ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ದೇಶಗಳು

ಬೈಬಲ್‌ ದೇಶಗಳು

ಬೈಬಲ್‌ ದೇಶಗಳು

ಇಸ್ರಾಯೇಲ್‌ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸಲು ಸಿದ್ಧತೆಗಳನ್ನು ಮಾಡುತ್ತಿದ್ದಾಗ, ಮೋಶೆಯು ದೇವರ ಬಳಿ ತನ್ನ ಈ ಕಡು ಬಯಕೆಯನ್ನು ವ್ಯಕ್ತಪಡಿಸಿದನು: “ನಾನೂ ಈ ಹೊಳೆಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ . . . ನೋಡುವದಕ್ಕೆ ಅಪ್ಪಣೆಯಾಗಲಿ.”​—⁠ಧರ್ಮೋ 3:⁠25.

ಆದರೆ ಮೋಶೆಗೆ ಇದನ್ನು ಮಾಡಲು ಅನುಮತಿ ಸಿಗಲಿಲ್ಲ. ಹಾಗಿದ್ದರೂ, ಅವನು ಯೆರಿಕೋವಿನ ಎದುರಿಗಿರುವ ಒಂದು ಬೆಟ್ಟವನ್ನು ಹತ್ತಿ ಅಲ್ಲಿಂದ ಆ ದೇಶವನ್ನು, ಅಂದರೆ ‘ದಾನ್‌ ಪಟ್ಟಣದ ವರೆಗೂ ಗಿಲ್ಯಾದ್‌ ಸೀಮೆ, ಪಶ್ಚಿಮಸಮುದ್ರದ ವರೆಗೂ ಯೆಹೂದ ಸೀಮೆ ಮತ್ತು ದಕ್ಷಿಣಪ್ರದೇಶವನ್ನು’ ನೋಡಲು ಶಕ್ತನಾದನು. (ಧರ್ಮೋ 3:27; 34:​1-4) ನೀವು ಈ ಹೆಸರುಗಳನ್ನು ಕೇಳಿಸಿಕೊಂಡಿದ್ದೀರೊ? ಈ ಸ್ಥಳಗಳು ಎಲ್ಲಿವೆಯೆಂಬುದು ನಿಮಗೆ ಗೊತ್ತಿದೆಯೊ?

ಇಂದು ಯೆಹೋವನ ಜನರಲ್ಲಿ ಹೆಚ್ಚಿನವರು, ಬೈಬಲ್‌ನಲ್ಲಿ ತಾವು ಓದುವಂಥ ಅನೇಕ ಸ್ಥಳಗಳನ್ನು ಭೇಟಿಮಾಡಲು ಶಕ್ತರಾಗಿಲ್ಲ. ದೇವರು ಅಬ್ರಹಾಮನಿಗೆ ಹೇಳಿದಂತೆ ವಾಗ್ದತ್ತ ದೇಶದ ಎಲ್ಲಾ ಕಡೆಯೂ ತಿರುಗಾಡಲು ಅವರಿಗೆ ಸಾಧ್ಯವಿಲ್ಲ. (ಆದಿ 13:​14-17) ಹಾಗಿದ್ದರೂ, ನಿಜ ಕ್ರೈಸ್ತರು ಬೈಬಲ್‌ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವು ಒಂದಕ್ಕೊಂದು ಹೇಗೆ ಸಂಬಂಧಿಸುತ್ತವೆ ಎಂಬದನ್ನು ನೋಡಲು ಅತ್ಯುತ್ಸುಕರಾಗಿದ್ದಾರೆ.

‘ಒಳ್ಳೆಯ ದೇಶವನ್ನು ನೋಡಿ’ ಎಂಬ ಈ ಬ್ರೋಷರ್‌, ಶಾಸ್ತ್ರಗಳ ಕುರಿತಾದ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸಲು ನೀವು ಬಳಸಬಹುದಾದ ಒಂದು ಸಾಧನವಾಗಿದೆ. ಇದರಲ್ಲಿ, ಆವರಣ ಪುಟದಲ್ಲಿ ತೋರಿಸಲ್ಪಟ್ಟಿರುವಂತೆ, ಗಿಲ್ಯಾದ್‌ನಂಥ ಅಸ್ತಿತ್ವದಲ್ಲಿರುವ ಇತರ ಸ್ಥಳಗಳ ಛಾಯಾಚಿತ್ರಗಳಿವೆ. ಇದಕ್ಕಿಂತಲೂ ಹೆಚ್ಚು ಮಾಹಿತಿ ನೀಡುವಂಥವುಗಳು ಭೂಪಟಗಳಾಗಿವೆ. ಇವು, ಬೈಬಲ್‌ ಸ್ಥಳಗಳ ಕುರಿತಾದ ನಿಮ್ಮ ಜ್ಞಾನವನ್ನು ಇನ್ನೂ ಹೆಚ್ಚು ಗಾಢವಾಗಿಸಬಲ್ಲವು.

