“ಯೆಹೂದ್ಯರ ಸೀಮೆಯಲ್ಲಿ” ಯೇಸು
“ಯೆಹೂದ್ಯರ ಸೀಮೆಯಲ್ಲಿ” ಯೇಸು
ಅಪೊಸ್ತಲ ಪೇತ್ರನು ಕೊರ್ನೇಲ್ಯನಿಗೆ ಸಾಕ್ಷಿಕೊಡುತ್ತಿದ್ದಾಗ, ಯೇಸು “ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸಲೇಮಿನಲ್ಲಿಯೂ” ಮಾಡಿದಂಥ ಕಾರ್ಯಗಳ ಬಗ್ಗೆ ತಿಳಿಸಿದನು. (ಅಕೃ 10:39) ಲೋಕ ಇತಿಹಾಸದ ಮೇಲೆ ಪ್ರಭಾವಬೀರಿದಂಥ ಯೇಸುವಿನ ಶುಶ್ರೂಷೆಯಲ್ಲಿ ಯಾವ ಕ್ಷೇತ್ರಗಳು ಒಳಗೂಡಿದ್ದವೆಂದು ನೀವು ನೆನಸುತ್ತೀರಿ?
“ಯೆಹೂದ್ಯರ ಸೀಮೆ”ಯಲ್ಲಿ ಯೂದಾಯವೂ ಸೇರಿತ್ತು. ಇಲ್ಲಿ ಯೇಸು ಸ್ವಲ್ಪ ಮಟ್ಟಿಗೆ ದೇವರ ಕೆಲಸವನ್ನು ಮಾಡಿದನು. (ಲೂಕ 4:44) ದೀಕ್ಷಾಸ್ನಾನವಾದ ಬಳಿಕ, ಯೇಸು ಯೆಹೂದದ (ಇಲ್ಲವೆ ಯೂದಾಯದ) ಅರಣ್ಯದಲ್ಲಿ 40 ದಿನಗಳನ್ನು ಕಳೆದನು. ಇದು ಒಂದು ಶುಷ್ಕ ಹಾಗೂ ನಿರ್ಜನ ಪ್ರದೇಶವಾಗಿದ್ದು, ದಂಗೆಕೋರರು ಮತ್ತು ಡಕಾಯಿತರು ಪದೇ ಪದೇ ಕೂಡಿಬರುತ್ತಿದ್ದ ಸ್ಥಳವಾಗಿತ್ತು. (ಲೂಕ 10:30) ತದನಂತರ, ಯೇಸು ಉತ್ತರದಿಕ್ಕಿನತ್ತ ಪ್ರಯಾಣಮಾಡಿದನು. ಈ ಪ್ರಯಾಣದ ಮಧ್ಯದಲ್ಲಿಯೇ ಸುಖರೆಂಬ ಊರಿನ ಬಳಿಯಲ್ಲಿ ಅವನು ಸಮಾರ್ಯದ ಒಬ್ಬ ಸ್ತ್ರೀಗೆ ಸಾಕ್ಷಿಕೊಟ್ಟನು.—ಯೋಹಾ 4:3-7.
ಸುವಾರ್ತೆ ಪುಸ್ತಕಗಳನ್ನು ಪುನರ್ವಿಮರ್ಶಿಸುವಾಗ, ಯೇಸು ಗಲಿಲಾಯದಲ್ಲಿ ಹೆಚ್ಚಾಗಿ ಸಾರಿದನೆಂಬುದು ತೋರಿಬರುತ್ತದೆ. ಅವನು ವಾರ್ಷಿಕ ಹಬ್ಬಗಳಿಗಾಗಿ ದಕ್ಷಿಣದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದನಾದರೂ, ತನ್ನ ಶುಶ್ರೂಷೆಯ ಮೊದಲ ಎರಡು ವರ್ಷಗಳ ಹೆಚ್ಚಿನ ಭಾಗವನ್ನು ಅವನು ವಾಗ್ದತ್ತ ದೇಶದ ಉತ್ತರ ಭಾಗದಲ್ಲಿ ಕಳೆದನು. (ಯೋಹಾ 7:2-10; 10:22, 23) ಉದಾಹರಣೆಗಾಗಿ, ಗಲಿಲಾಯ ಸಮುದ್ರದ ಬಳಿಯಲ್ಲಿ ಇದ್ದಾಗ ಅಥವಾ ಆ ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದಾಗ ಅವನು ಅನೇಕ ಪ್ರಸಿದ್ಧ ಬೋಧನೆಗಳನ್ನು ತಿಳಿಸಿದನು ಮತ್ತು ಭಾವೋತ್ಪಾದಕ ಅದ್ಭುತಗಳನ್ನು ನಡೆಸಿದನು. ಅವನು ಆ ಸಮುದ್ರದ ಬಿರುಗಾಳಿಗ್ರಸ್ತ ನೀರುಗಳನ್ನು ಶಾಂತಗೊಳಿಸಿ, ಅದರ ಮೇಲೆ ನಡೆದಿರುವುದನ್ನೂ ಜ್ಞಾಪಿಸಿಕೊಳ್ಳಿರಿ. ಅವನು ದೋಣಿಗಳಲ್ಲಿ ಕುಳಿತುಕೊಂಡು, ಆ ಸಮುದ್ರದ ಸಣ್ಣ ಸಮೇಕಲ್ಲು ತುಂಬಿದ ತೀರದಲಿದ್ದ ಜನರ ಗುಂಪುಗಳಿಗೆ ಸಾರಿದನು. ಅವನ ಆರಂಭದ ಆಪ್ತ ಹಿಂಬಾಲಕರು ಹತ್ತಿರದಲ್ಲಿದ್ದ ಮೀನುಹಿಡಿಯುವ ಮತ್ತು ಕೃಷಿಮಾಡುವ ಸಮುದಾಯಗಳಿಂದ ಬಂದವರಾಗಿದ್ದರು.—ಮಾರ್ಕ 3:7-12; 4:35-41; ಲೂಕ 5:1-11; ಯೋಹಾ 6:16-21; 21:1-19.
ಗಲಿಲಾಯದಲ್ಲಿ ಯೇಸುವಿನ ಶುಶ್ರೂಷೆಯ ಕೇಂದ್ರಸ್ಥಾನವು, ಸಮುದ್ರತೀರದ ಕಪೆರ್ನೌಮ್ ಎಂಬ ‘ಅವನ ಊರು’ ಆಗಿತ್ತು. (ಮತ್ತಾ 9:1) ಅವನು ತನ್ನ ಸುಪ್ರಸಿದ್ಧ ಪರ್ವತ ಪ್ರಸಂಗವನ್ನು ಕೊಟ್ಟಾಗ, ಅಲ್ಲಿಂದ ಅಷ್ಟೇನೂ ದೂರದಲ್ಲಿಲ್ಲದ ಒಂದು ಬೆಟ್ಟದ ತಪ್ಪಲಿನಲ್ಲಿದ್ದನು. ಕೆಲವೊಮ್ಮೆ, ಅವನು ಕಪೆರ್ನೌಮ್ ಕ್ಷೇತ್ರದಿಂದ ಮಗದಾನ, ಬೇತ್ಸಾಯಿದ, ಇಲ್ಲವೆ ಹತ್ತಿರದ ಸ್ಥಳಗಳಿಗೆ ದೋಣಿಯಲ್ಲಿ ಹೋಗುತ್ತಿದ್ದನು.
ಯೇಸುವಿನ ಸ್ವಂತ ‘ಊರು,’ ಅವನು ಬೆಳೆದು ದೊಡ್ಡವನಾದ ನಜರೇತಿನಿಂದ, ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಕಾನಾದಿಂದ, ಒಬ್ಬ ವಿಧವೆಯ ಮಗನನ್ನು ಎಬ್ಬಿಸಿದಂಥ ನಾಯಿನ್ ಊರಿನಿಂದ, ಮತ್ತು ಚಮತ್ಕಾರದಿಂದ 5,000 ಮಂದಿ ಪುರುಷರನ್ನು ಉಣಿಸಿ, ಒಬ್ಬ ಕುರುಡ ವ್ಯಕ್ತಿಗೆ ದೃಷ್ಟಿಯನ್ನು ಪುನಃ ಕೊಟ್ಟ ಬೇತ್ಸಾಯಿದದಿಂದ ಹೆಚ್ಚು ದೂರದಲ್ಲಿರಲಿಲ್ಲವೆಂಬುದನ್ನು ಗಮನಿಸಿರಿ.
