ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನು ನ್ಯಾಯಸ್ಥಾಪಕರನ್ನು ಕಳುಹಿಸಿದಾಗ’

‘ಯೆಹೋವನು ನ್ಯಾಯಸ್ಥಾಪಕರನ್ನು ಕಳುಹಿಸಿದಾಗ’

‘ಯೆಹೋವನು ನ್ಯಾಯಸ್ಥಾಪಕರನ್ನು ಕಳುಹಿಸಿದಾಗ’

ಭೂಪಟದಲ್ಲಿ ನೀವು ಸುಲಭವಾಗಿ ತಾಬೋರ್‌ ಬೆಟ್ಟವನ್ನು (F4) ಕಂಡುಹಿಡಿಯಬಲ್ಲಿರಿ. ಅದು ಗಲಿಲಾಯ ಸಮುದ್ರದ ನೈರುತ್ಯಕ್ಕೆ, ಇಜ್ರೇಲಿನ ತಗ್ಗಿನಲ್ಲಿದೆ. ಆ ಬೆಟ್ಟದ ಮೇಲೆ 10,000 ಮಂದಿಯ ಒಂದು ಸೈನ್ಯವು ಒಟ್ಟುಗೂಡಿರುವುದನ್ನು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಪ್ರಯತ್ನಿಸಿರಿ. 20 ವರ್ಷಗಳ ವರೆಗೆ ಜನರ ಮೇಲೆ ದಬ್ಬಾಳಿಕೆ ನಡೆಸಿದ್ದಂಥ ಕಾನಾನ್ಯ ರಾಜ ಯಾಬೀನನ ವಿರುದ್ಧ ಇಸ್ರಾಯೇಲು ಒಗ್ಗಟ್ಟಿನಿಂದ ಕ್ರಿಯೆಗೈಯುವಂತೆ ಪ್ರೇರಿಸಲಿಕ್ಕಾಗಿ ಯೆಹೋವನು ನ್ಯಾಯಸ್ಥಾಪಕನಾದ ಬಾರಾಕನನ್ನು ಮತ್ತು ಪ್ರವಾದಿನಿ ದೆಬೋರಳನ್ನು ಉಪಯೋಗಿಸಿದನು. ಸೇನಾಪತಿ ಸೀಸೆರನ ಅಧ್ಯಕ್ಷತೆಯಲ್ಲಿ, ಬೆದರಿಸುವಂಥ ಕತ್ತಿಯಲಗುಗಳಿಂದ ಸಜ್ಜಿತವಾಗಿದ್ದ ಯಾಬೀನನ 900 ರಥಗಳು ಹರೋಷೆತಿನಿಂದ, ಮೆಗಿದ್ದೋ ಮತ್ತು ತಾಬೋರ್‌ ಬೆಟ್ಟದ ನಡುವೆಯಿರುವ ಕೀಷೋನ್‌ ಹೊಳೆಯ ಒಣಗಿಹೋದ ತಳಕ್ಕೆ ಬಂದವು.

ಸೀಸೆರನ ಪಡೆಗಳೊಂದಿಗೆ ಹೋರಾಡಲಿಕ್ಕಾಗಿ ಇಸ್ರಾಯೇಲಿನ ಪುರುಷರು ನ್ಯಾಯಸ್ಥಾಪಕನಾದ ಬಾರಾಕನ ನೇತೃತ್ವದಲ್ಲಿ ಕಣಿವೆಗೆ ಇಳಿದುಬಂದರು. ಅವರು ವಿಜೇತರಾಗುವಂತೆ ಯೆಹೋವನು ಒಂದು ದಿಢೀರ್‌ ನೆರೆಯನ್ನು ಕಳುಹಿಸಿದನು. ಇದು ಸೀಸೆರನ ರಥಗಳನ್ನು ಹೂತುಹಾಕಿ, ಕಾನಾನ್ಯರು ಗಾಬರಿಗೊಳ್ಳುವಂತೆ ಮಾಡಿತು. (ನ್ಯಾಯ 4:​1–5:31) ನ್ಯಾಯಸ್ಥಾಪಕರ ಸಮಯಾವಧಿಯಲ್ಲಿ ದೇವರು ಇಸ್ರಾಯೇಲಿಗೆ ದಯಪಾಲಿಸಿದಂಥ ಅನೇಕ ವಿಜಯಗಳಲ್ಲಿ ಇದು ಕೇವಲ ಒಂದಾಗಿತ್ತು.