ಪುಟ 2 ಮತ್ತು 3ರಲ್ಲಿರುವ ಭೂಪಟವು, ಪ್ರಧಾನ ದೇಶಗಳು ಇಲ್ಲವೆ ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತದೆ. ದೃಷ್ಟಾಂತಕ್ಕಾಗಿ, ವಾಗ್ದತ್ತ ದೇಶವು ಎಲ್ಲಿದೆ ಮತ್ತು ಅಲ್ಲಿಂದ ಅಶ್ಶೂರ್‌ ಹಾಗೂ ಐಗುಪ್ತವು ಎಲ್ಲಿವೆಯೆಂಬುದನ್ನು ನೀವು ಗಮನಿಸುವಾಗ, ಆ ದೇಶಗಳ ಕುರಿತು ತಿಳಿಸುವ ಪ್ರವಾದನೆಗಳನ್ನು ನೀವು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲಿರಿ. (ಯೆಶಾ 7:18; 27:13; ಹೋಶೇ 11:11; ಮೀಕ 7:12) ವಾಗ್ದತ್ತ ದೇಶವೆಂದು ಕರೆಯಲ್ಪಟ್ಟ ಉದ್ದ ಹಾಗೂ ಕಿರಿದಾದ ಚಿಕ್ಕ ಕ್ಷೇತ್ರವು, ಪ್ರಾಚೀನಕಾಲದಲ್ಲಿ ಒಂದು ಸಂಧಿಸ್ಥಾನವಾಗಿತ್ತು. ಮತ್ತು ಬೇರೆ ದೇಶಗಳು ಅದರ ಫಲವತ್ತಾದ ಧಾನ್ಯದ ಹೊಲಗಳು, ದ್ರಾಕ್ಷೆತೋಟಗಳು ಹಾಗೂ ಎಣ್ಣೆಮರಗಳ ತೋಟಗಳನ್ನು ತಮ್ಮ ನಿಯಂತ್ರಣದಡಿ ತರಲು ಪ್ರಯತ್ನಿಸಿದವು.​—⁠ಧರ್ಮೋ 8:8; ನ್ಯಾಯ 15:⁠5.

ಕೆಲವೊಮ್ಮೆ ನೀವು ಭೂಪಟಗಳನ್ನು ಒಂದಕ್ಕೊಂದು ಹೋಲಿಸಿ ನೋಡಲು ಬಯಸಬಹುದು. ಉದಾಹರಣೆಗೆ, ಯೋನನಿಗೆ ಅಶ್ಶೂರದ ರಾಜಧಾನಿಗೆ ಹೋಗುವ ನೇಮಕವು ಕೊಡಲ್ಪಟ್ಟಿತು, ಆದರೆ ಅವನು ಪ್ರಯಾಣ ಬೆಳೆಸಿದ್ದು ತಾರ್ಷೀಷಿಗೆ. (ಯೋನ 1:​1-3) ಮೊದಲನೆಯ ಭೂಪಟದಲ್ಲಿ ನೀವು ಆ ಕ್ಷೇತ್ರಗಳನ್ನು ಕಂಡುಹಿಡಿಯಬಲ್ಲಿರೊ? ಆದರೆ ತಾರ್ಷೀಷ್‌ ಅನ್ನು ಅಪೊಸ್ತಲ ಪೌಲನು ಹುಟ್ಟಿದ ತಾರ್ಸದೊಂದಿಗೆ ಗಲಿಬಿಲಿಗೊಳಿಸಬಾರದು. ನೀವು ತಾರ್ಸ ಮತ್ತು ಇತರ ಪ್ರಮುಖ ನಗರಗಳನ್ನು ಇಲ್ಲಿ ಕೊಡಲ್ಪಟ್ಟಿರುವ ಭೂಪಟದಲ್ಲಿ ಕಂಡುಕೊಳ್ಳುವಿರಿ.

