ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಜನರು ಸ್ವದೇಶಕ್ಕೆ ಹಿಂದಿರುಗುತ್ತಾರೆ

ದೇವಜನರು ಸ್ವದೇಶಕ್ಕೆ ಹಿಂದಿರುಗುತ್ತಾರೆ

ದೇವಜನರು ಸ್ವದೇಶಕ್ಕೆ ಹಿಂದಿರುಗುತ್ತಾರೆ

ಆಧುನಿಕ ಇರಾನಿನ ಪ್ರಸ್ಥಭೂಮಿಯ ಸುತ್ತಲೂ ಎರಡು ಎದ್ದುಕಾಣುವ ಪರ್ವತಶ್ರೇಣಿಗಳಿವೆ. ಒಂದು ಎಲ್‌ಬುರ್ಸ್‌ ಪರ್ವತಶ್ರೇಣಿ (ಕ್ಯಾಸ್ಪಿಯನ್‌ ಸಮುದ್ರದ ದಕ್ಷಿಣಕ್ಕಿದೆ) ಮತ್ತು ಇನ್ನೊಂದು ಸಾಗ್ರಸ್‌ ಪರ್ವತಶ್ರೇಣಿ (ಪರ್ಷಿಯನ್‌ ಕೊಲ್ಲಿಯ ಈಶಾನ್ಯದಿಕ್ಕಿನತ್ತ). ಅವುಗಳ ಮಧ್ಯಮಧ್ಯದಲ್ಲಿ, ಮರಗಳಿಂದಾವೃತವಾದ ಇಳುಕಲುಗಳಿರುವ ಉದ್ದವಾದ ಹಾಗೂ ಫಲವತ್ತಾದ ಕಣಿವೆಗಳಿವೆ. ಈ ಕಣಿವೆಗಳಲ್ಲಿ ಸೌಮ್ಯವಾದ ವಾತಾವರಣವಿದೆ, ಆದರೆ ಎತ್ತರದಲ್ಲಿರುವ, ಒಣಗಿರುವ, ವಾಯುಪ್ರವಾಹವುಳ್ಳ ಬಯಲುಗಳಲ್ಲಿ ಚಳಿಗಾಲದಲ್ಲಿ ಕೊರೆಯುವಂಥ ಶೀತವಿರುತ್ತದೆ. ಹತ್ತಿರದಲ್ಲೇ, ಆ ಪ್ರಸ್ಥಭೂಮಿಯ, ತೀರ ಕಡಿಮೆ ಜನಸಾಂದ್ರತೆಯುಳ್ಳ ಮರುಭೂಮಿಯಿದೆ. ಈ ಸಾಮಾನ್ಯ ಪ್ರದೇಶದಲ್ಲಿ, ಅಂದರೆ ಮೆಸೊಪೊತಾಮ್ಯದ ಪೂರ್ವದಲ್ಲಿ, ಮೇದ್ಯಪಾರಸಿಯ ಸಾಮ್ರಾಜ್ಯವು ಹುಟ್ಟಿಕೊಂಡಿತು.

ಮೇದ್ಯರ ಕೇಂದ್ರವು ಆ ಪ್ರಸ್ಥಭೂಮಿಯ ಉತ್ತರಭಾಗವಾಗಿತ್ತು. ಆದರೆ ತದನಂತರ ಅವರು ಅರ್ಮೇನಿಯ ಹಾಗೂ ಕಿಲಿಕ್ಯಕ್ಕೆ ಹಬ್ಬಿಕೊಂಡರು. ಆದರೆ ಪಾರಸಿಯರು, ಟೈಗ್ರಿಸ್‌ ಕಣಿವೆಯ ಪೂರ್ವಕ್ಕೆ, ಆ ಪ್ರಸ್ಥಭೂಮಿಯ ನೈರುತ್ಯ ಭಾಗದಲ್ಲಿ ಕೇಂದ್ರಿತರಾಗಿದ್ದರು. ಸಾ.ಶ.ಪೂ. ಆರನೆಯ ಶತಮಾನದ ಮಧ್ಯಭಾಗದಲ್ಲಿ, ಕೋರೆಷನ ಆಳಿಕೆಯ ಸಮಯದಲ್ಲಿ, ಈ ಎರಡೂ ರಾಜ್ಯಗಳು ಒಟ್ಟುಗೂಡಿ, ಮೇದ್ಯಪಾರಸಿಯ ಲೋಕ ಶಕ್ತಿಯನ್ನು ರಚಿಸಿದವು.