ಸಾ.ಶ. 32ರ ಪಂಚಾಶತ್ತಮದ ನಂತರ, ಯೇಸು ಉತ್ತರದಿಕ್ಕಿನತ್ತ, ಫಿನಿಷಿಯದ ರೇವುಪಟ್ಟಣಗಳಾಗಿರುವ ತೂರ್ ಮತ್ತು ಸೀದೋನಿಗೆ ಹೋದನು. ಅನಂತರ ಅವನು, ದೆಕಪೊಲಿ ಎಂದು ಕರೆಯಲ್ಪಡುತ್ತಿದ್ದ ಹತ್ತು ಗ್ರೀಕ್ ನಗರಗಳ ಕೆಲವು ನಗರಗಳಲ್ಲಿ ತನ್ನ ಶುಶ್ರೂಷೆಯನ್ನು ವಿಸ್ತರಿಸಿದನು. ಯೇಸು ಮೆಸ್ಸೀಯನಾಗಿದ್ದಾನೆಂದು ಪೇತ್ರನು ತಿಳಿಸಿದಂಥ ಸಂದರ್ಭದಲ್ಲಿ ಯೇಸು ಫಿಲಿಪ್ಪನಕೈಸರೈಯದ (F2) ಹತ್ತಿರದಲ್ಲಿದ್ದನು, ಮತ್ತು ನಂತರ ಸ್ವಲ್ಪ ಸಮಯದಲ್ಲೇ ಪ್ರಾಯಶಃ ಹೆರ್ಮೋನ್ ಬೆಟ್ಟದಲ್ಲಿ ರೂಪಾಂತರವು ನಡೆಯಿತು. ತದನಂತರ, ಯೇಸು ಯೊರ್ದನಿನಾಚೆ, ಪೆರಿಯ ಪ್ರದೇಶದಲ್ಲಿ ಸಾರಿದನು.—ಮಾರ್ಕ 7:24-37; 8:27–9:2; 10:1; ಲೂಕ 13:22, 33.
ಯೇಸು ಭೂಮಿಯ ಮೇಲೆ ತನ್ನ ಕೊನೆಯ ವಾರವನ್ನು ತನ್ನ ಶಿಷ್ಯರೊಂದಿಗೆ, “ದೊಡ್ಡ ಅರಸನ ಪಟ್ಟಣ”ವಾಗಿರುವ ಯೆರೂಸಲೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಕ್ಷೇತ್ರದಲ್ಲಿ ಕಳೆದನು. (ಮತ್ತಾ 5:35) ನೀವು ಸುವಾರ್ತೆ ಪುಸ್ತಕಗಳಲ್ಲಿ ಓದಿರುವಂಥ ಎಮ್ಮಾಹು, ಬೇಥಾನ್ಯ, ಬೇತ್ಫಗೆ ಮತ್ತು ಬೇತ್ಲೆಹೇಮ್ ಎಂಬ ಹತ್ತಿರದ ಸ್ಥಳಗಳನ್ನು ಈ ಭೂಪಟದಲ್ಲಿ ಕಂಡುಕೊಳ್ಳಬಹುದು.—ಲೂಕ 2:4; 19:29; 24:13; ಪುಟ 18ರಲ್ಲಿ ಒಳಚಿತ್ರದಲ್ಲಿ “ಯೆರೂಸಲೇಮ್ ಪ್ರದೇಶ” ನಕ್ಷೆಯನ್ನು ನೋಡಿರಿ.
[ಪುಟ 29ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ವಾಗ್ದತ್ತ ದೇಶ (ಯೇಸುವಿನ ದಿನದಲ್ಲಿ)
ಯೇಸುವಿನ ದಿನದಲ್ಲಿನ ವಾಗ್ದತ್ತ ದೇಶ
ದೆಕಪೊಲಿಯ ಪಟ್ಟಣಗಳು
E5 ಹಿಪ್ಪೊ(ಸ್)
E6 ಪೆಲ್ಲಾ
E6 ಸಿದಿಯಾಪೊಲಿಸ್
F5 ಗದರ
F7 ಗೆರಸ
G5 ಡಿಯೊನ್
G9 ಫಿಲದೆಲ್ಫಿಯ
H1 ದಮಸ್ಕ
H4 ರಫಾನ
I5 ಕೆನಾತ್
ಮುಖ್ಯ ರಸ್ತೆಗಳು (ಪ್ರಕಾಶನ ನೋಡಿ)
ಗಲಿಲಾಯ ಮತ್ತು ಯೆರೂಸಲೇಮಿನ ನಡುವಣ ಸಾಮಾನ್ಯ ಮಾರ್ಗ (ಪ್ರಕಾಶನ ನೋಡಿ)
