ಮೂಲಪಿತೃಗಳ ಲೋಕ
ಮೂಲಪಿತೃಗಳ ಲೋಕ
ಸ್ತೆಫನನು ಸುಪ್ರಸಿದ್ಧವಾದ ಒಂದು ಭಾಷಣವನ್ನು ಕೆಲವೊಂದು ಭೂಗೋಳಶಾಸ್ತ್ರೀಯ ವಾಸ್ತವಾಂಶಗಳೊಂದಿಗೆ ಹೀಗೆ ಆರಂಭಿಸಿದನು: “ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ . . . [ಯೆಹೋವನು] ಅವನಿಗೆ ಕಾಣಿಸಿಕೊಂಡು . . . ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು.” (ಅಕೃ 7:1-4) ಈ ಅಪ್ಪಣೆಯು, ವಾಗ್ದತ್ತ ದೇಶದಲ್ಲಿ ಅಬ್ರಹಾಮ, ಇಸಾಕ, ಯಾಕೋಬರನ್ನು ಒಳಗೂಡಿದಂಥ ಕೆಲವೊಂದು ಮುಖ್ಯ ಘಟನೆಗಳಿಗೆ ನಡೆಸಿತು. ಮತ್ತು ಈ ಘಟನೆಗಳು, ಮಾನವಕುಲವನ್ನು ಆಶೀರ್ವದಿಸುವ ದೇವರ ಉದ್ದೇಶದೊಂದಿಗೆ ಸಂಬಂಧಿಸಿದ್ದವು.—ಆದಿ 12:1-3; ಯೆಹೋ 24:3.
ದೇವರು ಅಬ್ರಹಾಮನನ್ನು (ಇಲ್ಲವೆ ಅಬ್ರಾಮನನ್ನು) ಕಸ್ದೀಯರ ಊರ್ ಪಟ್ಟಣದಿಂದ ಹೊರತಂದನು. ಇದು, ಯೂಫ್ರೇಟೀಸ್ ನದಿಯ ಪೂರ್ವ ದಡದಲ್ಲಿದ್ದ ಒಂದು ಸಮೃದ್ಧ ಪಟ್ಟಣವಾಗಿತ್ತು. ಅಲ್ಲಿಂದ ಅಬ್ರಹಾಮನು ಯಾವ ಮಾರ್ಗವನ್ನು ಹಿಡಿಯಲಿದ್ದನು? ಸುಮೇರ್ ಇಲ್ಲವೆ ಶಿನಾರ್ ಎಂದೂ ಕರೆಯಲಾಗುತ್ತಿದ್ದ ಒಂದು ಪ್ರದೇಶವಾದ ಕಸ್ದೀಯದಿಂದ, ನೇರವಾಗಿ ಪಶ್ಚಿಮ ದಿಕ್ಕಿಗೆ ಹೋಗುವುದು ಸುಲಭವಾಗಿ ತೋರಿರಬಹುದು. ಹಾಗಿರುವಾಗ, ಖಾರಾನ್‌ನಷ್ಟು ದೂರದ ಉತ್ತರದಿಕ್ಕಿಗೆ ಹೋಗುವಂಥ ಅಗತ್ಯವಾದರೂ ಏನಿತ್ತು?
