ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಐಗುಪ್ತದಿಂದ ವಾಗ್ದತ್ತ ದೇಶಕ್ಕೆ

ಐಗುಪ್ತದಿಂದ ವಾಗ್ದತ್ತ ದೇಶಕ್ಕೆ

ಐಗುಪ್ತದಿಂದ ವಾಗ್ದತ್ತ ದೇಶಕ್ಕೆ

ಐಗುಪ್ತದಿಂದ ಇಸ್ರಾಯೇಲ್ಯರ ಬಿಡುಗಡೆಯ ಬಗ್ಗೆ ಎಲ್ಲಾ ಕಡೆಗಳಲ್ಲಿರುವ ಜನರಿಗೆ ತಿಳಿದಿದೆ. ಆದರೆ ಮೋಶೆಯೂ ದೇವಜನರೂ ಕೆಂಪು ಸಮುದ್ರವನ್ನು ದಾಟಿದ ಬಳಿಕ ಅವರಿಗಾಗಿ ಏನು ಕಾದಿತ್ತು? ಅವರು ಯಾವ ದಿಕ್ಕಿನಲ್ಲಿ ಸಾಗಿದರು, ಮತ್ತು ವಾಗ್ದತ್ತ ದೇಶವನ್ನು ಪ್ರವೇಶಿಸಲಿಕ್ಕಾಗಿ ಅವರು ಯೊರ್ದನ್‌ ಹೊಳೆಯನ್ನು ಹೇಗೆ ತಲಪಿದರು?

ಅವರ ಗಮ್ಯಸ್ಥಾನ ಕಾನಾನ್‌ ದೇಶವಾಗಿತ್ತು. ಆದರೂ ಅಲ್ಲಿಗೆ ತಲಪಲು ಮೋಶೆಯು, ಮರಳುತುಂಬಿದ ಕರಾವಳಿ ತೀರದುದ್ದಕ್ಕೂ ಸುಮಾರು 400 ಕಿಲೊಮೀಟರ್‌ ಉದ್ದವಾಗಿದ್ದ, ಅತಿ ಹತ್ತಿರದ ದಾರಿಯನ್ನು ಹಿಡಿಯಲಿಲ್ಲ. ಈ ದಾರಿಯು ಅವರನ್ನು ಶತ್ರು ಕ್ಷೇತ್ರವಾಗಿರುವ ಫಿಲಿಷ್ಟಿಯದ ಮಧ್ಯದಿಂದ ಹೋಗುವಂತೆ ಮಾಡುತ್ತಿರುತ್ತಿತ್ತು. ಅಥವಾ ಅವನು, ಸೀನಾಯಿ ದ್ವೀಪಕಲ್ಪದ ವಿಸ್ತಾರ ಮಧ್ಯಭಾಗದ ಮುಖಾಂತರವೂ ಹೋಗಲಿಲ್ಲ. ಅಲ್ಲಿ ತೀವ್ರವಾದ ತಾಪದಿಂದಾಗಿ ಮರಳು ಮತ್ತು ಸುಣ್ಣಕಲ್ಲಿನ ಪ್ರಸ್ಥಭೂಮಿಯು ಸುಡುತ್ತಿರುತ್ತದೆ. ಅದರ ಬದಲು, ಮೋಶೆಯು ಜನರನ್ನು ದಕ್ಷಿಣ ದಿಕ್ಕಿಗೆ, ಕಿರಿದಾದ ಕರಾವಳಿ ಬೈಲಿನಲ್ಲಿ ನಡೆಸಿದನು. ಅವರು ಮೊದಲನೆಯ ಬಾರಿ ಪಾಳೆಯಹೂಡಿದ್ದು, ಮಾರಾ ಎಂಬ ಸ್ಥಳದಲ್ಲಿ. ಅಲ್ಲಿ ಯೆಹೋವನು ಕಹಿಯಾದ ನೀರನ್ನು ಸಿಹಿಯಾಗಿ ಮಾಡಿದನು. * ಏಲೀಮ್‌ ಎಂಬ ಸ್ಥಳದಿಂದ ಹೊರಟ ನಂತರ, ಜನರು ಆಹಾರದ ವಿಷಯದಲ್ಲಿ ಗುಣಗುಟ್ಟಲಾರಂಭಿಸಿದರು. ಆಗ ದೇವರು ಲಾವಕ್ಕಿಗಳನ್ನು ಕಳುಹಿಸಿದನು ಮತ್ತು ನಂತರ ಮನ್ನವನ್ನು ಕೊಟ್ಟನು. ರೆಫೀದೀಮಿನಲ್ಲಿ, ಜನರು ನೀರಿನ ಬಗ್ಗೆ ಪುನಃ ದೂರಿ, ಮೋಶೆಯೊಂದಿಗೆ ಜಗಳ ಮಾಡಿದರು, ಅವರ ಮೇಲೆ ಆಕ್ರಮಣಮಾಡುತ್ತಿದ್ದ ಅಮಾಲೇಕ್ಯರನ್ನು ಸೋಲಿಸಲಾಯಿತು, ಮತ್ತು ಮೋಶೆಯು ಸಮರ್ಥ ಪುರುಷರಿಂದ ಸಹಾಯವನ್ನು ಪಡೆದುಕೊಳ್ಳುವಂತೆ ಅವನ ಮಾವನು ಉತ್ತೇಜಿಸಿದನು.​—⁠ವಿಮೋ, ಅಧ್ಯಾ. 15-18.

