ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ

ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ

ಕ್ರೈಸ್ತತ್ವವು ವಿದೇಶಗಳಿಗೆ ಹಬ್ಬುತ್ತದೆ

ಬೇಥಾನ್ಯದ ಹತ್ತಿರದಲ್ಲಿರುವ ಎಣ್ಣೇಮರಗಳ ಗುಡ್ಡದ ಮೇಲೆ ಯೇಸು, ಲೋಕದ ಇತಿಹಾಸವನ್ನೇ ರೂಪಿಸಲಿದ್ದ ಒಂದು ಕೆಲಸವನ್ನು ನೇಮಿಸಿದನು. ಆ ಕೆಲಸವು ಪಶ್ಚಿಮದಿಕ್ಕಿನಲ್ಲಿ ಸುಮಾರು ಮೂರು ಕಿಲೊಮೀಟರ್‌ ದೂರದಲ್ಲಿ, ಅಂದರೆ ಯೆರೂಸಲೇಮಿನಲ್ಲಿ ಆರಂಭವಾಗಲಿತ್ತು. ಆ ಸಂದೇಶವು ಹತ್ತಿರದಲ್ಲೇ ಇದ್ದ ಯೂದಾಯ ಹಾಗೂ ಸಮಾರ್ಯಕ್ಕೆ, ಮತ್ತು ಕೊನೆಯಲ್ಲಿ “ಭೂಲೋಕದ ಕಟ್ಟಕಡೆಯ ವರೆಗೂ” ತಲಪಲಿತ್ತು.​—⁠ಅಕೃ 1:​4, 8, 12.

ಯೇಸು ಆ ಮಾತುಗಳನ್ನು ಹೇಳಿ ಸ್ವಲ್ಪ ಸಮಯ ಕಳೆದ ಬಳಿಕ ಪಂಚಾಶತ್ತಮದ ಹಬ್ಬವು, ಕೆಳಗೆ ಕೊಡಲ್ಪಟ್ಟಿರುವ ಭೂಪಟದಲ್ಲಿ ಸೂಚಿಸಲ್ಪಟ್ಟಿರುವ ಪ್ರದೇಶಗಳಿಂದ ಮತ್ತು ರೋಮನ್‌ ಸಾಮ್ರಾಜ್ಯದ ಎಲ್ಲೆಡೆಗಳಿಂದ ಯೆಹೂದ್ಯರನ್ನೂ ಯೆಹೂದಿ ಮತಾವಲಂಬಿಗಳನ್ನೂ ಯೆರೂಸಲೇಮಿನತ್ತ ಸೆಳೆಯಿತು. ಆ ದಿನದಂದು ಅಪೊಸ್ತಲ ಪೇತ್ರನು ಅವರಿಗೆ ಸಾರಿದ್ದು, ಕ್ರೈಸ್ತತ್ವದ ತ್ವರಿತವಾದ ಹಬ್ಬುವಿಕೆಗಾಗಿ ಮಾರ್ಗವನ್ನು ತೆರೆಯಿತು.​—⁠ಅಕೃ 2:​9-11.

