ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿಗೆ ಪರಿಚಯವಿದ್ದ ಯೆರೂಸಲೇಮ್‌ ಮತ್ತು ಆಲಯ

ಯೇಸುವಿಗೆ ಪರಿಚಯವಿದ್ದ ಯೆರೂಸಲೇಮ್‌ ಮತ್ತು ಆಲಯ

ಯೇಸುವಿಗೆ ಪರಿಚಯವಿದ್ದ ಯೆರೂಸಲೇಮ್‌ ಮತ್ತು ಆಲಯ

ಯೇಸು ಹುಟ್ಟಿದ ಸ್ವಲ್ಪ ಸಮಯದ ನಂತರ, ಯೋಸೇಫ ಮತ್ತು ಮರಿಯಳು ಅವನನ್ನು, ಅವನ ಸ್ವರ್ಗೀಯ ತಂದೆಯು ತನ್ನ ಹೆಸರನ್ನು ಇರಿಸಿದಂಥ ನಗರವಾದ ಯೆರೂಸಲೇಮಿಗೆ ಕರೆದೊಯ್ದರು. (ಲೂಕ 2:​22-39) ಯೇಸು 12 ವರ್ಷ ಪ್ರಾಯದವನಾಗಿದ್ದಾಗ ಪಸ್ಕ ಹಬ್ಬಕ್ಕಾಗಿ ಪುನಃ ಒಮ್ಮೆ ಅಲ್ಲಿದ್ದನು. ಅವನು ಆಲಯದಲ್ಲಿದ್ದ ಬೋಧಕರನ್ನು ತನ್ನ ತಿಳಿವಳಿಕೆಯೊಂದಿಗೆ ಬೆರಗುಗೊಳಿಸಿದನು. (ಲೂಕ 2:​41-51) ಮಹಾ ಹೆರೋದನ ನಿರ್ಮಾಣ ಕಾರ್ಯಕ್ರಮದ ಭಾಗವಾಗಿ ಆ ಆಲಯ ಸಂಕೀರ್ಣದಲ್ಲಿನ ಕೆಲಸವು, “ನಾಲ್ವತ್ತಾರು ವರುಷ” ನಡೆಯಿತು.​—⁠ಯೋಹಾ 2:⁠20.

ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ, ಯೆರೂಸಲೇಮಿನಲ್ಲಿನ ಹಬ್ಬಗಳಿಗಾಗಿ ಅಲ್ಲಿ ಹಾಜರಿರುತ್ತಿದ್ದನು. ಮತ್ತು ಅಲ್ಲಿ ಅವನು ಅನೇಕವೇಳೆ ಜನಸಮೂಹಗಳಿಗೆ ಬೋಧಿಸುತ್ತಿದ್ದನು. ಎರಡು ಸಲ ಅವನು ಆಲಯದ ಪ್ರಾಕಾರದೊಳಗಿಂದ ಚಿನಿವಾರರನ್ನೂ, ವ್ಯಾಪಾರಿಗಳನ್ನೂ ಹೊರಗಟ್ಟಿಸಿದನು.​—⁠ಮತ್ತಾ 21:12; ಯೋಹಾ 2:​13-16.