ಊರ್ ಪಟ್ಟಣವು, ಫಲವಂತ ಬಾಲಚಂದ್ರದ (ಫರ್ಟೈಲ್ ಕ್ರೆಸಂಟ್) ಪೂರ್ವ ಅಂಚಿನ ಹತ್ತಿರದಲ್ಲಿತ್ತು. ಈ ಫಲವಂತ ಬಾಲಚಂದ್ರವು, ಪ್ಯಾಲೆಸ್ಟೈನ್‌ನಿಂದ ಹಿಡಿದು ಟೈಗ್ರಿಸ್ ಹಾಗೂ ಯೂಫ್ರೇಟೀಸ್ ನದಿಗಳ ಜಲಾನಯನ ಭೂಮಿಯ ವರೆಗೆ ವ್ಯಾಪಿಸಿದ್ದಂಥ ಅರ್ಧವೃತ್ತಾಕಾರದ ಪ್ರದೇಶವಾಗಿತ್ತು. ಹಿಂದೆ ಈ ಕ್ಷೇತ್ರದಲ್ಲಿ ಹೆಚ್ಚು ಹಿತಕರವಾದ ಹವಾಮಾನವು ಇದ್ದಿರಬಹುದು. ಆ ಪ್ರದೇಶದ ವಕ್ರತಲದ ದಕ್ಷಿಣದಲ್ಲಿ ಸುಣ್ಣದ ಗುಡ್ಡಗಳು ಹಾಗೂ ಮರಳುತುಂಬಿರುವ ಬೈಲುಗಳಿದ್ದ ಸೈರೋ-ಅರೇಬಿಯನ್ ಮರುಭೂಮಿ ಇತ್ತು. ಮೆಡಿಟರೇನಿಯನ್ ಕರಾವಳಿ ಮತ್ತು ಮೆಸೊಪೊತಾಮ್ಯದ ನಡುವೆ ಇದು “ಬಹುಮಟ್ಟಿಗೆ ಭೇದಿಸಲಾಗದಂಥ ಒಂದು ತಡೆ” ಆಗಿತ್ತೆಂದು ದಿ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಹೇಳುತ್ತದೆ. ಕೆಲವೊಂದು ವರ್ತಕ ತಂಡಗಳು, ಯೂಫ್ರೇಟೀಸ್‌ನಿಂದ ತದ್ಮೋರ್ ವರೆಗಿನ ಅರಣ್ಯವನ್ನು ದಾಟಿ ದಮಸ್ಕಕ್ಕೆ ಮುಂದುವರಿದು ಹೋಗುತ್ತಿದ್ದಿರಬಹುದು, ಆದರೆ ಅಬ್ರಹಾಮನಾದರೋ ತನ್ನ ಕುಟುಂಬ ಮತ್ತು ದನಕರುಗಳನ್ನು ಅಂಥ ಒಂದು ಅರಣ್ಯದ ಮಧ್ಯದಿಂದ ನಡೆಸಿಕೊಂಡು ಹೋಗಲಿಲ್ಲ.
ಅದರ ಬದಲು ಅಬ್ರಹಾಮನು ಯೂಫ್ರೇಟೀಸ್ ನದಿ ಕಣಿವೆಯ ತೀರದಿಂದ ಉತ್ತರದಲ್ಲಿ ಖಾರಾನ್‌ಗೆ ಹೋದನು. ಅಲ್ಲಿಂದ ಅವನು ವರ್ತಕರ ತಂಡಗಳು ಉಪಯೋಗಿಸುತ್ತಿದ್ದ ಒಂದು ಮಾರ್ಗವನ್ನು ಹಿಡಿದು ಕರ್ಕೆಮೀಷಿನಲ್ಲಿದ್ದ ಒಂದು ಕಾಲುಹೊಳೆಗೆ ಬಂದನು. ಅಲ್ಲಿಂದ ಅವನು ದಕ್ಷಿಣಕ್ಕೆ ಮುಖಮಾಡಿ, ದಮಸ್ಕಕ್ಕೆ ಮತ್ತು ಮುಂದೆ ಯಾವುದನ್ನು ಗಲಿಲಾಯ ಸಮುದ್ರವೆಂದು ಕರೆಯಲಾಯಿತೊ ಅಲ್ಲಿಗೆ ಬಂದು ತಲಪಿದನು. ವಯಾ ಮೆರೀಸ್ ಅಥವಾ, “ಸಮುದ್ರದ ಮಾರ್ಗ”ವು ಮೆಗಿದ್ದೋವನ್ನು ದಾಟುತ್ತಾ ಐಗುಪ್ತದ ವರೆಗೂ ಮುಂದುವರಿಯಿತು. ಆದರೆ ಅಬ್ರಹಾಮನು ಸಮಾರ್ಯದ ಬೆಟ್ಟಗಳ ಮಧ್ಯದಿಂದ ಪ್ರಯಾಣಿಸುತ್ತಾ, ಕೊನೆಯಲ್ಲಿ ಶೆಕೆಮಿನಲ್ಲಿ ಪಾಳೆಯಹೂಡಿದನು. ಕಾಲಾನಂತರ, ಅವನು ಅದೇ ಗುಡ್ಡಗಾಡು ಪ್ರದೇಶದ ಮಾರ್ಗದಲ್ಲೇ ದಕ್ಷಿಣದಿಕ್ಕಿನಲ್ಲಿ ಮುಂದುವರಿದು ಹೋದನು. ಆದಿಕಾಂಡ 12:8–13:4ನ್ನು ಓದುವಾಗ, ನೀವು ಅವನನ್ನು ಹಿಂಬಾಲಿಸಿರಿ. ಅವನ ವೈವಿಧ್ಯಮಯ ಅನುಭವಗಳ ಭಾಗವಾಗಿದ್ದ ಈ ಇತರ ಸ್ಥಳಗಳನ್ನೂ ಗಮನಿಸಿರಿ: ದಾನ್, ದಮಸ್ಕ, ಹೋಬಾ, ಮಮ್ರೆ, ಸೊದೋಮ್, ಗೆರಾರ್, ಬೇರ್ಷೆಬ, ಮತ್ತು ಮೊರೀಯ (ಯೆರೂಸಲೇಮ್).—ಆದಿ 14:14-16; 18:1-16; 20:1-18; 21:25-34; 22:1-19.