ಆದರೆ ಯೆರೂಸಲೇಮಿನಲ್ಲಿ ಆರಂಭವಾದ ಹಿಂಸೆಯು ಬೇಗನೆ ಕ್ರಿಸ್ತನ ಹಿಂಬಾಲಕರನ್ನು ಎಲ್ಲಾ ಕಡೆಗೂ ಚದರಿಸಿಬಿಟ್ಟಿತು. ಸಮಾರ್ಯದವರು ಸುವಾರ್ತೆಯನ್ನು ಕೇಳಿ ಅಂಗೀಕರಿಸುವಂತೆ ಪೇತ್ರಯೋಹಾನರು ಸಹಾಯಮಾಡಿದರು. (ಅಕೃ 8:​1, 4, 14-16) “ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ” ಮರುಭೂಮಿಯ ದಾರಿಯಲ್ಲಿ ಫಿಲಿಪ್ಪನು ಒಬ್ಬ ಐಥಿಯೋಪ್ಯ ವ್ಯಕ್ತಿಗೆ ಸಾಕ್ಷಿಯನ್ನು ಕೊಟ್ಟ ನಂತರ, ಕ್ರೈಸ್ತತ್ವವು ಆಫ್ರಿಕಕ್ಕೂ ಹಬ್ಬಿತು. (ಅಕೃ 8:​26-39) ಸುಮಾರು ಅದೇ ಸಮಯಕ್ಕೆ, ಈ ಸಂದೇಶವು ಸಾರೋನ (ಶಾರೋನ್‌) ಪ್ರಾಂತದಲ್ಲಿರುವ ಲುದ್ದದಲ್ಲಿ ಮತ್ತು ಯೊಪ್ಪದ ರೇವು ಪಟ್ಟಣದಲ್ಲೂ ಫಲಿತಾಂಶಗಳನ್ನು ತಂದಿತು. (ಅಕೃ 9:​35, 42) ಅಲ್ಲಿಂದ ಪೇತ್ರನು ಕೈಸರೈಯಕ್ಕೆ ಹೋಗಿ, ರೋಮನ್‌ ಅಧಿಕಾರಿಯಾದ ಕೊರ್ನೇಲ್ಯನು ಮತ್ತು ಅವನ ಬಂಧುಬಳಗದವರು ಆತ್ಮಾಭಿಷಿಕ್ತ ಕ್ರೈಸ್ತರಾಗುವಂತೆ ಅವರಿಗೆ ನೆರವು ನೀಡಿದನು.​—⁠ಅಕೃ 10:​1-48.

ಹಿಂದೆ ಒಬ್ಬ ಹಿಂಸಕನಾಗಿದ್ದ ಪೌಲನು, ಅನ್ಯಜನರಿಗೆ ಅಪೊಸ್ತಲನಾದನು. ಅವನು ಮೂರು ಮಿಷನೆರಿ ಸಂಚಾರಗಳ ಸಮಯದಲ್ಲಿ ಭೂಮಾರ್ಗವಾಗಿಯೂ ಹಡಗಿನಲ್ಲೂ ಪ್ರಯಾಣಿಸಿದನು ಮತ್ತು ರೋಮಿಗೆ ಸಮುದ್ರಯಾನವನ್ನೂ ಮಾಡಿದನು. ಈ ಅಪೊಸ್ತಲನು ಮತ್ತು ಇತರರು ಸುವಾರ್ತೆಯನ್ನು ರೋಮನ್‌ ಸಾಮ್ರಾಜ್ಯದ ಅಸಂಖ್ಯಾತ ಕೇಂದ್ರಗಳಿಗೆ ಹಬ್ಬಿಸಿದರು. ಪೌಲನು ಸ್ಪೇನಿಗೆ ತಲಪಲು ಬಯಸಿದನು, (ಪುಟ 2ನ್ನು ನೋಡಿ.) ಮತ್ತು ಪೇತ್ರನು ಬಾಬೆಲಿನಷ್ಟು ದೂರದ ಪ್ರಾಚ್ಯ ದೇಶದಲ್ಲಿ ಸೇವೆಸಲ್ಲಿಸಿದನು. (1ಪೇತ್ರ 5:13) ನಿಜವಾಗಿಯೂ ಕ್ರಿಸ್ತನ ಸಕ್ರಿಯ ನಾಯಕತ್ವದ ಕೆಳಗೆ, ಅವನ ಹಿಂಬಾಲಕರು ಕ್ರೈಸ್ತತ್ವವನ್ನು ವಿದೇಶಗಳಿಗೂ ಹಬ್ಬಿಸಿದರು. ಸಾ.ಶ. 60/61ರೊಳಗೆ, ‘ಸುವಾರ್ತೆಯು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿತ್ತು.’ (ಕೊಲೊ 1:​6, 23) ಅಂದಿನಿಂದ, ಈ ಸುವಾರ್ತೆಯು ಅಕ್ಷರಶಃವಾಗಿ ‘ಭೂಮಿಯ ಕಟ್ಟಕಡೆಯ ವರೆಗೂ’ ತಲಪಿದೆ.

[ಪುಟ 32ರಲ್ಲಿರುವ ಚೌಕ]

ಅವರು ಎಲ್ಲೆಲ್ಲಿಂದ ಬಂದರು?

