ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾವೀದ ಮತ್ತು ಸೊಲೊಮೋನನ ದಿನಗಳಲ್ಲಿನ ಇಸ್ರಾಯೇಲ್‌

ದಾವೀದ ಮತ್ತು ಸೊಲೊಮೋನನ ದಿನಗಳಲ್ಲಿನ ಇಸ್ರಾಯೇಲ್‌

ದಾವೀದ ಮತ್ತು ಸೊಲೊಮೋನನ ದಿನಗಳಲ್ಲಿನ ಇಸ್ರಾಯೇಲ್‌

ದೇವರು ಅಬ್ರಹಾಮನ ಸಂತತಿಗೆ, ‘ಐಗುಪ್ತದೇಶದ ನದಿಯಿಂದ ಯೂಫ್ರೇಟೀಸ್‌ ಮಹಾನದಿಯ ವರೆಗಿನ’ ದೇಶವನ್ನು ಕೊಡುವುದಾಗಿ ವಾಗ್ದಾನಮಾಡಿದ್ದನು. (ಆದಿ 15:18; ವಿಮೋ 23:31; ಧರ್ಮೋ 1:​7, 8; 11:24) ಯೆಹೋಶುವನು ಕಾನಾನನ್ನು ಪ್ರವೇಶಿಸಿದ ನಂತರ, ವಾಗ್ದತ್ತ ದೇಶವು ಆ ಸರಹದ್ದುಗಳ ವರೆಗೆ ವಿಸ್ತರಿಸಿ ತಲಪುವಷ್ಟರಲ್ಲಿ ಸುಮಾರು ನಾಲ್ಕು ಶತಮಾನಗಳು ದಾಟಿದವು.

ರಾಜನಾದ ದಾವೀದನು ಚೋಬ ಎಂಬ ಅರಾಮ್ಯ ರಾಜ್ಯವನ್ನು ಸೋಲಿಸಿದನು. ಆ ರಾಜ್ಯವು ಉತ್ತರ ಅರಾಮದಲ್ಲಿ ಯೂಫ್ರೇಟೀಸ್‌ ನದಿಯ ವರೆಗೂ ತಲಪುತ್ತಿತ್ತು. * ದಕ್ಷಿಣದಿಕ್ಕಿನಲ್ಲಿ, ದಾವೀದನಿಗೆ ಫಿಲಿಷ್ಟಿಯರ ವಿರುದ್ಧ ಸಿಕ್ಕಿದ ಜಯದಿಂದಾಗಿ ಅವನು ತನ್ನ ರಾಜ್ಯವನ್ನು ಐಗುಪ್ತದ ಗಡಿಯ ವರೆಗೂ ವಿಸ್ತರಿಸಲು ಸಾಧ್ಯವಾಯಿತು.​—⁠2ಸಮು 8:3; 1ಪೂರ್ವ 18:​1-3; 20:​4-8; 2ಪೂರ್ವ 9:⁠26.

ಅನಂತರ ಸೊಲೊಮೋನನು, “ಯೂಫ್ರೇಟೀಸ್‌ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳ ವರೆಗೂ” ಆಳಿದನು, ಮತ್ತು ಇದು ಮೆಸ್ಸೀಯನ ಶಾಂತಿಭರಿತ ಆಳ್ವಿಕೆಯನ್ನು ಮುನ್‌ಚಿತ್ರಿಸಿತು. (1ಅರ 4:​21-25; 8:65; 1ಪೂರ್ವ 13:5; ಕೀರ್ತ 72:8; ಜೆಕ 9:10) ಹಾಗಿದ್ದರೂ, ಇಸ್ರಾಯೇಲ್ಯರು ವಶಪಡಿಸಿಕೊಂಡಂಥ ಕ್ಷೇತ್ರವು “ಬೇರ್ಷೆಬದಿಂದ ದಾನಿನ ವರೆಗೂ” ವಿಸ್ತರಿಸಿತ್ತೆಂದು ಸಾಮಾನ್ಯವಾಗಿ ಹೇಳಲಾಗುತ್ತಿತ್ತು.​—⁠2ಸಮು 3:10; 2ಪೂರ್ವ 30:⁠5.