ಅಬ್ರಹಾಮನ ಸಂಚಾರವು ಎಷ್ಟು ಉದ್ದವಾಗಿತ್ತು ಮತ್ತು ಅವನು ಬಳಸಿದ ಪ್ರಯಾಣಮಾರ್ಗ ಯಾವುದಾಗಿತ್ತು ಎಂಬದರ ಬಗ್ಗೆ, ನೀವು ಊರ್‌, ಖಾರಾನ್‌ ಮತ್ತು ಯೆರೂಸಲೇಮ್‌ ಪಟ್ಟಣಗಳನ್ನು ಕಂಡುಹಿಡಿಯುವಾಗ, ಯೋಚಿಸಿರಿ. ಯೆಹೋವನು ಅವನನ್ನು ಊರ್‌ನಿಂದ ಹೊರಗೆ ಕರೆತಂದನಂತರ, ಅವನು ಖಾರಾನಿನಲ್ಲಿ ನೆಲೆಸಿದನು ಮತ್ತು ನಂತರ ವಾಗ್ದತ್ತ ದೇಶಕ್ಕೆ ಸ್ಥಳಾಂತರಿಸಿದನು. (ಆದಿ 11:​28–12:1; ಅಕೃ 7:​2-5) 6-7ನೆಯ ಪುಟಗಳಲ್ಲಿರುವ “ಮೂಲಪಿತೃಗಳ ಲೋಕ” ಎಂಬ ಭಾಗವನ್ನು ನೀವು ಅಧ್ಯಯನ ಮಾಡುವಾಗ ಅಬ್ರಹಾಮನ ಪ್ರಯಾಣವು ನಿಮಗೆ ಹೆಚ್ಚು ವಾಸ್ತವವಾಗುವುದು. ಮೊದಲನೆಯ ಭೂಪಟ ಮತ್ತು ಇಲ್ಲಿ ಕೊಡಲ್ಪಟ್ಟಿರುವ ಭೂಪಟವು ಯಾವುದೇ ಒಂದು ನಿರ್ದಿಷ್ಟ ಸಮಯಾವಧಿಗೆ ಸಂಬಂಧಪಟ್ಟದ್ದಾಗಿರುವುದಿಲ್ಲ. ಆದರೆ ಈ ಎರಡು ಭೂಪಟಗಳ ನಂತರ ಇರುವ ಎಲ್ಲಾ ಭೂಪಟಗಳು ಸಾಮಾನ್ಯವಾಗಿ ಐತಿಹಾಸಿಕ ಕ್ರಮದಲ್ಲಿವೆ. ಒಂದು ಭೂಪಟದಲ್ಲಿ ಕಂಡುಬರುವ ನಗರಗಳು ಇಲ್ಲವೆ ವಿವರಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಪಟ್ಟವುಗಳಾಗಿವೆ. ಭೂಪಟಗಳಲ್ಲಿ ಹೆಸರಿಸಲ್ಪಟ್ಟಿರುವ ಪ್ರತಿಯೊಂದು ಸ್ಥಳದ ಹೆಸರು, ವಿಷಯಸೂಚಿಯಲ್ಲಿರದಿದ್ದರೂ (ಪುಟಗಳು 34-5) ನೀವು ಸದ್ಯಕ್ಕೆ ಸಂಶೋಧನೆಮಾಡುತ್ತಿರುವ ಅಂಶದೊಂದಿಗೆ ಸಂಬಂಧಿಸುವ ಭೂಪಟಗಳನ್ನು ಕಂಡುಹಿಡಿಯಲು ಅದು ಬಹುಮಟ್ಟಿಗೆ ನಿಮಗೆ ಸಹಾಯಮಾಡಬಲ್ಲದು.

ಮಧ್ಯದ ಪುಟಗಳಲ್ಲಿರುವ (18-19) ಭೂಪಟದಲ್ಲಿ, ವಾಗ್ದತ್ತ ದೇಶದ ಪಟ್ಟಣಗಳ ಹಾಗೂ ನಗರಗಳ ಅತ್ಯಂತ ದೊಡ್ಡ ಸಂಗ್ರಹವಿದೆ. ಭೂಪಟ ವಿವರಪಟ್ಟಿಯು, ಲೇವಿಯ ನಗರಗಳನ್ನೂ ಆರು ಆಶ್ರಯ ನಗರಗಳನ್ನೂ ಕಂಡುಕೊಳ್ಳುವಂತೆ ಹಾಗೂ ಒಂದು ಸ್ಥಳದ ಕುರಿತಾಗಿ ಹೀಬ್ರು ಅಥವಾ ಗ್ರೀಕ್‌ ಶಾಸ್ತ್ರಗಳಲ್ಲಿ ಇಲ್ಲವೆ ಎರಡರಲ್ಲಿಯೂ ತಿಳಿಸಲ್ಪಟ್ಟಿದೆಯೋ ಎಂಬುದನ್ನು ಕಂಡುಹಿಡಿಯುವಂತೆ ನಿಮಗೆ ಸಹಾಯಮಾಡುವುದು.