ಸಾ.ಶ. 33ರ ಪಂಚಾಶತ್ತಮದಂದು ಸುವಾರ್ತೆಯನ್ನು ಕೇಳಿಸಿಕೊಂಡ ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ, ಪಾರ್ಥಿಯ, ಮೇದ್ಯ, ಏಲಾಮ್‌, ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, ಫ್ರುಗ್ಯ, ಪಂಫುಲ್ಯ, ಐಗುಪ್ತ, ಲಿಬ್ಯ, ರೋಮಾಪುರ, ಕ್ರೇತ, ಅರಬ್ಬೀದೇಶಗಳಿಂದ ಬಂದವರಾಗಿದ್ದರು. ಅನೇಕರು ದೀಕ್ಷಾಸ್ನಾನಹೊಂದಿದರು. ಅವರು ತಮ್ಮ ಸ್ವದೇಶಕ್ಕೆ ಹಿಂದಿರುಗಿದಾಗ ಏನು ಮಾಡಿದರೆಂದು ನೆನಸುತ್ತೀರಿ?

[ಪುಟ 33ರಲ್ಲಿರುವ ಚೌಕ]

ಏಳು ಸಭೆಗಳು

ಯೇಸು ಏಷ್ಯಾ ಮೈನರ್‌ನಲ್ಲಿದ್ದ ಏಳು ಸಭೆಗಳಿಗೆ ಸಂದೇಶಗಳನ್ನು ಕಳುಹಿಸಿದನು. ಅವುಗಳು ಎಲ್ಲಿದ್ದವೆಂಬುದನ್ನು ಗಮನಿಸಿರಿ: ಕರಾವಳಿಯಲ್ಲಿ ಎಫೆಸ ಮತ್ತು ಸ್ಮುರ್ನ; ಒಳನಾಡಿನಲ್ಲಿ ಪೆರ್ಗಮ, ಫಿಲದೆಲ್ಫಿಯ ಮತ್ತು ಲವೊದಿಕೀಯ; ನದಿತೀರದಲ್ಲಿ ಥುವತೈರ; ಮತ್ತು ಮುಖ್ಯವಾದ ವ್ಯಾಪಾರಿ ಮಾರ್ಗದಲ್ಲಿ ಸಾರ್ದಿಸ್‌. ಈ ನಗರಗಳ ಅಗೆದುತೆಗೆಯಲಾಗಿರುವ ಅವಶೇಷಗಳು, ಬೈಬಲು ನಿಜವಾದ ಸ್ಥಳಗಳನ್ನು ಸೂಚಿಸುತ್ತದೆಂಬುದನ್ನು ದೃಢೀಕರಿಸುತ್ತದೆ.

[ಪುಟ 32ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕ್ರೈಸ್ತತ್ವ ಹರಡಿತು

ಸುವಾರ್ತೆಯು ತ್ವರಿತವಾಗಿ ತಲಪಿದಂಥ ಕ್ಷೇತ್ರಗಳು

B1 ಇಲ್ಲುರಿಕ

B1 ಇಟಲಿ

B1 ರೋಮ್‌

C1 ಮಕೆದೋನ್ಯ

C2 ಗ್ರೀಸ್‌

C2 ಅಥೆನ್ಸ್‌

C2 ಕ್ರೇತ

C3 ಕುರೇನೆ

C3 ಲಿಬ್ಯ

D1 ಬಿಥೂನ್ಯ

D2 ಗಲಾತ್ಯ

D2 ಏಷ್ಯಾ

D2 ಫ್ರುಗ್ಯ

D2 ಪಂಫುಲ್ಯ

D2 ಕುಪ್ರ

D3 ಈಜಿಪ್ಟ್‌

D4 ಇಥಿಯೋಪಿಯ

E1 ಪೊಂತ

E2 ಕಪ್ಪದೋಕ್ಯ

E2 ಕಿಲಿಕ್ಯ

E2 ಮೆಸೊಪೊತಾಮ್ಯ

E2 ಸಿರಿಯ

E3 ಸಮಾರ್ಯ

E3 ಯೆರೂಸಲೇಮ್‌

E3 ಯೂದಾಯ

F2 ಮೇದ್ಯ

F3 ಬಾಬೆಲ್‌

F3 ಏಲಾಮ್‌

F4 ಅರೇಬಿಯ

G2 ಪಾರ್ಥಿಯ

[ಜಲಾಶಯಗಳು]