ರಾಜ ಸೊಲೊಮೋನನು ದೇವರಿಗೆ ಅವಿಧೇಯತೆಯನ್ನು ತೋರಿಸುತ್ತಾ, ಕುದುರೆಗಳನ್ನೂ ರಥಗಳನ್ನೂ ಶೇಖರಿಸಿದನು. (ಧರ್ಮೋ 17:16; 2ಪೂರ್ವ 9:25) ಇವುಗಳನ್ನು ಅವನು ರಸ್ತೆಗಳ ಹಾಗೂ ಹೆದ್ದಾರಿಗಳ ಒಂದು ಸಂಕೀರ್ಣ ವ್ಯವಸ್ಥೆಯಾದ್ಯಂತ ಚಲಿಸಸಾಧ್ಯವಿತ್ತು. (ಯೆಹೋ 2:22; 1ಅರ 11:29; ಯೆಶಾ 7:3; ಮತ್ತಾ 8:28) ಇವುಗಳಲ್ಲಿ ಕೆಲವೇ ಮಾರ್ಗಗಳ ಬಗ್ಗೆ ನಮ್ಮ ಬಳಿ ವಿವರವಾದ ಮಾಹಿತಿಯಿದೆ. ಉದಾಹರಣೆಗೆ, “ಬೇತೇಲಿನಿಂದ ಶೆಕೆಮಿಗೆ ಹೋಗುವ ರಾಜಮಾರ್ಗದ ಪೂರ್ವಕ್ಕೂ ಲೆಬೋನದ ದಕ್ಷಿಣಕ್ಕೂ” ಎಂಬ ವಿವರವನ್ನು ಕೊಡಲಾಗಿದೆ.​—⁠ನ್ಯಾಯ 5:6; 21:19.

ಪ್ರಾಚೀನ ಇಸ್ರಾಯೇಲಿನ ರಸ್ತೆಗಳು ಮತ್ತು ಹೆದ್ದಾರಿಗಳು ಎಂಬ ಪುಸ್ತಕವು ಹೇಳುವುದು: “ಪ್ರಾಚೀನ ಇಸ್ರಾಯೇಲಿನ ರಸ್ತೆಗಳ ಸಂಕೀರ್ಣ ವ್ಯವಸ್ಥೆಯನ್ನು ಶೋಧಿಸುವುದರಲ್ಲಿರುವ ಅತೀ ದೊಡ್ಡ ಸಮಸ್ಯೆಯೇನೆಂದರೆ, ಹಳೆಯ ಒಡಂಬಡಿಕೆಯ ಅವಧಿಯಲ್ಲಿದ್ದ ದೇಶದ ರಸ್ತೆಗಳ ಸ್ಪಷ್ಟವಾಗಿ ಗುರುತಿಸಸಾಧ್ಯವಿರುವ ಯಾವುದೇ ಭೌತಿಕ ಸುಳಿವುಗಳೇ ಉಳಿದಿಲ್ಲ. ಯಾಕೆಂದರೆ [ಆ ಅವಧಿಯಲ್ಲಿ] ರಸ್ತೆಗಳನ್ನು ನೆಲಗಟ್ಟು ಮಾಡಲಾಗುತ್ತಿರಲಿಲ್ಲ.” ಆದರೂ, ಈ ನಗರಗಳ ನಕ್ಷಾನಿರೂಪಣೆ ಮತ್ತು ಅಗೆದುತೆಗೆಯಲಾಗಿರುವ ಅವಶೇಷಗಳು, ಅನೇಕ ರಸ್ತೆಗಳ ಮಾರ್ಗವನ್ನು ಸೂಚಿಸುತ್ತವೆ.

ರಸ್ತೆಗಳು ಅನೇಕವೇಳೆ, ಪಡೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೇಗೆ ಹೋಗುವವು ಎಂಬುದನ್ನು ನಿರ್ಧರಿಸುತ್ತಿದ್ದವು. (1ಸಮು 13:​17, 18; 2ಅರ 3:​5-8) ಇಸ್ರಾಯೇಲನ್ನು ಆಕ್ರಮಿಸಲಿಕ್ಕಾಗಿ, ಫಿಲಿಷ್ಟಿಯರು ‘ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿದ್ದ’ ಕ್ಷೇತ್ರಕ್ಕೆ ಬರಲು, ಎಕ್ರೋನ್‌ನಿಂದ ಗತ್‌ ವರೆಗೂ ನಡೆದರು. ಅಲ್ಲಿ, “ಏಲಾ ತಗ್ಗಿನಲ್ಲಿ” ಸೌಲನ ಸೈನ್ಯವು ಅವರನ್ನು ಎದುರಿಸಿತು. ದಾವೀದನು ಗೊಲ್ಯಾತನನ್ನು ಹತಿಸಿದ ನಂತರ, ಫಿಲಿಷ್ಟಿಯರು ಗತ್‌ ಮತ್ತು ಎಕ್ರೋನ್‌ಗೆ ಓಡಿಹೋದರು, ಮತ್ತು ದಾವೀದನು ಯೆರೂಸಲೇಮಿಗೆ ಹೋದನು.​—⁠1ಸಮು 17:​1-54.