ಕೋರೆಷನು ಸಾ.ಶ.ಪೂ. 539ರಲ್ಲಿ ಬಾಬೆಲನ್ನು ಸೆರೆಹಿಡಿದನು. ಅವನ ಸಾಮ್ರಾಜ್ಯವು ಪೂರ್ವದಿಕ್ಕಿನಲ್ಲಿ ಹಿಂದುಸ್ಥಾನದ (ಭಾರತ) ವರೆಗೆ ವಿಸ್ತರಿಸಿತು. ಪಶ್ಚಿಮದಿಕ್ಕಿನಲ್ಲಿ ಅದು ಐಗುಪ್ತ ಮತ್ತು ಈಗ ಟರ್ಕಿ ಎಂದು ಕರೆಯಲ್ಪಡುವ ದೇಶವನ್ನು ಒಳಸೇರಿಸಿತು. ಮೇದ್ಯಪಾರಸಿಯ ಸಾಮ್ರಾಜ್ಯವನ್ನು ದಾನಿಯೇಲನು ಸೂಕ್ತವಾಗಿಯೇ, ‘ಬಹು ಮಾಂಸವನ್ನು ತಿಂದ’ ಒಂದು ಕ್ರೂರ “ಕರಡಿ” ಎಂದು ವರ್ಣಿಸಿದನು. (ದಾನಿ 7:⁠5) ಕೋರೆಷನು ಒಂದು ಮಾನವೀಯ, ಸಹಿಷ್ಣುತೆಯ ಆಳಿಕೆಯನ್ನು ಸ್ಥಾಪಿಸಿದನು. ಅವನು ಆ ಸಾಮ್ರಾಜ್ಯವನ್ನು ಪ್ರಾಂತಗಳಾಗಿ ವಿಭಾಗಿಸಿದನು. ಪ್ರತಿಯೊಂದು ಪ್ರಾಂತವನ್ನು ಆಳಲಿಕ್ಕಾಗಿ ಒಬ್ಬ ದೇಶಾಧಿಪತಿ ಇದ್ದು, ಸಾಮಾನ್ಯವಾಗಿ ಅವನೊಬ್ಬ ಪಾರಸಿಯನಾಗಿರುತ್ತಿದ್ದನು. ಆದರೆ ಅವನ ಕೈಕೆಳಗೆ ಒಬ್ಬ ಸ್ಥಳಿಕ ಅಧಿಪತಿಗೆ ಸ್ವಲ್ಪ ಅಧಿಕಾರವಿರುತ್ತಿತ್ತು. ಆ ಸಾಮ್ರಾಜ್ಯದಲ್ಲಿದ್ದ ಜನರ ಗುಂಪುಗಳು ತಮ್ಮ ಸ್ವಂತ ಪದ್ಧತಿ ಹಾಗೂ ಧರ್ಮಗಳನ್ನು ಪಾಲಿಸಿಕೊಂಡು ಹೋಗುವಂತೆ ಉತ್ತೇಜಿಸಲಾಯಿತು. ಈ ಕಾರ್ಯನೀತಿಗೆ ಹೊಂದಿಕೆಯಲ್ಲಿ, ಎಜ್ರ ಹಾಗೂ ನೆಹೆಮೀಯರು ವರ್ಣಿಸಿದಂತೆ, ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಲು ಹಾಗೂ ಯೆರೂಸಲೇಮನ್ನು ಪುನರ್ನಿರ್ಮಿಸಲು ಹಿಂದಿರುಗುವಂತೆ ಕೋರೆಷನು ಯೆಹೂದ್ಯರಿಗೆ ಅನುಮತಿಸಿದನು. ಈ ದೊಡ್ಡ ಜನಸ್ತೋಮವು, ಅಬ್ರಹಾಮನಂತೆಯೇ ಯೂಫ್ರೇಟೀಸ್‌ನಿಂದ ಕರ್ಕೆಮೀಷಿಗೆ ನಡೆಸುವ ಮಾರ್ಗವನ್ನು ಹಿಡಿದು ಹಿಂದಿರುಗಿದರೊ, ಇಲ್ಲವೆ ತದ್ಮೋರ್‌ ಮತ್ತು ದಮಸ್ಕದಿಂದ ಹಾದುಹೋಗುವ ಸಮೀಪದ ಮಾರ್ಗವನ್ನು ಹಿಡಿದರೆಂದು ನಿಮಗನಿಸುತ್ತದೊ? ಬೈಬಲು ಇದನ್ನು ತಿಳಿಸುವುದಿಲ್ಲ. (ಪುಟ 6-7ನ್ನು ನೋಡಿ.) ಸಕಾಲದಲ್ಲಿ ಯೆಹೂದ್ಯರು ಆ ಸಾಮ್ರಾಜ್ಯದಲ್ಲಿನ, ನೈಲ್‌ ನದಿಮುಖಜ ಭೂಮಿ ಮತ್ತು ದಕ್ಷಿಣಕ್ಕೆ ಇನ್ನೂ ದೂರದ ಸ್ಥಳಗಳಂಥ ಇತರ ಭಾಗಗಳಲ್ಲೂ ನೆಲೆಸಿದರು. ಯೆಹೂದ್ಯರ ಒಂದು ದೊಡ್ಡ ಸಂಖ್ಯೆಯು ಬಾಬೆಲಿನಲ್ಲೇ ಉಳಿಯಿತು. ಈ ಕಾರಣದಿಂದಲೇ ಶತಮಾನಗಳಾನಂತರ ಪೇತ್ರನು ಅಲ್ಲಿ ಭೇಟಿಕೊಟ್ಟಿದ್ದಿರಬಹುದು. (1ಪೇ 5:13) ಹೌದು, ಹಿಂಬಾಲಿಸಿಬಂದ ಗ್ರೀಕ್‌ ಹಾಗೂ ರೋಮ್‌ ಸಾಮ್ರಾಜ್ಯಗಳ ಸಮಯದಲ್ಲಿ ಯೆಹೂದ್ಯರು ಅನೇಕ ಸ್ಥಳಗಳಲ್ಲಿ ಕಂಡುಬರುವುದರಲ್ಲಿ ಮೇದ್ಯಪಾರಸಿಯ ಸಾಮ್ರಾಜ್ಯವು ಒಂದು ಪಾತ್ರವನ್ನು ವಹಿಸಿತ್ತು.