ಕಾನಾನನ್ನು ಜಯಿಸಿದ ನಂತರ, ಆ ದೇಶವನ್ನು ಇಸ್ರಾಯೇಲ್‌ ಗೋತ್ರಗಳಿಗೆ ಪಾಲುಮಾಡಿಕೊಡಲಾಯಿತು. ಲೇವ್ಯರಲ್ಲದ ವಿಭಿನ್ನ ಗೋತ್ರಗಳು ಎಲ್ಲಿ ನೆಲೆಸಿದವೆಂಬುದನ್ನು ಗಮನಿಸಿರಿ. ಸಿಮೆಯೋನನ ಸಣ್ಣ ಕುಲವು, ಯೆಹೂದದ ಕ್ಷೇತ್ರದಲ್ಲಿ ನಗರಗಳನ್ನು ಪಡೆಯಿತು. ಯೆಹೋಶುವನ ಮರಣದ ನಂತರ, ಇಡೀ ಜನಾಂಗವು ಆತ್ಮಿಕವಾಗಿಯೂ ನೈತಿಕವಾಗಿಯೂ ಅವನತಿಗಿಳಿಯಿತು. ಶತ್ರುಗಳ ದಬ್ಬಾಳಿಕೆಗೊಳಗಾಗುತ್ತಾ ಇಸ್ರಾಯೇಲಿಗೆ ‘ಬಹುಸಂಕಟವಾಯಿತು.’ ಕರುಣೆಯಿಂದ ಪ್ರತಿಕ್ರಿಯಿಸುತ್ತಾ ‘ಯೆಹೋವನು ನ್ಯಾಯಸ್ಥಾಪಕರನ್ನು ಕಳುಹಿಸಿದನು.’ ಇವರು ನಂಬಿಕೆ ಹಾಗೂ ಧೈರ್ಯದ 12 ಮಂದಿ ಪುರುಷರಾಗಿದ್ದು, ಮೂರು ಶತಮಾನಗಳ ಅವಧಿಯಲ್ಲಿ ಇಸ್ರಾಯೇಲನ್ನು ರಕ್ಷಿಸಿದರು.​—⁠ನ್ಯಾಯ 2:​15, 16, 19.

ನ್ಯಾಯಸ್ಥಾಪಕನಾದ ಗಿದ್ಯೋನನು ತೀರ ಕಡಿಮೆ ಶಸ್ತ್ರಗಳುಳ್ಳ, ಆದರೆ ಚುರುಕಾದ ಕೇವಲ 300 ಮಂದಿ ಸೈನಿಕರನ್ನು ಉಪಯೋಗಿಸಿ, 1,35,000 ಮಿದ್ಯಾನ್ಯ ಯೋಧರನ್ನು ಸೋಲಿಸಿದನು. ಗಿಲ್ಬೋವ ಮತ್ತು ಮೋರೆ ಬೆಟ್ಟಗಳ ನಡುವೆಯಿರುವ ಪ್ರದೇಶವು ರಣರಂಗವಾಯಿತು. ಆರಂಭದ ಒಂದು ವಿಜಯದ ನಂತರ, ಗಿದ್ಯೋನನು ಶತ್ರುಗಳನ್ನು ಮರುಭೂಮಿಯತ್ತ ಪೂರ್ವದಿಕ್ಕಿಗೆ ಅಟ್ಟಿಸಿಕೊಂಡು ಹೋದನು.​—⁠ನ್ಯಾಯ 6:​1–8:⁠32.

ಮನಸ್ಸೆಯ ಕುಲಕ್ಕೆ ಸೇರಿದ ಗಿಲ್ಯಾದ್ಯನಾದ ಯೆಫ್ತಾಹನು, ಯೊರ್ದನಿನ ಪೂರ್ವಕ್ಕಿದ್ದ ಇಸ್ರಾಯೇಲ್ಯ ಪಟ್ಟಣಗಳನ್ನು ಅವರ ಪೀಡಕರಾದ ಅಮ್ಮೋನಿಯರಿಂದ ಬಿಡಿಸಿದನು. ಈ ಜಯವನ್ನು ಪಡೆಯಲಿಕ್ಕಾಗಿ ಯೆಫ್ತಾಹನು, ರಾಮೋತ್‌ಗಿಲ್ಯಾದನ್ನು ಅರೋಯೇರಿಗೆ ಕೂಡಿಸುತ್ತಿದ್ದ ರಾಜಮಾರ್ಗದಲ್ಲಿ ಪ್ರಯಾಣಿಸಿರಬಹುದು.​—⁠ನ್ಯಾಯ 11:​1–12:⁠7.