ಬೈಬಲ್‌ನಲ್ಲಿ ತಿಳಿಸಲ್ಪಟ್ಟಿರುವ ಕೆಲವು ನಿವೇಶನಗಳು ಎಲ್ಲಿದ್ದವೆಂಬುದು ಸದ್ಯಕ್ಕೆ ಅಜ್ಞಾತವಾಗಿದೆ. ಆದುದರಿಂದ ಅವುಗಳಲ್ಲಿ ಹೆಚ್ಚಿನ ಹೆಸರುಗಳು ಆ ಮಧ್ಯದ ಪುಟಗಳಲ್ಲಿರುವ ಭೂಪಟದಲ್ಲಿಲ್ಲ. ಅಲ್ಲದೆ, ಅದರಲ್ಲಿ ಗೋತ್ರೀಯ ಮೇರೆಗಳ ಪಟ್ಟಿಗಳಲ್ಲಿರುವ ಎಲ್ಲಾ ಪಟ್ಟಣಗಳಂತೆ, ಪ್ರತಿಯೊಂದು ನಗರ ಹಾಗೂ ಪಟ್ಟಣಗಳ ಹೆಸರನ್ನು ಒಳಗೂಡಿಸಲು ಸಾಧ್ಯವಿರಲಿಲ್ಲ. (ಯೆಹೋ, ಅಧ್ಯಾ. 15-19) ಆದರೂ, ಸಾಮಾನ್ಯವಾಗಿ ಆ ಭೂಪಟದಲ್ಲಿ ಅವುಗಳ ಸಮೀಪದಲ್ಲಿರುವ ನಗರಗಳು ಇವೆ. ಇದು ನಿಮಗೆ ಆ ಸ್ಥಳ ಸರಿಸುಮಾರು ಎಲ್ಲಿದ್ದಿರಬಹುದೆಂಬದನ್ನು ತಿಳಿದುಕೊಳ್ಳುವಂತೆ ಸಾಧ್ಯಮಾಡುತ್ತದೆ. ಕೆಲವೊಂದು ಭೂವೈಶಿಷ್ಟ್ಯಗಳು (ಪರ್ವತಗಳು, ನದಿಗಳು ಮತ್ತು ತೊರೆ ಕಣಿವೆಗಳು [Torrent Valley] *) ಗುರುತಿಸಲ್ಪಟ್ಟಿವೆ, ಮತ್ತು ಔನ್ನತ್ಯ ಹಾಗೂ ಭೂಪ್ರದೇಶದ ಗುಣಲಕ್ಷಣಗಳು ಬಣ್ಣಗಳ ಮೂಲಕ ಸೂಚಿಸಲ್ಪಟ್ಟಿವೆ. ಇಂಥ ವಿವರಗಳು, ಬೈಬಲ್‌ ಘಟನೆಗಳ ಅಂಶಗಳನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವಂತೆ ನಿಮಗೆ ಸಹಾಯಮಾಡಬಲ್ಲವು.

ಬೈಬಲ್‌ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯು ಶಾಸ್ತ್ರಗಳ ಒಳನೋಟ ಎಂಬ ವಿಶ್ವಕೋಶದಲ್ಲಿ ಲಭ್ಯವಿದೆ. * ಇದು ಅನೇಕ ಭಾಷೆಗಳಲ್ಲಿ ಲಭ್ಯವಿದೆ. ನೀವು ಅದನ್ನು ಮತ್ತು ಇತರ ಬೈಬಲ್‌ ಅಧ್ಯಯನ ಸಹಾಯಕಗಳನ್ನು ಉಪಯೋಗಿಸುವಾಗ, ‘ಒಳ್ಳೆಯ ದೇಶವನ್ನು ನೋಡಿ’ ಬ್ರೋಷರನ್ನು ನಿಮ್ಮ ಸಮೀಪದಲ್ಲೇ ಇಟ್ಟುಕೊಳ್ಳಿ. ನಿಮ್ಮ ಜೀವನಕ್ಕೆ ಬಹಳಷ್ಟು ಉಪಯುಕ್ತವಾಗಿರುವ ಪ್ರತಿಯೊಂದು ಶಾಸ್ತ್ರವನ್ನು ನೀವು ಅಧ್ಯಯನ ಮಾಡುತ್ತಿರುವಾಗ ಅದನ್ನು ನೋಡುತ್ತಾ ಇರಿ.​—⁠2ತಿಮೊ 3:​16, 17.