ಬಾಬೆಲನ್ನು ಸೋಲಿಸಿದ ನಂತರ, ಮೇದ್ಯಪಾರಸಿಯರು ಕಡು ಶಾಖ ಹಾಗೂ ಶುಷ್ಕವಾದ ಬೇಸಗೆಕಾಲಗಳನ್ನು ಅನುಭವಿಸುವ ಆ ನಗರವನ್ನು, ಒಂದು ಆಡಳಿತ ಕೇಂದ್ರವಾಗಿ ಉಪಯೋಗಿಸಿದರು. ಏಲಾಮಿನ ಮಾಜಿ ರಾಜಧಾನಿಯಾಗಿದ್ದ ಶೂಷನ್‌, ರಾಜನಗರಗಳಲ್ಲಿ ಒಂದಾಗಿತ್ತು. ಮುಂದಕ್ಕೆ, ಪಾರಸಿಯ ರಾಜನಾದ ಅಹಷ್ವೇರೋಷನು (ಬಹುಶಃ Iನೆಯ ಸರಕ್ಸೀಸ್‌) ಎಸ್ತೇರಳನ್ನು ತನ್ನ ರಾಣಿಯಾಗಿ ಮಾಡಿದ್ದು ಮತ್ತು ಆ ವ್ಯಾಪಕ ಸಾಮ್ರಾಜ್ಯದಾದ್ಯಂತ ದೇವಜನರನ್ನು ನಿರ್ಮೂಲಮಾಡುವ ಒಂದು ಒಳಸಂಚನ್ನು ಮುರಿದದ್ದೂ ಆ ನಗರದಲ್ಲೇ. ಮೇದ್ಯಪಾರಸಿಯರ ಇನ್ನೆರಡು ರಾಜಧಾನಿಗಳು, ಅಹ್ಮೆತಾ (ಹರ್ಷಕರವಾದ ಬೇಸೆಗೆಕಾಲಗಳುಳ್ಳದ್ದಾಗಿದ್ದು, 1,900 ಮೀಟರ್‌ ಔನ್ನತ್ಯದಲ್ಲಿ ನೆಲೆಸಿತ್ತು) ಮತ್ತು ಪಸಾರ್ಗಡೀ (ಅದೇ ಎತ್ತರದಲ್ಲಿ, ನೈರುತ್ಯಕ್ಕೆ ಸುಮಾರು 650 ಕಿಲೊಮೀಟರ್‌ ದೂರದಲ್ಲಿ ನೆಲೆಸಿತ್ತು) ಆಗಿದ್ದವು.