ಫಿಲಿಷ್ಟಿಯರ ವಿರುದ್ಧ ಸಂಸೋನನು ನಡೆಸಿದ ವೀರಕೃತ್ಯಗಳು, ಗಾಜಾ ಮತ್ತು ಅಷ್ಕೆಲೋನ್‌ನ ಸುತ್ತಲಿದ್ದ ಕರಾವಳಿ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದ್ದವು. ಗಾಜಾ, ಕೃಷಿಗಾಗಿ ಸುಪ್ರಸಿದ್ಧವಾಗಿದ್ದ ಒಂದು ನೀರಾವರಿ ಪ್ರದೇಶದಲ್ಲಿ ನೆಲೆಸಿರುತ್ತದೆ. ಫಿಲಿಷ್ಟಿಯರ ಹೊಲಗಳು, ದ್ರಾಕ್ಷೇತೋಟಗಳು ಮತ್ತು ಎಣ್ಣೆಮರಗಳ ತೋಟಗಳಿಗೆ ಬೆಂಕಿ ಹಚ್ಚಿಸಲು ಸಂಸೋನನು 300 ನರಿಗಳನ್ನು ಉಪಯೋಗಿಸಿದನು.​—⁠ನ್ಯಾಯ 15:​4, 5.

ಬೈಬಲ್‌ ವೃತ್ತಾಂತದಿಂದ ಇಲ್ಲವೆ ಅವರು ಸೇರಿದ್ದ ಗೋತ್ರದಿಂದ ವ್ಯಕ್ತವಾಗುವಂತೆ ಈ ನ್ಯಾಯಸ್ಥಾಪಕರು ವಾಗ್ದತ್ತ ದೇಶದಲ್ಲೆಲ್ಲಾ ಸಕ್ರಿಯರಾಗಿದ್ದರು. ಈ ಘಟನೆಗಳು ನಡೆದ ಸ್ಥಳವು ಯಾವುದೇ ಆಗಿರಲಿ, ಸಂಕಟದ ಸಮಯದಲ್ಲಿ ಯೆಹೋವನು, ಪಶ್ಚಾತ್ತಾಪಪಟ್ಟ ತನ್ನ ಜನರ ಒಳ್ಳೇ ಆರೈಕೆ ಮಾಡಿದನು.

[ಪುಟ 15ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಗೋತ್ರಗಳು ಮತ್ತು ನ್ಯಾಯಸ್ಥಾಪಕರು

ನ್ಯಾಯಸ್ಥಾಪಕರು

1. ಒತ್ನೀಯಲನು (ಮನಸ್ಸೆ ಕುಲ)

2. ಏಹೂದನು (ಯೆಹೂದ ಕುಲ)

3. ಶಮ್ಗರನು (ಯೆಹೂದ ಕುಲ)

4. ಬಾರಾಕನು (ನಫ್ತಾಲಿ ಕುಲ)

5. ಗಿದ್ಯೋನನು (ಇಸ್ಸಾಕಾರ್‌ ಕುಲ)

6. ತೋಲನು (ಮನಸ್ಸೆ ಕುಲ)

7. ಯಾಯೀರನು (ಮನಸ್ಸೆ ಕುಲ)

8. ಯೆಫ್ತಾಹನು (ಗಾದ್‌ ಕುಲ)

9. ಇಬ್ಚಾನನು (ಆಶೇರ್‌ ಕುಲ)

10. ಏಲೋನನು (ಜೆಬುಲೂನ್‌ ಕುಲ)

11. ಅಬ್ದೋನನು (ಎಫ್ರಾಯೀಮ್‌)

12. ಸಂಸೋನನು (ಯೆಹೂದ)

ಗೋತ್ರಗಳಿಗೆ ಕೊಡಲ್ಪಟ್ಟ ಭಾಗಗಳು (ಪ್ರಕಾಶನ ನೋಡಿ)

ಮನಸ್ಸೆಕುಲದ ಪ್ರತ್ಯೇಕವಾದ ಪಟ್ಟಣಗಳು

E4 ದೋರ್‌

E5 ಮೆಗಿದ್ದೋ

E5 ತಾನಾಕ್‌

F4 ಎಂದೋರ್‌

F5 ಬೇತ್‌ಷೆಯಾನ್‌ (ಬೇತ್ಷಾನ್‌)