C2 ಮೆಡಿಟರೇನಿಯನ್‌ ಸಮುದ್ರ

D1 ಕಪ್ಪು ಸಮುದ್ರ

E4 ಕೆಂಪು ಸಮುದ್ರ

F3 ಪರ್ಷಿಯನ್‌ ಖಾರಿ

[ಪುಟ 32, 33ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಪೌಲನ ಪ್ರಯಾಣಗಳು

ಮೊದಲ ಮಿಷನೆರಿ ಸಂಚಾರ (ಅಕೃ 13:​1–14:⁠28)

H3 ಅಂತಿಯೋಕ್ಯ (ಸಿರಿಯ)

H3 ಸೆಲ್ಯೂಕ್ಯ

G4 ಸೈಪ್ರಸ್‌

G3 ಸಲಮೀಸ್‌

G4 ಪಾಫೋಸ್‌

G3 ಪಂಫುಲ್ಯ

F3 ಪೆರ್ಗೆ

F3 ಪಿಸಿದ್ಯ

F2 ಅಂತಿಯೋಕ್ಯ (ಪಿಸಿದ್ಯ)

G2 ಇಕೋನ್ಯ

G2 ಲುಕವೋನ್ಯ

G2 ಲುಸ್ತ್ರ

G3 ದೆರ್ಬೆ

G2 ಲುಸ್ತ್ರ

G2 ಇಕೋನ್ಯ

F2 ಅಂತಿಯೋಕ್ಯ (ಪಿಸಿದ್ಯ)

F3 ಪಿಸಿದ್ಯ

G3 ಪಂಫುಲ್ಯ

F3 ಪೆರ್ಗೆ

F3 ಅತಾಲ್ಯ

H3 ಅಂತಿಯೋಕ್ಯ (ಸಿರಿಯ)

ಎರಡನೆಯ ಮಿಷನೆರಿ ಸಂಚಾರ (ಅಕೃ 15:​36–18:⁠22)

H3 ಅಂತಿಯೋಕ್ಯ (ಸಿರಿಯ)

H3 ಸಿರಿಯ

H3 ಕಿಲಿಕ್ಯ

H3 ತಾರ್ಸ

G3 ದೆರ್ಬೆ

G2 ಲುಸ್ತ್ರ

G2 ಇಕೋನ್ಯ

F2 ಅಂತಿಯೋಕ್ಯ (ಪಿಸಿದ್ಯ)

F2 ಫ್ರುಗ್ಯ

G2 ಗಲಾತ್ಯ

E2 ಮೂಸ್ಯ

E2 ತ್ರೋವ

E1 ಸಮೊಥ್ರಾಕೆ

D1 ನೆಯಾಪೊಲಿ

D1 ಫಿಲಿಪ್ಪಿ

C1 ಮಕೆದೋನ್ಯ

D1 ಅಂಫಿಪೊಲಿ

D1 ಥೆಸಲೊನೀಕ

D1 ಬೆರೋಯ

C2 ಗ್ರೀಸ್‌

D2 ಅಥೆನ್ಸ್‌

D2 ಕೊರಿಂಥ

D3 ಅಖಾಯ

E2 ಎಫೆಸ

G4 ಕೈಸರೈಯ

H5 ಯೆರೂಸಲೇಮ್‌

H3 ಅಂತಿಯೋಕ್ಯ (ಸಿರಿಯ)

ಮೂರನೆಯ ಮಿಷನೆರಿ ಸಂಚಾರ (ಅಕೃ 18:​22–21:⁠19)

H3 ಸಿರಿಯ

H3 ಅಂತಿಯೋಕ್ಯ (ಸಿರಿಯ)

G2 ಗಲಾತ್ಯ

F2 ಫ್ರುಗ್ಯ

H3 ಕಿಲಿಕ್ಯ

H3 ತಾರ್ಸ

G3 ದೆರ್ಬೆ

G2 ಲುಸ್ತ್ರ

G2 ಇಕೋನ್ಯ

F2 ಅಂತಿಯೋಕ್ಯ (ಪಿಸಿದ್ಯ)