ಈ ಲೋಕ ಶಕ್ತಿಯು ಹೇಗೆ ಅಂತ್ಯಗೊಂಡಿತು? ಅದು ತನ್ನ ಅಧಿಕಾರದ ಶಿಖರದಲ್ಲಿದ್ದಾಗ, ಅದರ ವಾಯವ್ಯ ಗಡಿಯಲ್ಲಿ ಗ್ರೀಕರು ಕೆರಳಿಸಿದಂಥ ಬಂಡಾಯಗಳಿಗೆ ಮೇದ್ಯಪಾರಸಿಯ ಸಾಮ್ರಾಜ್ಯವು ಪ್ರತಿವರ್ತಿಸಿತು. ಆಗ ಗ್ರೀಸ್‌ ದೇಶವು ಕಚ್ಚಾಡುತ್ತಿದ್ದ ನಗರರಾಜ್ಯಗಳಾಗಿ ವಿಭಾಗಿಸಲ್ಪಟ್ಟಿದ್ದರೂ, ಮ್ಯಾರಥಾನ್‌ ಮತ್ತು ಸಲಮೀಸ್‌ನಲ್ಲಿ ನಡೆದಂಥ ನಿರ್ಣಾಯಕ ಕದನಗಳಲ್ಲಿ ಪಾರಸಿಯ ಪಡೆಗಳನ್ನು ಸೋಲಿಸಲಿಕ್ಕಾಗಿ ಇವೆಲ್ಲವೂ ಪರಸ್ಪರ ಸಹಕರಿಸಿದವು. ಇದು, ಒಂದು ಐಕ್ಯಗೊಂಡ ಗ್ರೀಸ್‌ ದೇಶವು, ಮೇದ್ಯಪಾರಸಿಯ ಸಾಮ್ರಾಜ್ಯದ ಮೇಲೆ ಪ್ರಭುತ್ವವನ್ನು ಪಡೆಯಲಿಕ್ಕಾಗಿ ಮಾರ್ಗವನ್ನು ಸಿದ್ಧಗೊಳಿಸಿತು.

[ಪುಟ 25ರಲ್ಲಿರುವ ಚೌಕ]

ಜೆರುಬ್ಬಾಬೆಲನ ನೇತೃತ್ವದ ಕೆಳಗೆ, ಬಹುಮಟ್ಟಿಗೆ 50,000 ಇಸ್ರಾಯೇಲ್ಯ ಪುರುಷರು, ಯೆರೂಸಲೇಮಿಗೆ ಹಿಂದಿರುಗಲು 800ರಿಂದ 1,600 ಕಿಲೊಮೀಟರ್‌ನಷ್ಟು (ಮಾರ್ಗದ ಮೇಲೆ ಹೊಂದಿಕೊಂಡು) ದೂರದ ಪ್ರಯಾಣವನ್ನು ಮಾಡಿದರು. ಅವರು ತುಂಬ ಕಷ್ಟಕರವಾದ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿದರು. ಅವರ ದೇಶವು ಏಳು ದಶಕಗಳ ವರೆಗೆ ಪಾಳುಬಿದ್ದಿತ್ತು. ಹಿಂದಿರುಗಿ ಬಂದವರು, ಪುನಃ ವೇದಿಯನ್ನು ಕಟ್ಟಿ ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವ ಮೂಲಕ ಸತ್ಯಾರಾಧನೆಯನ್ನು ಪುನಃಸ್ಸ್ಥಾಪಿಸಲು ಆರಂಭಿಸಿದರು. ಸಾ.ಶ.ಪೂ. 537ರ ಶರತ್ಕಾಲದಲ್ಲಿ, ಅವರು ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. (ಯೆರೆ 25:11; 29:10) ಆಮೇಲೆ, ಅವರು ಯೆಹೋವನ ಆಲಯಕ್ಕಾಗಿ ಅಸ್ತಿವಾರವನ್ನು ಹಾಕಿದರು.

[ಪುಟ 25ರಲ್ಲಿರುವ ಚೌಕ]

ಈ ಅವಧಿಯ ಬೈಬಲ್‌ ಪುಸ್ತಕಗಳು:

ದಾನಿಯೇಲ

ಹಗ್ಗಾಯ

ಜೆಕರ್ಯ

ಎಸ್ತೇರಳು

ಕೀರ್ತನೆ (ಭಾಗಶಃ)

1 ಮತ್ತು 2 ಪೂರ್ವಕಾಲವೃತ್ತಾಂತ

ಎಜ್ರ

ನೆಹೆಮೀಯ

ಮಲಾಕಿಯ

[ಪುಟ 24ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮೇದ್ಯಪಾರಸಿಯ ಸಾಮ್ರಾಜ್ಯ

