಯ 3:​26-29) ಅದು ಮಾನವರಲ್ಲಿ ಇನ್ನಿತರ ಕೋಟ್ಯಂತರ ಜನರಿಗೆ ಪರದೈಸ ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನೂ ತೆರೆದಿದೆ. (ಕೀರ್ತನೆ 37:29; ಪ್ರಕಟನೆ 20:​11, 12; 21:​3, 4) ನಿತ್ಯಜೀವವು, ‘ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ದೇವರ ಉಚಿತಾರ್ಥ ವರ’ ಆಗಿದೆ. (ರೋಮಾಪುರ 6:23; ಎಫೆಸ 2:8-10) ನಮಗೆ ಆ ವರದಲ್ಲಿ ನಂಬಿಕೆಯಿರುವಲ್ಲಿ ಮತ್ತು ಅದನ್ನು ಸಾಧ್ಯಮಾಡಿರುವ ವಿಧಕ್ಕೆ ಕೃತಜ್ಞತೆ ಇರುವುದಾದರೆ, ನಾವು ಅದನ್ನು ವ್ಯಕ್ತಪಡಿಸುವೆವು. ತನ್ನ ಚಿತ್ತವನ್ನು ನೆರವೇರಿಸುವುದರಲ್ಲಿ ಯೆಹೋವನು ಯೇಸುವನ್ನು ಎಷ್ಟು ಅದ್ಭುತಕರವಾಗಿ ಉಪಯೋಗಿಸಿದ್ದಾನೆಂದೂ ನಾವು ಯೇಸುವಿನ ಹೆಜ್ಜೆಜಾಡಿನಲ್ಲಿ ಒತ್ತಾಗಿ ನಡೆಯುವುದು ಎಷ್ಟು ಮಹತ್ವದ್ದೆಂದೂ ವಿವೇಚಿಸಿ ತಿಳಿಯುವಲ್ಲಿ, ನಾವು ಕ್ರೈಸ್ತ ಶುಶ್ರೂಷೆಯನ್ನು ನಮ್ಮ ಜೀವನದ ಅತಿ ಪ್ರಾಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿ ಮಾಡುವೆವು. ನಾವು ಇತರರಿಗೆ ದೇವರ ಈ ಉಜ್ವಲ ವರದ ಕುರಿತು ಎಷ್ಟು ನಿಶ್ಚಿತಾಭಿಪ್ರಾಯದಿಂದ ಹೇಳುತ್ತೇವೊ ಅದರಿಂದ ನಮ್ಮ ನಂಬಿಕೆಯು ವ್ಯಕ್ತವಾಗುವುದು.​—⁠ಅ. ಕೃತ್ಯಗಳು 20:24.

15. ಯೇಸು ಕ್ರಿಸ್ತನಲ್ಲಿ ನಂಬಿಕೆಯು ಏಕೀಕರಿಸುವ ಪರಿಣಾಮವನ್ನು ತರುವುದು ಹೇಗೆ?

15 ಇಂತಹ ನಂಬಿಕೆಗೆ ಎಷ್ಟು ಉತ್ತಮವಾದ ಏಕೀಕರಿಸುವ ಪರಿಣಾಮವಿದೆ! ಇದರ ಮುಖಾಂತರ ನಾವು ಯೆಹೋವನ ಕಡೆಗೆ, ಆತನ ಪುತ್ರನ ಕಡೆಗೆ ಮತ್ತು ಕ್ರೈಸ್ತ ಸಭೆಯಲ್ಲಿ ಪರಸ್ಪರವಾಗಿ ಆತ್ಮೀಯ ಸಂಬಂಧಕ್ಕೆ ಸೆಳೆಯಲ್ಪಡುತ್ತೇವೆ. (1 ಯೋಹಾನ 3:​23, 24) ಯೆಹೋವನು ತನ್ನ ಮಗನಿಗೆ, “[ದೇವರ ಹೆಸರನ್ನು ಹೊರತು] ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು . . . ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು” ಎಂಬ ವಿಷಯವು ನಾವು ಹರ್ಷಿಸುವಂತೆ ಮಾಡುತ್ತದೆ.​—⁠ಫಿಲಿಪ್ಪಿ 2:9-11.

ಪುನರ್ವಿಮರ್ಶೆಯ ಚರ್ಚೆ

• ಮೆಸ್ಸೀಯನು ಬಂದಾಗ, ದೇವರ ವಾಕ್ಯವನ್ನು ನಿಜವಾಗಿಯೂ ನಂಬಿದವರಿಗೆ ಅವನ ಗುರುತು ಸ್ಪಷ್ಟವಾಗಿತ್ತೇಕೆ?

• ಯೇಸುವಿನ ಯಜ್ಞಕ್ಕೆ ಕೃತಜ್ಞತೆ ತೋರಿಸಲು ನಾವು ಮಾಡಬೇಕಾದ ಕೆಲವು ವಿಷಯಗಳಾವುವು?

• ಯೇಸುವಿನ ಯಜ್ಞವು ಈಗಾಗಲೇ ಯಾವ ವಿಧಗಳಲ್ಲಿ ನಮಗೆ ಪ್ರಯೋಜನವನ್ನು ತಂದಿದೆ? ನಾವು ಪಾಪಕ್ಷಮೆಗಾಗಿ ಯೆಹೋವನಿಗೆ ಪ್ರಾರ್ಥಿಸುವಾಗ ಇದು ನಮಗೆ ಹೇಗೆ ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 36ರಲ್ಲಿರುವ ಚಿತ್ರ]

ಯೇಸು ತನ್ನ ಹಿಂಬಾಲಕರಿಗೆ, ದೇವರ ಆಜ್ಞೆಗಳನ್ನು ಕೈಕೊಳ್ಳುವಂತೆ ಇತರರಿಗೆ ಕಲಿಸಬೇಕೆಂದು ಹೇಳಿದನು