ಆಲಯದ ಉತ್ತರದಲ್ಲಿದ್ದ ಬೇತ್ಸಥಾ ಎಂಬ ಕೊಳದ ಬಳಿ, 38 ವರ್ಷಗಳಿಂದ ನರಳುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಗುಣಪಡಿಸಿದನು. ದೇವರ ಕುಮಾರನು ಒಬ್ಬ ಕುರುಡನಿಗೆ ಸಿಲೋವ ಕೊಳದಲ್ಲಿ ತೊಳಕೊಳ್ಳುವಂತೆ ಹೇಳಿ ಅವನಿಗೆ ದೃಷ್ಟಿಯನ್ನು ಕೊಟ್ಟನು. ಇದು ಯೆರೂಸಲೇಮಿನ ದಕ್ಷಿಣ ಭಾಗದಲ್ಲಿತ್ತು.​—ಯೋಹಾ 5:​1-15; 9:​1, 7, 11. ಯೇಸು ಅನೇಕ ಸಲ ಬೇಥಾನ್ಯದಲ್ಲಿದ್ದ ಲಾಜರ, ಮರಿಯ ಹಾಗೂ ಮಾರ್ಥಳೆಂಬ ಮಿತ್ರರನ್ನು ಭೇಟಿಮಾಡುತ್ತಿದ್ದನು. ಈ ಸ್ಥಳವು ಯೆರೂಸಲೇಮಿನ ಪೂರ್ವದಲ್ಲಿ “ಸುಮಾರು ಎರಡು ಮೈಲು” ದೂರದಲ್ಲಿತ್ತು. (ಯೋಹಾ 11:​1, 18 [ಇಂಗ್ಲಿಷ್‌] NW ರೆಫರೆನ್ಸ್‌ ಸಂಚಿಕೆ, ಪಾದಟಿಪ್ಪಣಿ; 12:​1-11; ಲೂಕ 10:​38-42; 19:29; ಪುಟ 18ರಲ್ಲಿರುವ “ಯೆರೂಸಲೇಮ್‌ ಪ್ರದೇಶ” ನಕ್ಷೆಯನ್ನು ನೋಡಿರಿ.) ತನ್ನ ಮರಣಕ್ಕೆ ಸ್ವಲ್ಪ ದಿನಗಳ ಮುಂಚೆ, ಯೇಸು ಎಣ್ಣೇಮರಗಳ ಗುಡ್ಡವನ್ನು ದಾಟಿ ಯೆರೂಸಲೇಮನ್ನು ಸಮೀಪಿಸಿದನು. ಅವನು ಪಶ್ಚಿಮದಿಕ್ಕಿನಲ್ಲಿ ನಗರದತ್ತ ನೋಡಿ, ಅದರ ಬಗ್ಗೆ ಅಳುತ್ತಿರುವುದನ್ನು ಚಿತ್ರಿಸಿಕೊಳ್ಳಿ. (ಲೂಕ 19:​37-44) ಅಲ್ಲಿಂದ ಅವನಿಗೆ ತೋರುತ್ತಿದ್ದ ದೃಶ್ಯವು, ನೀವು ಮುಂದಿನ ಪುಟದ ಮೇಲ್ಭಾಗದಲ್ಲಿ ನೋಡುವಂಥ ದೃಶ್ಯಕ್ಕೆ ಹೋಲುತ್ತಿದ್ದಿರಬಹುದು. ಅನಂತರ ಅವನು, ಪ್ರಾಯಶಃ ಆ ನಗರದ ಪೂರ್ವದಲ್ಲಿದ್ದ ಒಂದು ದ್ವಾರದ ಮುಖಾಂತರ, ಕತ್ತೆಮರಿಯ ಮೇಲೆ ಕುಳಿತುಕೊಂಡು ಯೆರೂಸಲೇಮನ್ನು ಪ್ರವೇಶಿಸಿದನು. ಇಸ್ರಾಯೇಲಿನ ಭಾವೀ ಅರಸನೆಂದು ಜನಸ್ತೋಮಗಳು ಅವನಿಗೆ ಜಯಕಾರವೆತ್ತಿದವು.​—⁠ಮತ್ತಾ 21:​9-12.

ಯೇಸುವಿನ ಮರಣಕ್ಕೆ ಮುಂಚೆ ನಡೆದ ಪ್ರಮುಖ ಘಟನೆಗಳು ಯೆರೂಸಲೇಮಿನಲ್ಲಿ ಇಲ್ಲವೆ ಅದರ ಸಮೀಪದಲ್ಲಿ ನಡೆದವು: ಯೇಸು ಪ್ರಾರ್ಥನೆ ಮಾಡಿದಂಥ ಗೆತ್ಸೇಮನೆ ತೋಟ; ಹಿರೀ ಸಭೆ; ಕಾಯಫನ ಮನೆ; ಅಧಿಪತಿ ಪಿಲಾತನ ಅರಮನೆ ಮತ್ತು ಕಟ್ಟಕಡೆಗೆ ಗೊಲ್ಗೊಥಾ.​—ಮಾರ್ಕ 14:32, 53–15:1, ಮಾರ್ಕ 15:16, 22; ಯೋಹಾ 18:​1, 13, 24, 28.

ಅವನ ಪುನರುತ್ಥಾನದ ನಂತರ, ಯೇಸು ಯೆರೂಸಲೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡನು. (ಲೂಕ 24:​1-49) ಅನಂತರ ಅವನು ಎಣ್ಣೇಮರಗಳ ಗುಡ್ಡದಿಂದ ಸ್ವರ್ಗಕ್ಕೇರಿಹೋದನು.​—⁠ಅಕೃ 1:​6-12.