F5 ಇಬ್ಲೆಯಾಮ್‌ (ಗತ್‌ರಿಮ್ಮೋನ್‌)

ಸಿಮೆಯೋನಿನ ಪ್ರತ್ಯೇಕವಾದ ಪಟ್ಟಣಗಳು

C9 ಶಾರೂಹೆನ್‌ (ಶಾರಯಿಮ್‌) (ಶಿಲ್ಹೀಮ್‌)

C10 ಬೇತ್‌ಲೆಬಾವೋತ್‌ (ಬೇತ್‌ಬಿರೀ)

D8 ಎತೆರ್‌ (ತೋಕೆನ್‌)

D9 ಚಿಕ್ಲಗ್‌

D9 ಅಯಿನ್‌

D9 ಹಚರ್‌ಸೂಸಾ?

D9 ಆಷಾನ್‌

D9 ಬೇರ್ಷೆಬ

D10 ಹಚರ್‌ಷೂವಾಲ್‌

E9 ಏಟಾಮ್‌

E9 ಬೇತ್‌ಮರ್ಕಾಬೋತ್‌

E9 ಬೆತೂವೇಲ್‌? (ಕೆಸೀಲ್‌)

E9 ಶೆಬ? (ಯೇಷೂವ)

E10 ಬಾಲತ್‌ಬೇರ್‌ (ಬಾಲ್‌)

E10 ಎಚೆಮ್‌

ಲೇವ್ಯ ಆಶ್ರಯನಗರಗಳು

E8 ಹೆಬ್ರೋನ್‌

F3 ಕೆದೆಷ್‌

F6 ಶೆಕೆಮ್‌

H4 ಗೋಲಾನ್‌

H5 ರಾಮೋತ್‌ಗಿಲ್ಯಾದ್‌

H8 ಬೆಚೆರ್‌

ಮುಖ್ಯರಸ್ತೆಗಳು

B10 ವಯಾ ಮೆರೀಸ್‌

G10 ರಾಜಮಾರ್ಗ

ಇಸ್ರಾಯೇಲಿನ ಗೋತ್ರಗಳು

ದಾನ್‌ (D7)

D7 ಯೊಪ್ಪ

E8 ಚೊರ್ಗಾ

ಯೆಹೂದ (D9)

C8 ಅಷ್ಕೆಲೋನ್‌

C9 ಗಾಜಾ

C9 ಶಾರೂಹೆನ್‌ (ಶಾರಯಿಮ್‌) (ಶಿಲ್ಹೀಮ್‌)

C10 ಬೇತ್‌ಲೆಬಾವೋತ್‌ (ಬೇತ್‌ಬಿರೀ)

C12 ಅಚ್ಮೋನ್‌

C12 ಕಾದೇಶ್‌

D7 ಯಬ್ನೇಲ್‌

D8 ಎತೆರ್‌ (ತೋಕೆನ್‌)

D9 ಚಿಕ್ಲಗ್‌

D9 ಅಯಿನ್‌

D9 ಹಚರ್‌ಸೂಸಾ?

D9 ಆಷಾನ್‌

D9 ಬೇರ್ಷೆಬ

D10 ಹಚರ್‌ಷೂವಾಲ್‌

E8 ಲೆಹೀ

E8 ಬೇತ್ಲೆಹೇಮ್‌

E8 ಹೆಬ್ರೋನ್‌

E9 ಏಟಾಮ್‌

E9 ಬೇತ್‌ಮರ್ಕಾಬೋತ್‌

E9 ಬೆತೂವೇಲ್‌? (ಕೆಸೀಲ್‌)

E9 ಶೆಬ? (ಯೇಷೂವ)

E10 ಬಾಲತ್‌ಬೇರ್‌ (ಬಾಲ್‌)

E10 ಎಚೆಮ್‌

F8 ಯೆರೂಸಲೇಮ್‌

ಆಶೇರ್‌ (E3)

E2 ತೂರ್‌

E4 ಹರೋಷೆತ್‌

E4 ದೋರ್‌

F1 ಸೀದೋನ್‌

ಮನಸ್ಸೆ (E5)

E6 ಶಾಮೀರ್‌ (ಸಮಾರ್ಯ)