ಇಳಕಲಿನ ಪ್ರದೇಶದೊಳಗಿಂದ ಮತ್ತು ಯೂದಾಯದ ಬೆಟ್ಟಗಳತ್ತ ಹೋಗುತ್ತಿದ್ದ ಪ್ರಕೃತಿಜನ್ಯ ಮಾರ್ಗಗಳಲ್ಲೇ ಲಾಕೀಷ್‌ (D10), ಅಜೇಕ (D9) ಮತ್ತು ಬೇತ್‌ಷೆಮೆಷ್‌ (D9) ನೆಲೆಸಿದ್ದವು. ಈ ರೀತಿಯಲ್ಲಿ ಈ ನಗರಗಳು, ವಯಾ ಮೆರೀಸ್‌ನ ಮುಖಾಂತರವಾಗಿ ಶತ್ರುಗಳು ಇಸ್ರಾಯೇಲಿನ ಕೇಂದ್ರಭಾಗಕ್ಕೆ ಬರುವುದರಿಂದ ಅಡ್ಡಗಟ್ಟುವುದರಲ್ಲಿ ಬಹು ಪ್ರಾಮುಖ್ಯವಾಗಿದ್ದವು.​—⁠1ಸಮು 6:​9, 12; 2ಅರ 18:​13-17.

[ಪಾದಟಿಪ್ಪಣಿ]

^ ಪ್ಯಾರ. 3 ರೂಬೇನ್‌ ಕುಲದ ಕ್ಷೇತ್ರವು ಅರಾಮ್‌ ಮರುಭೂಮಿಯ ವರೆಗೂ ತಲಪಿತ್ತು. ಮತ್ತು ಈ ಮರುಭೂಮಿಯ ಪೂರ್ವ ಅಂಚು ಯೂಫ್ರೇಟೀಸ್‌ ನದಿಯಾಗಿತ್ತು.​—⁠1ಪೂರ್ವ 5:​9, 10.

[ಪುಟ 16ರಲ್ಲಿರುವ ಚೌಕ]

ಈ ಅವಧಿಯ ಬೈಬಲ್‌ ಪುಸ್ತಕಗಳು:

1 ಮತ್ತು 2 ಸಮುವೇಲ

ಕೀರ್ತನೆ (ಭಾಗಶಃ)

ಜ್ಞಾನೋಕ್ತಿ (ಭಾಗಶಃ)

ಪರಮಗೀತ

ಪ್ರಸಂಗಿ

[ಪುಟ 17ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಐಕ್ಯ ರಾಜ ಪ್ರಭುತ್ವದ ಸಮಯದಲ್ಲಿನ ಕ್ಷೇತ್ರ ಮತ್ತು ರಸ್ತೆಗಳು

ಗಡಿರೇಖೆಗಳು (ಸೊಲೊಮೋನನ ಸಮಯ)

ತಿಪ್ಸಹು

ಹಮಾತ್‌

ತದ್ಮೋರ್‌

ಬೇರೋತೈ (ಕೂನ್‌?)

ಸೀದೋನ್‌

ದಮಸ್ಕ

ತೂರ್‌

ದಾನ್‌

ಯೆರೂಸಲೇಮ್‌

ಗಾಜಾ

ಅರೋಯೇರ್‌

ಬೇರ್ಷೆಬ

ತಾಮಾರ್‌

ಎಚ್ಯೋನ್ಗೆಬೆರ್‌

ಏಲತ್‌ (ಏಲೋತ್‌)

[ನದಿಗಳು ಮತ್ತು ಹೊಳೆಗಳು]

ಯೂಫ್ರೇಟೀಸ್‌

ಐಗುಪ್ತದ ತೊ. ಕ.

ದಾವೀದ ಮತ್ತು ಸೊಲೊಮೋನ (ರಸ್ತೆಗಳು)

B10 ಗಾಜಾ

C8 ಯೊಪ್ಪ

C9 ಅಷ್ಡೋದ್‌

C10 ಅಷ್ಕೆಲೋನ್‌

C11 ಚಿಕ್ಲಗ್‌

C12 ಪಾರಾನ್‌ ಅರಣ್ಯ

D5 ದೋರ್‌

D6 ಹೇಫೆರ್‌

D8 ಅಫೇಕ್‌

D8 ರಾಮಾ

D9 ಶಾಲ್ಬೀಮ್‌

D9 ಗೆಜೆರ್‌

D9 ಮಾಕಚ್‌

D9 ಎಕ್ರೋನ್‌

D9 ಬೇತ್‌ಷೆಮೆಷ್‌

D9 ಗತ್‌

D9 ಅಜೇಕ

D10 ಸೋಕೋ

D10 ಅದುಲ್ಲಾಮ್‌

D10 ಕೆಯೀಲ

D10 ಲಾಕೀಷ್‌

D11 ಯತ್ತೀರ್‌

D12 ಬೇರ್ಷೆಬ

E2 ತೂರ್‌

E4 ಕಾಬೂಲ್‌

E5 ಯೊಕ್ನೆಯಾಮ್‌ (ಯೊಕ್ಮೆಯಾಮ್‌?)