[ಪುಟ 31ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಯೆರೂಸಲೇಮ್‌/ಹೆರೋದನ ದೇವಾಲಯ

ಆಲಯದ ವೈಶಿಷ್ಟ್ಯಗಳು

1. ಮಹಾಪವಿತ್ರಸ್ಥಾನ

2. ಪವಿತ್ರಸ್ಥಾನ

3. ಯಜ್ಞವೇದಿ

4. ಸಮುದ್ರವೆನಿಸಿಕೊಳ್ಳುವ ಎರಕದ ಪಾತ್ರೆ

5. ಯಾಜಕರ ಅಂಗಣ

6. ಇಸ್ರಾಯೇಲಿನ ಅಂಗಣ

7. ಸ್ತ್ರೀಯರ ಅಂಗಣ

8. ಅನ್ಯಜನಾಂಗಗಳ ಅಂಗಣ

9. ತಡೆ (ಸಾರೆಗ್‌)

10. ಅರಸನ ಮಂಟಪ

11. ಸೊಲೊಮೋನನ ಮಂಟಪ

ಆಲಯ

ದ್ವಾರ

 

ಯಾಜಕರ ಅಂಗಣ

ದ್ವಾರ

ಮಹಾ ಯಜ್ಞವೇದಿ

ಪವಿತ್ರಸ್ಥಾನ ಪವಿತ್ರಸ್ಥಾನ ಇಸ್ರಾಯೇಲಿನ ಸ್ತ್ರೀಯರ

ಅಂಗಣ ಅಂಗಣ

ಸಮುದ್ರವೆನಿಸಿಕೊಳ್ಳುವ

ಎರಕದ ಪಾತ್ರೆ

 

ದ್ವಾರ ಸೊಲೊಮೋನನ

ತಡೆ (ಸಾರೆಗ್‌) ಮಂಟಪ

 

ಅನ್ಯಜನಾಂಗಗಳ ಅಂಗಣ

 

ದ್ವಾರ

ಅರಸನ ಮಂಟಪ

 

ದ್ವಾರಗಳು

ಆ್ಯಂಟೊನ್ಯ ಬುರುಜು

ಸೇತುವೆ

ಹಿರೀ ಸಭೆ

ತುರೋಪಿಯನ್‌ತಗ್ಗು

ಸಿಲೋವ ಕೊಳ

ಮೇಲುಕಾಲುವೆ

ಕಾಯಫನ ಮನೆ?

ಅಧಿಪತಿಯ ಅರಮನೆ

ಗೊಲ್ಗೊಥಾ?

ಗೊಲ್ಗೊಥಾ?

ಬೇತ್ಸಥಾ ಕೊಳ

ಗೆತ್ಸೇಮನೆ ತೋಟ?

ಎಣ್ಣೇಮರಗ ಗುಡ್ಡ

ಕಿದ್ರೋನ್‌ ಹಳ್ಳ

ಗೀಹೋನ್‌ ಬುಗ್ಗೆ

ಏನ್‌ರೋಗೆಲ್‌

ಹಿನ್ನೋಮ್‌ ತಗ್ಗು (ಗೆಹೆನ್ನ)

[ಪುಟ 30ರಲ್ಲಿರುವ ಚಿತ್ರಗಳು]

ಆಧುನಿಕ ಯೆರೂಸಲೇಮಿನಾಚೆಗೆ ಪೂರ್ವದಿಕ್ಕಿನತ್ತ ದೃಶ್ಯ: (A) ಆಲಯ ಕ್ಷೇತ್ರ, (B) ಗೆತ್ಸೇಮನೆ ತೋಟ, (C) ಎಣ್ಣೇಮರಗಳ ಗುಡ್ಡ, (D) ಯೆಹೂದದ ಅರಣ್ಯ, (E) ಮೃತ ಸಮುದ್ರ

[ಪುಟ 31ರಲ್ಲಿರುವ ಚಿತ್ರ]

ಯೇಸುವಿನ ದಿನದಲ್ಲಿ ಎಣ್ಣೇಮರಗಳ ಗುಡ್ಡದಿಂದ ಪಶ್ಚಿಮಕ್ಕೆ ಕಾಣುವ ದೃಶ್ಯ