ಅನಂತರ ಮೋಶೆಯು ಇಸ್ರಾಯೇಲ್ಯರನ್ನು ಬೆಟ್ಟಗಳತ್ತ, ದಕ್ಷಿಣದಲ್ಲಿ ಇನ್ನೂ ಮುಂದಕ್ಕೆ ನಡೆಸಿ, ಅವರು ಸೀನಾಯಿ ಬೆಟ್ಟದ ಬಳಿ ಪಾಳೆಯಹೂಡುವಂತೆ ಮಾಡಿದನು. ಅಲ್ಲಿ ದೇವಜನರಿಗೆ ಧರ್ಮಶಾಸ್ತ್ರವನ್ನು ಕೊಡಲಾಯಿತು, ಅವರು ದೇವಗುಡಾರವನ್ನು ಕಟ್ಟಿದರು, ಮತ್ತು ಯಜ್ಞಗಳನ್ನು ಅರ್ಪಿಸಿದರು. ಎರಡನೆಯ ವರ್ಷದಲ್ಲಿ, ಅವರು ಒಂದು “ಘೋರವಾದ ಮಹಾರಣ್ಯದ” ಮಧ್ಯದಿಂದ ಉತ್ತರದಿಕ್ಕಿಗೆ ಹೋದರು. ಕಾದೇಶ್‌ ಪ್ರದೇಶವನ್ನು (ಕಾದೇಶ್‌ಬರ್ನೇಯ [ಕಾದೇಶ್‌ಬರ್ನೇಯ]) ತಲಪಲು ಅವರಿಗೆ 11 ದಿನಗಳು ಹಿಡಿದಿರುವಂತೆ ತೋರುತ್ತದೆ. (ಧರ್ಮೋ 1:​1, 2, 19; 8:15) ಹತ್ತು ಗೂಢಚಾರರು ತಂದೊಪ್ಪಿಸಿದ ನಕಾರಾತ್ಮಕ ವರದಿಯಿಂದ ಭಯಭೀತರಾದ ಕಾರಣ ಆ ಜನರು 38 ವರ್ಷಗಳ ವರೆಗೆ ಅಲೆದಾಡಬೇಕಾಯಿತು. (ಅರಣ್ಯ 13:​1–14:34) ಹೀಗೆ ಅಲೆದಾಡುವಾಗ ಅವರು ತಂಗಿದಂಥ ಸ್ಥಳಗಳಲ್ಲಿ ಅಬ್ರೋನ ಹಾಗೂ ಎಚ್ಯೋನ್‌ಗೆಬೆರ್‌ (ಎಚ್ಯೋನ್ಗೆಬೆರ್‌) ಸೇರಿದ್ದವು, ನಂತರ ಅವರು ಕಾದೇಶ್‌ಗೆ ಹಿಂದಿರುಗಿದರು.​—⁠ಅರಣ್ಯ 33:​33-36.

ಕೊನೆಯಲ್ಲಿ, ಇಸ್ರಾಯೇಲ್‌ ಜನಾಂಗವು ವಾಗ್ದತ್ತ ದೇಶವನ್ನು ಸಮೀಪಿಸುವ ಸಮಯ ಬಂದಾಗ, ಇಸ್ರಾಯೇಲ್ಯರು ನೇರವಾಗಿ ಉತ್ತರದಿಕ್ಕಿನಲ್ಲಿ ಚಲಿಸಲಿಲ್ಲ. ಅವರ ಮಾರ್ಗವು ಅವರನ್ನು ಏದೋಮಿನ ಕೇಂದ್ರಭಾಗದ ಸುತ್ತಲೂ ಕೊಂಡೊಯ್ದು, “ರಾಜಮಾರ್ಗ” ಅಂದರೆ ರಾಜನ ಹೆದ್ದಾರಿಯಿಂದ ಉತ್ತರದಿಕ್ಕಿಗೆ ನಡೆಸಿತು. (ಅರ 21:22; ಧರ್ಮೋ 2:​1-8) ಈ ಹಾದಿಯಲ್ಲಿ, ಒಂದು ಇಡೀ ಜನಾಂಗ, ಮಕ್ಕಳು, ಪ್ರಾಣಿಗಳು, ಮತ್ತು ಗುಡಾರಗಳ ಸಮೇತ ಹೋಗುವುದು ಸುಲಭವಾಗಿರಲಿಲ್ಲ. ಅವರು ಜೆರೆದ್‌ ಮತ್ತು ಆರ್ನೋನ್‌ (ಸುಮಾರು 520 ಮೀಟರ್‌ ಆಳ)ನಂಥ ದುರ್ಗಮವಾದ ಕಮರಿಗಳೊಳಗೆ ಅಂಕುಡೊಂಕಾದ ಮಾರ್ಗಗಳ ಮೂಲಕ ಏರುತಗ್ಗುಳ್ಳ ಪ್ರದೇಶವನ್ನು ಹಾದುಹೋಗಬೇಕಾಗಿತ್ತು.​—⁠ಧರ್ಮೋ 2:​13, 14, 24.