ಈ ಸ್ಥಳಗಳು ಎಲ್ಲಿವೆ ಎಂಬದನ್ನು ಅರ್ಥಮಾಡಿಕೊಳ್ಳುವುದು, ಇಸಾಕ ಹಾಗೂ ಯಾಕೋಬರ ಜೀವನಗಳಲ್ಲಿನ ಘಟನೆಗಳ ಬಗ್ಗೆ ಹೆಚ್ಚಿನ ಜ್ಞಾನೋದಯವನ್ನು ಕೊಡುತ್ತದೆ. ದೃಷ್ಟಾಂತಕ್ಕಾಗಿ, ಅಬ್ರಹಾಮನು ಬೇರ್ಷೆಬದಲ್ಲಿದ್ದಾಗ, ಇಸಾಕನಿಗಾಗಿ ಒಬ್ಬ ಹೆಂಡತಿಯನ್ನು ಕಂಡುಕೊಳ್ಳಲಿಕ್ಕಾಗಿ ಅವನು ತನ್ನ ಸೇವಕನನ್ನು ಎಲ್ಲಿಗೆ ಕಳುಹಿಸಿದನು? ದೂರದ ಉತ್ತರಕ್ಕೆ, ಮೆಸೊಪೊತಾಮ್ಯದ (ಇದರರ್ಥ, “ಎರಡು ನದಿಗಳ ಮಧ್ಯದಲ್ಲಿರುವ ಆರಾಮ್‌ಸೀಮೆ”) ಪದ್ದನ್‌ಅರಾಮ್ ಪ್ರದೇಶಕ್ಕೆ ಆದಿ 24:10, BSI-Reference Edition ಪಾದಟಿಪ್ಪಣಿ; 62-64.
ಕಳುಹಿಸಿದನು. ತದನಂತರ, ರೆಬೆಕ್ಕಳು ಇಸಾಕನನ್ನು ಭೇಟಿಯಾಗಲು, ಪ್ರಾಯಶಃ ಕಾದೇಶ್‌ಗೆ ಸಮೀಪದಲ್ಲಿ, ದಕ್ಷಿಣಸೀಮೆಯ (ದಕ್ಷಿಣಪ್ರಾಂತ) ವರೆಗೂ ಒಂಟೆಯ ಮೇಲೆ ಮಾಡಿದ ಪ್ರಯಾಸಕರ ಪ್ರಯಾಣದ ಕುರಿತು ಸ್ವಲ್ಪ ಊಹಿಸಿಕೊಳ್ಳಿ.—ತದನಂತರ, ಅವರ ಮಗನಾದ ಯಾಕೋಬನು (ಇಸ್ರಾಯೇಲ್) ಸಹ, ಯೆಹೋವನ ಆರಾಧಕಳೊಬ್ಬಳನ್ನು ವಿವಾಹವಾಗಲಿಕ್ಕೋಸ್ಕರ ಅದೇ ರೀತಿಯ ದೀರ್ಘ ಪ್ರಯಾಣವನ್ನು ಮಾಡಿದನು. ಆದರೆ ಯಾಕೋಬನು ಸ್ವದೇಶಕ್ಕೆ ಹಿಂದಿರುಗುವಾಗ ಸ್ವಲ್ಪ ಭಿನ್ನವಾದ ಮಾರ್ಗವನ್ನು ಹಿಡಿದನು. ಪೆನೂವೇಲ್ ಬಳಿಯಲ್ಲಿದ್ದ ಯಬ್ಬೋಕ್ ಹೊಳೆಯನ್ನು ಕಾಲ್ನಡಗೆಯಲ್ಲಿ ದಾಟಿದ ನಂತರ, ಯಾಕೋಬನು ಒಬ್ಬ ದೇವದೂತನೊಂದಿಗೆ ಹೋರಾಡಿದನು. (ಆದಿ 31:21-25; 32:2, 22-30) ಆ ಕ್ಷೇತ್ರದಲ್ಲಿ ಏಸಾವನೊಂದಿಗೆ ಅವನ ಭೇಟಿ ಆಯಿತು ಮತ್ತು ಅವರಿಬ್ಬರೂ ಅಲ್ಲಿಂದ ಪ್ರತ್ಯೇಕವಾದ ಪ್ರದೇಶಗಳಲ್ಲಿ ವಾಸಿಸಲು ಹೋದರು.—ಆದಿ 33:1, 15-20.