ಪೆರಿಯವನ್ನು ಹಾದುಹೋಗುವ, ಗಲಿಲಾಯ ಮತ್ತು ಯೆರೂಸಲೇಮಿನ ನಡುವಣ ಪರ್ಯಾಯ ಮಾರ್ಗ (ಪ್ರಕಾಶನ ನೋಡಿ)
A11 ಗಾಜಾ
B6 ಕೈಸರೈಯ
B8 ಯೊಪ್ಪ
B9 ಲುದ್ದ
B12 ಬೇರ್ಷೆಬ
C4 ಪ್ತೊಲೆಮಾಯ
C8 ಸಮಾರ್ಯ
C8 ಅಂತಿಪತ್ರಿ
C8 ಅರಿಮಥಾಯ
C9 ಎಮ್ಮಾಹು
C10 ಯೂದಾಯ
C11 ಹೆಬ್ರೋನ್
C12 ಇದೂಮಾಯ
D1 ಸೀದೋನ್
D2 ತೂರ್
D3 ಫೊಯಿನಿಕೆ
D4 ಗಲಿಲಾಯ
D4 ಕಾನಾ
D5 ಸಫೊರಸ್
D5 ನಜರೇತ್
D5 ನಾಯಿನ್
D7 ಸಮಾರ್ಯ
D7 ಸುಖರ್
D9 ಎಫ್ರಾಯೀಮ್
D9 ಬೇತ್ಫಗೆ
D9 ಯೆರೂಸಲೇಮ್
D9 ಬೇಥಾನ್ಯ
D10 ಬೇತ್ಲೆಹೇಮ್
D10 ಹೆರೋಡಿಯಮ್
D10 ಯೆಹೂದದ ಅರಣ್ಯ
D12 ಮಸಾಡ
E4 ಖೊರಾಜಿನ್
E4 ಬೇತ್ಸಾಯಿದ
E4 ಕಪೆರ್ನೌಮ್
E4 ಮಗದಾನ
E5 ತಿಬೇರಿಯ
E5 ಹಿಪ್ಪೊ(ಸ್)
E6 ಬೇಥಾನ್ಯ? (ಯೊರ್ದಾನಿನಾಚೆ)
E6 ಸಿದಿಯಾಪೊಲಿಸ್
E6 ಪೆಲ್ಲಾ
E6 ಸಲೀಮ್
E6 ಐನೋನ್
E9 ಯೆರಿಕೋ
F1 ಅಬಿಲೇನೆ
F2 ಫಿಲಿಪ್ಪನಕೈಸರೈಯ
F4 ಗಮಾಲ
F5 ಅಬಿಲ?
F5 ಗದರ
F7 ಪೆರಿಯ
F7 ಗೆರಸ
G3 ಇತುರಾಯ
G5 ಡಿಯೊನ್
G6 ದೆಕಪೊಲಿ
G9 ಫಿಲದೆಲ್ಫಿಯ
H1 ದಮಸ್ಕ
H3 ತ್ರಕೋನೀತಿ
H4 ರಫಾನ
H12 ಅರೇಬಿಯ
I5 ಕೆನಾತ್
[ಪರ್ವತಗಳು]
D7 ಏಬಾಲ್ ಬೆಟ್ಟ
D7 ಗೆರಿಜ್ಜೀಮ್ ಬೆಟ್ಟ
F2 ಹೆರ್ಮೋನ್ ಬೆಟ್ಟ
[ಜಲಾಶಯಗಳು]
B6 ಮೆಡಿಟರೇನಿಯನ್ ಸಮುದ್ರ (ಮಹಾ ಸಮುದ್ರ)
E4 ಗಲಿಲಾಯ ಸಮುದ್ರ
E10 ಲವಣ ಸಮುದ್ರ (ಮೃತ ಸಮುದ್ರ)
[ನದಿಗಳು]
E7 ಯೊರ್ದನ್ ಹೊಳೆ
[ಬುಗ್ಗೆಗಳು ಮತ್ತು ಬಾವಿಗಳು]
D7 ಯಾಕೋಬನ ಬಾವಿ
[ಪುಟ 28ರಲ್ಲಿರುವ ಚಿತ್ರ]
ಗಲಿಲಾಯ ಸಮುದ್ರ. ಕಪೆರ್ನೌಮ್ ಎಡಬದಿಯ ಮುನ್ನೆಲೆಯಲ್ಲಿದೆ. ದೃಶ್ಯವು, ಗೆನೆಜರೇತ್ ಬೈಲಿನಾಚೆ ನೈರುತ್ಯದಿಕ್ಕಿನದ್ದಾಗಿದೆ
[ಪುಟ 28ರಲ್ಲಿರುವ ಚಿತ್ರ]
ಸಮಾರ್ಯದವರು ಗೆರಿಜ್ಜೀಮ್ ಬೆಟ್ಟದಲ್ಲಿ ಆರಾಧಿಸುತ್ತಿದ್ದರು. ಏಬಾಲ್ ಬೆಟ್ಟವು ಹಿನ್ನೆಲೆಯಲ್ಲಿದೆ