ಕೊನೆಗೆ, ಇಸ್ರಾಯೇಲ್ಯರು ನೆಬೋ ಬೆಟ್ಟವನ್ನು ತಲಪಿದರು. ಮಿರ್ಯಾಮಳು ಕಾದೇಶ್‌ನಲ್ಲಿ ಮತ್ತು ಆರೋನನು ಹೋರ್‌ ಬೆಟ್ಟದಲ್ಲಿ ಈಗಾಗಲೇ ಮರಣಹೊಂದಿದ್ದರು. ಈಗ ಮೋಶೆಯು, ತಾನು ಪ್ರವೇಶಿಸಲು ಬಹಳಷ್ಟು ಅಪೇಕ್ಷಿಸಿದಂಥ ದೇಶವನ್ನು ಇಲ್ಲಿಂದ ನೋಡಿ ಸತ್ತುಹೋದನು. (ಧರ್ಮೋ 32:​48-52; 34:​1-5) ಈಗ, 40 ವರ್ಷಗಳ ಹಿಂದೆ ಆರಂಭವಾದ ಒಂದು ಪ್ರಯಾಣವನ್ನು ಅಂತ್ಯಗೊಳಿಸುತ್ತಾ ಇಸ್ರಾಯೇಲ್‌ ಜನಾಂಗವನ್ನು ವಾಗ್ದತ್ತ ದೇಶಕ್ಕೆ ನಡೆಸುವ ಜವಾಬ್ದಾರಿಯು ಯೆಹೋಶುವನ ಹೆಗಲಿಗೆ ಬಂತು.​—⁠ಯೆಹೋ 1:​1-4.

[ಪಾದಟಿಪ್ಪಣಿ]

^ ಪ್ಯಾರ. 3 ಹೆಚ್ಚಿನ ಪಾಳೆಯಹೂಡುವಿಕೆಗಳ ಸರಿಯಾದ ಸ್ಥಳವು ಅಜ್ಞಾತವಾಗಿದೆ.

[ಪುಟ 8ರಲ್ಲಿರುವ ಚೌಕ]

ಈ ಅವಧಿಯ ಬೈಬಲ್‌ ಪುಸ್ತಕಗಳು:

ಆದಿಕಾಂಡ

ವಿಮೋಚನಕಾಂಡ

ಯಾಜಕಕಾಂಡ

ಅರಣ್ಯಕಾಂಡ

ಧರ್ಮೋಪದೇಶಕಾಂಡ

ಯೋಬ

ಕೀರ್ತನೆ (ಭಾಗಶಃ)

[ಪುಟ 9ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಇಸ್ರಾಯೇಲ್ಯರು ನಡೆದು ಹೋದ ಮಾರ್ಗ

ಇಸ್ರಾಯೇಲ್ಯರು ನಡೆದು ಹೋದ ಮಾರ್ಗ

A7 ಈಜಿಪ್ಟ್‌

A5 ರಮ್ಸೇಸ್‌?

B5 ಸುಕ್ಕೋತ್‌?

C5 ಏತಾಮ್‌?

C5 ಪೀಹಹೀರೋತ್‌

D6 ಮಾರಾ

D6 ಏಲೀಮ್‌

E6 ಸೀನ್‌ ಅರಣ್ಯ

E7 ದೊಪ್ಕ

F8 ರೆಫೀದೀಮ್‌

F8 ಸೀನಾಯಿ ಬೆಟ್ಟ (ಹೋರೇಬ್‌)