ಶೆಕೆಮಿನಲ್ಲಿ ಯಾಕೋಬನ ಮಗಳಾದ ದೀನಳ ಮೇಲೆ ಅತ್ಯಾಚಾರವೆಸಗಲ್ಪಟ್ಟ ಬಳಿಕ, ಅವನು ಬೇತೇಲಿಗೆ ಸ್ಥಳಾಂತರಿಸಿದನು. ಯಾಕೋಬನ ಪುತ್ರರು ಅವನ ಹಿಂಡನ್ನು ಮೇಯಿಸಲಿಕ್ಕಾಗಿ ಎಷ್ಟು ದೂರ ಹೋಗಿದ್ದರು, ಮತ್ತು ಕಟ್ಟಕಡೆಗೆ ಯೋಸೇಫನು ಅವರನ್ನು ಎಲ್ಲಿ ಕಂಡುಕೊಂಡನೆಂಬುದನ್ನು ನೀವು ಚಿತ್ರಿಸಿಕೊಳ್ಳಬಲ್ಲಿರೊ? ಬೇತೇಲ್ ಮತ್ತು ದೋತಾನಿನ ನಡುವೆ ಇರುವ ಅಂತರವನ್ನು ನೋಡಲಿಕ್ಕಾಗಿ ಈ ಭೂಪಟವು (ಮತ್ತು 18-19ನೆಯ ಪುಟಗಳು) ನಿಮಗೆ ಸಹಾಯಮಾಡಬಹುದು. (ಆದಿ 35:1-8; 37:12-17) ಯೋಸೇಫನ ಅಣ್ಣಂದಿರು ಅವನನ್ನು, ಐಗುಪ್ತದ ಕಡೆಗೆ ಹೋಗುತ್ತಿದ್ದ ವ್ಯಾಪಾರಿಗಳಿಗೆ ಮಾರಿಬಿಟ್ಟರು. ಇವರು ಯೋಸೇಫನನ್ನು ಐಗುಪ್ತಕ್ಕೆ ಕೊಂಡೊಯ್ದದ್ದು, ಇಸ್ರಾಯೇಲ್ಯರು ಐಗುಪ್ತಕ್ಕೆ ಸ್ಥಳಾಂತರಿಸುವಂತೆ ಮತ್ತು ನಂತರ ಅಲ್ಲಿಂದ ಹೊರಡುವಂತೆ ನಡೆಸಿತು. ನಿಮ್ಮ ಅಭಿಪ್ರಾಯಕ್ಕನುಸಾರ ಆ ವ್ಯಾಪಾರಿಗಳು ಯಾವ ಮಾರ್ಗವನ್ನು ಬಳಸಿರಬಹುದು?—ಆದಿ 37:25-28.