E2 ಎಫೆಸ

E2 ಏಷ್ಯಾ

E2 ತ್ರೋವ

D1 ಫಿಲಿಪ್ಪಿ

C1 ಮಕೆದೋನ್ಯ

D1 ಅಂಫಿಪೊಲಿ

D1 ಥೆಸಲೊನೀಕ

D1 ಬೆರೋಯ

C2 ಗ್ರೀಸ್‌

D2 ಅಥೆನ್ಸ್‌

D2 ಕೊರಿಂಥ

D1 ಬೆರೋಯ

D1 ಥೆಸಲೊನೀಕ

D1 ಅಂಫಿಪೊಲಿ

D1 ಫಿಲಿಪ್ಪಿ

E2 ತ್ರೋವ

E2 ಅಸ್ಸೊಸ್‌

E2 ಮಿತಿಲೇನೆ

E2 ಖೀಯೊಸ್‌

E2 ಸಾಮೊಸ್‌

E3 ಮಿಲೇತ

E3 ಕೋಸ್‌

E3 ರೋದ

F3 ಪತರ

H4 ತೂರ್‌

H4 ಪ್ತೊಲೆಮಾಯ

G4 ಕೈಸರೈಯ

H5 ಯೆರೂಸಲೇಮ್‌

ರೋಮಿಗೆ ಸಂಚಾರ (ಅಕೃ 23:​11–28:⁠31)

H5 ಯೆರೂಸಲೇಮ್‌

G4 ಕೈಸರೈಯ

H4 ಸೀದೋನ್‌

F3 ಮುರ

F3 ಲುಕೀಯ

E3 ಕ್ನೀದ

D3 ಕ್ರೇತ

D4 ಕೌಡ

A3 ಮಾಲ್ಟಾ

A3 ಸಿಸಿಲಿ

A3 ಸುರಕೂಸ್‌

A1 ಇಟಲಿ

B2 ರೇಗಿಯ

A1 ಪೊತಿಯೋಲ

A1 ರೋಮ್‌

ಮುಖ್ಯ ರಸ್ತೆಗಳು (ಪ್ರಕಾಶನ ನೋಡಿ)

[ಏಳು ಸಭೆಗಳು]

E2 ಪೆರ್ಗಮ

E2 ಥುವತೈರ

E2 ಸಾರ್ದಿಸ್‌

E2 ಸ್ಮುರ್ನ

E2 ಎಫೆಸ

F2 ಫಿಲದೆಲ್ಫಿಯ

F2 ಲವೊದಿಕೀಯ

[ಬೇರೆ ಸ್ಥಳಗಳು]

E3 ಪತ್ಮೋಸ್‌

F2 ಕೊಲೊಸ್ಸೆ

F5 ಅಲೆಗ್ಸಾಂಡ್ರಿಯ

F5 ಈಜಿಪ್ಟ್‌

G1 ಬಿಥೂನ್ಯ

G5 ಯೊಪ್ಪ

G5 ಲುದ್ದ

G5 ಗಾಜಾ

H1 ಪೊಂತ

H2 ಕಪ್ಪದೋಕ್ಯ

H4 ದಮಸ್ಕ

H4 ಪೆಲ್ಲಾ

[ಜಲಾಶಯಗಳು]

D4 ಮೆಡಿಟರೇನಿಯನ್‌ ಸಮುದ್ರ

[ಪುಟ 33ರಲ್ಲಿರುವ ಚಿತ್ರ]

ಪೌಲನು ಎಫೆಸದಿಂದ ಬಂದ ಹಿರಿಯರನ್ನು ಭೇಟಿಯಾದ ನಗರವಾದ ಮಿಲೇತದಲ್ಲಿನ ನಾಟಕಮಂದಿರ

[ಪುಟ 33ರಲ್ಲಿರುವ ಚಿತ್ರ]

ಪೆರ್ಗಮದಲ್ಲಿ ಸ್ಯೂಸ್‌ ದೇವತೆಯ ಬಲಿಪೀಠ. ಈ ನಗರದಲ್ಲಿದ್ದ ಕ್ರೈಸ್ತರು “ಸೈತಾನನ ಸಿಂಹಾಸನ”ವಿದ್ದಲ್ಲಿ ವಾಸಿಸುತ್ತಿದ್ದರು​—⁠ಪ್ರಕ 2:⁠13