[ಪಾದಟಿಪ್ಪಣಿಗಳು]

^ ಪ್ಯಾರ. 10 ತೊರೆ ಕಣಿವೆಗಾಗಿರುವ ಹೀಬ್ರು ಪದವು, ಒಂದು ತೊರೆಯು ಹರಿಯುತ್ತಿರುವಂಥ ಕಣಿವೆಗೆ ಇಲ್ಲವೆ ಸ್ವತಃ ಆ ತೊರೆಗೆ ನಿರ್ದೇಶಿಸುತ್ತಿರಬಹುದು. ಕನ್ನಡ ಬೈಬಲ್‌ನಲ್ಲಿ ಇದನ್ನು ಹಳ್ಳ, ತಗ್ಗು, ಹೊಳೆ, ನದಿ ಎಂದು ಭಾಷಾಂತರಿಸಲಾಗಿದೆ.

^ ಪ್ಯಾರ. 11 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 5ರಲ್ಲಿರುವ ಚೌಕ]

ಬೈಬಲ್‌ ಪುಸ್ತಕಗಳನ್ನು ಈ ಸ್ಥಳಗಳಲ್ಲಿ ಬರೆಯಲಾಯಿತು

ಬಾಬೆಲ್‌

ಕೈಸರೈಯ

ಕೊರಿಂಥ

ಈಜಿಪ್ಟ್‌

ಎಫೆಸ

ಯೆರೂಸಲೇಮ್‌

ಮಕೆದೋನ್ಯ

ಮೋವಾಬ್‌

ಪತ್ಮೋಸ್‌

ವಾಗ್ದತ್ತ ದೇಶ

ರೋಮ್‌

ಶೂಷನ್‌

[ಪುಟ 4, 5ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಬೈಬಲ್‌ ದೇಶಗಳು ಮತ್ತು ಮುಖ್ಯ ಪಟ್ಟಣಗಳು

A1 ಇಟಲಿ

A2 ರೋಮ್‌

A3 ಸಿಸಿಲಿ

A3 ಮಾಲ್ಟಾ

C2 ಮಕೆದೋನ್ಯ

C2 ಫಿಲಿಪ್ಪಿ

C2 ಗ್ರೀಸ್‌

C3 ಅಥೆನ್ಸ್‌

C3 ಕೊರಿಂಥ

C3 ಕ್ರೇತ

C4 ಲಿಬ್ಯ

D3 ಅಂತಿಯೋಕ್ಯ (ಪಿಸಿದ್ಯ)

D3 ಎಫೆಸ

D3 ಪತ್ಮೋಸ್‌

D3 ರೋದ

D4 ಮೋಫ್‌

D5 ಈಜಿಪ್ಟ್‌

E2 ಏಷ್ಯಾ ಮೈನರ್‌

E3 ತಾರ್ಸ

E3 ಅಂತಿಯೋಕ್ಯ (ಸಿರಿಯ)

E3 ಸೈಪ್ರಸ್‌

E4 ಸೀದೋನ್‌

E4 ದಮಸ್ಕ

E4 ತೂರ್‌

E4 ಕೈಸರೈಯ

E4 ವಾಗ್ದತ್ತ ದೇಶ

E4 ಯೆರೂಸಲೇಮ್‌

E4 ಮೋವಾಬ್‌

E4 ಕಾದೇಶ್‌

E4 ಎದೋಮ್‌

F3 ಏದೆನ್‌ ತೋಟ?

F3 ಅಶ್ಶೂರ್‌

F3 ಖಾರಾನ್‌

F3 ಸಿರಿಯ

F5 ಅರೇಬಿಯ

G3 ನಿನೆವೆ

G4 ಬಾಬೆಲ್‌

G4 ಕಸ್ದೀಯ ರಾಜ್ಯ

G4 ಶೂಷನ್‌

G4 ಊರ್‌

H3 ಮೇದ್ಯ

[ಪರ್ವತಗಳು]

E5 ಸೀನಾಯಿ ಬೆಟ್ಟ

G2 ಅರಾರಾಟ್‌ ಬೆಟ್ಟಗಳು

[ಜಲಾಶಯಗಳು]

C3 ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

E1 ಕಪ್ಪು ಸಮುದ್ರ

E5 ಕೆಂಪು ಸಮುದ್ರ

H2 ಕ್ಯಾಸ್ಪಿಯನ್‌ ಸಮುದ್ರ

H5 ಪರ್ಷಿಯನ್‌ ಖಾರಿ

[ನದಿಗಳು]

D5 ನೈಲ್‌ ನದಿ

F3 ಯೂಫ್ರೇಟೀಸ್‌ ನದಿ

G3 ಟೈಗ್ರಿಸ್‌ ನದಿ