[ಪುಟ 7ರಲ್ಲಿರುವ ಭೂಪಟಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಅಬ್ರಹಾಮನ ಪ್ರಯಾಣಗಳು (see publication)
ಇಸಾಕನ ಪ್ರಯಾಣಗಳು (see publication)
ಯಾಕೋಬನ ಪ್ರಯಾಣಗಳು (see publication)
ಮುಖ್ಯ ರಸ್ತೆಗಳು (see publication)
ಮೂಲಪಿತೃಗಳು (ಸ್ಥೂಲ ನೋಟ)
A4 ಗೋಷೆನ್
A5 ಈಜಿಪ್ಟ್
B4 ಶೂರ್
B5 ಪಾರಾನ್
C3 ದಮಸ್ಕ
C3 ದಾನ್ (ಲಯಿಷ್)
C4 ಶೆಕೆಮ್
C4 ಬೇತೇಲ್
C4 ಹೆಬ್ರೋನ್ (ಕಿರ್ಯತರ್ಬ)
C4 ಗೆರಾರ್
C4 ಬೇರ್ಷೆಬ
C4 ಸೇಯೀರ್
C4 ಕಾದೇಶ್
C5 ಎದೋಮ್
D1 ಕರ್ಕೆಮೀಷ್
D2 ತದ್ಮೋರ್
D3 ಹೋಬಾ
E1 ಪದ್ದನ್‌ಅರಾಮ್
E1 ಖಾರಾನ್
F2 ಮೆಸೊಪೊತಾಮ್ಯ
G1 ನಿನೆವೆ
G2 ಫಲವಂತ ಬಾಲಚಂದ್ರ
G3 ಬಾಬೆಲ್
H4 ಕಸ್ದೀಯ
H4 ಊರ್
[ಪರ್ವತಗಳು]
C4 ಮೊರೀಯ
[ಜಲಾಶಯಗಳು]
B3 ಮೆಡಿಟರೇನಿಯನ್ ಸಮುದ್ರ (ಮಹಾ ಸಮುದ್ರ)
[ನದಿಗಳು]
E2 ಯೂಫ್ರೇಟೀಸ್
G2 ಟೈಗ್ರಿಸ್
ಮೂಲಪಿತೃಗಳು (ವಾಗ್ದತ್ತ ದೇಶದಲ್ಲಿ)
ಕಾನಾನ್
ಮೆಗಿದ್ದೋ
ಗಿಲ್ಯಾದ್
ದೋತಾನ್
ಶೆಕೆಮ್
ಸುಕ್ಕೋತ್
ಮಹನಯಿಮ್
ಪೆನೂವೇಲ್
ಬೇತೇಲ್ ಲೂಜ್
ಆಯಿ
ಯೆರೂಸಲೇಮ್ (ಸಾಲೇಮ್)
ಬೇತ್ಲೆಹೇಮ್ (ಎಫ್ರಾತ)
ಮಮ್ರೆ
ಹೆಬ್ರೋನ್ (ಮಕ್ಪೇಲ)
ಗೆರಾರ್
ಬೇರ್ಷೆಬ
ಸೊದೋಮ್?
ದಕ್ಷಿಣಪ್ರಾಂತ
ರೆಹೋಬೋತ್?
ಲಹೈರೋಯಿ ಬಾವಿ
ಕಾದೇಶ್
ಮುಖ್ಯ ರಸ್ತೆಗಳು
ವಯಾ ಮೆರೀಸ್
ರಾಜಮಾರ್ಗ
[ಪರ್ವತಗಳು]
ಮೊರೀಯ
[ಜಲಾಶಯಗಳು]
ಲವಣ ಸಮುದ್ರ
[ನದಿಗಳು ಮತ್ತು ಹೊಳೆಗಳು]
ಯಬ್ಬೋಕ್
ಯೊರ್ದನ್
[ಪುಟ 6ರಲ್ಲಿರುವ ಚಿತ್ರ]
ಬಾಬೆಲಿನ ಹತ್ತಿರದಲ್ಲಿ ಯೂಫ್ರೇಟೀಸ್ ನದಿ
[ಪುಟ 6ರಲ್ಲಿರುವ ಚಿತ್ರ]
ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು, ಮತ್ತು ಹತ್ತಿರದಲ್ಲೇ ಮಂದೆಗಳನ್ನು ಮೇಯಿಸಿದನು
[ಪುಟ 6ರಲ್ಲಿರುವ ಚಿತ್ರ]
ಯಬ್ಬೋಕ್ ತೊರೆ ಕಣಿವೆ