A2 ಮಕೆದೋನ್ಯ

A2 ಥ್ರೇಸ್‌

A4 ಕುರೇನೆ

A4 ಲಿಬ್ಯ

B2 ಬಸಾಂಟಿಯಮ್‌

B2 ಲುದ್ಯ

B3 ಸಾರ್ದಿಸ್‌

B4 ಮೋಫ್‌ (ನೋಫ್‌)

B4 ಈಜಿಪ್ಟ್‌

B5 ನೋ ಅಮೋನ್‌ (ಥೀಬ್ಸ್‌)

B5 ಸೆವೇನೆ

C3 ಕಿಲಿಕ್ಯ

C3 ತಾರ್ಸ

C3 ಇಸಸ್‌

C3 ಕರ್ಕೆಮೀಷ್‌

C3 ತದ್ಮೋರ್‌

C3 ಸಿರಿಯ

C3 ಸೀದೋನ್‌

C3 ದಮಸ್ಕ

C3 ತೂರ್‌

C4 ಯೆರೂಸಲೇಮ್‌

D2 ಫಾಸಿಸ್‌

D2 ಅರ್ಮೇನಿಯ

D3 ಅಶ್ಶೂರ್‌

D3 ನಿನೆವೆ

D4 ಬಾಬೆಲ್‌

E3 ಮೇದ್ಯ

E3 ಎಕ್‌ಬ್ಯಾಟನ (ಅಹ್ಮೆತಾ)

E3 ಹಿರ್ಕೇನಿಯಾ

E4 ಶೂಷನ್‌ (ಸೂಸಾ)

E4 ಏಲಾಮ್‌

E4 ಪಸಾರ್ಗಡೀ

E4 ಪರ್ಸಿಪೊಲಿಸ್‌

E4 ಪಾರಸಿಯ

F3 ಪಾರ್ಥಿಯ

F4 ಡ್ರ್ಯಾಂಜಿಯಾನ

G2 ಮಾರಕಾಂಡ (ಸಮರ್‌ಕಾಂಡ್‌)

G3 ಸಾಗ್‌ಡೀಅನ

G3 ಬ್ಯಾಕ್ಟ್ರಿಯ

G3 ಅರಿಯ

G4 ಆರಕೋಸ್ಯ

G4 ಗೆಡ್ರೋಸಿಯ

H5 ಭಾರತ

[ಬೇರೆ ಸ್ಥಳಗಳು]

A2 ಗ್ರೀಸ್‌

A3 ಮ್ಯಾರಥಾನ್‌

A3 ಅಥೆನ್ಸ್‌

A3 ಸಲಮೀಸ್‌

C1 ಸಿದಿಯ

C4 ಏಲತ್‌ (ಏಲೋತ್‌)

C4 ತೇಮಾ

D4 ಅರೇಬಿಯ

[ಪರ್ವತಗಳು]

E3 ಎಲ್‌ಬುರ್ಸ್‌ ಪರ್ವತಗಳು

E4 ಸಾಗ್ರಸ್‌ ಪರ್ವತಗಳು

[ಜಲಾಶಯಗಳು]

B3 ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

C2 ಕಪ್ಪು ಸಮುದ್ರ

C5 ಕೆಂಪು ಸಮುದ್ರ

E2 ಕ್ಯಾಸ್ಪಿಯನ್‌ ಸಮುದ್ರ

E4 ಪರ್ಷಿಯನ್‌ ಖಾರಿ

[ನದಿಗಳು]

B4 ನೈಲ್‌

C3 ಯೂಫ್ರೇಟೀಸ್‌

D3 ಟೈಗ್ರಿಸ್‌

H4 ಸಿಂಧೂ ನದಿ

[ಪುಟ 24ರಲ್ಲಿರುವ ಚಿತ್ರ]

ಬಾಬೆಲನ್ನು ತಲಪಲಿಕ್ಕಾಗಿ ಕೋರೆಷನ ಪಡೆಗಳು ಸಾಗ್ರಸ್‌ ಪರ್ವತಗಳನ್ನು ದಾಟಿಹೋಗಬೇಕಾಯಿತು

[ಪುಟ 25ರಲ್ಲಿರುವ ಚಿತ್ರ]

ಮೇಲೆ: ಪರ್ಸಿಪೊಲಿಸ್‌ನಲ್ಲಿರುವ ಎಲ್ಲಾ ರಾಷ್ಟ್ರಗಳ ದ್ವಾರ

[ಪುಟ 25ರಲ್ಲಿರುವ ಚಿತ್ರ]

ಒಳಚಿತ್ರ: ಪಸಾರ್ಗಡೀಯಲ್ಲಿ ಕೋರೆಷನ ಸಮಾಧಿ