E6 ಪಿರಾತೋನ್‌

F6 ಶೆಕೆಮ್‌

G5 ಅಬೇಲ್‌ಮೆಹೋಲ

ಎಫ್ರಾಯೀಮ್‌ (E7)

E7 ತಿಮ್ನತ್‌ಸೆರಹ

F6 ತಪ್ಪೂಹ

F6 ಶೀಲೋ

F7 ಬೇತೇಲ್‌ (ಲೂಜ್‌)

ನಫ್ತಾಲಿ (F3)

F2 ಬೇತನಾತ್‌

F3 ಕೆದೆಷ್‌

G3 ಹಾಚೋರ್‌

ಜೆಬುಲೂನ್‌ (F4)

E4 ಬೇತ್ಲೆಹೇಮ್‌

ಇಸ್ಸಾಕಾರ್‌ (F5)

E5 ಮೆಗಿದ್ದೋ

E5 ಕೆದೆಷ್‌ (ಕಿಷ್ಯೋನ್‌)

E5 ತಾನಾಕ್‌

F4 ಎಂದೋರ್‌

F5 ಬೇತ್‌ಷಿಟ್ಟ

F5 ಬೇತ್‌ಷೆಯಾನ್‌ (ಬೇತ್ಷಾನ್‌)

F5 ಇಬ್ಲೆಯಾಮ್‌ (ಗತ್‌ರಿಮ್ಮೋನ್‌)

ಬೆನ್ಯಾಮೀನ್‌ (F7)

F7 ಗಿಲ್ಗಾಲ್‌

ದಾನ್‌ (G2)

G2 ದಾನ್‌ (ಲಯಿಷ್‌)

ಮನಸ್ಸೆ (H3)

H4 ಗೋಲಾನ್‌

ರೂಬೇನ್‌ (H8)

G7 ಹೆಷ್ಬೋನ್‌

G9 ಅರೋಯೇರ್‌

H7 ಮಿನ್ನೀತ್‌

H8 ಬೆಚೆರ್‌

ಗಾದ್‌ (I6)

G6 ಸುಕ್ಕೋತ್‌

G6 ಪೆನೂವೇಲ್‌

G6 ಮಿಚ್ಪ (ಮಿಚ್ಪೆ)

G7 ಯೊಗ್ಬೆಹಾ

H5 ರಾಮೋತ್‌ಗಿಲ್ಯಾದ್‌

H7 ರಬ್ಬಾ

H7 ಆಬೇಲ್‌ ಕೆರಾಮೀಮ್‌

[ಬೇರೆ ಸ್ಥಳಗಳು]

I1 ದಮಸ್ಕ

[ಪರ್ವತಗಳು]

F4 ತಾಬೋರ್‌ ಬೆಟ್ಟ

F4 ಮೋರೆ

F6 ಏಬಾಲ್‌ ಬೆಟ್ಟ

F5 ಗಿಲ್ಬೋವ ಬೆಟ್ಟ

F6 ಗೆರಿಜ್ಜೀಮ್‌ ಬೆಟ್ಟ

[ಜಲಾಶಯಗಳು]

C5 ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

F9 ಲವಣ ಸಮುದ್ರ

G4 ಗಲಿಲಾಯ ಸಮುದ್ರ

[ನದಿಗಳು ಮತ್ತು ಹೊಳೆಗಳು]

B11 ಐಗುಪ್ತದ ತೊ. ಕ.

F6 ಯೊರ್ದನ್‌ ಹೊಳೆ

G6 ಯಬ್ಬೋಕ್‌ ತೊ. ಕ.

G9 ಆರ್ನೋನ್‌ ತೊ. ಕ.

G11 ಜೆರೆದ್‌ ತೊ. ಕ.

[ಪುಟ 14ರಲ್ಲಿರುವ ಚಿತ್ರ]

ಇಸ್ಸಾಕಾರನ ಕ್ಷೇತ್ರದಲ್ಲಿ ತಾಬೋರ್‌ ಬೆಟ್ಟವು, ಇಜ್ರೇಲ್‌ ಕಣಿವೆಯಿಂದ ಮೇಲಕ್ಕೇರುತ್ತದೆ

[ಪುಟ 14ರಲ್ಲಿರುವ ಚಿತ್ರ]

ನೆರೆಯಿಂದಾಗಿ ಉಕ್ಕಿಹರಿದ ಕೀಷೋನ್‌ ಹೊಳೆಯು, ಸೀಸೆರನ ರಥಗಳನ್ನು ಹೂತುಹಾಕಿತು