F8 ಸೀನಾಯಿ ಅರಣ್ಯ

F7 ಕಿಬ್ರೋತ್‌ಹತಾವಾ

G7 ಹಚೇರೋತ್‌

G6 ರಿಮ್ಮೋನ್‌ಪೆರೆಚ್‌

G5 ರಿಸ್ಸ

G3 ಕಾದೇಶ್‌

G3 ಬೆನೇಯಾಕಾನ್‌

G5 ಹೋರ್ಹಗಿದ್ಗಾದ್‌

H5 ಯೊಟ್ಬಾತ

H5 ಅಬ್ರೋನ

H6 ಎಚ್ಯೋನ್ಗೆಬೆರ್‌

G3 ಕಾದೇಶ್‌

G3 ಚಿನ್‌ ಅರಣ್ಯ

H3 ಹೋರ್‌ ಬೆಟ್ಟ

H3 ಚಲ್ಮೋನ

I3 ಪೂನೋನ್‌

I3 ಇಯ್ಯೇ ಅಬಾರೀಮ್‌

I2 ಮೋವಾಬ್‌

I1 ದೀಬೋನ್‌

I1 ಅಲ್ಮೋನ್‌ ದಿಬ್ಲಾತಯಿಮ್‌

H1 ಯೆರಿಕೋ

[ಬೇರೆ ಸ್ಥಳಗಳು]

A3 ಗೋಷೆನ್‌

A4 ಓನ್‌

A5 ಮೋಫ್‌ (ನೋಫ್‌)

B3 ಚೋವನ್‌

B3 ತಹಪನೇಸ್‌

C5 ಮಿಗ್ದೋಲ್‌

D3 ಶೂರ್‌

D5 ಏತಾಮ್‌ ಅರಣ್ಯ

F5 ಪಾರಾನ್‌ ಅರಣ್ಯ

G1 ಫಿಲಿಷ್ಟಿಯ

G1 ಅಷ್ಡೋದ್‌

G2 ಗಾಜಾ

G2 ಬೇರ್ಷೆಬ

G3 ಅಚ್ಮೋನ್‌

G3 ದಕ್ಷಿಣಪ್ರಾಂತ

H1 ಯೆರೂಸಲೇಮ್‌

H1 ಹೆಬ್ರೋನ್‌ (ಕಿರ್ಯತರ್ಬ)

H2 ಅರಾದ್‌ (ಕಾನಾನ್ಯ)

H4 ಸೇಯೀರ್‌

H4 ಎದೋಮ್‌

I7 ಮಿದ್ಯಾನ್‌

ಮುಖ್ಯ ರಸ್ತೆಗಳು

ಫಿಲಿಷ್ಟಿಯರ ದೇಶಕ್ಕೆ ನಡೆಸುವ ಮಾರ್ಗ

ಶೂರಿಗೆ ನಡೆಸುವ ಮಾರ್ಗ

I4 ರಾಜಮಾರ್ಗ

ವರ್ತಕ ತಂಡಗಳ ಮಾರ್ಗ

ಎಲ್‌ ಹಾಜ್‌ ಮಾರ್ಗ

[ಪರ್ವತಗಳು]

F8 ಸೀನಾಯಿ ಬೆಟ್ಟ (ಹೋರೇಬ್‌)

H3 ಹೋರ್‌ ಬೆಟ್ಟ

I1 ನೆಬೋ ಬೆಟ್ಟ

[ಜಲಾಶಯಗಳು]

E2 ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

D7/G7 ಕೆಂಪು ಸಮುದ್ರ

I1 ಲವಣ ಸಮುದ್ರ

[ನದಿಗಳು ಮತ್ತು ಹೊಳೆಗಳು]

A6 ನೈಲ್‌ ನದಿ

F3 ಐಗುಪ್ತದ ತೊ. .

I2 ಆರ್ನೋನ್‌

I3 ಜೆರೆದ್‌

[ಪುಟ 8ರಲ್ಲಿರುವ ಚಿತ್ರ]

ಸೀನಾಯಿ ದ್ವೀಪಕಲ್ಪವನ್ನು ವರ್ತಕರ ತಂಡಗಳು ದಾಟುತ್ತಿದ್ದವು

[ಪುಟ 8ರಲ್ಲಿರುವ ಚಿತ್ರ]

ಇಸ್ರಾಯೇಲ್‌ ಜನಾಂಗವು ಸೀನಾಯಿ ಪರ್ವತದ ಮುಂದೆ ಪಾಳೆಯಹೂಡಿತು

[ಪುಟ 9ರಲ್ಲಿರುವ ಚಿತ್ರ]

ಕಾದೇಶಿನಲ್ಲಿ ಇಲ್ಲವೆ ಅದರ ಬಳಿಯಲ್ಲಿದ್ದ ತೊರೆಗಳಿಂದ ನೀರು ಲಭ್ಯವಿತ್ತು

[ಪುಟ 9ರಲ್ಲಿರುವ ಚಿತ್ರ]

ಇಡೀ ಇಸ್ರಾಯೇಲ್‌ ಜನಾಂಗವು ಆರ್ನೋನ್‌ ತೊರೆ ಕಣಿವೆಯನ್ನು ಹಾದುಹೋಗಬೇಕಾಗಿತ್ತು