E5 ಮೆಗಿದ್ದೋ

E6 ತಾನಾಕ್‌

E6 ಅರುಬ್ಬೋತ್‌

E7 ಪಿರಾತೋನ್‌

E8 ಲೆಬೋನ

E8 ಚರೇದ

E8 ಬೇತೇಲ್‌

E9 ಕೆಳಗಿನ ಬೇತ್‌ಹೋರೋನ್‌

E9 ಮೇಲಿನ ಬೇತ್‌ಹೋರೋನ್‌

E9 ಗೆಬಾ

E9 ಗಿಬ್ಯೋನ್‌

E9 ಗಿಬೆಯ

E9 ಕಿರ್ಯತ್ಯಾರೀಮ್‌

E9 ನೋಬ್‌

E9 ಬಾಳ್‌ಪೆರಾಚೀಮ್‌

E9 ಯೆರೂಸಲೇಮ್‌

E9 ಬೇತ್ಲೆಹೇಮ್‌

E10 ತೆಕೋವ

E10 ಹೆಬ್ರೋನ್‌

E11 ಜೀಫ್‌

E11 ಹೋರೆಷ?

E11 ಕರ್ಮೆಲ್‌

E11 ಮಾವೋನ್‌

E11 ಎಷ್ಟೆಮೋವ

F5 ಎಂದೋರ್‌

F5 ಶೂನೇಮ್‌

F5 ಇಜ್ರೇಲ್‌

F6 ಬೇತ್‌ಷೆಯಾನ್‌

F7 ತಿರ್ಚ

F7 ಶೆಕೆಮ್‌

F8 ಚಾರೆತಾನ್‌

F8 ಶೀಲೋ

F8 ಒಫ್ರ?

F9 ಯೆರಿಕೋ

F11 ಏಂಗೆದಿ

G2 ಆಬೇಲ್ಬೇತ್ಮಾಕಾ

G2 ದಾನ್‌

G3 ಹಾಚೋರ್‌

G3 ಮಾಕ

G5 ಲೋದೆಬಾರ್‌ (ದೆಬೀರ್‌)

G5 ರೋಗೆಲೀಮ್‌

G6 ಅಬೇಲ್‌ಮೆಹೋಲ

G7 ಸುಕ್ಕೋತ್‌

G7 ಮಹನಯಿಮ್‌

H1 ಸಿರಿಯ

H4 ಗೆಷೂರ್‌

H6 ರಾಮೋತ್‌ಗಿಲ್ಯಾದ್‌

H8 ರಬ್ಬಾ

H9 ಮೇದೆಬ

H11 ಅರೋಯೇರ್‌

H12 ಮೋವಾಬ್‌

I4 ಹೇಲಾಮ್‌?

I9 ಅಮ್ಮೋನ್‌

[ಮುಖ್ಯ ರಸ್ತೆಗಳು]

ವಯಾ ಮೆರೀಸ್‌

H6 ರಾಜಮಾರ್ಗ

[ಪರ್ವತಗಳು]

F5 ಗಿಲ್ಬೋವ ಬೆಟ್ಟ

[ಜಲಾಶಯಗಳು]

C8 ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

F10 ಲವಣ ಸಮುದ್ರ (ಮೃತ ಸಮುದ್ರ)

G4 ಗಲಿಲಾಯ ಸಮುದ್ರ

[ಬುಗ್ಗೆ ಅಥವಾ ಬಾವಿ]

E9 ಏನ್‌ರೋಗೆಲ್‌

[ಪುಟ 16ರಲ್ಲಿರುವ ಚಿತ್ರಗಳು]

ಬಲಬದಿ: ಯೆಹೂದದ ಬೆಟ್ಟಗಳತ್ತ ಪೂರ್ವದಿಕ್ಕಿಗೆ ನೋಡುತ್ತಿರುವ ಏಲಾ ಕಣಿವೆ

ಕೆಳಗೆ: ರಸ್ತೆಗಳ ಸಂಕೀರ್ಣ ವ್ಯವಸ್ಥೆಯು, ವಾಗ್ದತ್ತ ದೇಶದಲ್ಲಿ ಸಂಚಾರವನ್ನು ಸಾಧ್ಯಗೊಳಿಸಿತು